logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Train Accident: ಹಳಿ ತಪ್ಪಿದ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು; ರಾಜಸ್ಥಾನದ ಅಜ್ಮೀರ್‌ನಲ್ಲಿ ದುರಂತ

Train Accident: ಹಳಿ ತಪ್ಪಿದ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು; ರಾಜಸ್ಥಾನದ ಅಜ್ಮೀರ್‌ನಲ್ಲಿ ದುರಂತ

Raghavendra M Y HT Kannada

Mar 18, 2024 09:41 AM IST

google News

ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲ್ವೆ ನಿಲ್ದಾಣದ ಬಳಿ ರಾತ್ರಿ ಹಳಿ ತಪ್ಪಿದೆ. (ಪಿಟಿಐ)

    • Train Accident: ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲ್ವೆ ನಿಲ್ದಾಣದ ಬಳಿ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲಿನ ಕನಿಷ್ಠ ನಾಲ್ಕು ಬೋಗಿಗಳು ಹಳಿ ತಪ್ಪಿರುವ ದುರಂತ ಸಂಭವಿಸಿದೆ. ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ವರದಿಯಾಗಿದೆ.
ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲ್ವೆ ನಿಲ್ದಾಣದ ಬಳಿ ರಾತ್ರಿ ಹಳಿ ತಪ್ಪಿದೆ. (ಪಿಟಿಐ)
ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲ್ವೆ ನಿಲ್ದಾಣದ ಬಳಿ ರಾತ್ರಿ ಹಳಿ ತಪ್ಪಿದೆ. (ಪಿಟಿಐ)

ದೆಹಲಿ: ದೇಶದಲ್ಲಿ ಮತ್ತೊಂದು ರೈಲು ದುರಂತ (Train Accident) ಸಂಭವಿಸಿದ್ದು, ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲು ನಿಲ್ದಾಣದ ಬಳಿ ಮಧ್ಯರಾತ್ರಿ (ಮಾರ್ಚ್ 18ರ ಮುಂಜಾನೆ) ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು ಅಪಘಾತವಾಗಿದ್ದು, ಕನಿಷ್ಠ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಘಟನೆಯ ಬಗ್ಗೆ ಮಾಹಿತಿ ನೀಡಿರುವ ವಾಯುವ್ಯ ರೈಲ್ವೆಯ ಸಿಪಿಆರ್‌ಒ ಶಶಿ ಕಿರಣ್, "ಸಬರಮತಿಯಿಂದ ಆಗ್ರಾಕ್ಕೆ ತೆರಳುತ್ತಿದ್ದ ರೈಲು ಸಂಖ್ಯೆ 12548 ಇಂದು ಅಜ್ಮೀರ್ನ ಮದರ್‌ನ ಹೋಮ್ ಸಿಗ್ನಲ್ ಬಳಿ ಹಳಿ ತಪ್ಪಿದೆ. ನಾಲ್ಕು ಸಾಮಾನ್ಯ ಬೋಗಿಗಳು ಮತ್ತು ರೈಲಿನ ಎಂಜಿನ್ ಹಳಿ ತಪ್ಪಿದೆ.

ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಸಣ್ಣ ಪುಟ್ಟ ಗಾಯಗಳಾಗಿದ್ದ ಗಾಯಾಳುಗಳನ್ನು ಶೀಘ್ರದಲ್ಲೇ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ. "ರೈಲ್ವೆ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ತಲುಪಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಯ ಸಮಯದಲ್ಲಿ ಹಲವಾರು ಪ್ರಯಾಣಿಕರು ರೈಲಿನಲ್ಲಿದ್ದರು ಎಂದು ವರದಿಯಾಗಿದೆ. ರೈಲ್ವೆ ಅಧಿಕಾರಿಗಳು ಅಜ್ಮೀರ್ ನಿಲ್ದಾಣದಲ್ಲಿ ಸಹಾಯ ಡೆಸ್ಕ್ ಸ್ಥಾಪಿಸಿದ್ದಾರೆ. ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 0145-2429642 ಅನ್ನು ಒದಗಿಸಿದ್ದಾರೆ. ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು ಹಳಿ ತಪ್ಪಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ವಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದ ವಿಜಯವಾಡ ರೈಲ್ವೆ ನಿಲ್ದಾಣದ ಬಳಿಯ ರಾಯನಪಾಡು ಎಂಬಲ್ಲಿ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು. ಘಟನೆಯಲ್ಲಿ ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ಘಟನೆಯ ನಂತರ, ಹಲವಾರು ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ, ಇದು ಅವುಗಳ ವೇಳಾಪಟ್ಟಿಯಲ್ಲಿ ವಿಳಂಬಕ್ಕೆ ಕಾರಣವಾಯಿತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ