logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಕರ್ನಾಟಕ ರಾಜ್ಯಪಾಲರಿಗೂ ಕೋವಿಡ್‌: ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ಗಣನೀಯ ಕುಸಿತ

Covid updates: ಕರ್ನಾಟಕ ರಾಜ್ಯಪಾಲರಿಗೂ ಕೋವಿಡ್‌: ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ಗಣನೀಯ ಕುಸಿತ

Umesha Bhatta P H HT Kannada

Jan 10, 2024 02:28 PM IST

ಭಾರತದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಕರ್ನಾಟಕ ರಾಜ್ಯಪಾಲರೂ ಕೋವಿಡ್‌ ಪಾಸಿಟಿವ್‌ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    • Covid News ಭಾರತದಲ್ಲಿ ಒಂದೇ ದಿನದ ಅಂತರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಸಾವಿನ ಸಂಖ್ಯೆಯೂ ಆರರಿಂದ ನಾಲ್ಕಕ್ಕೆ ಇಳಿದಿದೆ. 
ಭಾರತದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಕರ್ನಾಟಕ ರಾಜ್ಯಪಾಲರೂ ಕೋವಿಡ್‌ ಪಾಸಿಟಿವ್‌ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಭಾರತದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಕರ್ನಾಟಕ ರಾಜ್ಯಪಾಲರೂ ಕೋವಿಡ್‌ ಪಾಸಿಟಿವ್‌ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 605 ಪ್ರಕರಣಗಳು ದಾಖಲಾಗಿ, ನಾಲ್ವರು ಮೃತಪಟ್ಟಿದ್ದಾರೆ. ಕರ್ನಾಟಕ ಹಾಗೂ ಕೇರಳದಲ್ಲಿ ತಲಾ ಇಬ್ಬರು ಒಂದೇ ದಿನದಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ ಕೋವಿಡ್‌ ಒಟ್ಟು ಸಕ್ರಿಯ ಪ್ರಕರಣ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೂ ಕೋವಿಡ್‌ ಇರುವುದು ದೃಢವಾಗಿದ್ದು, ಅವರ ತಮ್ಮೆಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಪ್ರತ್ಯೇಕ ವಾಸದಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿರುವ ದೈನಂದಿನ ವರದಿ ಪ್ರಕಾರ, ಭಾರತದಲ್ಲಿ24 ಗಂಟೆಗಳ ಅವಧಿಯಲ್ಲಿ 605 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಈವರೆಗೂ 3,643 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ. ಮಂಗಳವಾರದಂದು ಒಟ್ಟು ಪ್ರಕರಣಗಳ ಸಂಖ್ಯೆ 3,919 ಇತ್ತು. ಒಂದೇ ದಿನದಲ್ಲಿ ಸುಮಾರು 300 ಪ್ರಕರಣಗಳು ಕಡಿಮೆಯಾಗಿದೆ. ಭಾರತದಲ್ಲಿ ನಾಲ್ಕು ವರ್ಷದಲ್ಲಿ ಒಟ್ಟು 4,50,19,819 ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 5,33,406ರಷ್ಟು ತಲುಪಿದೆ.

24 ಗಂಟೆಗಳ ಅವಧಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಕರ್ನಾಟಕ ಹಾಗೂ ಕೇರಳದ ಇಬ್ಬರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಂಗಳವಾರ ಒಂದೇ ದಿನ ಆರು ಮಂದಿ ಮೃತಪಟ್ಟಿದ್ದರು. ಇದರಲ್ಲಿ ಕರ್ನಾಟಕ, ಛತ್ತೀಸಗಢ ಹಾಗೂ ಅಸ್ಸಾಂನಲ್ಲಿ ತಲಾ ಎರಡು ಪ್ರಕರಣ ವರದಿಯಾಗಿದ್ದವು.

ಜೆಎನ್‌ 1 ಪ್ರಕರಣಗಳು ವರದಿಯಾದ ನಂತರ ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿವೆ. ಈವರೆಗೂ 682 ಜೆಎನ್‌ 1 ಪ್ರಕರಣ ಇಡೀ ದೇಶದ 12 ರಾಜ್ಯಗಳಲ್ಲಿ ವರದಿಯಾಗಿವೆ. ಕೇರಳದಲ್ಲಿ 148, ಕರ್ನಾಟಕದಲ್ಲಿ199, ಮಹಾರಾಷ್ಟ್ರದಲ್ಲಿ 250, ದೆಹಲಿಯಲ್ಲಿ 21, ಗೋವಾದಲ್ಲಿ 49, ಗುಜರಾತ್‌ದಲ್ಲಿ 36, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ತಲಾ 26, ಆಂಧ್ರಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಲಾ 30, ಒಡಿಶಾದಲ್ಲಿ 3 ಹಾಗೂ ಹರಿಯಾಣ ರಾಜ್ಯದಲ್ಲಿಜೆಎನ್‌ 1ನ ಒಂದು ಪ್ರಕರಣ ಕಂಡು ಬಂದಿವೆ.

ಕರ್ನಾಟಕ ರಾಜ್ಯಪಾಲರ ಆರೋಗ್ಯ ಸ್ಥಿರ

ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಕೋವಿಡ್‌ ಪಾಸಿಟಿವ್‌ ಇರುವುದು ಕಂಡು ಬಂದಿದೆ. ಅನಾರೋಗ್ಯದಿಂದ ತಪಾಸಣೆ ಮಾಡಿಸಿಕೊಂಡಾಗ ಕೋವಿಡ್‌ ಇರುವುದು ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ.

ಅವರ ಆರೋಗ್ಯದ ನಿರಂತರ ತಪಾಸಣೆ ನಡೆದಿದೆ. ಆರೋಗ್ಯ ಸ್ಥಿರವಾಗಿದ್ದು ಆತಂಕ ಪಡುವ ಅಗತ್ಯವಿಲ್ಲ. ರಾಜಭವನದಲ್ಲಿಯೇ ಅವರು ಕ್ವಾರಂಟೈನ್‌ ಆಗಿದ್ಧಾರೆ. ಅವರು ಎಲ್ಲಾ ಅಧಿಕೃತ ಭೇಟಿ, ಪ್ರವಾಸವನ್ನು ಮುಂದಿನ ದಿನಾಂಕದವರೆಗೆ ರದ್ದುಪಡಿಸಲಾಗಿದೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್‌ ತಿಳಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ