logo
ಕನ್ನಡ ಸುದ್ದಿ  /  Nation And-world  /  Gold And Silver Price Today September 30

Gold Rate Today: ಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ

HT Kannada Desk HT Kannada

Sep 30, 2022 07:48 AM IST

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

  • ಚಿನಿವಾರ ಪೇಟೆಯಲ್ಲಿಂದು (30, ಶುಕ್ರವಾರ, ಸೆಪ್ಟೆಂಬರ್ 2022) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ ಒಮ್ಮೆ ಬೆಲೆಗಳನ್ನು ಪರಿಶೀಲಿಸಿ ಕೊಳ್ಳಿ.

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

ಬೆಂಗಳೂರು: Today Gold and Silver Price: ವಿದೇಶದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳ ಏರಿಳಿತಗಳು ಭಾರತದ ಚಿನಿವಾರ ಪೇಟೆಯ ಮೇಲೂ ಪರಿಣಾಮ ಬೀರುತ್ತದೆ. ಇಂದು (ಸೆಪ್ಟೆಂಬರ್ 30, ಶುಕ್ರವಾರ, 2022) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ನೀವು ಏನಾದರೂ ಇಂದು ಆಭರಣಗಳನ್ನು ಖರೀದಿಸಲು ಪ್ಲಾನ್ ಮಾಡಿದ್ದವರಿಗೆ ಚಿನ್ನಾಭರಣಗಳ ಬೆಲೆಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

ಟ್ರೆಂಡಿಂಗ್​ ಸುದ್ದಿ

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂಪಾಯಿ ಏರಿಕೆಯಾಗಿ 46,400 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂಪಾಯಿ ಹೆಚ್ಚಳವಾಗಿದ್ದು, 50,620 ರೂಪಾಯಿಗೆ ಬಂದು ನಿಂತಿದೆ. ಇನ್ನ, 1 ಕೆಜಿ ಬೆಳ್ಳಿ ಬೆಲೆಯಲ್ಲಿ 1,400 ರೂಪಾಯಿ ಹೆಚ್ಚಳದ ನಂತರ 56,400 ರೂಪಾಯಿ ಇದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 650 ರೂಪಾಯಿ ಏರಿಕೆಯಾಗಿದೆ. ಆ ಬಳಿಕ 50,670 ರೂಪಾಯಿ ಇದೆ. ನಿನ್ನೆ 51,020 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 590 ರೂಪಾಯಿ ಏರಿಕೆಯಾಗಿ, 46,450 ರೂಪಾಯಿ ಇದೆ. ನಿನ್ನೆ 45,860 ರೂಪಾಯಿಗೆ ತಲುಪಿತ್ತು.

ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 3,600 ರೂಪಾಯಿ ಕಡಿಮೆಯಾಗಿದ್ದು, 56,600 ರೂಪಾಯಿ ಇದೆ. ನಿನ್ನೆ 60,000 ರೂಪಾಯಿಗೆ ಬಂದು ನಿಂತಿತ್ತು. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ಚಿನ್ನಾಭರಣಗಳ ದರಗಳು ಇವೆ.

ದೇಶದ ಇತರೆ ಪ್ರಮುಖ ನಗರಗಲ್ಲಿನ ಚಿನ್ನ, ಬೆಳ್ಳಿ ದರಗಳು:

Gold and silver rate in india: ಹೈದರಾಬಾದ್ ನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಮೇಲೆ 650 ರೂಪಾಯಿ ಏರಿಕೆ ನಂತರ 50,620 ರೂಪಾಯಿ ಇದೆ. ಅದೇ ರೀತಿಯಾಗಿ 22 ಕ್ಯಾರೆಟ್ ಚಿನ್ನದ ದರದಲ್ಲಿ 600 ರೂಪಾಯಿ ಹೆಚ್ಚಳಗೊಂಡಿದ್ದು, 46,400 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.

ಹೈದರಾಬಾದ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 1,500 ರೂಪಾಯಿ ಹೆಚ್ಚಳವಾಗಿದ್ದು, 61,500 ರೂಪಾಯಿಯಲ್ಲಿ ವ್ಯಾಪಾರ ಆಗುತ್ತಿದೆ. ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,400 ಆಗಿದೆ. 24 ಕ್ಯಾರೆಟ್ ಚಿನ್ನಕ್ಕೆ 50,620 ರೂಪಾಯಿ ಇದೆ. ಇಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 61,800 ರೂಪಾಯಿಗೆ ಇಳಿಕೆ ಕಂಡಿದೆ. ವಿಶಾಖಪಟ್ಟಣಂ ಮಾರುಕಟ್ಟೆಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 46,400 ರೂಪಾಯಿ ಆಗಿದ್ದು, 24ಕ್ಯಾರೆಟ್ ಚಿನ್ನದ ಬೆಲೆ 50,620 ರೂಪಾಯಿಗೆ ತಗ್ಗಿದೆ.

ದೇಶದ ಇತರ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಆಭರಣ ಬೆಲೆಯಲ್ಲಿ 550 ರೂಪಾಯಿ ಏರಿಕೆಯಾಗಿ 46,800 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 600 ರೂಪಾಯಿ ಹೆಚ್ಚಳಗೊಂಡ ಬಳಿಕ 51,050 ರೂಪಾಯಿ ಇದೆ, ನಿನ್ನೆ 50,450 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಚೆನ್ನೈನಲ್ಲೂ ಕೆಜಿ ಬೆಳ್ಳಿ 61,500 ರೂಪಾಯಿ ಇದೆ.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,400 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 50,620 ರೂಪಾಯಿ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,550 ರೂ., 24ಕ್ಯಾರೆಟ್ ಚಿನ್ನದ ಬೆಲೆ 50,780 ರೂಪಾಯಿಗಳಲ್ಲಿ ವ್ಯಾಪಾರ ಮುಂದುವರೆಯುತ್ತಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು