Click N Book Post: ಕ್ಲಿಕ್ ಅಂಡ್ ಬುಕ್: ಮನೆಯಿಂದ ಸ್ಪೀಡ್ ಪೋಸ್ಟ್ ಸಂಗ್ರಹಿಸುವ ಭಾರತೀಯ ಪೋಸ್ಟ್‌ನ ತ್ವರಿತ ಸೇವೆ
Nov 16, 2023 03:00 PM IST
ಭಾರತೀಯ ಅಂಚೆ ಇಲಾಖೆಯು ಕ್ಲಿಕ್ ಅನ್ ಬುಕ್ ಎನ್ನುವ ತ್ವರಿತ ಸೇವೆಯನ್ನು ಆರಂಭಿಸಿದೆ.
- Indian Postal service ಭಾರತೀಯ ಅಂಚೆ ಇಲಾಖೆಯು ತ್ವರಿತ ಸೇವೆ ನೀಡುವ ಭಾಗವಾಗಿ ಕ್ಲಿಕ್ ಅಂಡ್ ಬುಕ್ ಎನ್ನುವ ಮನೆಯ ಬಾಗಿಲಿನಿಂದಲೇ ಪಾರ್ಸೆಲ್ ಸಂಗ್ರಹಿಸುವ ಸೇವೆ ಆರಂಭಿಸಿದೆ.
ದೆಹಲಿ: ಇನ್ನು ಭಾರತೀಯ ಅಂಚೆ ಮೂಲಕ ಸ್ಪೀಡ್ ಪೋಸ್ಟ್ ಕಳುಹಿಸುವುದು ಬಲು ಸುಲಭ.
ಮನೆಯಿಂದಲೇ ಸ್ಪೀಡ್ ಪೋಸ್ಟ್ ಸಂಗ್ರಹಿಸಿ ರವಾನಿಸುವ ವ್ಯವಸ್ಥೆಯನ್ನು ಭಾರತೀಯ ಅಂಚೆ ಇಲಾಖೆ ಮಾಡುತ್ತಿದೆ. ಅದರಲ್ಲೂ ತಂತ್ರಜ್ಞಾನ ಆಧರಿತ ಸೇವೆಯನ್ನು ಬಳಸಿಕೊಂಡು ಸೌಲಭ್ಯಗಳನ್ನು ಗ್ರಾಹಕರಿಗೆ ವಿಸ್ತರಿಸಲು ಭಾರತೀಯ ಇಲಾಖೆ ಮುಂದಾಗಿದೆ.
ಕ್ಲಿಕ್ ಅಂಡ್ ಬುಕ್ ಎನ್ನುವ ಹೆಸರಿನಡಿ ನೀಡುವ ಸೇವೆಗೆ ಪ್ರಾಯೋಗಿಕವಾಗಿ ಉತ್ತರ ಪ್ರದೇಶದಲ್ಲಿ ಚಾಲನೆ ನೀಡಲಾಗಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ಈ ಸೇವೆ ಶುರುವಾಗಿದೆ. ಇಲ್ಲಿನ ಪ್ರತಿಕ್ರಿಯೆ, ಗ್ರಾಹಕರಿಂದ ಬರುವ ಸಲಹೆ ಆಧರಿಸಿ ಇತರೆಡೆಯೂ ವಿಸ್ತರಿಸುವುದು ಅಂಚೆ ಇಲಾಖೆ ಉದ್ದೇಶ.
ಮೊದಲೆಲ್ಲಾ ಏನೇ ಸೇವೆ ಇದ್ದರೂ ಅಂಚೆ ಇಲಾಖೆಗೆ ಬರಬೇಕಾಗಿತ್ತು. ಅಂಚೆ ಇಲಾಖೆ ಮಾತ್ರ ಪತ್ರವನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿತ್ತು. ಹೊಸ ಸೇವೆಯ ಪ್ರಕಾರ 500 ರೂ.ಗೂ ಅಧಿಕ ಮೊತ್ತದ ಬುಕ್ಕಿಂಗ್ ಇದ್ದರೆ ಮನೆಗೆ ಬಂದೇ ಅಂಚೆ ಇಲಾಖೆ ಸೇವೆ ನೀಡಲಿದೆ. ಇದರಲ್ಲಿ ರಿಜಿಸ್ಟರ್ ಪೋಸ್ಟ್, ಪಾರ್ಸೆಲ್ ಸೇವೆ ಸೇರಿದೆ. ಅದರಲ್ಲೂ 5 ಕೆಜಿವರೆಗಿನ ಪಾರ್ಸೆಲ್ ಇದ್ದರೂ ಅದನ್ನು ಮನೆಗೆ ಬಂದು ಸ್ವೀಕರಿಸಲಾಗುತ್ತದೆ. ಇದಕ್ಕಾಗಿ ಗ್ರಾಹಕರು ಅಂಚೆ ಇಲಾಖೆಯಲ್ಲಿ ತಮ್ಮದೇ ಗ್ರಾಹಕ ಐಡಿ ಯೊಂದನ್ನು ರೂಪಿಸಿಕೊಳ್ಳಬೇಕು. ಈ ಐಡಿ ಮೂಲಕವೇ ಕಡ್ಡಾಯವಾಗಿ ವಹಿವಾಟು ನಡೆಸಬೇಕು. www.indiapost.gov.in ಮೂಲಕವೇ ಐಡಿಯನ್ನು ರೂಪಿಸಿಕೊಳ್ಳಲು ಅವಕಾಶವಿದೆ. ಎನ್ನುವುದು ಅಂಚೆ ಇಲಾಖೆ ಅಧಿಕಾರಿಗಳ ವಿವರಣೆ.
ನೋಂದಣಿ ನಂತರ ಗ್ರಾಹಕರಿಗೆ ಐಡಿ ಹಾಗೂ ಪಾಸ್ ವರ್ಡ್ ಸಿಗಲಿದೆ. ಒಂದು ಬಾರಿಗೆ ಐದು ಪತ್ರಗಳನ್ನು ಮಾತ್ರ ಈ ಸೇವೆಯಡಿ ಕಳುಹಿಸಲು ಅವಕಾಶವಿದೆ. ಅದು ಐದು ಕೆಜಿವರೆಗೆ ಒಮ್ಮೆಗೆ ಕಳುಹಿಸಬಹುದು. 500 ರೂ. ಮೇಲ್ಪಟ್ಟ ಸೇವೆಯಡಿ ಮನೆಯಿಂದಲೇ ಅಂಚೆ ಸ್ವೀಕಾರಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. 500 ರೂ.ಗಿಂತ ಕಡಿಮೆ ಮೊತ್ತದ ಪೋಸ್ಟ್ ಅಥವಾ ಪಾರ್ಸೆಲ್ ಇದ್ದರೆ ಇದಕ್ಕೆ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಬೆಳಗ್ಗೆ 9.30ಕ್ಕೆ ಬುಕ್ಕಿಂಗ್ ಮಾಡಿದ್ದರೆ ಬೆಳಗ್ಗೆ10ರಿಂದ ಮಧ್ಯಾಹ್ನ1ರ ಒಳಗೆ ಮನೆಗೆ ಬಂದು ಅಂಚೆ ಸಂಗ್ರಹಿಸಿಕೊಳ್ಳಲಾಗುತ್ತದೆ. ಬೆಳಗ್ಗೆ 9.30 ನಂತರ ಬುಕ್ ಮಾಢಿದ್ದರೆ ಮಧ್ಯಾಹ್ನ ಮಧ್ಯಾಹ್ನ 1 to ಸಂಜೆ 4ರವರೆಗೆ ಸಂಗ್ರಹಿಸಲಾಗುತ್ತದೆ. ಮಧ್ಯಾಹ್ನ 12.30ನಂತ ಬುಕ್ ಮಾಡಿದರೆ ಮರುದಿನ ಬೆಳಿಗ್ಗೆ ಸಂಗ್ರಹಿಸಿ ರವಾನಿಸಲಾಗುತ್ತದೆ ಎನ್ನುವುದು ಅಧಿಕಾರಿಗಳು ನೀಡುವ ಮಾಹಿತಿ.