ರಷ್ಯಾದಲ್ಲಿ ವಿಮಾನ ಪತನ, 10 ಮಂದಿ ಸಾವು; ವಾಗ್ನರ್ ಗ್ರೂಪ್ ಮುಖ್ಯಸ್ಥ ಪ್ರಿಗೋಷಿನ್ ಸಾವಿನ ಶಂಕೆ
Aug 24, 2023 06:31 AM IST
ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಪ್ರಿಗೋಷಿನ್
- ರಷ್ಯಾದಲ್ಲಿ ನಡೆದ ವಿಮಾನ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಈ ವಿಮಾನದಲ್ಲಿ ವಾಗ್ನರ್ ಗ್ರೂಪ್ ಮುಖಸ್ಥ ಯೆವ್ಗೆನಿ ಪ್ರಿಗೋಷಿನ್ ಕೂಡ ಇದ್ದರು ಎನ್ನಲಾಗುತ್ತಿದೆ. ಪ್ರಿಗೋಷಿನ್ ರಷ್ಯಾ ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾ ವಿರುದ್ಧ ಬಂಡಾಯವೆದ್ದ ಖಾಸಗಿ ಸೇನೆ ವಾಗ್ನರ್ ಗ್ರೂಪ್‌ನ ಸ್ಥಾಪಕರಾಗಿದ್ದಾರೆ.
ಮಾಸ್ಕೋ: ವಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನವು ಮಾಸ್ಕೋದ ವಾಯುವ್ಯದಲ್ಲಿರುವ ಟ್ವೆರ್ ಪ್ರದೇಶದಲ್ಲಿ ಬುಧವಾರ ಪತನಗೊಂಡಿದೆ ಎಂದು ರಷ್ಯಾದ ಮಾಸ್ಕೋ ಟೈಮ್ಸ್ ವರದಿ ಮಾಡಿದೆ.
ಇಲ್ಲಿನ ಎಮರ್ಜೆನ್ಸಿ ಮಿನಿಸ್ಟರಿ ಪ್ರಾಥಮಿಕ ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ 10 ಮಂದಿ ಸಾವನ್ನಪ್ಪಿದ್ದಾರೆ.
ರಷ್ಯಾದ ಸರ್ಕಾರಿ ವಾಯುಯಾನ ಏಜೆನ್ಸಿಯಾದ ರೊಸಾವಿಯಾಟ್ಸಿಯಾ ಪ್ರಕಾರ ಪ್ರಿಗೋಷಿನ್ ಕೂಡ ವಿಮಾನದಲ್ಲಿದ್ದರು ಎನ್ನಲಾಗುತ್ತಿದೆ.
ಪ್ರಿಗೋಷಿನ್ ಅವರ ಸದ್ಯದ ಸ್ಥಿತಿ ಏನು, ಅವರು ಈ ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಯಾರು ಈತ ಪ್ರಿಗೋಷಿನ್?
2023ರ ಜೂನ್‌ನಲ್ಲಿ ರಷ್ಯಾ ಸೇನೆ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ನಡೆದ ಬಂಡಾಯವೆದ್ದಿದ್ದ ವಾಗ್ನರ್ ಗ್ರೂಪ್ ಖಾಸಗಿ ಸೇನೆಯ ಮುಖ್ಯಸ್ಥರಾಗಿದ್ದರು. 64 ವರ್ಷ ಪ್ರಿಗೋಷಿನ್ ಪುಟಿನ್‌ಗೆ ಆಪ್ತರಾಗಿದ್ದರು. ನಂತರ ಪುಟಿನ್ ಹಾಗೂ ಸೇನೆ ವಿರುದ್ಧ ಬಂಡಾಯ ಎದ್ದಿದ್ದರು.
ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಪುಟಿನ್ ವಿರುದ್ಧ ತಿರುಗಿ ಬಿದ್ದಿದ್ದ ಪ್ರಿಗೋಷಿನ್ ವಾಗ್ನರ್ ದಂಗೆಗೆ ಕಾರಣರಾಗಿದ್ದರು. ಪುಟಿನ್ ಆಪ್ತರಾಗಿದ್ದ ಈತ ಆಪ್ತರಾಗಿದ್ದ, ಆಗಾಗ್ಗೆ “ಪುಟಿನ್ʼಸ್ ಷೆಫ್” ಎಂದು ಕರೆಯಿಸಿಕೊಳ್ಳುತ್ತಿದ್ದ.
25000 ಯೋಧರು ಪ್ರಿಗೋಷಿನ್ ಅವರ ವಾಗ್ನರ್ ಗುಂಪಿನಲ್ಲಿದ್ದು, ರಷ್ಯಾ ಸೇನಾ ಪಡೆಯ ಹೆಲಿಕಾಪ್ಟರ್ ಹೊಡೆದುರುಳಿಸುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿತ್ತು.
ಪ್ರಿಗೋಷಿನ್ ಸಾವಿನ ಶಂಕೆಗೆ ಬೈಡನ್ ಸೇರಿದಂತೆ ನಾಯಕರ ಪ್ರತಿಕ್ರಿಯೆ
ʼಇದು ಆಶ್ವರ್ಯಕರ ಸಂಗತಿಯಲ್ಲʼ ಎಂದು ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ. ʼಅಲ್ಲಿ ಏನಾಗಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ಪ್ರಿಗೋಷಿನ್ ಸಾವು ನನಗೆ ಆಶ್ವರ್ಯ ಎನ್ನಿಸಿಲ್ಲ. ರಷ್ಯಾದಲ್ಲಿ ಪುಟಿನ್ ಹೇಳಿಕೆ ಇಲ್ಲದೆ ಯಾವುದೂ ನಡೆಯುತ್ತಿಲ್ಲ. ಆದರೆ ಈ ಸಾವು ನಿಜವೇ, ಕಾರಣವೇನು ಎಂಬುದು ನನ್ನ ಅರಿವಿಗೆ ಬಂದಿಲ್ಲʼ ಎಂದು ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್ ಅಧ್ಯಕ್ಷರ ಸಹಾಯಕ ಮೈಕೆಲೊ ಪೊಡೊಲ್ಯಾಕ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿ ʼವಿಮಾನ ಅಪಘಾತವು ವಿಶ್ವಾಸದ್ರೋಹ ಸಂಕೇತವಾತಗಿದೆʼ ಎಂದು ರಷ್ಯಾ ವಿರುದ್ಧ ವ್ಯಂಗ್ಯವಾಡಿದ್ದಾರೆ.