logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Vs Nda Battle: 7 ವಿಧಾನಸಭಾ ಸ್ಥಾನಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ, ಇಂಡಿಯಾ ತಲಾ 3, ಎಸ್‌ಪಿಗೆ 1 ರಲ್ಲಿ ಗೆಲುವು

INDIA vs NDA battle: 7 ವಿಧಾನಸಭಾ ಸ್ಥಾನಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ, ಇಂಡಿಯಾ ತಲಾ 3, ಎಸ್‌ಪಿಗೆ 1 ರಲ್ಲಿ ಗೆಲುವು

Umesh Kumar S HT Kannada

Sep 08, 2023 08:52 PM IST

ಆರು ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟ ತಲಾ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಒಂದು ಸ್ಥಾನ ಎಸ್‌ಪಿ ಪಾಲಾಗಿದೆ. (ಸಾಂಕೇತಿಕ ಚಿತ್ರ)

  • ಲೋಕಸಭೆ ಚುನಾವಣೆ 2024, ಪಂಚ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಲಿಟ್ಮಸ್ ಟೆಸ್ಟ್ ಎಂದು ಪರಿಗಣಿಸಲ್ಪಟ್ಟ ಆರು ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟ ತಲಾ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಒಂದು ಸ್ಥಾನ ಎಸ್‌ಪಿ ಪಾಲಾಗಿದೆ.

ಆರು ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟ ತಲಾ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಒಂದು ಸ್ಥಾನ ಎಸ್‌ಪಿ ಪಾಲಾಗಿದೆ. (ಸಾಂಕೇತಿಕ ಚಿತ್ರ)
ಆರು ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟ ತಲಾ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಒಂದು ಸ್ಥಾನ ಎಸ್‌ಪಿ ಪಾಲಾಗಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ರಚನೆಯಾದ ಬಳಿಕ ನಡೆದ ಮೊದಲ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಆರು ರಾಜ್ಯಗಳ ಏಳು ಸ್ಥಾನಗಳ ಪೈಕಿ ತಲಾ ಮೂರು ಸ್ಥಾನಗಳು ಬಿಜೆಪಿ ಮತ್ತು ಇಂಡಿಯಾ ಮೈತ್ರಿಯ ಪಾಲಾಗಿವೆ. ಅಂದರೆ ಕಾಂಗ್ರೆಸ್, ಜೆಎಂಎಂ, ಟಿಎಂಸಿ ತಲಾ ಒಂದು ಸ್ಥಾನದಲ್ಲಿ ಗೆಲುವಿನ ನಗೆ ಬೀರಿವೆ. ಇನ್ನುಳಿದ ಒಂದು ಸ್ಥಾನದಲ್ಲಿ ಸಮಾಜವಾದಿ ಪಾರ್ಟಿ ಗೆಲುವಿನ ನಗೆ ಬೀರಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

ಉತ್ತರ ಪ್ರದೇಶದ ಘೋಸಿ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿಗೆ ಇಂಡಿಯಾ ವಿಪಕ್ಷ ಮೈತ್ರಿ ಬೆಂಬಲ ಸೂಚಿಸಿತ್ತು. ಅದೇ ರೀತಿ ಜಾರ್ಖಂಡ್‌ನಲ್ಲಿ ದುಮ್ರಿ ಕ್ಷೇತ್ರವನ್ನು ಜೆಎಂಎಂ ಉಳಿಸಿಕೊಂಡಿದೆ.

ಬಿಜೆಪಿ ಉತ್ತರಾಖಂಡದ ಬಾಗೇಶ್ವರ, ತ್ರಿಪುರಾದ ಧಾನಪುರ ಉಳಿಸಿಕೊಂಡರೆ, ಸಿಪಿಐಎಂ ಹಿಡಿತದಲ್ಲಿದ್ದ ಬೋಕ್ಸಾನಗರವನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಧೂಪಗುರಿ ಕ್ಷೇತ್ರವನ್ನು ಕಳೆದುಕೊಂಡಿತು.

ಉಪಚುನಾವಣೆ ಫಲಿತಾಂಶದ ಯಾರು ಏನು ಹೇಳಿದರು

"ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸೆಪ್ಟೆಂಬರ್ 5 ರಂದು ನಡೆದ ಏಳು ಉಪಚುನಾವಣೆಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಸೋತಿದೆ. ಇದು ಇಂಡಿಯಾ ಮೈತ್ರಿಗೆ ಸಿಕ್ಕ ದೊಡ್ಡ ಗೆಲುವು" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಎಂದರು.

ಬಿಜೆಪಿಗೆ ಪರ್ಯಾಯವಾಗಿ ಜನರು ಇಂಡಿಯಾ ಮೈತ್ರಿಕೂಟವನ್ನು ಒಪ್ಪಿಕೊಂಡಿದ್ದಾರೆ ಎಂಬುದು ಉಪಚುನಾವಣೆಯಲ್ಲಿ ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾದ ಅಭ್ಯರ್ಥಿಗಳ ಗೆಲುವು ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಆದಾಗ್ಯೂ, ಬಿಜೆಪಿ ನಾಯಕರು ತ್ರಿಪುರಾ ಮತ್ತು ಉತ್ತರಾಖಂಡದಲ್ಲಿ ಪಕ್ಷದ ಗೆಲುವನ್ನು ಶ್ಲಾಘಿಸಿದರು. ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರ ಅವರು ಫಲಿತಾಂಶಗಳು ವಿರೋಧ ಪಕ್ಷಗಳ "ಘಮಾಂಡಿಯಾ" ಮೈತ್ರಿಯ ದುರಹಂಕಾರವನ್ನು ಛಿದ್ರಗೊಳಿಸಿವೆ ಎಂದು ವ್ಯಾಖ್ಯಾನಿಸಿದರು.

ಆರು ರಾಜ್ಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೀಗಿದೆ

ಕೇರಳದ ಪುತ್ತುಪಳ್ಳಿ ಕ್ಷೇತ್ರದಲ್ಲಿ ಮಾಜಿ ಸಿಎಂ ಉಮ್ಮನ್ ಚಾಂಡಿ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಚಾಂಡಿ ಉಮ್ಮನ್‌ 80,144 ಮತ ಗಳಿಸಿದ್ದು, ಎಲ್‌ಡಿಎಫ್ ಅಭ್ಯರ್ಥಿ ಜಾಕ್ ಸಿ ಥಾಮಸ್‌ (42,425 ಮತ) ವಿರುದ್ಧ ಗೆಲುವು ದಾಖಲಿಸಿದರು. ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕೇರಳದಲ್ಲಿ ಪ್ರತಿಸ್ಪರ್ಧಿಗಳು.

ಉತ್ತರ ಪ್ರದೇಶದ ಘೋಸಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಧಾರಾ ಸಿಂಗ್ ಚೌಹಾಣ್‌ ವಿರುದ್ಧ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಸುಧಾಕರ್ ಸಿಂಗ್ 42, 759 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಜಾರ್ಖಂಡ್‌ನ ದುಮ್ರಿ ಕ್ಷೇತ್ರದಲ್ಲಿ ಇಂಡಿಯಾ ಬೆಂಬಲಿತ ಜೆಎಂಎಂನ ಅಭ್ಯರ್ಥಿ ಬೇಬಿ ದೇವಿ ಅವರು ಎನ್‌ಡಿಎ ಬೆಂಬಲಿತ ಎಜೆಎಸ್‌ಯು ಅಭ್ಯರ್ಥಿ ಯಶೋದಾ ದೇವಿ ವಿರುದ್ಧ 17,000ಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿದರು.

ಪಶ್ಚಿಮ ಬಂಗಾಳದ ಧೂಪಗುರಿ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ನಿರ್ಮಲ್ ಚಂದ್ರ ರಾಯ್‌ 4,313 ಮತಗಳಿಂದ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ತಾಪಸಿ ರಾಯ್‌ ಸೋಲನುಭವಿಸಿದರು.

ಉತ್ತರಾಖಂಡದ ಬಾಗೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿ ಪಾರ್ವತಿ ದಾಸ್‌ 2,400 ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಬಸಂತ ಕುಮಾರ್‌ ವಿರುದ್ಧ ಗೆಲುವು ದಾಖಲಿಸಿದರು.

ತ್ರಿಪುರಾದಲ್ಲಿ ಬೋಕ್ಸಾನಗರದಲ್ಲಿ ಬಿಜೆಪಿ ಅಭ್ಯರ್ಥಿ ತಾಫಜ್ಜಲ್‌ ಹುಸೈನ್‌ 30,237 ಮತಗಳ ಅಂತರದ ಗೆಲುವು ದಾಖಲಿಸಿದರು. ಸಿಪಿಐ ಎಂ ಅಭ್ಯರ್ಥಿ ಮಿಜಾನ್ ಹುಸೇನ್ ಸೋಲನುಭವಿಸಿದರು.

ಧಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿಂದು ದೇವನಾಥ್‌ 18,871 ಮತಗಳ ಅಂತರದ ಗೆಲುವು ದಾಖಲಿಸಿದರು. ಸಿಪಿಐ ಎಂ ಅಭ್ಯರ್ಥಿ ಕೌಶಿಕ್ ಚಂಡ ಸೋಲನುಭವಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ