logo
ಕನ್ನಡ ಸುದ್ದಿ  /  Nation And-world  /  Experts Says Deepening China And Russia Alliance May Lead To Another Cold War

2nd Cold War: ಎರಡನೇ ಶೀತಲ ಸಮರದ ಮುನ್ಸೂಚನೆ ನೀಡಿದ ಕ್ಸಿ-ಪುಟಿನ್ ಗೆಳೆತನ: ಭಾರತ ತೆಗೆದುಕೊಳ್ಳಲಿದೆ ವಿಶ್ವಶಾಂತಿಯ ಒಡೆತನ

Nikhil Kulkarni HT Kannada

Mar 25, 2023 06:28 PM IST

ಸಂಗ್ರಹ ಚಿತ್ರ

  • ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ರಷ್ಯಾ ಭೇಟಿಯ ಪರಿಣಾಮಗಳ ಬಗ್ಗೆ ಜಗತ್ತಿನ ಕುತೂಹಲ ಇನ್ನೂ ತಣಿಯುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗಿನ ಕ್ಸಿ ಜಿನ್‌ಪಿಂಗ್‌ ನಡೆಸಿರುವ ದ್ವಿಪಕ್ಷೀಯ ಮಾತುಕತೆ, ಜಗತ್ತನ್ನು ಎರಡನೇ ಶೀತಲ ಸಮರಕ್ಕೆ ನೂಕಲಿದೆ ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ. ಅಲ್ಲದೇ ಈ ಸಂದರ್ಭದಲ್ಲಿ ಭಾರತದ ಪಾತ್ರದ ಕುರಿತು ವಿಶ್ಲೇಷಣೆ ಆರಂಭವಾಗಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT_PRINT)

ಮಾಸ್ಕೋ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ರಷ್ಯಾ ಭೇಟಿಯ ಪರಿಣಾಮಗಳ ಬಗ್ಗೆ ಜಗತ್ತಿನ ಕುತೂಹಲ ಇನ್ನೂ ತಣಿಯುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗಿನ ಕ್ಸಿ ಜಿನ್‌ಪಿಂಗ್‌ ನಡೆಸಿರುವ ದ್ವಿಪಕ್ಷೀಯ ಮಾತುಕತೆ, ಜಗತ್ತನ್ನು ಎರಡನೇ ಶೀತಲ ಸಮರಕ್ಕೆ ನೂಕಲಿದೆ ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

Hassan Sex Scandal: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ ಮೊದಲ ಪ್ರತಿಕ್ರಿಯೆ, ಕಾನೂನು ಕ್ರಮಕ್ಕೆ ಆಗ್ರಹ

ಕೋವಿಡ್ 19 ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ, ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್, ಕೋವಿಶೀಲ್ಡ್ ಕೊಟ್ಟ ಕಂಪನಿ

ಅಮೆಜಾನ್ ಗ್ರೇಟ್ ಸಮ್ಮರ್‌ ಸೇಲ್‌ 2024; ಮೇ 2ರ ಮಧ್ಯಾಹ್ನದಿಂದ ಶುರು, ವಿವಿಧ ಉತ್ಪನ್ನಗಳ ಮೇಲೆ ವೈವಿಧ್ಯದ ಡೀಲ್‌ ಮತ್ತು ಡಿಸ್ಕೌಂಟ್‌

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

ಕ್ಸಿ ಜಿನ್‌ಪಿಂಗ್‌ ಮತ್ತು ವ್ಲಾಡಿಮಿರ್‌ ಪುಟಿನ್‌ ನಡುವಿನ ಈ ಸ್ನೇಹ ಸಂಬಂಧ, ಯುರೋಪ್‌ನ್ನು ಆತಂಕಕ್ಕೆ ದೂಡಿದೆ. ಚೀನಾ ಮತ್ತು ರಷ್ಯಾದ ಈ ಹೊಸ ಪಾಲುದಾರಿಗೆ ಜಗತ್ತನ್ನು ಎರಡನೇ ಶೀತಲ ಸಮರದತ್ತ ಕೊಂಡೊಯ್ಯಲಿದೆ ಎಂದು ಹಲವು ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಪ್ರಪಂಚದೊಂದಿಗೆ ರಷ್ಯಾ ಮತ್ತು ಚೀನಾ ಮುಖಾಮುಖಿಯಾಗುವ ದಿನಗಳು ದೂರವಿಲ್ಲ. ಈ ಎರಡು ದೈತ್ಯ ಶಕ್ತಿಗಳ ಸಮ್ಮಿಲನ ವಿಶ್ವವನ್ನು ಅದರಲ್ಲೂ ವಿಶೇಷವಾಗಿ ಯುರೋಪ್‌ನ್ನು ಸಂಕಷ್ಟಕ್ಕೆ ದೂಡಲಿದೆ. ಚೀನಾದ ಆರ್ಥಿಕ ನೆರವಿನಿಂದ ಮತ್ತಷ್ಟು ಬಲಾಢ್ಯವಾಗಲಿರುವ ರಷ್ಯಾ, ಉಕ್ರೇನ್‌ ಮೇಲಿನ ದಾಳಿಯನ್ನು ತೀವ್ರಗೊಳಿಸಲಿದೆ. ಆದರೆ ಇದು ರಷ್ಯಾವನ್ನು ಚೀನಾದ ಅಧೀನ ರಾಷ್ಟ್ರವನ್ನಾಗಿಯೂ ಪರಿವರ್ತಿಸಲಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಎರಡು ಸರ್ವಾಧಿಕಾರಿ ರಾಷ್ಟ್ರಗಳ ವಿರುದ್ಧ ತಮ್ಮ ರಕ್ಷಣೆಯನ್ನು ಸಂಘಟಿಸುವ ಸವಾಲನ್ನು, ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಎದುರಿಸಲಿವೆ. ಇದು ಜಗತ್ತನ್ನು ಎರಡನೇ ಶೀತಲ ಸಮರಕ್ಕೆ ದೂಡಲ್ಲಿದ್ದು, ಇದು ಮೊದಲನೇ ಶೀತಲ ಸಮರಕ್ಕಿಂತ ಸುದೀರ್ಘವಾಗಿರಲಿದೆ ಎಂದು ರಾಜಕೀಯ ವಿಶ್ಲೇಷಕರು ಎಚ್ಚರಿಸಿದ್ದಾರೆ.

21ನೇ ಶತಮಾನದ ರಷ್ಯಾ ಮತ್ತು ಚೀನಾ ಮತ್ತು ಅವುಗಳನ್ನು ಮುನ್ನಡೆಸುತ್ತಿರುವ ನಾಯಕರು, ಮೂಲ ರಷ್ಯನ್ ಮತ್ತು ಚೀನೀ ಕ್ರಾಂತಿಗಳ ನೇರ ಉತ್ಪನ್ನ. ಕ್ಸಿ ಮತ್ತು ಪುಟಿನ್ ಈ ಹಿಂಸಾತ್ಮಕ ಕ್ರಾಂತಿಗಳ ಉತ್ತರಾಧಿಕಾರಿಗಳಾಗಿ, ಪಾಶ್ಚಿಮಾತ್ಯ ವಿರೋಧಿ ಕಲ್ಪನೆಗಳನ್ನು ಮುಂದುವರೆಸಲಿದ್ದಾರೆ ಎಂದೂ ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಪುಟಿನ್ ಸೋವಿಯತ್ ಸಾಮ್ರಾಜ್ಯದ ಕುಸಿತವನ್ನು "20 ನೇ ಶತಮಾನದ ಅತಿದೊಡ್ಡ ಭೌಗೋಳಿಕ ರಾಜಕೀಯ ದುರಂತ" ಎಂದು ಕರೆದಿದ್ದಾರೆ. ಅದೇ ರೀತಿ ಕ್ಸಿ ಜಿನ್‌ಪಿಂಗ್‌ ಕೂಡ ಚೀನಿ ಕಮ್ಯೂನಿಸ್ಟ್‌ ಪಕ್ಷದ ಮೂಲ ಸಿದ್ಧಾಂತಗಳಿಗೆ ಮರುಜೀವ ನೀಡುವ ಕುರಿತು ಮಾತನಾಡುತ್ತಿದ್ದಾರೆ. ಇದು ಜಾಗತಿಕ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಅಮೆರಿಕನ್ ಸ್ಪೈಮಾಸ್ಟರ್ ಜ್ಯಾಕ್ ಡಿವೈನ್ ಹೇಳುತ್ತಾರೆ.

20ನೇ ಶತಮಾನದಲ್ಲಿ ನಿರಂಕುಶ ಕಮ್ಯೂನಿಸ್ಟ್ ರಾಜ್ಯಗಳಾಗಿ, ರಷ್ಯಾ ಮತ್ತು ಚೀನಾ ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಳಿಗೆ ಸವಾಲು ಹಾಕಿದವು. ದಶಕದ ಅವಧಿಯ ಚೀನಾ-ಸೋವಿಯತ್ ಒಕ್ಕೂಟದ ಮೈತ್ರಿಯು ಕೊರಿಯನ್ ಯುದ್ಧ ಮತ್ತು ಬಹು ತೈವಾನ್ ಬಿಕ್ಕಟ್ಟುಗಳಿಗೆ ಕಾರಣವಾಯಿತು. ಇದು ಯುರೋಪ್ ಮತ್ತು ಏಷ್ಯಾ ಎರಡರಲ್ಲೂ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ತೀವ್ರ ಸವಾಲನ್ನು ಉಂಟುಮಾಡಿತು ಎಂದು ಜ್ಯಾಕ್‌ ಡಿವೈನ್‌ ಇತಿಹಾಸವನ್ನು ನೆನಪಿಸುತ್ತಾರೆ.

ಇಂದು ಚೀನಾ-ರಷ್ಯಾ ನಡುವಿನ ಈ ಬಾಂಧವ್ಯ, ಈ ಮಹತ್ವಾಕಾಂಕ್ಷೆಗಳನ್ನು ಮರುಸ್ಥಾಪಿಸುವ ಉದ್ದೇಶ ಹೊಂದಿದೆ. ಆಕ್ರಮಣಕಾರಿ, ಮಿಲಿಟರಿ ರಾಷ್ಟ್ರೀಯತೆಯ ನೆರಳಿನಡಿ, ಈ ಎರಡೂ ರಾಷ್ಟ್ರಗಳು ಒಂದಾಗಿರುವುದು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾರಕ ಎಂದು ಜ್ಯಾಕ್‌ ಡಿವೈನ್‌ ಎಚ್ಚರಿಸಿದ್ದಾರೆ.

2010ರಿಂದಲೇ ಚೀನಾ ಮತ್ತು ರಷ್ಯಾ ತಮ್ಮ ಮಿಲಿಟರಿ, ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ವಿಸ್ತರಿಸಲು ಮುಂದಾಗಿವೆ. ತೈವಾನ್‌ನ ಮೇಲಿನ ಚೀನಾದ ಹಕ್ಕುಗಳಿಗೆ ರಷ್ಯಾ ತನ್ನ ಬೆಂಬಲವನ್ನು ಘೋಷಿಸಿದೆ. ಅಲ್ಲದೇ "ಚೀನಾದ ಒಂದು ಬೇರ್ಪಡಿಸಲಾಗದ ಭಾಗ" ರಷ್ಯಾ ಪರಿಗಣಿಸಿದೆ. ಎರಡೂ ರಾಷ್ಟ್ರಗಳು ನ್ಯಾಟೋ ವಿಸ್ತರಣೆಯನ್ನು ವಿರೋಧಿಸುತ್ತಿದ್ದು, ಇದೇ ಕಾರಣಕ್ಕೆ ಉಕ್ರೇನ್‌ ಮೇಲಿನ ರಷ್ಯಾ ದಾಳಿಗೆ ಚೀನಾ ಪರೋಕ್ಷ ನೆರವು ನೀಡುತ್ತಿದೆ ಎಂದು ಜ್ಯಾಕ್‌ ಡಿವೈನ್‌ ಆಪಾದಿಸಿದ್ದಾರೆ.

ಭಾರತದ ಪಾತ್ರ:

ಇನ್ನು ಚೀನಾ-ರಷ್ಯಾ ಒಂದಾಗುವಿಕೆಯನ್ನು ಎರಡನೇ ಶೀತಲ ಸಮರದ ಮುನ್ಸೂಚನೆ ಎಂದು ಪರಿಗಣಿಸುತ್ತಿರುವ ಯುರೋಪ್‌ನ ರಾಜಕೀಯ ಪಂಡಿತರು, ವಿಶ್ವಶಾಂತಿಯ ಪ್ರಕ್ರಿಯೆಯಲ್ಲಿ ಭಾರತದ ಪಾತ್ರವನ್ನು ಗುರುತಿಸಲು ಆರಂಭಿಸಿದ್ದಾರೆ. ಜಗತ್ತಿನ ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ, ವಿಶ್ವಶಾಂತಿ ಸ್ಥಾಪನೆಯಲ್ಲಿ ತನ್ನದೇ ಆದ ಮಹತ್ತರವಾದ ಪಾತ್ರ ನಿರ್ವಹಿಸಬಲ್ಲದು ಎನ್ನುತ್ತಾರೆ ಜ್ಯಾಕ್‌ ಡಿವೈನ್.‌

ತನ್ನ ಸಾಂಪ್ರದಾಯಿಕ ಶತ್ರುವಾಗಿರುವ ಚೀನಾದೊಂದಿಗೆ ರಷ್ಯಾ ಕೈಜೋಡಿಸಿರುವುದನ್ನು ಭಾರತ ಸುಮ್ಮನೆ ಕುಳಿತು ನೋಡಲು ಸಾಧ್ಯವಿಲ್ಲ. ಅದು ಖಂಡಿತವಾಗಿಯೂ ತನ್ನ ಜಾಗತಿಕ ಪಾತ್ರದ ಕುರಿತು ಚಿಂತನೆ ಆರಂಭಿಸಿದೆ. ಭಾರತದ ನೆರವಿಲ್ಲದೇ ವಿಶ್ವಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎಂದು ಜ್ಯಾಕ್‌ ಡಿವೈನ್‌ ಸ್ಪಷ್ಟಪಡಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು