Kerala Lottery: ಅರ್ಹರಿಗೆ ಒಲಿದ ಅದೃಷ್ಟ; 10 ಕೋಟಿ ರೂಪಾಯಿ ಲಾಟರಿ ಗೆದ್ದ ಕೇರಳದ ಪೌರ ಕಾರ್ಮಿಕ ಮಹಿಳೆಯರು
Jul 28, 2023 09:15 AM IST
ಲಾಟರಿ ಗೆದ್ದ ಕೇರಳದ ಪೌರ ಕಾರ್ಮಿಕ ಮಹಿಳೆಯರು
- Kerala municipal workers got lottery: ನಗರವನ್ನು ಸ್ವಚ್ಛಗೊಳಿಸುವ ಕೇರಳದ ಪೌರ ಕಾರ್ಮಿಕ ಮಹಿಳೆಯರು 10 ಕೋಟಿ ರೂಪಾಯಿ ಲಾಟರ್ ಗೆದ್ದಿದ್ದಾರೆ.
ಮಲಪ್ಪುರಂ (ಕೇರಳ): ಕೆಲವು ವಾರಗಳ ಹಿಂದೆ 250 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಖರೀದಿಸಲು ಹಣ ಸಂಗ್ರಹಿಸಲು ನಿರ್ಧರಿಸಿದಾಗ ಕೆಲವರ ಪರ್ಸ್ನಲ್ಲಿ 25 ರೂಪಾಯಿ ಕೂಡ ಇರಲಿಲ್ಲ. ಇವರಲ್ಲಿ ಒಬ್ಬರು ಈ ಅಲ್ಪ ಮೊತ್ತದ ಹಣವನ್ನು ಸಾಲ ಕೂಡ ಪಡೆದಿದ್ದರು. ಇದೀಗ ಅವರಿಗೆ ಜಾಕ್‌ಪಾಟ್ ಹೊಡೆದಿದೆ. ಅಂದಹಾಗೆ ಇವರೆಲ್ಲ ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕ ಮಹಿಳೆಯರು.
ಕೇರಳ ರಾಜ್ಯ ಸರ್ಕಾರದ ಲಾಟರಿ ವಿಭಾಗ ಮಾನ್ಸೂನ್ ಬಂಪರ್ ಆಪರ್ ವಿಜೇತರನ್ನು ಘೋಷಣೆ ಮಾಡಿದ್ದು, ಪರಪ್ಪನಂಗಡಿ ನಗರಸಭೆಯ 'ಹರಿತ ಕರ್ಮ ಸೇನೆ'ಯ 11 ಮಹಿಳೆಯರು ಬಹುಮಾನ ಗೆದ್ದಿದ್ದಾರೆ. ಆ ಬಹುಮಾನದ ಮೊತ್ತ 10 ಕೋಟಿ ರೂಪಾಯಿ.
ನಾವು ಹಣವನ್ನು ಸಂಗ್ರಹಿಸಿ ಲಾಟರಿ ಟಿಕೆಗಳನ್ನು ಖರೀದಿಸಿದ್ದೆವು. ಲಾಟರಿ ಡ್ರಾಗಾಗಿ ಕುತೂಹಲದಿಂದ ಕಾಯುತ್ತಿದ್ದೆವು. ಯಾರೋ ಪಾಲಕ್ಕಾಡ್‌ನಲ್ಲಿ ಮಾರಾಟವಾದ ಟಿಕೆಟ್ ಮೊದಲ ಬಹುಮಾನವನ್ನು ಗೆದ್ದಿದೆ ಹೇಳಿದ್ರು. ಇದನ್ನು ಕೇಳಿ ಬೇಸರವಾಯಿತು. ಆದರೆ ಬಳಿಕ ಮೊದಲ ಬಹುಮಾನ ಗೆದ್ದಿದ್ದು ನಾವೇ ಎಂದು ತಿಳಿದಾಗ ತುಂಬಾ ಸಂತೋಷವಾಯಿತು ಎಂದು ಒಬ್ಬ ಮಹಿಳೆ ಹೇಳಿದ್ದಾರೆ.
"ನಮಗೆ ಜಾಕ್‌ಪಾಟ್ ಹೊಡೆದಿದೆ ಎಂದು ತಿಳಿದಾಗ ಉತ್ಸಾಹ ಮತ್ತು ಸಂತೋಷಕ್ಕೆ ಮಿತಿಯಿರಲಿಲ್ಲ, ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ ಮತ್ತು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣವು ನಮಗೆ ನೆರವಾಗಲಿದೆ" ಎಂದು ಮತ್ತೊಬ್ಬ ಮಹಿಳೆ ಹೇಳಿದ್ದಾರೆ.
ನಗರಸಭೆಯ ಹರಿತ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, "ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ತುಂಬಾ ಶ್ರಮಜೀವಿಗಳು ಮತ್ತು ಅವರ ಕುಟುಂಬಗಳಿಗೆ ಅವರೇ ಆದಾಯದ ಮೂಲವಾಗಿದ್ದರು. ಅನೇಕರಿಗೆ ತೀರಿಸಲು ಸಾಲಗಳಿವೆ. ಮದುವೆಯಾಗಲು ಹೆಣ್ಣುಮಕ್ಕಳಿದ್ದಾರೆ. ಕುಟುಂಬಸ್ಥರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗಿದೆ. ಜೀವನದ ಕಠೋರ ಸತ್ಯಗಳ ವಿರುದ್ಧ ಹೋರಾಡುವ ಅವರು ತುಂಬಾ ಸಣ್ಣ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಈ ಲಾಟರಿ ಹಣ ಅವರಿಗೆ ತುಂಬಾ ಅನುಕೂಲವಾಗಲಿದೆ" ಎಂದರು.
ವಿಭಾಗ