logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kerala Muslims Learns Sanskirt: ಕೇರಳದ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಸಂಸ್ಕೃತ ಅಧ್ಯಯನ

Kerala Muslims Learns Sanskirt: ಕೇರಳದ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಸಂಸ್ಕೃತ ಅಧ್ಯಯನ

HT Kannada Desk HT Kannada

Nov 14, 2022 08:54 AM IST

Kerala Muslims Learns Sanskirt: ಕೇರಳದ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಸಂಸ್ಕೃತ

    • ಮಾಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (ಎಂಐಸಿ) ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಆಧುನಿಕ ಅಧ್ಯಯನಗಳು (ಎಎಸ್‌ಎಎಸ್) ವಿಷಯದಲ್ಲಿ ಸಂಸ್ಕೃತಕ್ಕೂ ಅವಕಾಶ ನೀಡಲಾಗಿದೆ. "ಇತರೆ ಧರ್ಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ತಿಳಿವಳಿಕೆ ಮೂಡಿಸುವುದು ಸಂಸ್ಕೃತ, ಉಪನಿಷತ್‌, ಶ್ಲೋಕ ಇತ್ಯಾದಿಗಳನ್ನು ಕಲಿಸುವ ಉದ್ದೇಶ ಎಂದು ಶಿಕ್ಷಣ ಸಂಸ್ಥೆ ತಿಳಿಸಿದೆ. 
Kerala Muslims Learns Sanskirt: ಕೇರಳದ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಸಂಸ್ಕೃತ
Kerala Muslims Learns Sanskirt: ಕೇರಳದ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಸಂಸ್ಕೃತ

ತ್ರಿಶೂರ್‌: ಹಿಂದೂ ಪ್ರೊಫೆಸರ್‌ ಮಾರ್ಗದರ್ಶನದಲ್ಲಿ ಕೇರಳದ ತ್ರಿಶೂರ್‌ನಲ್ಲಿರುವ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದು, ದೇಶದ ಗಮನ ಸೆಳೆದಿದೆ. ಈ ವಿದ್ಯಾರ್ಥಿಗಳು ಉಪನಿಷದ್, ಪುರಾಣ, ಶ್ಲೋಕ ಇತ್ಯಾದಿಗಳನ್ನು ಸಂಸ್ಕೃತದಲ್ಲಿ ಕಲಿಯುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಮಾಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (ಎಂಐಸಿ) ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಆಧುನಿಕ ಅಧ್ಯಯನಗಳು (ಎಎಸ್‌ಎಎಸ್) ವಿಷಯದಲ್ಲಿ ಸಂಸ್ಕೃತಕ್ಕೂ ಅವಕಾಶ ನೀಡಲಾಗಿದೆ. "ಇತರೆ ಧರ್ಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ತಿಳಿವಳಿಕೆ ಮೂಡಿಸುವುದು ಸಂಸ್ಕೃತ, ಉಪನಿಷತ್‌, ಶ್ಲೋಕ ಇತ್ಯಾದಿಗಳನ್ನು ಕಲಿಸುವ ಉದ್ದೇಶ ಎಂದು ಸಂಸ್ಥೆಯ ಪ್ರಿನ್ಸಿಪಾಲರಾದ ಒನಂಪಿಲ್ಲಿ ಮಹಮ್ಮದ್‌ ಫೈಜಿ ಹೇಳಿದ್ದಾರೆ.

ವಿಶೇಷವೆಂದರೆ, ಮಹಮ್ಮದ್‌ ಫೈಜಿ ಅವರು ಶಂಕರ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಇದೇ ಕಾರಣಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ಕಲಿಸಲು ಆರಂಭಿಸಿದ್ದಾರೆ. "ಬೇರೆ ಧರ್ಮಗಳ ಕುರಿತು ಮೂಲ ಜ್ಞಾನವನ್ನು ಬೆಳೆಸುವುದು ಮತ್ತು ಇತರೆ ಧರ್ಮಗಳ ಕುರಿತು ತಿಳಿವಳಿಕೆ ಮೂಡಿಸುವುದು ಸಂಸ್ಕೃತ ಕಲಿಕೆಯ ಉದ್ದೇಶ. ಕಲಿಕಾ ಅವಧಿಯಲ್ಲಿ ಸಂಸ್ಕೃತದ ಆಳವಾದ ಅಧ್ಯಯನ ಸಾಧ್ಯವಿಲ್ಲʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಎಂಟು ವರ್ಷಗಳ ಕಲಿಕಾ ಅವಧಿಯಲ್ಲಿ ಸಂಸ್ಕೃತ, ಉಪನಿಷದ್‌ಗಳು, ಶಾಸ್ತ್ರಗಳು, ವೇದಗಳ ಆಳವಾದ ಅಧ್ಯಯನ ಸಾಧ್ಯವಿಲ್ಲ ಎಂಬ ಅರಿವು ನನಗಿದೆ. ಆದರೆ, ಇತರೆ ಧರ್ಮಗಳ ಕುರಿತು ಬೇಸಿಕ್‌ ಜ್ಞಾನವನ್ನು ಗಳಿಸಲು ಇದರಿಂದ ಸಾಧ್ಯವಿದೆʼʼ ಎಂದು ಅವರು ಹೇಳಿದ್ದಾರೆ.

ಅಕಾಡೆಮಿ ಆಫ್ ಷರಿಯಾ ಮತ್ತು ಆಧುನಿಕ ಅಧ್ಯಯನಗಳು (ಎಎಸ್‌ಎಎಸ್)ವು ಹತ್ತನೇ ತರಗತಿಯ ಬಳಿಕದ ಕೋರ್ಸ್‌ ಆಗಿದೆ. ಎಂಟು ವರ್ಷಗಳ ಅವಧಿಯಲ್ಲಿ ಭಗವದ್ಗೀತೆ, ಉಪನಿಷದ್, ಮಹಾಭಾರತ, ರಾಮಾಯಣದ ಆಯ್ದ ಮಹತ್ವದ ಭಾಗಗಳನ್ನು ಇದರಲ್ಲಿ ಕಲಿಸಲಾಗುತ್ತದೆ.

ಸಾಕಷ್ಟು ಮುಸ್ಲಿಂ ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನಕ್ಕೆ ಆಸಕ್ತಿ ವಹಿಸಿದ್ದಾರೆ. ವಿದ್ಯಾರ್ಥಿಗಳ ಹೆತ್ತವರಿಂದಲೂ ಉತ್ತಮ ಪ್ರೋತ್ಸಾಹ ದೊರಕಿದೆ. ಆದರೆ, ಸಂಸ್ಕೃ, ಭಗವದ್ಗೀತೆ, ಉಪನಿಷದ್‌ಗಳ ಬೋಧನೆಗೆ ಉತ್ತಮ ಶಿಕ್ಷಕರನ್ನು ಹುಡುಕುವುದು ಮಾತ್ರ ಸವಾಲಿನ ವಿಷಯ ಎಂದು ಒನಂಪಿಲ್ಲಿ ಮಹಮ್ಮದ್‌ ಫೈಜಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಾತನಾಡಲು, ಶ್ಲೋಕಗಳನ್ನು ಪಠಿಸಲು ಪ್ರಯತ್ನಿಸುತ್ತಾರೆ. ವಿಶೇಷವೆಂದರೆ, ಈ ಶಿಕ್ಷಣ ಸಂಸ್ಥೆಯ ಸಂಸ್ಕೃತ ತರಗತಿಯಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕರ ನಡುವಿನ ಮಾತುಕತೆಗಳು ಸಂಸ್ಕೃತ ಭಾಷೆಯಲ್ಲಿಯೇ ನಡೆಯುತ್ತದೆ.

ಈ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣ ಇದೇ ಮೊದಲು ದೊರಕುತ್ತದೆ. ಹೀಗಾಗಿ, ಈ ಹಿಂದೆ ಕಲಿತ ಜ್ಞಾನ ಇರುವುದಿಲ್ಲ. ಹೀಗಾಗಿ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ನಿಧಾನವಾಗಿ ಕಲಿಯುತ್ತ ಸಾಗುತ್ತಾರೆ. ಕೇರಳದ ಈ ಶಿಕ್ಷಣ ಸಂಸ್ಥೆಯ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

    ಹಂಚಿಕೊಳ್ಳಲು ಲೇಖನಗಳು