logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಕೋವಿಡ್ ಸಕ್ರಿಯ ಪ್ರಕರಣ ಕರ್ನಾಟಕದಲ್ಲೇ ಅಧಿಕ: ಭಾರತದಲ್ಲಿ ಒಂದೇ ದಿನ 4 ಸಾವು

Covid Updates: ಕೋವಿಡ್ ಸಕ್ರಿಯ ಪ್ರಕರಣ ಕರ್ನಾಟಕದಲ್ಲೇ ಅಧಿಕ: ಭಾರತದಲ್ಲಿ ಒಂದೇ ದಿನ 4 ಸಾವು

Umesha Bhatta P H HT Kannada

Jan 08, 2024 06:54 PM IST

google News

ಕರ್ನಾಟಕದಲ್ಲಿಯೇ ಅತ್ಯಧಿಕ ಸಕ್ರಿಯ ಕೋವಿಡ್‌ ಪ್ರಕರಣಗಳು ಕಂಡು ಬಂದಿವೆ.

    • Covid News ಭಾರತದಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅದರಲ್ಲೂ ಕರ್ನಾಟಕದಲ್ಲಿಯೇ ಸಕ್ರಿಯ ಪ್ರಕರಣಗಳು ಒಂದು ದಿನದ ಅಂತರದಲ್ಲಿಯೇ ಹೆಚ್ಚು ವರದಿಯಾಗಿವೆ. 
ಕರ್ನಾಟಕದಲ್ಲಿಯೇ ಅತ್ಯಧಿಕ ಸಕ್ರಿಯ ಕೋವಿಡ್‌ ಪ್ರಕರಣಗಳು ಕಂಡು ಬಂದಿವೆ.
ಕರ್ನಾಟಕದಲ್ಲಿಯೇ ಅತ್ಯಧಿಕ ಸಕ್ರಿಯ ಕೋವಿಡ್‌ ಪ್ರಕರಣಗಳು ಕಂಡು ಬಂದಿವೆ.

ದೆಹಲಿ: ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು. ಕರ್ನಾಟಕಲ್ಲಿಯೇ ಅತ್ಯಧಿಕ ಪ್ರಕರಣಗಳು ಕಂಡು ಬಂದಿವೆ. ಸೋಮವಾರ ಒಂದೇ ದಿನ ಇಡೀ ದೇಶದಲ್ಲಿ , 605 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ ಒಟ್ಟು4002 ಸಕ್ರಿಯ ಪ್ರಕರಣಗಳಿದ್ದು. ಕರ್ನಾಟಕ ಒಂದರಲ್ಲೇ 1181 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಲಾಗಿದೆ.

ಜೆಎನ್‌ 1 ಉಪತಳಿಯ ವೈರಸ್‌ ಸಕ್ರಿಯವಾದ ನಂತರ ಭಾರತದಲ್ಲಿ ಒಂದು ತಿಂಗಳಿನಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು, ಸಾವಿನ ಸಂಖ್ಯೆಗಳೂ ವರದಿಯಾಗುತ್ತಿವೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಕೋವಿಡ್‌ ತಪಾಸಣೆ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಅದರಲ್ಲೂ ಕರ್ನಾಟಕ ಹಾಗೂ ಕೇರಳದಲ್ಲಿಯೇ ಹೆಚ್ಚಿನ ಸಕ್ರಿಯ ಪ್ರಕರಣಗಳಿದ್ದು. ವಿಶೇಷ ಗಮನ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ಕೋವಿಡ್‌ ತಪಾಸಣೆ ಸಂಖ್ಯೆ ಅಧಿಕವಾಗುತ್ತಿದೆ. ಆದರೆ ಡಿಸೆಂಬರ್‌ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆಶಾದಾಯಕ ಸಂಗತಿ. ಆದರೆ ಮುನ್ನೆಚ್ಚರಿಕೆಯನ್ನು ಪ್ರತಿಯೊಬ್ಬರೂ ವಹಿಸಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಸೋಮವಾರ ಒಂದೇ ದಿನದಲ್ಲಿ ಒಟ್ಟು 605 ಪ್ರಕರಣಗಳು ವರದಿಯಾಗಿವೆ. ನಾಲ್ವರು ಮೃತಪಟ್ಟಿದ್ದು, ಇದರಲ್ಲಿ ಕೇರಳದಲ್ಲಿ ಇಬ್ಬರು, ಕರ್ನಾಟಕ ಹಾಗೂ ತ್ರಿಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೂ ಸಾವಿನ ಸಂಖ್ಯೆ 533396 ತಲುಪಿದೆ. ಈ ವಾರದಲ್ಲಿ 31 ಕೋವಿಡ್‌ ನಿಂದ ಮೃತಪಟ್ಟಿದ್ದರೆ, ಕಳೆದ ವಾರ ಈ ಸಂಖ್ಯೆ 29 ಇತ್ತು.

ಕೇರಳ ಹಾಗೂ ಮಹಾರಾಷ್ಟ್ರರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಸಕ್ರಿಯ ಪ್ರಕರಣಗಳು ಅಧಿಕವಾಗಿವೆ. 1181 ಸಕ್ರಿಯ ಪ್ರಕರಣಗಳು ಕರ್ನಾಟಕದಲ್ಲಿವೆ. ಕರ್ನಾಟಕದಲ್ಲಿ ಒಂದೇ ದಿನ 199 , ಕೇರಳದಲ್ಲಿ 148, ಮಹಾರಾಷ್ಟ್ರದಲ್ಲಿ 139 , ಗೋವಾದಲ್ಲಿ 47 , ಗುಜರಾತ್‌ನಲ್ಲಿ 36, ಆಂಧ್ರಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಲಾ 30, ತಮಿಳುನಾಡಿನಲ್ಲಿ 26 , ದೆಹಲಿಯಲ್ಲಿ 21, ಒಡೊಶಾದಲ್ಲಿ ಮೂರು, ತೆಲಂಗಾಣದಲ್ಲಿ ಎರಡು ಹಾಗೂ ಹರಿಯಾಣದಲ್ಲಿ ಒಂದು ಪ್ರಕರಣ ದಿನದಲ್ಲಿ ದಾಖಲಾಗಿವೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ