logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi America Visit: ಅಮೆರಿಕಾದಿಂದ ಭಾರತ ಖರೀದಿಸಲಿದೆ ಅತ್ಯಾಧುನಿಕ ಯುದ್ದ ದ್ರೋಣ್‌ಗಳು: ಮೋದಿ ಅಮೆರಿಕಾ ಭೇಟಿಗೂ ಮುನ್ನ ಎರಡು ವರ್ಷದ ಹಿಂದಿನ

Modi America Visit: ಅಮೆರಿಕಾದಿಂದ ಭಾರತ ಖರೀದಿಸಲಿದೆ ಅತ್ಯಾಧುನಿಕ ಯುದ್ದ ದ್ರೋಣ್‌ಗಳು: ಮೋದಿ ಅಮೆರಿಕಾ ಭೇಟಿಗೂ ಮುನ್ನ ಎರಡು ವರ್ಷದ ಹಿಂದಿನ

HT Kannada Desk HT Kannada

Jun 16, 2023 06:51 AM IST

google News

ಅಮೆರಿಕಾದಿಂದ ಭಾರತ ಖರೀದಿ ಮಾಡಲು ಒಪ್ಪಿಗೆ ನೀಡಿರುವ ಎಂಕ್ಯು 9 ಬಿ ಯುದ್ದ ದ್ರೋಣ್‌

    • ಎರಡು ವರ್ಷದ ಹಿಂದೆಯೇ ಅಮೆರಿಕಾ ಉತ್ಪಾದಿಸುವ ಎಂಕ್ಯು 9 ಬಿ ಯುದ್ದ ದ್ರೋಣ್‌ಗಳ ಖರೀದಿಗೆ ಒಪ್ಪಂದ ಆಗಿತ್ತಾದರೂ ಭಾರತ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಈಗ ಪ್ರಧಾನಿ ಮೋದಿ ಭೇಟಿ ಭಾಗವಾಗಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಕ್ಷಣಾ ಇಲಾಖೆಯ ಉನ್ನತ ಮಟ್ಟದ ಸಮಿತಿ ಸಭೆಯು ಒಟ್ಟು 31 ಯುದ್ದ ದ್ರೋಣ್‌ಗಳನ್ನು ಖರೀದಿಸಲು ಅನುಮತಿ ನೀಡಿದ
ಅಮೆರಿಕಾದಿಂದ ಭಾರತ ಖರೀದಿ ಮಾಡಲು ಒಪ್ಪಿಗೆ ನೀಡಿರುವ ಎಂಕ್ಯು 9 ಬಿ  ಯುದ್ದ ದ್ರೋಣ್‌
ಅಮೆರಿಕಾದಿಂದ ಭಾರತ ಖರೀದಿ ಮಾಡಲು ಒಪ್ಪಿಗೆ ನೀಡಿರುವ ಎಂಕ್ಯು 9 ಬಿ ಯುದ್ದ ದ್ರೋಣ್‌

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಜೂನ್‌ 21 ರಿಂದ ನಾಲ್ಕು ದಿನಗಳ ಅಮೆರಿಕಾ ಪ್ರವಾಸ ಶುರುವಾಗುವ ಮುನ್ನವೇ ಅಮೆರಿಕಾ ತಯಾರಿಸುವ ಅತ್ಯಾಧುನಿಕ ಯುದ್ದ ದ್ರೋಣ್‌ಗಳ ಖರೀದಿಗೆ ಭಾರತದ ರಕ್ಷಣಾ ಇಲಾಖೆ ಅನುಮತಿ ನೀಡಿದೆ. ಎಂಕ್ಯು 9 ಬಿ ಯುದ್ದ ದ್ರೋಣ್‌ಗಳು(MQ-9B SeaGuardian drones) ಭಾರತದ ನೌಕಾಪಡೆಯನ್ನು ಸೇರಲಿವೆ. ದೇಶದ ಗಡಿ ರಕ್ಷಣೆಯ ವಿಚಕ್ಷಣೆಯನ್ನೂ ಈ ಯುದ್ದ ದ್ರೋಣ್‌ಗಳು ಕೈಗೊಳ್ಳಲಿವೆ. ಈಗಾಗಲೇ ನವೆಂಬರ್‌ 2020ರಿಂದಲೇ ಗುತ್ತಿಗೆ ಆಧಾರದಲ್ಲಿ ಎಂಕ್ಯು 9 ಬಿ ಯುದ್ದ ದ್ರೋಣ್‌ ಅನ್ನು ಭಾರತ ಬಳಸುತ್ತಿದೆ.

ಎರಡು ವರ್ಷದ ಹಿಂದೆಯೇ ಅಮೆರಿಕಾ ಉತ್ಪಾದಿಸುವ ಎಂಕ್ಯು 9 ಬಿ ಯುದ್ದ ದ್ರೋಣ್‌ಗಳ ಖರೀದಿಗೆ ಒಪ್ಪಂದ ಆಗಿತ್ತಾದರೂ ಭಾರತ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಈಗ ಪ್ರಧಾನಿ ಮೋದಿ ಭೇಟಿ ಭಾಗವಾಗಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಕ್ಷಣಾ ಇಲಾಖೆಯ ಉನ್ನತ ಮಟ್ಟದ ಸಮಿತಿ ಸಭೆಯು ಒಟ್ಟು 31 ಯುದ್ದ ದ್ರೋಣ್‌ಗಳನ್ನು ಖರೀದಿಸಲು ಅನುಮತಿ ನೀಡಿದೆ. ಅಮೆರಿಕಾದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಈ ಖರೀದಿ ಘೋಷಣೆ ಪ್ರಕಟಲಿಸಲಿದ್ದಾರೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಜನರ್‌ ಅಟೋಮಿಕ್ಸ್‌ ತಯಾರಿಸುವ ಈ ಯುದ್ದ ದ್ರೋಣ್‌ಗಳ ಖರೀದಿಗೆ ತಗುಲುವ ವೆಚ್ಚ 3 ಬಿಲಿಯಲ್‌ ಡಾಲರ್. ಚೀನಾಕ್ಕೆ ಕೌಂಟರ್‌ ನೀಡುವ ಉದ್ದೇಶದಿಂದಲೇ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಹಲವಾರು ರಕ್ಷಣಾ ಒಪ್ಪಂದಗಳನ್ನು ಭಾರತದೊಂದಿಗೆ ಕೈಗೊಳ್ಳಲು ಮುಂದಾಗಿದ್ಧಾರೆ.

ಅದರಲ್ಲೂ ರಕ್ಷಣಾ ತಂತ್ರಜ್ಞಾನದ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಹೆಚ್ಚಿನ ಒಪ್ಪಂದಗಳನ್ನು ಮಾಡಿಕೊಳ್ಳುವ ಬಯಕೆ ಅಮೆರಿಕಾದ್ದು. ಮೋದಿ ಅವರ ಅಮೆರಿಕಾ ಪ್ರವಾಸ ರಕ್ಷಣಾ ವಲಯದ ತಂತ್ರಜ್ಞಾನಗಳ ಕುರಿತು ದ್ವಿಪಕ್ಷೀಯ ಒಪ್ಪಂದಗಳ ಮತ್ತಷ್ಟು ಚರ್ಚೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಮೋದಿ ಅಮೆರಿಕಾ ಪ್ರವಾಸಕ್ಕೂ ಮುನ್ನ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಅಲ್ಲಿನ ರಕ್ಷಣಾ ಸಲಹೆಗಾರ ಜೇಕ್‌ ಸುಲ್ಲಿವನ್‌ ಅವರು ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ರಕ್ಷಣಾ ಸಲಹೆಗಾರ ಅಜಿತ್‌ ದೋವಲ್‌ ಜತೆಗೂ ಮಾತುಕತೆ ನಡೆಸಿದ್ದರು. ಇದರಲ್ಲಿ ಯುದ್ದ ದ್ರೋಣ್‌ ಖರೀದಿ ಒಪ್ಪಂದದ ವಿಚಾರವೂ ಸೇರಿತ್ತು.

ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಕೂಡ ಭಾರತಕ್ಕೆ ಭೇಟಿ ನೀಡಿ ರಕ್ಷಣಾ ಕೈಗಾರಿಕಾ ವಲಯದ ಸಹಕಾರಗಳ ಕುರಿತು ಚರ್ಚಿಸಿದ್ದರು. ಇದು ಭಾರತವೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸುತ್ತಿರುವ ಯೋಜನೆಗೆ ಒತ್ತು ನೀಡಲಿದೆ ಎಂದೇ ರಕ್ಷಣಾ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.

ಅಮೆರಿಕಾ ಕೂಡ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ರಷ್ಯಾದ ಅವಲಂಬನೆ ಕಡಿಮೆ ಮಾಡಿ ಭಾರತದ ಕಡೆ ಒತ್ತು ನೀಡುತ್ತಿದೆ. ಇದು ಭಾರತದಲ್ಲೇ ಉತ್ಪಾದನೆಯಾಗುತ್ತಿರುವ ಫೈಟರ್‌ ಜೆಟ್‌ಗಳ ವಹಿವಾಟಿಗೂ ನೆರವಾಗಬಹುದು. ಈ ಕುರಿತು ಮೋದಿ ಪ್ರವಾಸದ ವೇಳೆ ಪ್ರಸ್ತಾಪಿಸಬಹುದು ಎನ್ನಲಾಗುತ್ತಿದೆ.

ಅತ್ಯಾಧುನಿಕತೆ ಯುದ್ದ ದ್ರೋಣ್‌

ಭಾರತೀಯ ಸೇನೆಯು ತನ್ನ ಭದ್ರತೆ ಮತ್ತು ಕಣ್ಗಾವಲು ಸಾಮರ್ಥ್ಯಗಳನ್ನು ಸುಧಾರಿಸಲು ಹೊಸ ತಂತ್ರಜ್ಞಾನಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ. ಆರು ತಿಂಗಳುಗಳಲ್ಲಿ, ಬಲವು ಮಾನವರಹಿತ ವೇದಿಕೆಗಳ ಮೇಲೆ ಕೇಂದ್ರೀಕರಿಸಿದೆ ಇದರಲ್ಲಿ ಎಂಕ್ಯು 9 ಬಿ ಯುದ್ದ ದ್ರೋಣ್‌ ಕೂಡ ಒಂದು. ಆರ್‌ಎಪಿಎಸ್‌ ತಂತ್ರಜ್ಞಾನ ಆಧರಿತ ಅಂದರೆ ಮಾನವ ರಹಿತ ಯುದ್ದ ವಾಹನವಿದು. ಅತ್ಯಾಧುನಿಕ ತಂತ್ರಜ್ಞಾನ ಸೆಟಲೈಟ್‌ ಸಂಪರ್ಕದೊಂದಿಗೆ ದೇಶದ ಸಮುದ್ರದುದ್ದಕ್ಕೂ ಸಂಚರಿಸಿ ಮಾಹಿತಿಯನ್ನು ರವಾನಿಸಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ