logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ಜೈಲು ಶಿಕ್ಷೆಗೆ ಸುಪ್ರಿಂ ತಡೆಯಾಜ್ಞೆ, ಸಂಸತ್ತಿಗೆ ಮರಳಲಿದ್ದಾರಾ ರಾಹುಲ್‌ಗಾಂಧಿ; ಸ್ಪೀಕರ್‌ ನಿರ್ಧಾರದತ್ತ ಎಲ್ಲರ ಚಿತ್ತ

Rahul Gandhi: ಜೈಲು ಶಿಕ್ಷೆಗೆ ಸುಪ್ರಿಂ ತಡೆಯಾಜ್ಞೆ, ಸಂಸತ್ತಿಗೆ ಮರಳಲಿದ್ದಾರಾ ರಾಹುಲ್‌ಗಾಂಧಿ; ಸ್ಪೀಕರ್‌ ನಿರ್ಧಾರದತ್ತ ಎಲ್ಲರ ಚಿತ್ತ

Reshma HT Kannada

Aug 07, 2023 09:48 AM IST

google News

ಮೋದಿ ಉಪನಾಮ ಟೀಕೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಸುಪ್ರಿಂ ತಡೆಯಾಜ್ಞೆ, ಸಂಸತ್ತಿಗೆ ಮರಳಲಿದ್ದಾರಾ ರಾಹುಲ್‌ಗಾಂಧಿ; ಸ್ಪೀಕರ್‌ ನಿರ್ಧಾರದತ್ತ ಎಲ್ಲರ ಚಿತ್ತ

    • ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆ ಪ್ರಕರಣಕ್ಕೆ ಸುಪ್ರಿಂಕೋರ್ಟ್‌ ತಡೆಯಾಜ್ಞೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್‌ ಮರಳಿ ಸಂಸತ್ತಿನಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಇಂದು ಸ್ಫೀಕರ್‌ ನಿರ್ಧಾರ ಕೈಗೊಳ್ಳಲಿದ್ದಾರೆ. 
ಮೋದಿ ಉಪನಾಮ ಟೀಕೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಸುಪ್ರಿಂ ತಡೆಯಾಜ್ಞೆ, ಸಂಸತ್ತಿಗೆ ಮರಳಲಿದ್ದಾರಾ ರಾಹುಲ್‌ಗಾಂಧಿ; ಸ್ಪೀಕರ್‌ ನಿರ್ಧಾರದತ್ತ ಎಲ್ಲರ ಚಿತ್ತ
ಮೋದಿ ಉಪನಾಮ ಟೀಕೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಸುಪ್ರಿಂ ತಡೆಯಾಜ್ಞೆ, ಸಂಸತ್ತಿಗೆ ಮರಳಲಿದ್ದಾರಾ ರಾಹುಲ್‌ಗಾಂಧಿ; ಸ್ಪೀಕರ್‌ ನಿರ್ಧಾರದತ್ತ ಎಲ್ಲರ ಚಿತ್ತ

ಮೋದಿ ಉಪನಾಮ ಟೀಕೆ ಪ್ರಕರಣ ಹಿನ್ನೆಲೆ, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸೂರತ್‌ ನ್ಯಾಯಲಯವು ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್‌ ಅವರ ಸಂಸದ ಸ್ಥಾನ ಅನರ್ಹತೆಯನ್ನು ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಇಂದು ಸ್ಪೀಕರ್‌ ನಿರ್ಧಾರ ಕೈಗೊಳ್ಳಲಿದ್ದು, ಎಲ್ಲರ ದೃಷ್ಟಿ ಅವರ ಮೇಲೆ ನೆಟ್ಟಿದೆ.

ಈ ಬಗ್ಗೆ ಮಾತನಾಡಿರುವ ಲೋಕಸಭೆಯ ಮೂಲಗಳು ಸುಪ್ರೀಂ ಕೋರ್ಟ್‌ ಆದೇಶ ದೃಢೀಕೃತ ಪ್ರತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ʼಆದೇಶಪ್ರತಿಯನ್ನು ಅಧ್ಯಯನ ಮಾಡಿದ ಬಳಿಕ ಈ ಪ್ರಕ್ರಿಯೆಯ ಸಾಮಾನ್ಯವಾಗಿ 30 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಅಂತಹ ಅಧಿಸೂಚನೆಗಳ ಪ್ರೋಫಾರ್ಮಾವು ಸಚಿವಾಲಯದಲ್ಲಿ ಸುಲಭವಾಗಿ ಲಭ್ಯವಿರುತ್ತದೆʼ ಎಂದು ಅಧಿಕಾರಿಯೊಬ್ಬರು ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಸೋಮವಾರ ಬೆಳಿಗ್ಗೆ 10.30ಕ್ಕೆ ಪಕ್ಷದ ಸಂಸದೀಯ ಕಚೇರಿಯಲ್ಲಿ ಲೋಕಸಭಾ ಸಂಸದರ ಸಭೆ ಕರೆದಿದೆ. ಈ ವೇಳೆ ರಾಹುಲ್‌ ಗಾಂಧಿ ಅವರನ್ನು ಪುನಃ ಸಂಸತ್‌ ಸದಸ್ಯರನ್ನಾಗಿಸಲು ಬೇಡಿಕೆ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್‌ ಅವರಿಗೆ ಸೂರತ್‌ ನ್ಯಾಯಲಯವು ವಿಧಿಸಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆಯಾಜ್ಞೆ ವಿಧಿಸಿತ್ತು. ಆ ಕಾರಣದಿಂದ ರಾಹುಲ್‌ ಮರಳಿ ಸಂಸದ ಸ್ಥಾನವನ್ನು ಪಡೆಯಲಿದ್ದಾರೆ. ಮಾನನಷ್ಟ ಮೊಕದ್ದಮೆ ಪ್ರಕರಣದ ಎರಡು ವರ್ಷದ ಶಿಕ್ಷೆಯನ್ನು ಪ್ರಶ್ನಿಸಿ ರಾಹುಲ್‌ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಇಂದು ಇಂಡಿಯಾ ಮೈತ್ರಿ ಪಕ್ಷಗಳ ಸಭೆ

ಇಂದು ಹೊಸದಾಗಿ ಪ್ರತಿಪಕ್ಷಗಳ ಮೈತ್ರಿಕೂಟದ ಸಭೆಯನ್ನು ಕರೆಯಲಾಗಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಕಾರ್ಯತಂತ್ರ ರೂಪಿಸಲು ಬೆಳಿಗ್ಗೆ 10 ಗಂಟೆಗೆ ಸಭೆ ಕರೆಯಲಾಗಿದೆ.

ಇದನ್ನೂ ಓದಿ

Opening Bell: ಜಾಗತಿಕ ಷೇರುಗಳ ಪ್ರಭಾವ, ನೀರಸ ಆರಂಭಕ್ಕೆ ಮುಂದಾದ ಭಾರತೀಯ ಷೇರುಪೇಟೆ, ಇಂದು ಗಮನಿಸಬಹುದಾದ ಷೇರುಗಳಿವು

Indian shares open: ಇಂದು ಭಾರತೀಯ ಷೇರುಪೇಟೆ ಫ್ಲಾಟ್‌ ಆಗಿ ವಹಿವಾಟು ಆರಂಭಿಸುವ ಸೂಚನೆಯಿದೆ. ಗುರುವಾರ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಹಣಕಾಸು ನೀತಿ ಪ್ರಕಟಿಸಲಿದೆ. ಏಪ್ರಿಲ್‌ ಮತ್ತು ಜೂನ್‌ ತಿಂಗಳಲ್ಲಿ ಆರ್‌ಬಿಐಯು ಯಾವುದೇ ಬಡ್ಡಿದರ ಏರಿಕೆ ಮಾಡಿರಲಿಲ್ಲ.

ಬೆಂಗಳೂರು: ಭಾರತದ ಷೇರುಪೇಟೆ ಇಂದು ನೀರಸ ಆರಂಭಕ್ಕೆ ಮುನ್ನುಡಿ ಬರೆಯುವ ಸೂಚನೆಯಿದೆ. ಏಷ್ಯಾ ಷೇರುಪೇಟೆ ಮತ್ತು ಅಮೆರಿಕ ಹಾಗೂ ಚೀನಾದ ಹಣದುಬ್ಬರ ಬಹಿರಂಗವಾಗಲಿರುವುದು ಇದಕ್ಕೆ ಕಾರಣ. ಜತೆಗೆ, ಈ ವಾರದ ಬಳಿಕ ಭಾರತದ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಪ್ರಕಟವಾಗಲಿರುವುದು ಕೂಡ ಸೋಮವಾರದ ನೀರಸ ಆರಂಭಕ್ಕೆ ಕಾರಣವಾಗಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ