logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Himachal Election 2022 Vote Counting: ಹಿಮಾಚಲದ ಚುನಾವಣಾ ಫಲಿತಾಂಶ ಇಂದು; ಇಸಿಐ ವೆಬ್‌ನಲ್ಲಿ ಮತ ಎಣಿಕೆ ಟ್ರ್ಯಾಕ್‌ ಮಾಡುವುದು ಹೇಗೆ?

Himachal Election 2022 vote counting: ಹಿಮಾಚಲದ ಚುನಾವಣಾ ಫಲಿತಾಂಶ ಇಂದು; ಇಸಿಐ ವೆಬ್‌ನಲ್ಲಿ ಮತ ಎಣಿಕೆ ಟ್ರ್ಯಾಕ್‌ ಮಾಡುವುದು ಹೇಗೆ?

HT Kannada Desk HT Kannada

Dec 08, 2022 09:16 AM IST

google News

ಹಿಮಾಚಲ ಪ್ರದೇಶ ಚುನಾವಣಾ 2022 ರ ಮತ ಎಣಿಕೆಯನ್ನು ನಿಖರವಾಗಿ ಟ್ರ್ಯಾಕ್ ಮಾಡುವುದು ಹೇಗೆ?

  • Himachal Election 2022 vote counting: ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್‌ನಲ್ಲಿ ಹಿಮಾಚಲ ಪ್ರದೇಶ ಚುನಾವಣೆ 2022ರ ಫಲಿತಾಂಶ ಮತ್ತು ನಿಖರ ಮತ ಎಣಿಕೆಯ ಅಪ್ಡೇಟ್ಸ್‌ ಲಭ್ಯವಿದೆ. ಇದನ್ನು ಟ್ರ್ಯಾಕ್‌ ಮಾಡುವುದು ಹೇಗೆ ಇಲ್ಲಿದೆ ವಿವರ.

ಹಿಮಾಚಲ ಪ್ರದೇಶ ಚುನಾವಣಾ 2022 ರ ಮತ ಎಣಿಕೆಯನ್ನು ನಿಖರವಾಗಿ ಟ್ರ್ಯಾಕ್ ಮಾಡುವುದು ಹೇಗೆ?
ಹಿಮಾಚಲ ಪ್ರದೇಶ ಚುನಾವಣಾ 2022 ರ ಮತ ಎಣಿಕೆಯನ್ನು ನಿಖರವಾಗಿ ಟ್ರ್ಯಾಕ್ ಮಾಡುವುದು ಹೇಗೆ?

ಹಿಮಾಚಲ ಪ್ರದೇಶದ 68 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 8 ಗಂಟೆಗೆ ಮತ ಎಣಿಕೆ ಶುರುವಾಗಿದ್ದು 10 ಗಂಟೆಗೆ ಮೊದಲ ಹಂತದ ಆರಂಭಿಕ ಟ್ರೆಂಡ್‌ ಬಹಿರಂಗವಾಗಲಿದೆ. ಸಂಜೆಯೊಳಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗಲಿದೆ.

ಒಂದೇ ಪಕ್ಷ ಸತತ ಎರಡನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದ ಸಂಪ್ರದಾಯ ಕಳೆದ ಮೂರೂವರೆ ದಶಕದಲ್ಲಿ ಇಲ್ಲ. ಪರ್ಯಾಯವಾಗಿ ಬಿಜೆಪಿ, ಕಾಂಗ್ರೆಸ್‌ ಸರ್ಕಾರ ರಚನೆ ಆಗುತ್ತಿದೆ. ಈ ಸಂಪ್ರದಾಯ ಮುರಿದು ಬಿಜೆಪಿ ಆಡಳಿತವೇ ಮುಂದುವರಿಯಲಿದೆ ಎಂಬುದು ಈ ಸಲ ಬಿಜೆಪಿಯ ಘೋಷ ವಾಕ್ಯ. 1985ರಿಂದೀಚೆಗೆ ಇಲ್ಲಿ ಆಡಳಿತ ಪಕ್ಷ ಮತ್ತೊಂದು ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದಿಲ್ಲ. ಆದರೆ ಆಡಳಿತಾರೂಢ ಬಿಜೆಪಿಯು ರಾಜ್ಯದಲ್ಲಿ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದನ್ನು ಮುರಿಯುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.

ಭದ್ರತಾ ಸಿಬ್ಬಂದಿ ಸೇರಿ ಸುಮಾರು 10,000 ಸಿಬ್ಬಂದಿಯನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ. ಮತ ಎಣಿಕೆಗೆ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೀಶ್ ಗಾರ್ಗ್ ಬುಧವಾರ ತಿಳಿಸಿದ್ದಾರೆ. ರಾಜ್ಯದ 59 ಸ್ಥಳಗಳಲ್ಲಿ 68 ಸಭಾಂಗಣಗಳಲ್ಲಿ ಮತ ಎಣಿಕೆ ನಡೆಯಲಿದೆ.

ಹಿಮಾಚಲ ಪ್ರದೇಶ ಮತ ಎಣಿಕೆಯನ್ನು ಫಾಲೋ ಮಾಡುವುದು ಹೇಗೆ?

ನೀವು ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶಕ್ಕಾಗಿ https://kannada.hindustantimes.com/topic/hp-assembly-election-2022 ಅಥವಾ https://www.hindustantimes.com (ವೆಬ್‌ಸೈಟ್‌ ಅಥವಾ ಮೊಬೈಲ್‌ ಆಪ್‌) ಫಾಲೋ ಮಾಡಬಹುದು. ಅದೇ ರೀತಿ, ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗಳಾದ-https://eci.gov.in/  ಅಥವಾ http://www.eciresults.nic.in/ - ಗಳನ್ನು ಫಾಲೋ ಮಾಡಬಹುದು.

ಎಕ್ಸಿಟ್‌ ಪೋಲ್‌ ವರದಿ ಹೀಗಿದೆ

ದ ರಿಪಬ್ಲಿಕ್‌ - PMARQ ಪ್ರಕಾರ ಬಿಜೆಪಿಗೆ 34-49, ಕಾಂಗ್ರೆಸ್‌ಗೆ 28-33 ಮತ್ತು ಎಎಪಿಗೆ AP 0-1.

ಇಂಡಿಯಾ ಟುಡೇ - ಏಕ್ಸಿಸ್‌ ಪೋಲ್‌ ಪ್ರಕಾರ, ಕಾಂಗ್ರೆಸ್‌ಗೆ 30-40, ಬಿಜೆಪಿಗೆ 24-34 ಮತ್ತು ಎಎಪಿಗೆ 4-8 .

ಇಂಡಿಯಾ ಟಿವಿ-ಮ್ಯಾಟ್ರಿಜ್ ಪ್ರಕಾರ ಬಿಜೆಪಿಗೆ 35-40 ಮತ್ತು ಕಾಂಗ್ರೆಸ್‌ಗೆ 26-31

ನ್ಯೂಸ್‌ಎಕ್ಸ್-ಜನ್ ಕಿ ಬಾತ್ ಪ್ರಕಾರ, ಬಿಜೆಪಿಗೆ 32-40, ಕಾಂಗ್ರೆಸ್‌ಗೆ 27-34,

ಟೈಮ್ಸ್ ನೌ-ಇಟಿಜಿ ಪ್ರಕಾರ, ಬಿಜೆಪಿಗೆ 34-42, ಕಾಂಗ್ರೆಸ್‌ಗೆ 24-32

ಜೀ ನ್ಯೂಸ್‌ -BARC ಪ್ರಕಾರ, ಬಿಜೆಪಿಗೆ 35-40, ಕಾಂಗ್ರೆಸ್‌ಗೆ 20-25, ಎಎಪಿಗೆ 0-3

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ