logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ins Vikrant: ಐಎನ್‌ಎಸ್‌ ವಿಕ್ರಾಂತ್‌ ಬಗ್ಗೆ ಚೀನಾಕ್ಕೆ ಭಯವೇಕೆ? ಕಡಲ ಕುಟಿಲನಿಗೆ ತಳಮಳ ಶುರು

INS Vikrant: ಐಎನ್‌ಎಸ್‌ ವಿಕ್ರಾಂತ್‌ ಬಗ್ಗೆ ಚೀನಾಕ್ಕೆ ಭಯವೇಕೆ? ಕಡಲ ಕುಟಿಲನಿಗೆ ತಳಮಳ ಶುರು

Praveen Chandra B HT Kannada

Sep 04, 2022 03:37 PM IST

google News

INS Vikrant: ಐಎನ್‌ಎಸ್‌ ವಿಕ್ರಾಂತ್‌ ಬಗ್ಗೆ ಚೀನಾಕ್ಕೆ ಭಯವೇಕೆ? ಕಡಲ ಕುಟಿಲನಿಗೆ ತಳಮಳ ಶುರು

    • "ಐಎನ್‌ಎಸ್‌ ವಿಕ್ರಾಂತ್‌, ಹಿಂದೂ ಮಹಾಸಾಗರದಲ್ಲಿ ಚೀನಾದ ಸದಾ ಯುದ್ಧ ಸಿದ್ಧವಾಗಿರುವ ಮನಸ್ಥಿತಿಗೆ ಸ್ಪಷ್ಟ ಸಂದೇಶʼʼ ಎನ್ನಲಾಗುತ್ತಿದೆ. "ಐಎನ್‌ಎಸ್‌ ವಿಕ್ರಾಂತ್‌ ಮೂಲಕ ಭಾರತವು ಜಗತ್ತಿನ ಬೃಹತ್‌ ನೌಕಾಪಡೆಗಳ ಗಣ್ಯ ಪಡೆಗೆ ಸೇರಿದೆʼʼ ಎಂದು ಸಿಎನ್‌ಎನ್‌ ವರದಿ ಮಾಡಿದೆ. "ಚೀನಾದ ಬೆಳೆಯುತ್ತಿರುವ ಮಿಲಿಟರಿ ಶಕ್ತಿಯನ್ನು ಎದುರಿಸಲು ಸರಕಾರದ ಪ್ರಯತ್ನಗಳಲ್ಲಿ ಒಂದುʼʼ ಎಂದು ಎಎಫ್‌ಪಿ ತನ್ನ ವರದಿಯಲ್ಲಿ ತಿಳಿಸಿದೆ.
INS Vikrant: ಐಎನ್‌ಎಸ್‌ ವಿಕ್ರಾಂತ್‌ ಬಗ್ಗೆ ಚೀನಾಕ್ಕೆ ಭಯವೇಕೆ? ಕಡಲ ಕುಟಿಲನಿಗೆ ತಳಮಳ ಶುರು
INS Vikrant: ಐಎನ್‌ಎಸ್‌ ವಿಕ್ರಾಂತ್‌ ಬಗ್ಗೆ ಚೀನಾಕ್ಕೆ ಭಯವೇಕೆ? ಕಡಲ ಕುಟಿಲನಿಗೆ ತಳಮಳ ಶುರು (Twitter)

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತವು ಯಾವುದೇ ಸಾಧನೆ ಮಾಡಿದರೂ, ಎದುರಾಳಿ ದೇಶಕ್ಕೊಂದು ಸಂದೇಶ ಇದ್ದೇ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಕೇರಳಕ್ಕೆ ಹೋಗಿ ಲಾಂಚ್‌ ಮಾಡಿರುವ ಐಎನ್‌ಎಸ್‌ ವಿಕ್ರಾಂತ್‌ ಕೂಡ ಇದೇ ರೀತಿ ವಿರೋಧಿ ದೇಶಗಳಿಗೆ ಒಂದು ಸ್ಪಷ್ಟ ಸಂದೇಶ. ವಿಶೇಷವಾಗಿ ಕಡಲ ಕುಟಿಲತೆಯಿಂದ ಸದಾ ಹದ್ದು ಮೀರುವ ಚೀನಾಕ್ಕೊಂದು ಪ್ರಬಲ ಸಂದೇಶವೂ ಹೌದು.

ಇಂಡೋ ಪೆಸಿಫಿಕ್‌ ಪ್ರದೇಶವನ್ನು ನಿಯಂತ್ರಿಸುವ ಚೀನಾದ ಉದ್ದೇಶಗಳಿಗೆ ತಡೆ ಹಾಕುವ ಪ್ರಮುಖ ನೌಕೆಯೂ ಇದಾಗಿದೆ. ಹೀಗಾಗಿ, ಭಾರತವು ವಿಕ್ರಾಂತ್‌ ಲಾಂಚ್‌ ಮಾಡಿದ ಸಮಯದಲ್ಲಿ ಚೀನಾದ ಹೃದಯದಲ್ಲಿಯೂ ಸಾಗರದ ಉಬ್ಬರದ ಮೊರೆತ ಉಂಟಾಗಿದೆ.

"ಐಎನ್‌ಎಸ್‌ ವಿಕ್ರಾಂತ್‌, ಹಿಂದೂ ಮಹಾಸಾಗರದಲ್ಲಿ ಚೀನಾದ ಸದಾ ಯುದ್ಧ ಸಿದ್ಧವಾಗಿರುವ ಮನಸ್ಥಿತಿಗೆ ಸ್ಪಷ್ಟ ಸಂದೇಶʼʼ ಎನ್ನಲಾಗುತ್ತಿದೆ. "ಐಎನ್‌ಎಸ್‌ ವಿಕ್ರಾಂತ್‌ ಮೂಲಕ ಭಾರತವು ಜಗತ್ತಿನ ಬೃಹತ್‌ ನೌಕಾಪಡೆಗಳ ಗಣ್ಯ ಪಡೆಗೆ ಸೇರಿದೆʼʼ ಎಂದು ಸಿಎನ್‌ಎನ್‌ ವರದಿ ಮಾಡಿದೆ. "ಚೀನಾದ ಬೆಳೆಯುತ್ತಿರುವ ಮಿಲಿಟರಿ ಶಕ್ತಿಯನ್ನು ಎದುರಿಸಲು ಸರಕಾರದ ಪ್ರಯತ್ನಗಳಲ್ಲಿ ಒಂದುʼʼ ಎಂದು ಎಎಫ್‌ಪಿ ತನ್ನ ವರದಿಯಲ್ಲಿ ತಿಳಿಸಿದೆ.

ಐಎನ್‌ಎಸ್‌ ವಿಕ್ರಾಂತ್‌ ಬಹುಪಯೋಗಿ ನೌಕೆ. ಪ್ರಾದೇಶಿಕ ಕಡಲ ಭದ್ರತೆಯಲ್ಲಿ ಗೇಮ್‌ ಚೇಂಜರ್‌ ಆಗಿರಲಿದೆ. ಈಗ ಐಎನ್‌ಎಸ್‌ ವಿಕ್ರಮಾದಿತ್ಯವು ನಮ್ಮ ಕಡಲಿನಲ್ಲಿ ಗಸ್ತು ತಿರುಗುತ್ತಿದೆ. ವಿಕ್ರಾಂತ್‌ ಜತೆಯಾಗಿರುವುದರಿಂದ ನೌಕಾಪಡೆಗೆ ಹೊಸ ಬಲ ಬಂದಂತಾಗಿದೆ. ಈಗಾಗಲೇ ಚೀನಾವು ಚಿಬೌಟಿಯಲ್ಲಿ ನೌಕಾ ಹೊರಠಾಣೆಯನ್ನು ತನ್ನದಾಗಿಸಿಕೊಂಡಿದೆ. ಪಾಕಿಸ್ತಾನದ ಗ್ವಾದರ್‌ ಬಂದರಿನ ಅಭಿವೃದ್ಧಿಗೂ ಚೀನಾ ಹಣ ಹಾಕಿದೆ.

ಇತ್ತೀಚೆಗೆ ಚೀನಾವು ತನ್ನ ಮೂರನೇ ವಿಮಾನವಾಹನ ನೌಕೆ ಫುಜಿಯನ್‌ ಅನ್ನು ಲಾಂಚ್‌ ಮಾಡಿದೆ. ಉಪಗ್ರಹ ಚಿತ್ರಣದ ಅಂದಾಜಿನ ಪ್ರಕಾರ ಫುಜಿಯನ್‌ ನೌಕೆಯು 320ಮೀಟರ್‌ ಉದ್ದ ಮತ್ತು 80 ಮೀಟರ್‌ ಅಗಲದ ಫ್ಲೈಟ್‌ ಡಕ್‌ ಹೊಂದಿದೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ಚೀನಾವು ತನ್ನ ಬೇಹುಗಾರಿಕಾ ಹಡಗನ್ನು ನಿಯೋಜಿಸಿರುವುದಕ್ಕೂ ಭಾರತ ಆಕ್ಷೇಪಣೆ ಸಲ್ಲಿಸಿತ್ತು. ಕಡಲಿನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದು ಕೆಲವೊಂದು ಉದಾಹರಣೆಯಷ್ಟೇ.

ಭಾರತದ ನೆರೆಹೊರೆಯ ರಾಷ್ಟ್ರಗಳ ಸಾಗರದ ಮೇಲೆ ಚೀನಾ ನಿಯಂತ್ರಣ ಹೊಂದಲು ಪ್ರಯತ್ನಿಸುತ್ತಿದೆ. ಈ ಮೂಲಕ ತನ್ನ ನೌಕಾ ನೆಲೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಮಲಕಾ ಜಲಸಂಧಿ, ಹಾರ್ಮುಜ್‌ ಜಲಸಂಧಿ, ಮಂಡೇಬ್‌ ಜಲಸಂಧಿ, ಪಾಕಿಸ್ತಾನದ ಗ್ವಾದರ್‌, ಶ್ರೀಲಂಕಾದ ಹಂಬಂಟೋಟಾ ಬಂದರು ಇತ್ಯಾದಿಗಳ ಮೇಲೆ ನಿಯಂತ್ರಣ ಹೊಂದುವ ಚೀನಾದ ಕಳ್ಳಾಟಗಳಿಗೆ ಭಾರತವು ಪ್ರಬಲ ಪ್ರತಿಸ್ಪರ್ಧೆ ಒಡ್ಡಲು ಪ್ರಯತ್ನಿಸುತ್ತಿದೆ.

ಚೀನಾವು ತನ್ನ ಭದ್ರತೆ ಮತ್ತು ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಇಂಡೋ ಪೆಸೀಫಿಕ್‌ ಪ್ರದೇಶವನ್ನು ನಿಯಂತ್ರಿಸಲು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದೆ. ಸ್ಟ್ರಿಂಗ್‌ ಆಫ್‌ ಪಲ್ಸ್‌ ಇದಕ್ಕೆ ಒಂದು ನಿದರ್ಶನ. ಇದೀಗ ಭಾರತದ ಐಎನ್‌ಎಸ್‌ ವಿಕ್ರಾಂತ್‌ ಕೂಡ ಸಾಗರದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

"ಭಾರತದ ಸಾಗರ ಇತಿಹಾಸದಲ್ಲಿಯೇ ಇಲ್ಲಿಯವರೆಗೆ ನಿರ್ಮಿಸಿರುವ ಹಡಗುಗಳಲ್ಲಿಯೇ ಐಎನ್‌ಎಸ್‌ ವಿಕ್ರಾಂತ್‌ ಅತ್ಯಧಿಕ ದೊಡ್ಡದಾಗಿದೆ. ಯುದ್ಧ ವಿಮಾನಗಳು, ಬಹುಬಗೆಯ ಹೆಲಿಕಾಪ್ಟರ್‌ಗಳು ಸೇರಿದಂತೆ ಸುಮಾರು 30 ವಿಮಾನಗಳು ಇದರ ಮೇಲೆ ಕಾರ್ಯನಿರ್ವಹಣೆ ಮಾಡಲು ಸಾಧ್ಯವಿದೆ. "ಇಂತಹ ಯುದ್ಧ ನೌಕೆ ಅಭಿವೃದ್ಧಿಪಡಿಸುವ ಮೂಲಕ ಭಾರತವು ಅಮೆರಿಕ, ಇಂಗ್ಲೆಂಡ್‌, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ನಂತಹ ರಾಷ್ಟ್ರಗಳ ಗುಂಪನ್ನು ಸೇರಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ