logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Poll: ರಾಮ ಮಂದಿರ ಆಯಿತು, ಇಂಡಿಯಾ ಬ್ಲಾಕ್ ಬಿಟ್ಟು ನಿತೀಶ್‌ ಬಂದ್ರು ಮುಂದೇನು; ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ

Lok Sabha poll: ರಾಮ ಮಂದಿರ ಆಯಿತು, ಇಂಡಿಯಾ ಬ್ಲಾಕ್ ಬಿಟ್ಟು ನಿತೀಶ್‌ ಬಂದ್ರು ಮುಂದೇನು; ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ

Umesh Kumar S HT Kannada

Jan 29, 2024 02:01 PM IST

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾವೇರುತ್ತಿದೆ ರಾಜಕೀಯ ರಂಗ. (ಸಾಂಕೇತಿಕ ಚಿತ್ರ)

  • BJP's Lok Sabha poll plans: ಲೋಕಸಭೆ ಚುನಾವಣೆ ಹತ್ತಿರದಲ್ಲಿದ್ದು, ಆಡಳಿತಾರೂಢ ಬಿಜೆಪಿ ಪರವಾದ ಅಲೆ ಬಲವಾಗತೊಡಗಿದೆ. ರಾಮ ಮಂದಿರ ಉದ್ಘಾಟನೆ ಒಂದೆಡೆ, ಇನ್ನೊಂದೆಡೆ ಬಿಹಾರದಲ್ಲಿ ಬದಲಾದ ರಾಜಕೀಯ ವಿದ್ಯಮಾನ, ಮತ್ತೊಂದೆಡೆ ಇಂಡಿಯಾ ಬ್ಲಾಕ್‌ನ ಸದಸ್ಯರ ನಡುವೆ ಭಿನ್ನಮತಗಳು ರಾಜಕೀಯ ಸಮರಾಂಗಣದ ಕಾವೇರುವಂತೆ ಮಾಡಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾವೇರುತ್ತಿದೆ ರಾಜಕೀಯ ರಂಗ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾವೇರುತ್ತಿದೆ ರಾಜಕೀಯ ರಂಗ. (ಸಾಂಕೇತಿಕ ಚಿತ್ರ)

ಲೋಕಸಭೆ ಚುನಾವಣೆ ಕಡೆಗಿನ ಓಟ ಶುರುವಾಗಿದೆ. ಮತದಾರರನ್ನು ತಮ್ಮೆಡೆಗೆ ಸೆಳೆಯುವುದಕ್ಕೆ ಸಿಗುವ ಪ್ರತಿ ಅವಕಾಶವನ್ನು ಬಳಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪ್ರಯತ್ನಿಸುತ್ತಿವೆ. ಇವೆಲ್ಲ ಏನೇ ಇದ್ದರೂ ಸದ್ಯದ ಪರಿಸ್ಥಿತಿ ಆಡಳಿತಾರೂಢ ಪಕ್ಷಕ್ಕೆ ಅನುಕೂಲಕರವಾಗಿಯೆ ಇದೆ ಎಂಬುದು ವಾಸ್ತವ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಬಿಜೆಪಿ ನೀಡಿದ್ದ ಅತಿದೊಡ್ಡ ಭರವಸೆಗಳ ಪೈಕಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನೆರವೇರಿದೆ. ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿಯೂ ರದ್ದಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಈ ಎರಡಕ್ಕೂ ಪರವಾಗಿಯೇ ಬಂದಿವೆ ಎಂಬುದು ಪ್ಲಸ್ ಪಾಯಿಂಟ್. ಈ ನಡುವೆ, ಇಂಡಿಯಾ ಬ್ಲಾಕ್‌ನ ಮಿತ್ರ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದೇ ಇರುವುದು ಕಂಡುಬಂದಿದೆ. ಬಿಹಾರದ ರಾಜಕೀಯ ವಿದ್ಯಮಾನ ಕೂಡ ಬಿಜೆಪಿಗೆ ವರದಾನವಾಗಿದೆ.

ಯುಕೆಯ ಗಾರ್ಡಿಯನ್‌ನಲ್ಲಿ ಪ್ರಕಟವಾದ ಅಂಕಣದಲ್ಲಿ ರಾಜಕೀಯ ವಿಶ್ಲೇಷಕರನ್ನು ಉಲ್ಲೇಖಿಸಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ಸಿಗಲಿದೆ ಎಂದು ಭವಿಷ್ಯ ಹೇಳಲಾಗಿದೆ. ದೇಶದ ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ, ಇದು ಫಲಿತಾಂಶದ ಮುನ್ಸೂಚನೆಯಂತೆ ತೋರುತ್ತಿದೆ ಎಂದು ಅದು ಗಮನಿಸಿದೆ. ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಬಿಜೆಪಿ ವಿರುದ್ಧ ಕೆಲವು ಪ್ರತಿರೋಧಗಳಿವೆ. ಇದರ ಹೊರತಾಗಿಯೂ, ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷವು "ದುರ್ಬಲ" ಮತ್ತು "ಛಿದ್ರಗೊಂಡಂತೆ" ಕಂಡುಬರುತ್ತದೆ ಎಂದು ಅದು ವಿವರಿಸಿದೆ.

ಬಿಜೆಪಿಗೆ ಶಕ್ತಿ ತುಂಬಿದ ದೊಡ್ಡ ವಿದ್ಯಮಾನಗಳು

1) ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು

ಬಿಜಪಿಯು 2019 ರ ಲೋಕಸಭಾ ಚುನಾವಣೆಗೆ ಮೊದಲು ನೀಡಿದ ಭರವಸೆಗಳಲ್ಲಿ ಒಂದು ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಗಳ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವುದು. ಇದನ್ನು 2019ರ ಆಗಸ್ಟ್‌ 6 ರಂದು ಈಡೇರಿಸುವ ಮೂಲಕ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರದ 'ವಿಶೇಷ ಸ್ಥಾನಮಾನ'ವನ್ನು ರದ್ದುಗೊಳಿಸಿತು. ಇದರ ವಿರುದ್ಧ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಆದರೆ, ಸುಪ್ರೀಂ ಕೋರ್ಟ್‌ 2023ರ ಡಿಸೆಂಬರ್ 11 ರಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿಯಿತು.

ಪರಿಣಾಮ ಆಡಳಿತಾರೂಢ ಬಿಜೆಪಿಯ ಶಕ್ತಿ ವರ್ಧನೆಯಾಯಿತು. ಅಷ್ಟೇ ಅಲ್ಲ, ವಿಪಕ್ಷಗಳಿಗೆ ಭಾರಿ ಮುಖಭಂಗವಾಯಿತು. ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಇಂಡಿಯಾ ಬ್ಲಾಕ್ ಸದಸ್ಯರ ನಡುವೆ ಭಿನ್ನಮತವೂ ಹೆಚ್ಚಾಯಿತು. ಇಂಡಿಯಾ ಬ್ಲಾಕ್‌ನ ಆಮ್ ಆದ್ಮಿ ಪಾರ್ಟಿ 2019ರಲ್ಲಿ 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನದ ಪರ ನಿಲುವು ತಳೆದಿತ್ತು. ಅದೇ ರೀತಿ, ಕಾಂಗ್ರೆಸ್ ಪಕ್ಷದ ನಿಲುವಿಗೆ ಸ್ವಲ್ಪ ಭಿನ್ನವಾಗಿ ಎಡ ಪಕ್ಷಗಳ ನಿಲುವು ವ್ಯಕ್ತವಾಗಿತ್ತು. 370ನೇ ವಿಧಿಯನ್ನು ಮರುಸ್ಥಾಪಿಸುವಂತೆ ಆಗ್ರಹಿಸಿದ್ದವು. ಇದೇ ವೇಳೆ ಕಾಂಗ್ರೆಸ್‌ ಪಕ್ಷ 370ನೇ ವಿಧಿ ರದ್ದುಗೊಳಿಸುವುದರ ವಿರುದ್ಧ ಧ್ವನಿ ಎತ್ತಿತ್ತಾದರೂ, ಮರು ಸ್ಥಾಪಿಸುವಂತೆ ಆಗ್ರಹಿಸಿರಲಿಲ್ಲ.

2) ಅಯೋಧ್ಯೆ ರಾಮ ಮಂದಿರ ಉದ್ಘಾಟನೆ

ಅಯೋಧ್ಯೆ ರಾಮ ಮಂದಿರ ಬಿಜೆಪಿಯ ಅತ್ಯಂತ ಹಳೆಯ ಚುನಾವಣಾ ಭರವಸೆ. ಅದು ಈಡೇರಿತು. ಕೆಲವು ರಾಜಕೀಯ ಪರಿಣತರ ಪ್ರಕಾರ, ದೇವಾಲಯದ ಉದ್ಘಾಟನೆಯು ದೇಶಾದ್ಯಂತ ಮತದಾರರನ್ನು ಹುರಿದುಂಬಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯಭೂಮಿಕೆ ದೇಶವಾಸಿಗಳಿಗೆ ಏನು ಸಂದೇಶವನ್ನು ನೀಡಬೇಕೋ ಅದನ್ನು ನೀಡಿದೆ. ಮೋದಿ ಅವರು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವುದರಿಂದ ಹಿಡಿದು, ಮಂದಿರ ಉದ್ಘಾಟನೆ, ಬಾಲರಾಮನ ಪ್ರಾಣ ಪ್ರತಿಷ್ಠೆಯಲ್ಲೂ ‘ಯಜಮಾನ’ರಾಗಿದ್ದರು. ಲೋಕಸಭೆಯಲ್ಲಿ ಬಿಜೆಪಿಗೆ 50 ಪ್ರತಿಶತದಷ್ಟು ಮತ ಹಂಚಿಕೆಯೊಂದಿಗೆ 400 ಕ್ಕೂ ಹೆಚ್ಚು ಸ್ಥಾನಗಳಾಗಿ ಪರಿವರ್ತನೆಯಾಗಬಹುದು. ಕೇಂದ್ರ ಗೃಹ ಸಚಿವ ಅಮಿತ್ ಷಾ ಪಕ್ಷದ ಅಧ್ಯಕ್ಷರಾಗಿದ್ದಾಗ ನಿಗದಿ ಪಡಿಸಿದ ಗುರಿ ಇದು.

3) ಇಂಡಿಯಾ ಬ್ಲಾಕ್‌ನಲ್ಲಿ ಬಿಕ್ಕಟ್ಟು

ಚಾಲ್ತಿಯಲ್ಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಪಶ್ಚಿಮ ಬಂಗಾಳದಲ್ಲಿ ತೊಡಕು ಉಂಟಾಗಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಮತ ಏರ್ಪಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಉದ್ದೇಶದ ಭಾರತ್ ಜೋಡೋ ನ್ಯಾಯ್ ಯಾತ್ರೆಗೂ ಅಡ್ಡಿ ಉಂಟಾಗಿದೆ. ಭಿನ್ನಮತದ ಕಾರಣ ಲೋಕಸಭೆ ಚುನಾವಣೆಯಲ್ಲಿ ಒಂಟಿಯಾಗಿ ಸ್ಪರ್ಧಿಸಲು ತೃಣಮೂಲ ಕಾಂಗ್ರೆಸ್ ತೀರ್ಮಾನಿಸಿದೆ.

ಇನ್ನೊಂದೆಡೆ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ ಕೂಡ ಕಾಂಗ್ರೆಸ್ ಜತೆಗೆ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಮತ ತೋರಿದೆ. ಇದು ಇಂಡಿಯಾ ಬ್ಲಾಕ್‌ನ ಮೈತ್ರಿಯಲ್ಲಿ ಬಿರುಕು ಹೆಚ್ಚಾಗುತ್ತಿರುವ ಸುಳಿವನ್ನು ನೀಡಿದೆ. ಎಲ್ಲದಕ್ಕೂ ಮಿಗಿಲಾಗಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಮಹಾಗಟಬಂಧನ್ ಸರ್ಕಾರ ವಿಸರ್ಜಿಸಿ, ಬಿಜೆಪಿ ಜತೆಗೂಡಿ ಎನ್‌ಡಿಎ ಸರ್ಕಾರ ರಚಿಸಿದ್ದಾರೆ. ಬಿಹಾರದಲ್ಲಿ ಭಾನುವಾರ ನಡೆದ ಈ ರಾಜಕೀಯ ವಿದ್ಯಮಾನವು ಇಂಡಿಯಾ ಬ್ಲಾಕ್‌ಗೆ ಭಾರಿ ಹೊಡೆತ ನೀಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ