Gujarat Assembly election 2022 results: ಗುಜರಾತ್ ಚುನಾವಣಾ ಫಲಿತಾಂಶವನ್ನು ಇಸಿಐ ವೆಬ್‌ನಲ್ಲಿ ನಿಖರವಾಗಿ ಗಮನಿಸುವುದು ಹೇಗೆ?
Dec 08, 2022 07:51 AM IST
ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಮತದಾನ ನಡೆದಿತ್ತು.
Gujarat Assembly election 2022 results: ಈ ದಿನವೇ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ. ಸಂಜೆಯೊಳಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗದ ವೆಬ್‌ನಲ್ಲಿ ಮತ ಎಣಿಕೆಯನ್ನು ನಿಖರವಾಗಿ ಟ್ರ್ಯಾಕ್ ಮಾಡುವುದು ಹೇಗೆ (How to track accurate Gujarat Election 2022 cote counting updates) ಎಂಬುದರ ವಿವರ ಇಲ್ಲಿದೆ.
ಭಾರೀ ಕುತೂಹಲ ಮೂಡಿಸಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಗುರುವಾರ ಅಂದರೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗುತ್ತಿದೆ. 1995 ರಿಂದ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯವು ತನ್ನ ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ಎದುರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವೂ ಇದಾಗಿದ್ದು, ಇಲ್ಲಿನ ಚುನಾವಣೆ ಬಹಳ ಬಿಜೆಪಿಗೆ ಪ್ರತಿಷ್ಠಿತವಾದುದು.
ಗುಜರಾತ್ ಚುನಾವಣೆ 2022ರ ಮತ ಎಣಿಕೆಯ ಅಪ್ಡೇಟ್ ಅನ್ನು ನಿಖರವಾಗಿ ಟ್ರ್ಯಾಕ್ ಮಾಡುವುದು ಹೇಗೆ?
ನೀವು ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ಅಪ್ಡೇಟ್ಸ್ ಟ್ರ್ಯಾಕ್ ಮಾಡಬಹುದು (ಲಿಂಕ್ಸ್‌ಗೆ ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ ). ಇದಲ್ಲದೆ, ನೀವು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಫಲಿತಾಂಶಗಳನ್ನು ಟ್ರ್ಯಾಕ್ ಮಾಡಬಹುದು; ಸುದ್ದಿ ವಾಹಿನಿಗಳು ಸಹ ಮತ ಎಣಿಕೆಯ ನೇರ ಪ್ರಸಾರವನ್ನು ಒದಗಿಸುತ್ತವೆ.
ಗುಜರಾತ್‌ನಲ್ಲಿ ಯಾವ ಪಕ್ಷ ಫೇವರಿಟ್?
ರಾಜ್ಯದ ಮುಖ್ಯಮಂತ್ರಿಯಾಗಿ ಸತತ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಸಲವೂ ಬಿಜೆಪಿಯ ಪ್ರಚಾರದ ಮುಖವಾಗಿದ್ದರು. ಎಕ್ಸಿಟ್ ಪೋಲ್‌ಗಳು ಕೇಸರಿ ಪಕ್ಷಕ್ಕೆ ಏಳನೇ ನೇರ ಅವಧಿಯನ್ನು ಮತ್ತು 182 ಸದಸ್ಯರ ಅಸೆಂಬ್ಲಿಯಲ್ಲಿ 100 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಭವಿಷ್ಯ ನುಡಿದಿವೆ. ಕಾಂಗ್ರೆಸ್ ಮತ್ತು ಎಎಪಿ ಎರಡನೇ ಸ್ಥಾನಕ್ಕಾಗಿ ಪರಸ್ಪರ ಪೈಪೋಟಿ ನಡೆಸಲಿವೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.
2017 ರಲ್ಲಿ, ಬಿಜೆಪಿ ಕೇವಲ 99 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಮಟ್ಟಿಗೆ ಇದು ಇತ್ತೀಚಿನ ವರ್ಷಗಳಲ್ಲಿ ಅದರ ಕೆಟ್ಟ ಪ್ರದರ್ಶನವಾಗಿ ಪರಿಗಣಿಸಲ್ಪಟ್ಟಿತ್ತು. ಇನ್ನು, ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಸಾಧನೆಯು ಕಾಂಗ್ರೆಸ್ ಮಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಅದರ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ.