logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹುಲಿ ಹೆಜ್ಜೆಯ ಜಾಡು; ಹುಲಿಗಳ ತವರು ಭಾರತ, ಯಾವ ದೇಶದಲ್ಲಿ ಎಷ್ಟು ಹುಲಿಗಳಿವೆ, ಇಲ್ಲಿದೆ ಹುಲಿ ಗಣತಿ ವಿವರ

ಹುಲಿ ಹೆಜ್ಜೆಯ ಜಾಡು; ಹುಲಿಗಳ ತವರು ಭಾರತ, ಯಾವ ದೇಶದಲ್ಲಿ ಎಷ್ಟು ಹುಲಿಗಳಿವೆ, ಇಲ್ಲಿದೆ ಹುಲಿ ಗಣತಿ ವಿವರ

Umesh Kumar S HT Kannada

Jul 06, 2024 06:30 PM IST

google News

ಹುಲಿ ಹೆಜ್ಜೆಯ ಜಾಡು; ಹುಲಿಗಳ ತವರು ಭಾರತ, ಯಾವ ದೇಶದಲ್ಲಿ ಎಷ್ಟು ಹುಲಿಗಳಿವೆ, ಇಲ್ಲಿದೆ ಹುಲಿ ಗಣತಿ ವಿವರ

  • ಹುಲಿ ಹೆಜ್ಜೆಯ ಜಾಡು; ಭಾರತದಲ್ಲೇ ಅತಿ ಹೆಚ್ಚು ಹುಲಿಗಳಿರುವುದು. ಹಾಗೆ ಹುಲಿಗಳ ತವರು ಎಂದೆನಿಸಿದೆ ಭಾರತ. ಯಾವ ದೇಶದಲ್ಲಿ ಎಷ್ಟು ಹುಲಿಗಳಿವೆ ಎಂಬಿತ್ಯಾದಿ ಹುಲಿ ಗಣತಿ ವಿವರ ಇಲ್ಲಿದೆ. 

ಹುಲಿ ಹೆಜ್ಜೆಯ ಜಾಡು; ಹುಲಿಗಳ ತವರು ಭಾರತ, ಯಾವ ದೇಶದಲ್ಲಿ ಎಷ್ಟು ಹುಲಿಗಳಿವೆ, ಇಲ್ಲಿದೆ ಹುಲಿ ಗಣತಿ ವಿವರ
ಹುಲಿ ಹೆಜ್ಜೆಯ ಜಾಡು; ಹುಲಿಗಳ ತವರು ಭಾರತ, ಯಾವ ದೇಶದಲ್ಲಿ ಎಷ್ಟು ಹುಲಿಗಳಿವೆ, ಇಲ್ಲಿದೆ ಹುಲಿ ಗಣತಿ ವಿವರ

ನವದೆಹಲಿ: ಮನೆಯ ಬೆಕ್ಕುಗಳ ದೊಡ್ಡ ಗಾತ್ರದಂತೆ ತೋರುವ ಹುಲಿಗಳನ್ನು ನೋಡುವುದೇ ಒಂದು ಚೆಂದ. ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಹುಲಿಯೂ ಇದೆ. ಖುಷಿಯ ಮತ್ತು ಸಮಾಧಾನದ ವಿಚಾರ ಏನಪ್ಪಾ ಅಂದರೆ, ಭಾರತದಲ್ಲೇ ಅತಿ ಹೆಚ್ಚು ಹುಲಿಗಳಿರುವುದು. ಹಾಗೆ ಭಾರತ ಹುಲಿಗಳ ತವರು ಎಂದೆನಿಸಿದೆ. ರಣಥಂಬೋರ್‌, ಬಾಂಧವಗಡ ಮುಂತಾದೆಡೆ ಹುಲಿಗಳ ಸಂಖ್ಯೆ ವೃದ್ಧಿಯಾಗಿದೆ.

ರಷ್ಯಾದ ಅಮುರ್ ಹುಲಿಗಳು ದೂರದ ಪೂರ್ವದ ವಿಶಾಲವಾದ ಕಾಡುಗಳಲ್ಲಿ ಬೆಳೆಯುತ್ತವೆ. ಇಂಡೋನೇಷ್ಯಾ ತನ್ನ ದಟ್ಟವಾದ ಮಳೆಕಾಡುಗಳಲ್ಲಿ ಸುಮಾತ್ರಾನ್ ಹುಲಿಗಳಿಗೆ ಆಶ್ರಯ ನೀಡಿದೆ. ನೇಪಾಳವು ಕೂಡ ಚಿತ್ವಾನ್ ಮತ್ತು ಬಾರ್ಡಿಯಾ ರಾಷ್ಟ್ರೀಯ ಉದ್ಯಾನಗಳಲ್ಲಿ ಹುಲಿ ಸಂರಕ್ಷಣೆ ಮಾಡಿದೆ. ಮಲೇಷ್ಯಾದ ಮಲಯನ್ ಹುಲಿಗಳು ಮಲಯ ಪರ್ಯಾಯ ದ್ವೀಪದಲ್ಲಿ ಸಂಚರಿಸುತ್ತವೆ. ಬಾಂಗ್ಲಾದೇಶವು ತನ್ನ ಮ್ಯಾಂಗ್ರೋವ್ ಕಾಡುಗಳಲ್ಲಿ ರಾಯಲ್ ಬಂಗಾಳದ ಹುಲಿಗಳಿಗೆ ನೆಲೆ ಒದಗಿಸಿದೆ.

ಭಾರತದಲ್ಲಿ 3167, ರಷ್ಯಾದಲ್ಲಿ 750, ಇಂಡೋನೇಷ್ಯಾದಲ್ಲಿ 400 ಹುಲಿಗಳು

ವರ್ಲ್ಡ್‌ ಪಾಪ್ಯುಲೇಶನ್ ರಿವ್ಯೂ ವೆಬ್‌ ತಾಣದ ಪ್ರಕಾರ, 100ಕ್ಕಿಂತ ಹೆಚ್ಚು ಹುಲಿಗಳಿರುವ 8 ದೇಶಗಳಿವೆ. ಅವುಗಳ ಪೈಕಿ ಭಾರತ ಅಗ್ರಸ್ಥಾನದಲ್ಲಿದೆ. ಭಾರತದ ನಂತರದ ಸ್ಥಾನದಲ್ಲಿ ರಷ್ಯಾ, ಇಂಡೋನೇಷ್ಯಾ, ನೇಪಾಳಗಳಿವೆ.

1) ಭಾರತ 3167 ಹುಲಿಗಳಿಗೆ ಆಶ್ರಯ ತಾಣ

ಕಾಡು ಹುಲಿ ಸಂರಕ್ಷಣಾ ಪ್ರಯತ್ನಗಳಲ್ಲಿ ಭಾರತವು ಜಾಗತಿಕವಾಗಿ ಮುಂಚೂಣಿಯಲ್ಲಿದೆ. ವರ್ಲ್ಡ್‌ ಪಾಪ್ಯುಲೇಶನ್ ರಿವ್ಯೂ ವೆಬ್‌ ತಾಣದ ಪ್ರಕಾರ, 2023ರ ಗಣತಿ ಪ್ರಕಾರ, ಭಾರತದಲ್ಲಿ 3167 ಹುಲಿಗಳಿವೆ. ರಣಥಂಬೋರ್, ಜಿಮ್ ಕಾರ್ಬೆಟ್, ಮತ್ತು ಬಾಂಧವಗಡದಂತಹ ವಿಸ್ತಾರ ರಾಷ್ಟ್ರೀಯ ಉದ್ಯಾನಗಳಲ್ಲಿ ಹುಲಿ ಸಂರಕ್ಷಣೆ ಮಾಡಲಾಗುತ್ತಿದೆ.

2) ರಷ್ಯಾದಲ್ಲಿ 750 ಹುಲಿಗಳಿವೆ

ರಷ್ಯಾದ ಹುಲಿಗಳ ಸಂಖ್ಯೆ 750ರ ಆಸುಪಾಸಿನಲ್ಲಿದೆ ಎಂದು ವರ್ಲ್ಡ್‌ ಪಾಪ್ಯುಲೇಶನ್ ರಿವ್ಯೂ ವೆಬ್‌ ತಾಣ ಉಲ್ಲೇಖಿಸಿದೆ. ಅಮುರ್ ಹುಲಿಗಳ ನೆಲೆಬೀಡಾಗಿರುವ ರಷ್ಯಾದಲ್ಲಿ ಸೈಬೀರಿಯನ್ ಹುಲಿಗಳೂ ಇದ್ದು, ಪೂರ್ವ ರಷ್ಯಾದ ವಿಶಾಲ ಕಾಡುಗಳಲ್ಲಿ ಬೆಳೆಯುತ್ತವೆ.

3) ಸುಮಾತ್ರಾನ್ ಹುಲಿಗಳ ಆಶ್ರಯ ತಾಣ ಇಂಡೋನೇಷ್ಯಾ

ಇಂಡೋನೇಷ್ಯಾ ಸುಮಾತ್ರನ್ ಹುಲಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸುಮಾರು 400ರಷ್ಟು ಸುಮಾತ್ರಾನ್ ಹುಲಿಗಳು ವಾಸಿಸುತ್ತಿವೆ. ಅಳಿವಿನಂಚಿನಲ್ಲಿರುವ ಈ ಉಪಜಾತಿಗಳು ಸುಮಾತ್ರಾ ದ್ವೀಪಕ್ಕೆ ಸೀಮಿತವಾಗಿವೆ. ಸೊಂಪಾದ ಮಳೆಕಾಡುಗಳು ಮತ್ತು ಸಂರಕ್ಷಿತ ಮೀಸಲುಗಳ ನಡುವೆ, ಈ ತಪ್ಪಿಸಿಕೊಳ್ಳಲಾಗದ ಈ ಹುಲಿಗಳು ಮಾನವ ಅತಿಕ್ರಮಣದ ಬೆದರಿಕೆ ಎದುರಿಸುತ್ತಿವೆ.

4) ನೇಪಾಳದಲ್ಲಿವೆ 355 ಹುಲಿಗಳು

ಭಾರತದ ನೆರೆಯ ರಾಷ್ಟ್ರವಾಗಿರುವ ನೇಪಾಳ ಕೂಡ ತನ್ನ ಹುಲಿ ಸಂರಕ್ಷಣಾ ಉಪಕ್ರಮಗಳ ಮೂಲಕ ಜಗತ್ತಿನ ಗಮನಸೆಳೆದಿದೆ. ಚಿತ್ವಾನ್ ಮತ್ತು ಬಾರ್ಡಿಯಾ ಸೇರಿ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳಲ್ಲಿ 355 ಹುಲಿಗಳು ನೆಲೆಸಿವೆ. ನೇಪಾಳದ ಶ್ರೀಮಂತ ಜೀವವೈವಿಧ್ಯತೆಯನ್ನು ಕಾಪಾಡುವ ಬದ್ಧತೆಯನ್ನು ಈ ಪ್ರಯತ್ನಗಳು ಒತ್ತಿಹೇಳುತ್ತವೆ.

5) ಮಲೇಷ್ಯಾದಲ್ಲಿ 120 ಮಲಯನ್ ಹುಲಿಗಳಿವೆ

ಮಲಯನ್ ಹುಲಿಗಳಿಗೆ ಆಶ್ರಯ ತಾಣ ಮಲೇಷ್ಯಾ. ಇವುಗಳು ಮಲಯ ಪರ್ಯಾಯ ದ್ವೀಪದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬೇಟೆಗಾರರ ಮತ್ತು ಆವಾಸ ಸ್ಥಾನಗಳ ನಾಶ ಮುಂತಾದವುಗಳ ನಡುವೆ ಅವುಗಳ ಸಂರಕ್ಷಣೆಯ ಪ್ರಯತ್ನ ಮುಂದುವರಿದಿದೆ.

6) ಬಾಂಗ್ಲಾದೇಶ ಮತ್ತು ಭೂತಾನ್‌ನಲ್ಲಿ ಬಂಗಾಳ ಹುಲಿಗಳು

ರಾಯಲ್ ಬೆಂಗಾಲ್ ಹುಲಿಗಳ ಭದ್ರಕೋಟೆ ಬಾಂಗ್ಲಾದೇಶ. ದಟ್ಟವಾದ ಮ್ಯಾಂಗ್ರೋವ್ ಕಾಡುಗಳು ಮತ್ತು ಸಂರಕ್ಷಿತ ಮೀಸಲುಗಳಲ್ಲಿ ಸುಮಾರು 106 ಹುಲಿಗಳು ವಾಸಿಸುತ್ತಿವೆ. ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಮತ್ತು ಅವುಗಳ ಆವಾಸಸ್ಥಾನ ಉಳಿಸಲು ಪ್ರಯತ್ನ ನಡೆದಿದೆ. ಭೂತಾನ್‌ನಲ್ಲಿ ಕೂಡ ರಾಯಲ್ ಬೆಂಗಾಲ್ ಹುಲಿಗಳಿವೆ.

7) ಇಂಡೋಚೈನೀಸ್ ಹುಲಿಗಳ ಥಾಯ್ಲೆಂಡ್

ಥಾಯ್ಲೆಂಡ್‌ 148 ರಿಂದ 149 ಇಂಡೋಚೈನೀಸ್ ಹುಲಿಗಳ ನಡುವೆ ಆಶ್ರಯ ಹೊಂದಿದೆ. ಇವು ಆಗ್ನೇಯ ಏಷ್ಯಾದ ಶ್ರೀಮಂತ ಜೀವವೈವಿಧ್ಯದ ಸಂಕೇತವಾಗಿ ಕಾಣುತ್ತವೆ. ಹುವಾಯ್ ಖಾ ಖೇಂಗ್ ವನ್ಯಜೀವಿ ಅಭಯಾರಣ್ಯದಂತಹ ಸಂರಕ್ಷಿತ ಪ್ರದೇಶಗಳಲ್ಲಿ ವಾಸಿಸುವ ಹುಲಿಗಳು ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಆವಾಸಸ್ಥಾನ ನಾಶವಾಗುವ ಬೆದರಿಕೆಯನ್ನು ಎದುರಿಸುತ್ತಿವೆ.\

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ