logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಧ್ಯಪ್ರದೇಶ ಲೋಕಸಭಾ ಫಲಿತಾಂಶ; ಬಿಜೆಪಿಗೆ 29ಕ್ಕೆ 29, ನೆಲೆ ಉಳಿಸಲು ಪರದಾಡಿದೆ ಕಾಂಗ್ರೆಸ್

ಮಧ್ಯಪ್ರದೇಶ ಲೋಕಸಭಾ ಫಲಿತಾಂಶ; ಬಿಜೆಪಿಗೆ 29ಕ್ಕೆ 29, ನೆಲೆ ಉಳಿಸಲು ಪರದಾಡಿದೆ ಕಾಂಗ್ರೆಸ್

Umesh Kumar S HT Kannada

Jun 04, 2024 08:54 PM IST

google News

ಮಧ್ಯಪ್ರದೇಶ ಲೋಕಸಭಾ ಫಲಿತಾಂಶ; ಬಿಜೆಪಿಯ ಅಬ್ಬರದ ಅಲೆ, ನೆಲೆ ಉಳಿಸಲು ಪರದಾಡುತ್ತಿದೆ ಕಾಂಗ್ರೆಸ್

  • ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಧ್ಯಪ್ರದೇಶ 29 ಸ್ಥಾನಗಳಿಗೆ 29 ಗೆದ್ದುಕೊಂಡು ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಬಿಜೆಪಿಯ ಅಬ್ಬರದ ಅಲೆಯ ನಡುವೆ ನೆಲೆ ಉಳಿಸಲು ಕಾಂಗ್ರೆಸ್ ಪರದಾಡುತ್ತಿದೆ. ಈ ಸಲದ ಫಲಿತಾಂಶದ ವಿವರ ಹೀಗಿದೆ.

ಮಧ್ಯಪ್ರದೇಶ ಲೋಕಸಭಾ ಫಲಿತಾಂಶ; ಬಿಜೆಪಿಯ ಅಬ್ಬರದ ಅಲೆ, ನೆಲೆ ಉಳಿಸಲು ಪರದಾಡುತ್ತಿದೆ ಕಾಂಗ್ರೆಸ್
ಮಧ್ಯಪ್ರದೇಶ ಲೋಕಸಭಾ ಫಲಿತಾಂಶ; ಬಿಜೆಪಿಯ ಅಬ್ಬರದ ಅಲೆ, ನೆಲೆ ಉಳಿಸಲು ಪರದಾಡುತ್ತಿದೆ ಕಾಂಗ್ರೆಸ್

ಭೋಪಾಲ್: ಲೋಕಸಭಾ ಚುನಾವಣೆಯ ಕೊನೆಯ ಘಟ್ಟದಲ್ಲಿ ಇಂದು (ಜೂನ್ 4) ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 29 ಸ್ಥಾನಗಳಲ್ಲಿ ಗೆಲುವು ದಕ್ಕಿದೆ. ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಮೈತ್ರಿಗೆ ಮುಖಭಂಗವಾಗಿದೆ.

ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19, ಏಪ್ರಿಲ್ 26, ಮೇ 7 ಮತ್ತು ಮೇ 13 ರಂದು ನಾಲ್ಕು ಹಂತಗಳಲ್ಲಿ ಮತದಾನ ನಡೆಯಿತು. ಮಧ್ಯಪ್ರದೇಶದಲ್ಲಿ ಬಿಜೆಪಿಯೇ 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇಲ್ಲಿ ಇಂಡಿಯಾ ಮೈತ್ರಿಯಿಂದ ಕಾಂಗ್ರೆಸ್‌ 27 ಕ್ಷೇತ್ರಗಳಲ್ಲಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ 1 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಮಧ್ಯಪ್ರದೇಶದಲ್ಲಿ ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಈ ಬಾರಿಯೂ ಸೋಲು ನುಂಗಲಾರದ ಕಹಿ ತುತ್ತಾಗಿ ಬಿಟ್ಟಿದೆ.

ಲೋಕಸಭೆ ಚುನಾವಣೆಯು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎರಡಕ್ಕೂ ನಿರ್ಣಾಯಕ ಪರೀಕ್ಷೆಯಾಗಿತ್ತು. ರಾಜ್ಯದ 29 ಲೋಕಸಭಾ ಸ್ಥಾನಗಳ ಫಲಿತಾಂಶ ಕಳೆದ ಸಲದ ಪುನರಾವರ್ತನೆಯಂತೆ ಇದೆ. ಎಕ್ಸಿಟ್ ಪೋಲ್ ನಲ್ಲೂ ಭಾರತೀಯ ಜನತಾ ಪಕ್ಷ (ಬಿಜೆಪಿ) 28 ರಿಂದ 29 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಆದರೆ ಕಾಂಗ್ರೆಸ್ 0 ರಿಂದ 1 ಸ್ಥಾನವನ್ನು ಪಡೆಯಬಹುದು ಎಂಬ ಅಂಶವೇ ಗಮನಸೆಳೆದಿತ್ತು.

ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣೆ; ಹೈಫ್ರೊಫೈಲ್ ಕ್ಷೇತ್ರಗಳಿವು

ಮಧ್ಯಪ್ರದೇಶದ 55 ಜಿಲ್ಲೆಗಳ ಗ್ರೌಂಡ್ ರಿಪೋರ್ಟ್‌ ಮತ್ತು ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎಂಟರಿಂದ ಹತ್ತು ಸ್ಥಾನಗಳಲ್ಲಿ ಕುತೂಹಲಕಾರಿ ಸ್ಪರ್ಧೆ ಕಂಡುಬಂದಿತ್ತು. ಚಿಂದ್ವಾರ, ಮಂಡ್ಲಾ-ಎಸ್‌ಟಿ, ಸಿಧಿ, ಸತ್ನಾ, ಗ್ವಾಲಿಯರ್, ಮೊರೆನಾ, ಭಿಂದ್-ಎಸ್‌ಸಿ, ಖಾರ್ಗೋನ್ ಮತ್ತು ರತ್ಲಾಂಗಳಲ್ಲಿ ಈ ರೀತಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿತ್ತು.

ಮೊರೇನಾ - ಶಿವಮಂಗಲ್ ಸಿಂಗ್ ತೋಮರ್ (ಬಿಜೆಪಿ)

ಛಿಂದ್ವಾರಾ- ನಕುಲ್ ನಾಥ್ (ಕಾಂಗ್ರೆಸ್‌)

ರಾಯಗಡ- ದಿಗ್ವಿಜಯ ಸಿಂಗ್‌ (ಕಾಂಗ್ರೆಸ್‌)

ಗ್ವಾಲಿಯರ್ - ಭರತ್ ಸಿಂಗ್ ಕುಶ್ವಾಹ್ (ಬಿಜೆಪಿ)

ಗುನಾ- ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)

ಸತ್ನಾ - ಗಣೇಶ್ ಸಿಂಗ್ (ಬಿಜೆಪಿ)

ಜಬಲ್‌ಪುರ - ಆಶಿಷ್ ದುಬೆ (ಬಿಜೆಪಿ)

ವಿದಿಷಾ - ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)

ಭೋಪಾಲ್ - ಅರುರ್ಣ ಶ್ರೀವಾಸ್ತವ್ (ಕಾಂಗ್ರೆಸ್)

ಉಜ್ಜಯಿನಿ - ಮಹೇಶ್ ಪಾರ್ಮರ್ (ಕಾಂಗ್ರೆಸ್‌)

ಇಂದೋರ್ - ಶಂಕರ್ ಲಾಲ್‌ವಾನಿ (ಕಾಂಗ್ರೆಸ್‌)

ಲೋಕಸಭಾ ಚುನಾವಣೆ ಮತ್ತು ಮಧ್ಯಪ್ರದೇಶದ ರಾಜಕೀಯ

ಮಧ್ಯಪ್ರದೇಶದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಆರಂಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಪಕ್ಷವಾಗಿ ಜನತಾ ಪಾರ್ಟಿ ಇತ್ತು. ಬಳಿಕ ಬಿಜೆಪಿ ಪರ್ಯಾಯ ಪಕ್ಷವಾಗಿ ಬೆಳೆಯಿತು. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತ ಪರ್ಯಾಯವೆಂಬಂತೆ ಇದೆ. 1980ರಿಂದೀಚೆಗೆ ಬಿಜೆಪಿ ಪ್ರಭಾವ ಹೆಚ್ಚಿದ್ದರೂ, ಸರಳ ಬಹುಮತದೊಂದಿಗೆ ಸರ್ಕಾರ ರಚಿಸುವುದು ಕಂಡುಬಂದಿದೆ. ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕಮಲನಾಥ್, ದಿಗ್ವಿಜಯ್ ಸಿಂಗ್ ಈ ರಾಜ್ಯವನ್ನು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಕಮಲನಾಥ್ ಅವರ ಪುತ್ರ ನಕುಲ್ ನಾಥ್ ಈ ಸಲ ಸಂಸತ್ತಿಗೆ ಸ್ಪರ್ಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್ ಕೂಡ ಸಂಸತ್ತಿಗೆ ಸ್ಪರ್ಧಿಸಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಇತಿಹಾಸ ಗಮನಿಸಿದರೆ 2014ರಲ್ಲಿ 29 ಕ್ಷೇತ್ರಗಳ ಪೈಕಿ 27 ಬಿಜೆಪಿ ಪಾಲಾದರೆ, 2 ಕಾಂಗ್ರೆಸ್ ಗೆದ್ದುಕೊಂಡಿತ್ತು. 2019ರಲ್ಲಿ 28 ಬಿಜೆಪಿ, 1 ಕಾಂಗ್ರೆಸ್ ಗೆದ್ದುಕೊಂಡಿತ್ತು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ