logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Income Tax Returns: ಆದಾಯ ತೆರಿಗೆ ಗಡುವು ಮೀರಿದ್ದೀರಾ?: ಚಿಂತೆ ಬೇಡ, ಇನ್ನೂ ಇದೆ ಅವಕಾಶ

Income Tax Returns: ಆದಾಯ ತೆರಿಗೆ ಗಡುವು ಮೀರಿದ್ದೀರಾ?: ಚಿಂತೆ ಬೇಡ, ಇನ್ನೂ ಇದೆ ಅವಕಾಶ

Nikhil Kulkarni HT Kannada

Aug 14, 2022 11:06 AM IST

google News

ಸಾಂದರ್ಭಿಕ ಚಿತ್ರ

    • 2022-23ರ ಹಣಕಾಸು ವರ್ಷದ ವೈಯಕ್ತಿಕ ತೆರಿಗೆ ಪಾವತಿದಾರರಿಗೆ, ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಕೊನೆಯ ದಿನಾಂಕ ಮುಕ್ತಾಯ ಕಂಡಿದೆ. ಜುಲೈ 31ರೊಳಗಾಗಿ ಆದಾಯ ತೆರಿಗೆ ಸಲ್ಲಿಸಬೇಕಾಗಿತ್ತು. ಆದಾಗ್ಯೂ ತೆರಿಗೆ ಪಾವತಿದಾರರು ಡಿಸೆಂಬರ್.31ರವರೆಗೆ ವಿಳಂಬ ಶುಲ್ಕದೊಂದಿಗೆ ITR ಸಲ್ಲಿಸುವ ಅವಕಾಶ ನೀಡಲಾಗಿದೆ. ನಿಮ್ಮ ಗಳಿಕೆಯ ಸ್ಲ್ಯಾಬ್ ಆಧರಿಸಿ ದಂಡದ ಪ್ರಮಾಣ ನಿಗದಿಪಡಿಸಲಾಗುವುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: 2022-23ರ ಹಣಕಾಸು ವರ್ಷದ ವೈಯಕ್ತಿಕ ತೆರಿಗೆ ಪಾವತಿದಾರರಿಗೆ, ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಕೊನೆಯ ದಿನಾಂಕ ಮುಕ್ತಾಯ ಕಂಡಿದೆ. ಜುಲೈ 31ರೊಳಗಾಗಿ ಆದಾಯ ತೆರಿಗೆ ಸಲ್ಲಿಸಬೇಕಾಗಿತ್ತು. ಆದಾಗ್ಯೂ ತೆರಿಗೆ ಪಾವತಿದಾರರು ಡಿಸೆಂಬರ್.31ರವರೆಗೆ ವಿಳಂಬ ಶುಲ್ಕದೊಂದಿಗೆ ITR ಸಲ್ಲಿಸುವ ಅವಕಾಶ ನೀಡಲಾಗಿದೆ.

ಹೌದು, ಡಿಸೆಂಬರ್.31ರವರೆಗೆ ವಿಳಂಬ ಶುಲ್ಕದೊಂದಿಗೆ ITR ಸಲ್ಲಿಸುವ ಅವಕಾಶವಿದ್ದು, ನಿಮ್ಮ ಗಳಿಕೆಯ ಸ್ಲ್ಯಾಬ್ ಆಧರಿಸಿ ಗರಿಷ್ಠ ಸುಮಾರು 5,000 ರೂ.ವರೆಗೆ ದಂಡ ವಿಧಿಸಲಾಗುವುದು. ಆದರೆ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯೊಳಗೆ ಇದ್ದರೆ, ತಡವಾಗಿ ITR ಸಲ್ಲಿಸಿದರೂ ಯೌುದೇ ದಂಡ ವಿಧಿಸಲಾಗುವುದಿಲ್ಲ. ಹೊಸ ತೆರಿಗೆ ಪದ್ಧತಿಯ ಪ್ರಕಾರ, ವೈಯಕ್ತಿಕ ತೆರಿಗೆದಾರರಿಗೆ ಮೂಲ ವಿನಾಯಿತಿ ಮಿತಿ 2.5 ಲಕ್ಷ ರೂ. ಆಗಿದೆ.

ಅದರಂತೆ 5 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳು ಜುಲೈ 31ರ ನಂತರ ITR ಸಲ್ಲಿಸಿದರೆ, 1,000 ರೂ. ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 5 ಲಕ್ಷ ರೂ. ಸ್ಲ್ಯಾಬ್‌ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ, ವಿಳಂಬ ಶುಲ್ಕ 5,000 ರೂ.ವರೆಗೆ ಇರಲಿದೆ.

ಆಗಸ್ಟ್ 1ರ ನಂತರ ತಮ್ಮ ರಿಟರ್ನ್ ಅನ್ನು ಸಲ್ಲಿಸುವವರು, ಆದಾಯ ತೆರಿಗೆ ಇಲಾಖೆಯು ಇ-ಪರಿಶೀಲನೆ ಅಥವಾ ITR-V ನ ಹಾರ್ಡ್ ಕಾಪಿ ಸಲ್ಲಿಕೆಗಾಗಿ ೩೦ ದಿನಗಳ ಗಡುವನ್ನು ನೀಡಲಾಗಿದೆ. ಇಲ್ಲಿಯವರೆಗೆ ITR ಇ-ಪರಿಶೀಲನೆಗಾಗಿ ಅಥವಾ ITR ಅನ್ನು ಅಪ್‌ಲೋಡ್ ಮಾಡಿದ ದಿನಾಂಕದಿಂದ ಪೋಸ್ಟ್ ಮೂಲಕ ಐಟಿಆರ್-ವಿ ಕಳುಹಿಸಲು 120 ವಿಂಡೋ ನಿಗದಿ ಮಾಡಲಾಗಿತ್ತು.

ಆದಾಯ ತೆರಿಗೆ ಇಲಾಖೆಯು ಕೊನೆಯ ದಿನಾಂಕ ಅಂದರೆ ಜುಲೈ 31ರಂದು 72.42 ಲಕ್ಷ ITR ಸ್ವೀಕರಿಸಿದೆ. ಅದರಂತೆ 2022-23ರ ಹಣಕಾಸು ವರ್ಷದಲ್ಲಿ ಒಟ್ಟು 5.83 ಕೋಟಿ ITR ಫೈಲಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಸ್ಪಷ್ಟನೆ ನೀಡಿದೆ.

ಆದಾಯ ತೆರಿಗೆ ಸಲ್ಲಿಕೆಯು ವಾರ್ಷಿಕ ಪ್ರಕ್ರಿಯೆಯಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಇದು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಆದಾಯ ತೆರಿಗೆ ಪಾವತಿದಾರರೇ ಈ ದೇಶದ ಬೆನ್ನೆಲುಬು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ದೇಶ ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದು, ಸದೃಢ ಭಾರತದ ನಿರ್ಮಾಣಕ್ಕೆ ನಾವೆಲ್ಲಾ ಶಪಥ ಮಾಡಬೇಕಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ