logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಅಲ್ಪ ಏರಿಕೆ; ದೇಶದ ಪ್ರಮುಖ ನಗರಗಳಲ್ಲಿ ಯಥಾಸ್ಥಿತಿ

Gold Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಅಲ್ಪ ಏರಿಕೆ; ದೇಶದ ಪ್ರಮುಖ ನಗರಗಳಲ್ಲಿ ಯಥಾಸ್ಥಿತಿ

HT Kannada Desk HT Kannada

Sep 29, 2022 06:40 AM IST

ಇಂದಿನ ಚಿನ್ನಾಭರಣಗಳ ಬೆಲೆಗಳನ್ನು ತಿಳಿದುಕೊಳ್ಳಿ

  • ಚಿನಿವಾರ ಪೇಟೆಯಲ್ಲಿಂದು (29, ಗುರುವಾರ, ಸೆಪ್ಟೆಂಬರ್ 2022) ಚಿನ್ನ ಮತ್ತು ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಇದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಲ್ಪ ಏರಿಕೆಯಾಗಿದೆ. ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ ಒಮ್ಮೆ ಬೆಲೆಗಳನ್ನು ಪರಿಶೀಲಿಸಿ ಕೊಳ್ಳಿ.

ಇಂದಿನ ಚಿನ್ನಾಭರಣಗಳ ಬೆಲೆಗಳನ್ನು ತಿಳಿದುಕೊಳ್ಳಿ
ಇಂದಿನ ಚಿನ್ನಾಭರಣಗಳ ಬೆಲೆಗಳನ್ನು ತಿಳಿದುಕೊಳ್ಳಿ

ಬೆಂಗಳೂರು: Today Gold and Silver Price: ಚಿನಿವಾರ ಪೇಟೆಯಲ್ಲಿ ನಿನ್ನೆ ಭಾರಿ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ(Silver price) ಇಂದು (29, ಗುರುವಾರ, ಸೆಪ್ಟೆಂಬರ್ 2022) ಇಂದು ಅಲ್ಪ ಏರಿಕೆಯಾಗಿದೆ. ನೀವು ಇಂದು ಆಭರಣಗಳನ್ನು ಖರೀದಿಸಲು ಪ್ಲಾನ್ ಮಾಡಿದ್ದರೆ ಚಿನ್ನಾಭರಣಗಳ ಬೆಲೆಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

ಟ್ರೆಂಡಿಂಗ್​ ಸುದ್ದಿ

Gold Rate Today: ತಾಪಮಾನ ಏರಿಕೆಯಂತೆ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ

Haryana politics: ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರ ಬೆಂಬಲ ವಾಪಾಸ್‌, ಬಿಜೆಪಿ ಸರ್ಕಾರಕ್ಕೆ ಸಂಕಷ್ಟ, ಸದಸ್ಯ ಬಲ ಎಷ್ಟಿದೆ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಯಥಾಸ್ಥಿತಿಯಲ್ಲಿ ಇದೆ. ಸದ್ಯ ಮಾರುಕಟ್ಟೆಯಲ್ಲಿ 50,020 ರೂಪಾಯಿ ಇದೆ. ನಿನ್ನೆಯು ಇದೇ ಬೆಲೆ ಇತ್ತು. ಆದರೆ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾದ ನಂತರ 45,860 ರೂಪಾಯಿ ಇದೆ. ನಿನ್ನೆ 45,850 ರೂಪಾಯಿಗೆ ತಲುಪಿತ್ತು.

ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 700 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ ಕೆಜಿ ಬೆಳ್ಳಿ 60,000 ರೂಪಾಯಿ ಇದೆ. ನಿನ್ನೆ ಈ ಬೆಲೆ 60,700 ರೂಪಾಯಿ ಇತ್ತು. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ಚಿನ್ನಾಭರಣಗಳ ದರಗಳು ಇವೆ.

ದೇಶದ ಇತರೆ ಪ್ರಮುಖ ನಗರಗಲ್ಲಿನ ಚಿನ್ನ, ಬೆಳ್ಳಿ ದರಗಳು:

Gold and silver rate in india: ಹೈದರಾಬಾದ್ ನಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಏರಿಳಿತವಾಗಿಲ್ಲ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಮೇಲೆ 49,970 ರೂಪಾಯಿ ಇದೆ. ಅದೇ ರೀತಿಯಾಗಿ 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ನಿನ್ನೆಯೂ ಇದೇ ಬೆಲೆಗಳಲ್ಲಿ ವಹಿವಾಟು ನಡೆಸಿತ್ತು.

ಹೈದರಾಬಾದ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 60,000 ರೂಪಾಯಿಯಲ್ಲಿ ವ್ಯಾಪಾರ ಆಗುತ್ತಿದೆ. ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,800 ಇದೆ. 24 ಕ್ಯಾರೆಟ್ ಚಿನ್ನಕ್ಕೆ 49,970 ರೂಪಾಯಿ ಇದೆ. ಇಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 60,000 ರೂಪಾಯಿಯಲ್ಲೇ ಇದೆ. ವಿಶಾಖಪಟ್ಟಣಂ ಮಾರುಕಟ್ಟೆಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 45,800 ರೂಪಾಯಿ ಆಗಿದ್ದು, 24ಕ್ಯಾರೆಟ್ ಚಿನ್ನದ ಬೆಲೆ 49,970 ರೂಪಾಯಿಯಲ್ಲಿ ಮುಂದುವರೆದಿದೆ.

ದೇಶದ ಇತರ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 150 ರೂಪಾಯಿ ಏರಿಕೆಯ ನಂತರ 46,250 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಹೆಚ್ಚಳದ ಬಳಿಕ 50,450 ರೂಪಾಯಿ ಇದೆ, ನಿನ್ನೆ 50,290 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಚೆನ್ನೈನಲ್ಲೂ ಕೆಜಿ ಬೆಳ್ಳಿ 60,000 ರೂಪಾಯಿ ಇದೆ.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 49,970 ರೂಪಾಯಿ ಇದೆ. ಮುಂಬೈನಲ್ಲಿ 1 ಕೆಜಿ ಬೆಳ್ಳಿ ಬೆಲೆಯಲ್ಲಿ 400 ರೂಪಾಯಿ ಕಡಿಮೆಯಾಗಿ 55,400 ರೂಪಾಯಿಗೆ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 45,950 ರೂ., 24ಕ್ಯಾರೆಟ್ ಚಿನ್ನದ ಬೆಲೆ 50,000 ರೂಪಾಯಿಗಳಲ್ಲಿ ವ್ಯಾಪಾರ ಮುಂದುವರೆಯುತ್ತಿದೆ.

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸೇರಿದಂತೆ ಕೆಲವು ಜಾಗತಿಕ ಬೆಳವಣಿಗೆಗಳಿಂದ ಚಿನ್ನಾಭರಣದ ಬೆಲೆಗಳಲ್ಲಿ ಏರಿಳಿತಗಳು ಆಗುತ್ತದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು