logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 18: 60 ಸಾವಿರ ಗಡಿ ಸಮೀಪ ಚಿನ್ನದ ದರ, ಬಳ್ಳಿಯಂತೆ ಹಬ್ಬುತ್ತಿದೆ ಬೆಳ್ಳಿ ದರ : ಆಭರಣವೇಕೆ ಇಷ್ಟು ಭಾರ?

Gold Price Today March 18: 60 ಸಾವಿರ ಗಡಿ ಸಮೀಪ ಚಿನ್ನದ ದರ, ಬಳ್ಳಿಯಂತೆ ಹಬ್ಬುತ್ತಿದೆ ಬೆಳ್ಳಿ ದರ : ಆಭರಣವೇಕೆ ಇಷ್ಟು ಭಾರ?

HT Kannada Desk HT Kannada

Mar 18, 2023 06:21 AM IST

ಸಾಂದರ್ಭಿಕ ಚಿತ್ರ

    • ಇಂದು(ಮಾ.18-ಶನಿವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಅನುಕ್ರಮವಾಗಿ ಏರಿಕೆ ಕಂಡುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಕುರಿತು ಇಲ್ಲಿದೆ ಮಾಹಿತಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ನವದೆಹಲಿ: ಇಂದು(ಮಾ.18.ಶನಿವಾರ ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಅನುಕ್ರಮವಾಗಿ ಏರಿಕೆ ಕಂಡುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಕುರಿತು ಇಲ್ಲಿದೆ ಮಾಹಿತಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಶನಿವಾರದ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿದರೆ, ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,869 ರೂ. ದಾಖಲಾಗಿದೆ. ನಿನ್ನೆ(ಮಾ.17-ಶುಕ್ರವಾರ) ಇದರ ಬೆಲೆ 5,842 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 27 ರೂ. ಏರಿಕೆ ಕಂಡುಬಂದಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 5,874 ರೂ. ನಿಗದಿಯಾಗಿದೆ. ನಿನ್ನೆ (ಮಾ.17-ಶುಕ್ರವಾರ) ಇದರ ಬೆಲೆ 5,847 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 27 ರೂ. ಏರಿಕೆ ಕಂಡುಬಂದಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ 53,850 ರೂ. ಆಗಿದ್ದು, ನಿನ್ನೆ (ಮಾ.17-ಶುಕ್ರವಾರ) ಇದರ ಬೆಲೆ 53,600 ರೂ. ಆಗಿತ್ತು ಅಂದರೆ ಒಂದು ದಿನದಲ್ಲಿ 250 ರೂ. ಏರಿಕೆ ಕಂಡುಬಂದಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 58,740 ರೂ. ಆಗಿದೆ. ನಿನ್ನೆ (ಮಾ.17-ಶುಕ್ರವಾರ) ಇದರ ಬೆಲೆ 58,470 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 270 ರೂ. ಏರಿಕೆ ಕಂಡುಬಂದಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರವನ್ನು ನೋಡುವುದಾದರೆ..(10 ಗ್ರಾಂ)

ನವದೆಹಲಿ: 53,950 ರೂ.(22 ಕ್ಯಾರಟ್‌) ಮತ್ತು 58,840 ರೂ. (24 ಕ್ಯಾರಟ್‌)

ಮುಂಬೈ: 53,800 ರೂ.(22 ಕ್ಯಾರಟ್‌) ಮತ್ತು 58,690 ರೂ. (24 ಕ್ಯಾರಟ್‌)

ಕೋಲ್ಕತ್ತಾ: 53,800 ರೂ.(22 ಕ್ಯಾರಟ್‌) ಮತ್ತು 58,690 ರೂ. (24 ಕ್ಯಾರಟ್

ಚೆನ್ನೈ: 54,500 ರೂ.(22 ಕ್ಯಾರಟ್‌) ಮತ್ತು 59,450 ರೂ. (24 ಕ್ಯಾರಟ್‌)

ಹೈದರಾಬಾದ್:‌ 53,800 ರೂ.(22 ಕ್ಯಾರಟ್‌) ಮತ್ತು 58,690 ರೂ. (24 ಕ್ಯಾರಟ್‌)

ಇನ್ನು ಬೆಳ್ಳಿ ದರದತ್ತ ಗಮನಹರಿಸುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 69,800 ರೂ. ಆಗಿದೆ. ನಿನ್ನೆ (ಮಾ.17-ಶುಕ್ರವಾರ) ಒಂದು ಕೆಜಿ ಬೆಳ್ಳಿ ಬೆಲೆ 69,200 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಬರೋಬ್ಬರಿ 600 ರೂ. ಏರಿಕೆ ಕಂಡುಬಂದಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 73,100 ರೂ. ಆಗಿದ್ದು, ನಿನ್ನೆ (ಮಾ.17-ಶುಕ್ರವಾರ) ಒಂದು ಕೆಜಿ ಬೆಳ್ಳಿ ಬೆಲೆ 72,700 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಬರೋಬ್ಬರಿ 400 ರೂ. ಏರಿಕೆ ಕಂಡುಬಂದಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರವನ್ನು ನೋಡುವುದಾದರೆ..

ನವದೆಹಲಿ: 69,800 ರೂ. (ಒಂದು ಕೆಜಿ)

ಮುಂಬೈ: 69,800 ರೂ. (ಒಂದು ಕೆಜಿ)

ಕೋಲ್ಕತ್ತಾ: 69,800 ರೂ. (ಒಂದು ಕೆಜಿ)

ಚೆನ್ನೈ: 73,100 ರೂ. (ಒಂದು ಕೆಜಿ)

ಹೈದರಾಬಾದ್:‌ 73,100 ರೂ. (ಒಂದು ಕೆಜಿ)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಅನುಕ್ರಮವಾಗಿ ಏರಿಕೆ ಕಂಡುಬಂದಿದೆ. ದೇಶದ ಎಲ್ಲಾ ಮಹಾನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿರುವುದು ಗಮನಿಸಬೇಕಾದ ಸಂಗತಿ.

ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ, ಚಿನ್ನ ಹಾಗೂ ಬೆಳ್ಳಿ ಮೇಲಿನ ದೈನಂದಿನ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು