logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಡಿಸೆಂಬರ್‌ ತಿಂಗಳಲ್ಲೇ ಕೋವಿಡ್‌ಗೆ 10000 ಮಂದಿ ಸಾವು: ಅಮೆರಿಕಾ, ಯುಕೆಯಲ್ಲಿ ಅಧಿಕ

Covid Updates: ಡಿಸೆಂಬರ್‌ ತಿಂಗಳಲ್ಲೇ ಕೋವಿಡ್‌ಗೆ 10000 ಮಂದಿ ಸಾವು: ಅಮೆರಿಕಾ, ಯುಕೆಯಲ್ಲಿ ಅಧಿಕ

Umesha Bhatta P H HT Kannada

Jan 11, 2024 02:30 PM IST

ಡಿಸೆಂಬರ್‌ನಲ್ಲಿ ಕೋವಿಡ್‌ನಿಂದ 10000 ಮಂದಿ ಮೃತಪಟ್ಟಿದ್ದಾರೆ.

    • Covid News ಡಿಸೆಂಬರ್‌ನಲ್ಲಿ ರಜೆ, ಜನರ ಸಂಭ್ರಮಾಚರಣೆಯಿಂದ ಹೆಚ್ಚು ಜನ ಸೇರಿ ಹಲವು ದೇಶಗಳಲ್ಲಿ ಕೋವಿಡ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೃತಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ( WHO) ವರದಿ ಮಾಡಿದೆ. 
ಡಿಸೆಂಬರ್‌ನಲ್ಲಿ ಕೋವಿಡ್‌ನಿಂದ 10000 ಮಂದಿ ಮೃತಪಟ್ಟಿದ್ದಾರೆ.
ಡಿಸೆಂಬರ್‌ನಲ್ಲಿ ಕೋವಿಡ್‌ನಿಂದ 10000 ಮಂದಿ ಮೃತಪಟ್ಟಿದ್ದಾರೆ.

ದೆಹಲಿ: ಡಿಸೆಂಬರ್‌ನಲ್ಲಿ ಕೋವಿಡ್‌ನಿಂದ 10000 ಮಂದಿ ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ( WHO) ಬಹಿರಂಗಪಡಿಸಿದೆ. ಡಿಸೆಂಬರ್‌ನಲ್ಲಿನ ಕ್ರಿಸ್‌ಮಸ್‌ ಆಚರಣೆ, ಹೊಸ ವರ್ಷದ ಸಡಗರ ಸೇರಿದಂತೆ ಹಲವು ಕಡೆ ನಿಗದಿಗಿಂತ ಹೆಚ್ಚು ಮಂದಿ ಸೇರಿದ್ದರಿಂದ ಕೋವಿಡ್‌ ಪ್ರಕರಣ ಹೆಚ್ಚಾಗಿದೆ. ಅದರಲ್ಲೂ ಜೆಎನ್‌ .1 ವೈರಸ್‌ ಹರಡಿದ್ದರಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದು ಸಾವಿನ ಸಂಖ್ಯೆಯೂ 10000 ಗಡಿ ದಾಟಿದೆ. ಅಮೆರಿಕಾ ಹಾಗೂ ಸಂಯುಕ್ತ ರಾಷ್ಟ್ರಗಳಲ್ಲಿ( UK) ಈ ಪ್ರಮಾಣ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಡ್ರೋಸ್‌ ಅಧ್ನೋಮ್‌ ಗೇಬ್ರೀಯಾಸ್‌ ಹೇಳಿಕೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಡಿಸೆಂಬರ್‌ನಲ್ಲಿ ದಿಢೀರ್‌ ಕೋವಿಡ್‌ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ. ಕೋವಿಡ್‌ ಹೆಚ್ಚುತ್ತಿರುವ ದೇಶಗಳ ಮೇಲೆ ನಿಗಾ ಇರಿಸಿದೆ ಎಂದು ಗೇಬ್ರಿಯಾಸ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಹೆಚ್ಚಿದ್ದು ಎಲ್ಲೆಲ್ಲಿ

ಸೆಂಬರ್‌ನಲ್ಲಿ ಸಾಲು ಸಾಲು ರಜೆಗಳು ಬಂದವು. ಬಹುತೇಕರು ರಜೆ ಹಾಕಿ ಹೊರಟರು. ಅಲ್ಲಲ್ಲಿ ರಜೆ ಕಾರ್ಯಕ್ರಮ, ಚಟುವಟಿಕಗಳು ನಡೆದವು. ಹೆಚ್ಚು ಜನ ಸೇರಿರುವುರಿಂದ ಈ ರೀತಿ ಆಗಿರುವುದು ಕಂಡು ಬಂದಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಶೇ. 42 ಏರಿಕೆ ಕಂಡು ಬಂದಿದೆ. ಅದರಲ್ಲೂ ಐಸಿಯು ಬಳಕೆ ಮಾಡಿದವರ ಪ್ರಮಾಣ ಶೇ.62 ರಷ್ಟು ಹೆಚ್ಚಳವಾಗಿದೆ. ವಿಶ್ವದ 50 ದೇಶಗಳಲ್ಲಿ ಕೋವಿಡ್‌ ಪ್ರಮಾಣ ಹೆಚ್ಚಾಗಿರುವುದನ್ನು ಅಂಕಿ ಸಂಖ್ಯೆಗಳು ಹೇಳುತ್ತವೆ. ಒಂದೇ ತಿಂಗಳಲ್ಲಿ ಹೀಗೆ 10000 ಸಾವಿರ ಮಂದಿ ಸಾವಿನ ಪ್ರಕರಣಗಳನ್ನು ನಿರ್ಲಕ್ಷಿಸಲಾಗದು ಎಂದು ಅವರು ಹೇಳಿದರು.

ವಿಶ್ವ ಹಲವು ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳು ಇದ್ದರೂ ಅವರು ಸೂಕ್ತ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಒದಗಿಸುತ್ತಿಲ್ಲ. ಯಾವ ದೇಶವೂ ಕೋವಿಡ್‌ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದು ಬೇಡ ಎನ್ನುವ ಸಂದೇಶವನ್ನು ಈಗಾಗಲೇ ರವಾನಿಸಲಾಗಿದೆ ಎನ್ನುವುದು ಅವರ ವಿವರಣೆ

ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗದ ವಾನ್‌ ಕೆರ್ಖೋವ್‌ ಹೇಳುವಂಂತೆ, ಕೋವಿಡ್‌ ನ ಜೆಎನ್‌ 1 ತಳಿಯ ಪ್ರಕರಣಗಳು ಹೆಚ್ಚಿವೆ. ಇದರೊಟ್ಟಿಗೆ ಜನ ಫ್ಲೂ, ನ್ಯೂಮೋನಿಯಾದಿಂದಲೂ ಬಳಲುತ್ತಿದ್ದಾರೆ. ಜನವರಿಯಲ್ಲೂ ಇದೇ ಸ್ಥಿತಿ ಮುಂದುವರೆಸುವ ಸೂಚನೆಯಿದೆ. ಅದರಲ್ಲೂ ಅಮೆರಿಕಾ, ಸಂಯುಕ್ತ ರಾಷ್ಟ್ರಗಳಲ್ಲಿ ಶೀತದ ಪ್ರಮಾಣ ಹೆಚ್ಚಿರುವುದು ಇದಕ್ಕೆ ಕಾರಣ. ಇದರಿಂದ ಜನ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಹೋಗುವುದು ಒಳ್ಳೇಯದು. ಲಸಿಕೆಯನ್ನು ಪಡೆದುಕೊಳ್ಳಬೇಕು. ಇದರಿಂದ ನಿಯಂತ್ರಣಕ್ಕೆ ನಾವೇ ಮಾದರಿ ಹಾಕಿ ಕೊಟ್ಟಂತೆ ಆಗುತ್ತದೆ ಎಂದು ಸಲಹೆ ನೀಡುತ್ತಾರೆ.

ಭಾರತದಲ್ಲಿ ಇಳಿಕೆ

ಭಾರತದಲ್ಲಿ ಮಾತ್ರ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಲೇ ಇದೆ. ಕಳೆದ 24ಗಂಟೆಗಳ ಅಂತರದಲ್ಲಿ 514 ಪ್ರಕರಣಗಳು ವರದಿಯಾಗಿದ್ದು, ಮೂವರು ಮೃತಪಟ್ಟಿದ್ಧಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವೂ ಮಾಹಿತಿ ನೀಡಿದೆ.

ಇಡೀ ದೇಶದಲ್ಲಿ 3,422 ಸಕ್ರಿಯ ಪ್ರಕರಣಗಳು ಸದ್ಯಕ್ಕಿವೆ. ಮಂಗಳವಾರ ಇದೇ ಪ್ರಮಾಣ 3,643ರಷ್ಟಿತ್ತು. ಒಂದೇ ದಿನದಲ್ಲಿ 732 ಮಂದಿ ಗುಣಮುಖರಾಗಿದ್ದಾರೆ.

ಮೂವರು ಮೃತಪಟ್ಟವರಲ್ಲಿ ಇಬ್ಬರು ಮಹಾರಾಷ್ಟ್ರದವರು ಮತ್ತೊಬ್ಬರು ಕರ್ನಾಟಕದವರು. ಈವರೆಗೂ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 5,33,409ಕ್ಕೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.

ಕರ್ನಾಟಕ ಹಾಗೂ ಕೇರಳದಲ್ಲೂ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಕೇರಳದಲ್ಲಿ 613, ಕರ್ನಾಟಕದಲ್ಲಿ 974 ಸಕ್ರಿಯ ಪ್ರಕರಣಗಳಿವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ