logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ನಿಜ ಜೀವನದ 3 ಇಡಿಯಟ್ಸ್ ಸನ್ನಿವೇಶ; ಬೈಕ್‌ನಲ್ಲಿ ಅಜ್ಜನ ಕೂರಿಸಿ ಆಸ್ಪತ್ರೆಗೆ ಕರೆ ತಂದ ಮೊಮ್ಮಗ

Viral Video: ನಿಜ ಜೀವನದ 3 ಇಡಿಯಟ್ಸ್ ಸನ್ನಿವೇಶ; ಬೈಕ್‌ನಲ್ಲಿ ಅಜ್ಜನ ಕೂರಿಸಿ ಆಸ್ಪತ್ರೆಗೆ ಕರೆ ತಂದ ಮೊಮ್ಮಗ

Umesh Kumar S HT Kannada

Feb 13, 2024 01:11 PM IST

google News

ಮಧ್ಯಪ್ರದೇಶದಲ್ಲಿ ಘಟಿಸಿರುವ ನಿಜ ಜೀವನದ 3 ಇಡಿಯಟ್ಸ್ ಸನ್ನಿವೇಶ ಹೊಂದಿದ ವಿಡಿಯೋ ವೈರಲ್ ಆಗಿದೆ. ಬೈಕ್‌ನಲ್ಲಿ ಅಜ್ಜನ ಕೂರಿಸಿ ಆಸ್ಪತ್ರೆಗೆ ಕರೆ ತಂದ ಮೊಮ್ಮಗನ ದೃಶ್ಯ ವಿಡಿಯೋದಲ್ಲಿದೆ.

  • Viral Video: ಮಧ್ಯಪ್ರದೇಶದಲ್ಲಿ  ನಿಜ ಜೀವನದ 3 ಇಡಿಯಟ್ಸ್ ಸನ್ನಿವೇಶ ಇರುವ ವಿಡಿಯೋ ವೈರಲ್ ಆಗಿದೆ. ಬೈಕ್‌ನಲ್ಲಿ ಅಜ್ಜನ ಕೂರಿಸಿ ಆಸ್ಪತ್ರೆಗೆ ಕರೆ ತಂದ ಮೊಮ್ಮಗನ ದೃಶ್ಯ ವಿಡಿಯೋದಲ್ಲಿದೆ. ಈ ವಿಶೇಷ ಸನ್ನಿವೇಶದ ವರದಿ ಇಲ್ಲಿದೆ. 

ಮಧ್ಯಪ್ರದೇಶದಲ್ಲಿ ಘಟಿಸಿರುವ ನಿಜ ಜೀವನದ 3 ಇಡಿಯಟ್ಸ್ ಸನ್ನಿವೇಶ ಹೊಂದಿದ ವಿಡಿಯೋ ವೈರಲ್ ಆಗಿದೆ. ಬೈಕ್‌ನಲ್ಲಿ ಅಜ್ಜನ ಕೂರಿಸಿ ಆಸ್ಪತ್ರೆಗೆ ಕರೆ ತಂದ ಮೊಮ್ಮಗನ ದೃಶ್ಯ ವಿಡಿಯೋದಲ್ಲಿದೆ.
ಮಧ್ಯಪ್ರದೇಶದಲ್ಲಿ ಘಟಿಸಿರುವ ನಿಜ ಜೀವನದ 3 ಇಡಿಯಟ್ಸ್ ಸನ್ನಿವೇಶ ಹೊಂದಿದ ವಿಡಿಯೋ ವೈರಲ್ ಆಗಿದೆ. ಬೈಕ್‌ನಲ್ಲಿ ಅಜ್ಜನ ಕೂರಿಸಿ ಆಸ್ಪತ್ರೆಗೆ ಕರೆ ತಂದ ಮೊಮ್ಮಗನ ದೃಶ್ಯ ವಿಡಿಯೋದಲ್ಲಿದೆ.

ಅಮೀರ್ ಖಾನ್ ಅಭಿನಯದ ಥ್ರೀ ಇಡಿಯಟ್ಸ್ ಸಿನಿಮಾ ನೋಡಿದ್ದೀರಾ? ನೋಡಿದ್ದರೆ ಖಚಿತವಾಗಿ ಈ ವೈರಲ್ ವಿಡಿಯೋ ನೋಡಿದಾಗ ಸಿನಿಮಾದ ದೃಶ್ಯ ನೆನಪಿಗೆ ಬರುವುದು ಖಚಿತ.

ಥ್ರೀ ಇಡಿಯಟ್ಸ್ ಸಿನಿಮಾದಲ್ಲಿ ಒಂದು ದೃಶ್ಯವಿದೆ. ರಾಂಚೋ (ಅಮೀರ್ ಖಾನ್) ಸ್ನೇಹಿತ ರಾಜು ಅವರ (ಶರ್ಮನ್ ಜೋಶಿ) ತಂದೆಯನ್ನು ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯ ಅದು. ಮಧ್ಯಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಅನಾರೋಗ್ಯ ಪೀಡಿತ ಅಜ್ಜನನ್ನು ಮಧ್ಯೆ ಕೂರಿಸಿಕೊಂಡು ಆಸ್ಪತ್ರೆಗೆ ಧಾವಿಸಿದ್ದಲ್ಲದೆ, ಬೈಕ್ ಅನ್ನು ಎಮರ್ಜೆನ್ಸಿ ವಾರ್ಡ್‌ಗೆ ಪ್ರವೇಶಿಸಿದ್ದಾನೆ.

ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಹಲವಾರು ಜನರು ಇದನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶೇರ್ ಮಾಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, "3 ಈಡಿಯಟ್ಸ್ ಚಲನಚಿತ್ರದ ದೃಶ್ಯವಾ ಇದು?, ಇಲ್ಲ! ಮಧ್ಯಪ್ರದೇಶ: ಪ್ರಜ್ಞಾಹೀನ ಅಜ್ಜನೊಂದಿಗೆ ಬೈಕ್ನಲ್ಲಿ ಆಸ್ಪತ್ರೆಯ ತುರ್ತು ವಾರ್ಡ್‌ಗೆ ನುಗ್ಗಿದ ವ್ಯಕ್ತಿ! ಎಂಬ ಶೀರ್ಷಿಕೆ ನೀಡಿದ್ದಾರೆ.

ಮಧ್ಯ ಪ್ರದೇಶದಲ್ಲಿ ನಡೆದ ಘಟನೆಯ ಈ ವೀಡಿಯೊವನ್ನು ನೋಡಿ:

ವೀಡಿಯೊದಲ್ಲಿರುವ ಪ್ರಕಾರ, ವ್ಯಕ್ತಿಯು ತುರ್ತು ವಾರ್ಡ್‌ನ ಮಧ್ಯದಲ್ಲಿ ಬೈಕ್ ತಗೊಂಡು ಹೋಗಿ ನಿಲ್ಲಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ ಅನಾರೋಗ್ಯ ಪೀಡಿತ ಅಜ್ಜನನ್ನು ಬೈಕ್‌ನಿಂದ ಇಳಿಸಲು ನೆರವಾಗಿದ್ದಾನೆ. ಬೈಕ್ ಯಾಕೆ ಒಳಗೆ ತಂದ್ರಿ ಎಂದು ಒಬ್ಬ ವ್ಯಕ್ತಿಯು ಬೈಕ್ ಸವಾರನನ್ನು ಪ್ರಶ್ನಿಸಿದ್ದನ್ನೂ ಆಲಿಸಬಹುದು.

ಒಂದು ಹಂತದಲ್ಲಿ, ಆ ವ್ಯಕ್ತಿ ತಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ. ಇದಕ್ಕೆ ಉತ್ತರಿಸಿದ ಇನ್ನೊಬ್ಬ ವ್ಯಕ್ತಿ, ಆ ವ್ಯಕ್ತಿಗೆ ಬೈಕ್ ಅನ್ನು ಒಳಗೆ ತರಲು ಇದು ನೆಪವಲ್ಲ ಎಂದು ಹೇಳುತ್ತಾರೆ.

ಆತ ತನ್ನ ಬೈಕಿನೊಂದಿಗೆ ಹೊರಡುವ ದೃಶ್ಯದೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಆಸ್ಪತ್ರೆಯ ತುರ್ತು ವಾರ್ಡ್ ಒಳಗೆ ಬೈಕ್ ತಂದಿದ್ದಕ್ಕಾಗಿ ಸದರಿ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

(This copy first appeared in Hindustan Times Kannada website. To read more like this please logon to kannada.hindustantime.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ