logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updaes: ಒಂದೇ ದಿನ 760 ಕೋವಿಡ್‌ ಪ್ರಕರಣ ದಾಖಲು, ಇಬ್ಬರ ಸಾವು, ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ

Covid updaes: ಒಂದೇ ದಿನ 760 ಕೋವಿಡ್‌ ಪ್ರಕರಣ ದಾಖಲು, ಇಬ್ಬರ ಸಾವು, ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ

Umesha Bhatta P H HT Kannada

Jan 04, 2024 03:40 PM IST

google News

ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.

    • Covid cases ಭಾರತದಲ್ಲಿ ಒಂದೇ ದಿನ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. 760 ಪ್ರಕರಣಗಳು ಬುಧವಾರ ವರದಿಯಾಗಿದ್ದು, ಕರ್ನಾಟಕದಲ್ಲಿ 260 ಪ್ರಕರಣ ಕಂಡು ಬಂದಿವೆ. 
ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.
ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.

ದೆಹಲಿ: ಭಾರತದಲ್ಲಿ ಬುಧವಾರ ಒಂದೇ ದಿನ 760 ಕೋವಿಡ್‌ ಒಂದೇ ದಿನ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆಯಲ್ಲಿಏರಿಕೆ ಕಂಡು ಬಂದಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಬುಧವಾರದಂದು 158 ಪ್ರಕರಣಗಳು ಹೆಚ್ಚಳವಾಗಿವೆ. ಕರ್ನಾಟಕದಲ್ಲಿಯೂ ಒಂದೇ ದಿನದಲ್ಲಿ 260 ಪ್ರಕರಣಗಳು ವರದಿಯಾಗಿವೆ. ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ತಲಾ ಒಬ್ಬರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ದೈನಂದಿನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಒಂದು ತಿಂಗಳಿನಿಂದ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ವರದಿಯಾಗುತ್ತಿವೆ. ಅದರಲ್ಲೂ ಜೆಎನ್‌ 1 ತಳಿಯ ಪ್ರಕರಣಗಳು ಕಾಣಿಸಿಕೊಂಡಾಗಿನಿಂದ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುತ್ತಲೇ ಇವೆ. ಮಂಗಳವಾರದಂದು ಕಡಿಮೆಯಾಗಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಬುಧವಾರ ಏರುಗತಿಯಲ್ಲಿದೆ. ಬುಧವಾರ ಒಂದೇ ದಿನ 760 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಈವರೆಗೂ ದೇಶದಲ್ಲಿ 4,423 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ. ಕೇರಳ ಹಾಗೂ ಕರ್ನಾಟಕದಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಜೆಎನ್‌ 1ನ 511 ಸಕ್ರಿಯ ಪ್ರಕರಣಗಳು ಸೇರಿವೆ. ಈವರೆಗೂ ದೇಶದಲ್ಲಿ 4,50,15,896 ಕೋವಿಡ್ ಪ್ರಕರಣ ದಾಖಲಾಗಿದ್ದು 533373 ಮಂದಿ ಮೃತಪಟ್ಟಿದ್ದಾರೆ.‌

ಕರ್ನಾಟಕದಲ್ಲಿ ಒಂದೇ ದಿನ 260 ಕೋವಿಡ್‌ ಪ್ರಕರಣಗಳು ಬುಧವಾರ ದಾಖಲಾಗಿವೆ. ಇದರಲ್ಲಿ ಬೆಂಗಳೂರಿನಲ್ಲಿಯೇ 134 ಪ್ರಕರಣಗಳು ಕಂಡು ಬಂದಿವೆ. ಈವರೆಗೂ ಬೆಂಗಳೂರಿನಲ್ಲಿ 624 ಸಕ್ರಿಯ ಪ್ರಕರಣಗಳು ದಾಖಲಾದಂತಾಗಿದೆ. ಇದರಲ್ಲಿ 228 ಮಂದಿ ಗುಣಮುಖರಾಗಿದ್ಧಾರೆ. ಕರ್ನಾಟಕದಲ್ಲಿ ತಿಂಗಳ ಅವಧಿಯಲ್ಲಿ 1,175 ಸಕ್ರಿಯ ಪ್ರಕರಣಗಳು ಕಂಡು ಬಂದಿದ್ದು. ಕೇರಳದ ನಂತರ ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ. ಒಂದೇ ದಿನದಲ್ಲಿ ಶೇ. 75 ಏರಿಕೆಯಾಗಿದೆ ಎನ್ನುವುದು ಆರೋಗ್ಯ ಇಲಾಖೆ ನೀಡಿರುವ ಮಾಹಿತಿ.

ಕರ್ನಾಟಕದಲ್ಲಿ ಎಲ್ಲಿ ಎಷ್ಟು ಪ್ರಕರಣ

ಕರ್ನಾಟಕದಲ್ಲಿಯೇ ಮೈಸೂರಿನಲ್ಲಿ 24 , ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 20, ಶಿವಮೊಗ್ಗ ಜಿಲ್ಲೆಯಲ್ಲಿ 11, ದಕ್ಷಿಣ ಕನ್ನಡ ಹಾಗೂ ಧಾರವಾಡ ಜಿಲ್ಲೆಯಲ್ಲಿ ತಲಾ ಒಂಬತ್ತು, ಮಂಡ್ಯ ಜಿಲ್ಲೆಯಲ್ಲಿ ಎಂಟು, ಹಾಗೂ ರಾಮನಗರ ಜಿಲ್ಲೆಯಲ್ಲಿಏಳು, ತುಮಕೂರು ಆರು., ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ನಾಲ್ಕು ಪ್ರಕರಣ, ಬಳ್ಳಾರಿ,. ಚಿತ್ರದುರ್ಗ, ಹಾಸನ ಜಿಲ್ಲೆಯಲ್ಲಿ ತಲಾ ಎರಡು, ಒಂಬತ್ತು ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಾಗಿಲ್ಲ.

ಓಡಿಶಾದಲ್ಲೂ ಕೋವಿಡ್‌ ಪ್ರಕರಣ ಕಂಡು ಬಂದಿದೆ. ಬುಧವಾರ ಒಂದೇ ದಿನ ಐದು ಪ್ರಕರಣ ಪತ್ತೆಯಾಗಿ ಈವರೆಗೂ 27 ಸಕ್ರಿಯ ಪ್ರಕರಣಗಳಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ನಿರ್ದೇಶ ಬಿ.ಕೆ. ಮಹಾಪಾತ್ರ ತಿಳಿಸಿದ್ದಾರೆ.

ಕೇರಳ ತಮಿಳುನಾಡು ಗಡಿಯಲ್ಲಿ ಚೆಕ್‌ಪೋಸ್ಟ್‌

ಕೋವಿಡ್‌ ಪ್ರಕರಣಗಳ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕೇರಳ ಗಡಿ ಭಾಗದಲ್ಲಿ ಏಳು ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಕೇರಳದಲ್ಲಿ ಜೆಎನ್‌ 1 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಮುನ್ನೆಚ್ಚರಿಕೆ ಭಾಗವಾಗಿ ತಮಿಳುನಾಡು ಹಾಗೂ ಕೇರಳದ ನೀಲಗಿರಿ ಜಿಲ್ಲೆ ಗಡಿ ಭಾಗ ಸೇರಿ ಏಳು ಕಡೆ ಚೆಕ್‌ಪೋಸ್ಟ್‌ ತೆರಯಲಾಗಿದೆ. ಇಲ್ಲಿ ತಪಾಸಣೆ ನಡೆಸಲಾಗುತ್ತಿದೆ. ನೀಲಿಗಿರಿ ಜಿಲ್ಲಾಧಿಕಾರಿ ಎಂ. ಅರುಣ ಅವರು ಚೆಕ್‌ಪೋಸ್ಟ್‌ಗಳನ್ನು ಪರಿಶೀಲಿಸಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ