logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lic Ado Recruitment 2023: ಎಲ್‌ಐಸಿಯಲ್ಲಿ ಭರ್ಜರಿ ಉದ್ಯೋಗ ನೇಮಕ ಅಭಿಯಾನ; 9394 ಹುದ್ದೆಗಳ‌ ಭರ್ತಿಗೆ ಅರ್ಜಿ ಸ್ವೀಕಾರ ಶುರು

LIC ADO Recruitment 2023: ಎಲ್‌ಐಸಿಯಲ್ಲಿ ಭರ್ಜರಿ ಉದ್ಯೋಗ ನೇಮಕ ಅಭಿಯಾನ; 9394 ಹುದ್ದೆಗಳ‌ ಭರ್ತಿಗೆ ಅರ್ಜಿ ಸ್ವೀಕಾರ ಶುರು

HT Kannada Desk HT Kannada

Jan 21, 2023 06:35 PM IST

google News

ಎಲ್‌ಐಸಿ ಉದ್ಯೋಗ ನೇಮಕಾತಿ 2023

  • LIC ADO Recruitment 2023: ಎಲ್‌ಐಸಿಯಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಒಟ್ಟು 9394 ಹುದ್ದೆಗಳ ಭರ್ತಿಗೆ ಎಲ್‌ಐಸಿ ಈ ನೇಮಕ ಅಭಿಯಾನ ಕೈಗೊಂಡಿದೆ.

ಎಲ್‌ಐಸಿ ಉದ್ಯೋಗ ನೇಮಕಾತಿ 2023
ಎಲ್‌ಐಸಿ ಉದ್ಯೋಗ ನೇಮಕಾತಿ 2023 (HT file)

ಭಾರತೀಯ ಜೀವ ವಿಮಾ ನಿಗಮ - ಎಲ್‌ಐಸಿಯಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿರುವ ಎಲ್‌ಐಸಿ, ಇಂದಿನಿಂದ ಅರ್ಜಿ ಸ್ವೀಕಾರ ಶುರುಮಾಡಿದೆ. ಒಟ್ಟು 9394 ಹುದ್ದೆಗಳ ಭರ್ತಿಗೆ ಎಲ್‌ಐಸಿ ಈ ನೇಮಕ ಅಭಿಯಾನ ಕೈಗೊಂಡಿದೆ. ಹೆಚ್ಚಿನ ಮಾಹಿತಿ ಮತ್ತುಅರ್ಜಿ ಸಲ್ಲಿಕೆಗೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ licindia.in ಗಮನಿಸಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಶುರು - 21 ಜನವರಿ 2023

ಅರ್ಜಿ ಸಲ್ಲಿಕೆಗೆ ಕೊನೇ ದಿನ - 10 ಫೆಬ್ರವರಿ 2023

ಕಾಲ್‌ ಲೆಟರ್‌ ಡೌನ್‌ಲೋಡ್‌ - 4 ಮಾರ್ಚ್‌ 2023

ಪ್ರಿಲಿಮಿನರಿ ಎಕ್ಸಾಂ ದಿನಾಂಕ - 12 ಮಾರ್ಚ್‌ 2023

ಮೇನ್‌ ಎಕ್ಸಾಂ ದಿನಾಂಕ - 8 ಏಪ್ರಿಲ್‌ 2023

ಖಾಲಿ ಹುದ್ದೆ ಎಲ್ಲಿ ಎಷ್ಟು -ವಿವರ

  • ದಕ್ಷಿಣ ವಲಯ ಕಚೇರಿ - 1516 ಹುದ್ದೆ
  • ಸೌತ್‌ ಸೆಂಟ್ರಲ್‌ ವಲಯ ಕಚೇರಿ - 1408 ಹುದ್ದೆ
  • ಉತ್ತರ ವಲಯ ಕಚೇರಿ - 1216 ಹುದ್ದೆ
  • ನಾರ್ತ್‌ ಸೆಂಟ್ರಲ್‌ ವಲಯ ಕಚೇರಿ - 1033 ಹುದ್ದೆ
  • ಪೂರ್ವ ವಲಯ ಕಚೇರಿ - 1049 ಹುದ್ದೆ
  • ಈಸ್ಟ್‌ ಸೆಂಟ್ರಲ್‌ ವಲಯ ಕಚೇರಿ - 669 ಹುದ್ದೆ
  • ಸೆಂಟ್ರಲ್‌ ವಲಯ ಕಚೇರಿ - 561 ಹುದ್ದೆ
  • ಪಶ್ಚಿಮ ವಲಯ ಕಚೇರಿ - 1942 ಹುದ್ದೆ

ಅರ್ಹತಾ ಮಾನದಂಡಗಳು ಹೀಗಿವೆ

ಶೈಕ್ಷಣಿಕ ಅರ್ಹತೆಗಳನ್ನು ಪರಿಶೀಲಿಸುವುದಕ್ಕಾಗಿ ಅಭ್ಯರ್ಥಿಗಳು ಇಲ್ಲಿರುವ ಈ ವಿಸ್ತೃತ ಅಧಿಸೂಚನೆಯನ್ನು ಕ್ಲಿಕ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಭ್ಯರ್ಥಗಳ ವಯೋಮಿತಿಯು 21 ವರ್ಷದಿಂದ 30 ವರ್ಷ ವಯಸ್ಸಿನೊಳಗೇ ಇರಬೇಕು.

ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

ಎಲ್‌ಐಸಿಯಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ. ಆಯ್ಕೆಯನ್ನು ಆನ್‌ಲೈನ್‌ ಟೆಸ್ಟ್‌ ಮತ್ತು ಅದರಲ್ಲಿ ಉತ್ತೀರ್ಣರಾದ ಅರ್ಹರ ಸಂದರ್ಶನ ನಡೆಯಲಿದೆ. ಅದೇ ರೀತಿ ನೇಮಕಾತಿ ಪೂರ್ವದ ಮೆಡಿಕಲ್‌ ಎಕ್ಸಾಮಿನೇಷನ್‌ನಲ್ಲೂ ಉತ್ತೀರ್ಣರಾಗಬೇಕು.

ಅರ್ಜಿ ಶುಲ್ಕ ವಿವರ ಹೀಗಿದೆ

ಎಲ್‌ಐಸಿಯಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳ ಹೊರತಾದವರು 750 ರೂಪಾಯಿ ಪಾವತಿಸಬೇಕು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಾದರೆ 100 ರೂಪಾಯಿ ಶುಲ್ಕ ಪಾವತಿಸಬೇಕು. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಟ್‌, ಯುಪಿಐ, ಇಂಟರ್‌ನೆಟ್‌ ಬ್ಯಾಂಕಿಂಗ್‌, ಐಎಂಪಿಎಸ್‌, ಕ್ಯಾಶ್‌ ಕಾರ್ಡ್‌/ ಮೊಬೈಲ್‌ ವ್ಯಾಲೆಟ್‌ ಬಳಸಿಕೊಂಡು ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.

ಗಮನಿಸಬಹುದಾ ಸುದ್ದಿ

ಕೈ ಜತೆಗೆ ಕೈ ಜೋಡಿಸಿ ಅಭಿಯಾನದ ಲಾಂಛನ ಬಿಡುಗಡೆ ಮಾಡಿದ ಕಾಂಗ್ರೆಸ್‌

Hath se Hath Jodo: ಹಾತ್‌ ಸೇ ಹಾತ್‌ ಜೋಡೋ ಅಭಿಯಾನಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚಾಲನೆ ನೀಡಲಿದ್ದಾರೆ. ಇದು ಮೊದಲ ಹಂತದಲ್ಲಿ ಗ್ರಾಮ ಮತ್ತು ಬ್ಲಾಕ್‌ ಮಟ್ಟದಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ ಮತ್ತು ಮೂರನೇ ಹಂತದಲ್ಲಿ ರಾಜ್ಯಮಟ್ಟದಲ್ಲಿ ಆಯೋಜನೆಯಾಗಲಿದೆ ಎಂದು ಜೈರಾಮ್‌ ರಮೇಶ್‌ ವಿವರಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಆದಾಯ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗ ಬಯಸುತ್ತಿರುವ 5 ವಿನಾಯಿತಿಗಳು…

Budget 2023:ಮಧ್ಯಮ ವರ್ಗದವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷಿಸಬಹುದಾದ ಆದಾಯ ತೆರಿಗೆ ಸುಧಾರಣೆಗಳ ಕುರಿತು, ಕ್ಲಿಯರ್‌ನ ಅರ್ಚಿತ್ ಗುಪ್ತಾ ಅವರು ಬಜೆಟ್ 2023 ರಲ್ಲಿ ಅವರು ನಿರೀಕ್ಷಿಸುತ್ತಿರುವ ಕೆಳಗಿನ 5 ಪರಿಹಾರಗಳನ್ನು ಈ ರೀತಿ ಪಟ್ಟಿ ಮಾಡಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ