logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nitish Kumar: ಜನಸಂಖ್ಯೆ ನಿಯಂತ್ರಣ ವಿಚಾರ, ಮಹಿಳೆಯರನ್ನುಅವಮಾನಿಸಿದ ಬಿಹಾರ ಸಿಎಂ ನಿತೀಶ್ ಕ್ಷಮೆಯಾಚನೆ, ರಾಜೀನಾಮೆಗೆ ಬಿಜೆಪಿ ಆಗ್ರಹ

Nitish Kumar: ಜನಸಂಖ್ಯೆ ನಿಯಂತ್ರಣ ವಿಚಾರ, ಮಹಿಳೆಯರನ್ನುಅವಮಾನಿಸಿದ ಬಿಹಾರ ಸಿಎಂ ನಿತೀಶ್ ಕ್ಷಮೆಯಾಚನೆ, ರಾಜೀನಾಮೆಗೆ ಬಿಜೆಪಿ ಆಗ್ರಹ

HT Kannada Desk HT Kannada

Nov 08, 2023 04:20 PM IST

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

  • ಜನಸಂಖ್ಯಾ ನಿಯಂತ್ರಣಕ್ಕಾಗಿ ಮಹಿಳೆ ಲೈಂಗಿಕ ಸಂಭೋಗದ ವೇಳೆ ಪತಿಯನ್ನು ಹೇಗೆ ತಡೆಯಬೇಕು ಎಂಬುದನ್ನು ವಿವರಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ವ್ಯಾಪಕ ಟೀಕೆ ಮತ್ತು ರಾಜೀನಾಮೆಗೆ ಒತ್ತಡ ಬಂದ ಬಳಿಕ ಈ ಹೇಳಿಕೆ ಹಿಂಪಡೆದ ಅವರು ಕ್ಷಮೆಯಾಚಿಸಿದರು. 

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (PTI)

ಪಾಟ್ನಾ: ಜನಸಂಖ್ಯೆಯನ್ನು ನಿಯಂತ್ರಿಸಲು ಮಹಿಳೆಯರಲ್ಲಿ ಶಿಕ್ಷಣದ ಮಹತ್ವವನ್ನು ಒತ್ತಿಹೇಳುವ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ವಿವಾದವನ್ನು ಹುಟ್ಟುಹಾಕಿದರು. ಹೇಳಿಕೆ ವಿವಾದವಾಗುತ್ತಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷಮೆಯಾಚಿಸಿದರು.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇದೇ ವೇಳೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಟೀಕಾ ಪ್ರಹಾರ ಮಾಡಿದರಲ್ಲದೆ, ಅವರ ರಾಜೀನಾಮೆಗೆ ಒತ್ತಾಯಿಸಿದರು.

ಕ್ಷಮೆಯಾಚಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

"ನಾನು ಯಾರಿಗಾದರೂ ನೋವುಂಟುಮಾಡುವಂತೆ ಮಾತನಾಡಿದ್ದರೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣ ಅಗತ್ಯ ಎಂಬುದನ್ನು ನಾನು ಯಾವಾಗಲೂ ಸಮರ್ಥಿಸಿಕೊಂಡಿದ್ದೇನೆ. ಮಹಿಳಾ ಸಬಲೀಕರಣ ಮತ್ತು ಮಹಿಳಾ ಅಭಿವೃದ್ಧಿಯ ಪರವಾಗಿ ನಾನೂ ಇದ್ದೇನೆ" ಎಂದು ಸಿಎಂ ನಿತೀಶ್ ಕುಮಾರ್ ವಿಧಾನಸಭೆಯ ಮುಖ್ಯದ್ವಾರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ವಿರುದ್ಧ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಅವರ ಈ ಕ್ಷಮೆಯಾಚನೆ ಗಮನಸೆಳೆದಿದೆ. ಇದಲ್ಲದೆ, ಸಾಮಾಜಿಕವಾಗಿ ರಾಜಕೀಯವಾಗಿ ಎಲ್ಲ ರಂಗಗಳಿಂದಲೂ ಮುಖ್ಯಮಂತ್ರಿ ಹೇಳಿಕೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಜನಸಂಖ್ಯೆ ನಿಯಂತ್ರಣ ಮತ್ತು ಮಹಿಳಾ ಶಿಕ್ಷಣ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದೇನು?

ಮುಖ್ಯಮಂತ್ರ ನಿತೀಶ್ ಕುಮಾರ್ ಅವರು ಮಂಗಳವಾರ, ಬಿಹಾರದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಮಹಿಳೆಯರಲ್ಲಿ ಶಿಕ್ಷಣದ ಪ್ರಾಮುಖ್ಯತೆಯ ಕುರಿತು ಮಾತನಾಡುತ್ತ, ಲೈಂಗಿಕ ಸಂಭೋಗದ ಸಮಯದಲ್ಲಿ ಮಹಿಳೆ ತನ್ನ ಪತಿಯನ್ನು ಹೇಗೆ ತಡೆಯಬಹುದು ಎಂಬುದನ್ನು ವಿವರಿಸಿದರು. "ಗಂಡನ ಕೃತ್ಯಗಳು ಹೆಚ್ಚಿನ ಜನ್ಮಗಳಿಗೆ ಕಾರಣವಾಯಿತು. ಆದಾಗ್ಯೂ, ಮಹಿಳೆಗೆ ಶಿಕ್ಷಣ ಇದ್ದರೆ ಅವನನ್ನು ಹೇಗೆ ತಡೆಯುವುದು ಎಂಬುದು ತಿಳಿದಿರುತ್ತದೆ ... ಈ ಕಾರಣದಿಂದಾಗಿ (ಜನನಗಳ) ಸಂಖ್ಯೆಗಳು ಕಡಿಮೆಯಾಗುತ್ತಿವೆ" ಎಂದು ನಿತೀಶ್ ಕುಮಾರ್ ಹೇಳಿದರು. ಅವರ ಈ ಹೇಳಿಕೆ ಭಾರೀ ರಾಜಕೀಯ ಗದ್ದಲವನ್ನು ಉಂಟುಮಾಡಿತು.

ಸಿಎಂ ನಿತೀಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ”. ಹೀಗಾಗಿ ರಾಜ್ಯ ವಿಧಾನಸಭೆಯಲ್ಲಿ ಕ್ಷಮೆಯಾಚಿಸಿದ ಹೊರತಾಗಿಯೂ ತಮ್ಮ 'ಜನಸಂಖ್ಯೆ ನಿಯಂತ್ರಣ' ಹೇಳಿಕೆಗೆ ರಾಜೀನಾಮೆ ನೀಡಬೇಕು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಒತ್ತಾಯಿಸಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆಯನ್ನು “ಅಶ್ಲೀಲ ಕಥೆ ಹೇಳಿದ್ದು” ಎಂದು ಬ್ರ್ಯಾಂಡ್ ಮಾಡಿದ ಬಿಜೆಪಿ ನಾಯಕ ನಿಶಿಕಾಂತ್ ದುಬೆ ಟೀಕಿಸಿ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಶೇರ್ ಮಾಡಿದ್ದಾರೆ.

ಬಹಳ ವ್ಯಂಗ್ಯಾತ್ಮಕವಾಗಿರುವ ಪೋಸ್ಟ್‌ನಲ್ಲಿ ನಿಶಿಕಾಂತ್ ದುಬೆ, "ಮಹಾಗುರು ನಿತೀಶಾನಂದ ಮಹಾರಾಜ್ ಅವರ ಅಶ್ಲೀಲ ಕಥೆಯನ್ನು ಕೇಳಿ ಮತ್ತು ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಿ." ಎಂದು ಟೀಕಿಸಿದ್ದಾರೆ.

ಹೇಳಿಕೆ ಹಿಂಪಡೆಯುವುದಾಗಿ ಹೇಳಿದ ನಿತೀಶ್ ಕುಮಾರ್

ಬಿಜೆಪಿ ನಾಯಕರು ವಾಗ್ದಾಳಿ ಹೆಚ್ಚಿಸುತ್ತ, ತನ್ನ ವಿರುದ್ಧ ಜನಾಭಿಪ್ರಾಯ ರೂಪಿಸುವ ಪ್ರಯತ್ನ ನೋಡಿ ಎಚ್ಚೆತ್ತುಕೊಂಡು ಮುಖ್ಯಮಂತ್ರಿ ನಿತೀಶ್‌ ಕುಮಾರ್, ಕ್ಷಮೆಯಾಚಿಸಿದರಲ್ಲದೆ, ತನ್ನ ಹೇಳಿಕೆಯನ್ನು ಹಿಂಪಡೆಯುವುದಾಗಿ ಘೋಷಿಸಿದರು.

ನಿತೀಶ್ ಕುಮಾರ್ ಹೇಳಿಕೆ ಕುರಿತು ಯಾರು ಏನು ಹೇಳಿದ್ರು

ನಿತೀಶ್‌ ಕುಮಾರ್‌ ಬಿಹಾರದ ಮುಖ್ಯಮಂತ್ರಿಯಾಗಿದ್ದಕ್ಕೆ ನಾಚಿಕೆಯಾಗುತ್ತಿದೆ. ಬಿಹಾರದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಿಎಂ ಅಸೆಂಬ್ಲಿಯಲ್ಲಿ ಅಶ್ಲೀಲ ಭಾಷೆ ಬಳಸುತ್ತಿದ್ದಾರೆ ಎಂದು ನಾಚಿಕೆಪಡಬೇಕು. ಇದು ಮೂರನೇ ದರ್ಜೆಯ ಹೇಳಿಕೆಯಾಗಿದೆ. ..ನಿತೀಶ್ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ''ಎಂದು ಕೇಂದ್ರ ಸಚಿವ ಆರ್‌ಕೆ ಸಿಂಗ್‌ ಹೇಳಿದ್ದಾರೆ.

ಬಿಜೆಪಿ ನಾಯಕ ವಿಜಯ್ ಸಿನ್ಹಾ ಅವರು, "ಮಹಿಳೆಯರು ತಲೆತಗ್ಗಿಸುವಂತಹ ಹೇಳಿಕೆ ಇದು. ಇದು ತಾಯಿ ಜಾನಕಿಯ ನಾಡು. ವಿಧಾನಸಭೆಯಲ್ಲಿ ಮಹಿಳೆಯರು ಹೇಗೆ ಮುಜುಗರಕ್ಕೀಡಾದರು ಎಂಬುದನ್ನು ಇಡೀ ದೇಶ ನೋಡಿದೆ. ಸಿಎಂ ಅವರ ಸ್ಮೃತಿ ಕಳೆದುಕೊಂಡಿದ್ದಾರೆ... ಅವರು ರಾಜೀನಾಮೆ ನೀಡಬೇಕು... ಇನ್ನು ವಿಧಾನಸಭೆಯಲ್ಲಿ ಕೂರಲು ಅರ್ಹರಲ್ಲ ಎಂದು ಹೇಳಿದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆಯು ಅನುಚಿತ. ವಿಧಧಾನಸಭೆಯು ಪವಿತ್ರ ಸ್ಥಳ... ಅದಕ್ಕೆ ಒಂದು ನಿರ್ದಿಷ್ಟ ಪಾವಿತ್ರ್ಯವಿದೆ ... ಇದು ಅಸಭ್ಯ ಭಾಷೆ. ಮಹಿಳೆಯರು ಸಾಕಷ್ಟು ಶಿಕ್ಷಣ ಪಡೆದರೆ ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಬಹುದಿತ್ತು. ಅದರ ಬದಲು ಅವರು ಬಳಸಿದ ಭಾಷೆ ಸೂಕ್ತವಾದುದಾಗಿರಲಿಲ್ಲ ಎಂದು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ