Nagaland assembly polls: ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ; ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ, ಕಣದಲ್ಲಿದ್ದಾರೆ 183 ಅಭ್ಯರ್ಥಿಗಳು
Feb 20, 2023 04:11 PM IST
ಮುಂಬರುವ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಫೆಬ್ರವರಿ 6 ರಂದು ಅಭ್ಯರ್ಥಿಯಾಗಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ನಾಮಪತ್ರ ಸಲ್ಲಿಸಿದರು
Nagaland assembly polls: ಸ್ಪರ್ಧಾ ಕಣದಲ್ಲಿರುವ 183 ಅಭ್ಯರ್ಥಿಗಳ ಪೈಕಿ ನಾಲ್ವರಷ್ಟೇ ಮಹಿಳೆಯರು. ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಇಬ್ಬರು ಮಹಿಳೆಯರನ್ನು ಕಣಕ್ಕೆ ಇಳಿಸಿದರೆ, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಬ್ಬರು ಮಹಿಳೆಯನ್ನು ಕಣಕ್ಕೆ ಇಳಿಸಿವೆ.
ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫೆ.27ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಿದ್ದ 225 ಅಭ್ಯರ್ಥಿಗಳ ಪೈಕಿ 183 ನಾಮಪತ್ರ ಸಿಂಧುವಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ವಿ.ಶಶಾಂಕ್ ಶೇಖರ್ ಘೋಷಿಸಿದ್ದಾರೆ.
ನಾಗಾಲ್ಯಾಂಡ್‌ನ ಅಕುಲುಟೊ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಉಮೇದುವಾರಿಕೆ ಹಿಂಪಡೆಯಲು ಕೊನೇ ದಿನವಾಗಿತ್ತು.
ಸ್ಪರ್ಧಾ ಕಣದಲ್ಲಿರುವ 183 ಅಭ್ಯರ್ಥಿಗಳ ಪೈಕಿ ನಾಲ್ವರಷ್ಟೇ ಮಹಿಳೆಯರು. ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಇಬ್ಬರು ಮಹಿಳೆಯರನ್ನು ಕಣಕ್ಕೆ ಇಳಿಸಿದರೆ, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಬ್ಬರು ಮಹಿಳೆಯನ್ನು ಕಣಕ್ಕೆ ಇಳಿಸಿವೆ.
ಮುಖ್ಯಮಂತ್ರಿ ನೆಫಿಯು ರಿಯೋ ತಮ್ಮ ಪಕ್ಷ ಎನ್‌ಡಿಪಿಪಿಯಿಂದ 60 ಕ್ಷೇತ್ರಗಳ ಪೈಕಿ 40ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಬಿಜೆಪಿ ಜತೆಗೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದ್ದು, 20 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ 23 ಅಭ್ಯರ್ಥಿಗಳನ್ನು, ಪ್ರಾದೇಶಿಕ ಪಕ್ಷ ನಾಗಾ ಪೀಪಲ್ಸ್ ಫ್ರಂಟ್ 22, ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) 15 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ತಲಾ 12 ಸ್ಥಾನಗಳಲ್ಲಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಟವಳೆ) 9, ಸಂಯುಕ್ತ ಜನತಾ ದಳ 7, ಆರ್‌ಜೆಡಿ 3, ಸಿಪಿಐ ಮತ್ತು ರೈಸಿಂಗ್ ಪೀಪಲ್ಸ್ ಪಾರ್ಟಿ ತಲಾ ಒಬ್ಬ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. 19 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇಲ್ಲಿ ಚುನಾವಣೆ ಫೆ.27ರಂದು ನಡೆಯಲಿದ್ದು, ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದೆ.
ಗಮನಿಸಬಹುದಾದ ಸುದ್ದಿ
ಮೂರು ರಾಜ್ಯಗಳಲ್ಲಿ ವರ್ಷದ ಮೊದಲ ವಿಧಾನಸಭೆ ಚುನಾವಣೆಗಳಿಗೆ ವೇದಿಕೆ ಸಜ್ಜು: ಈಶಾನ್ಯದತ್ತ ದೇಶದ ಚಿತ್ತ
ಹೊಸ ವರ್ಷ (2023)ದ ಆರಂಭದಲ್ಲೇ ಚುನಾವಣಾ ಜ್ವರ ಏರತೊಡಗಿದೆ. ದೇಶದ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಲ್ಯಾಂಡ್ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ತ್ರಿಪುರಾದಲ್ಲಿ ಫೆಬ್ರವರಿ 16ರಂದು ಮತದಾನ ನಡೆಯಲಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಫೆಬ್ರವರಿ 27ರಂದು ಮತದಾನ ನಡೆಯಲಿದೆ. ಮಾರ್ಚ್ 2ರಂದು ಮೂರೂ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ವಿವರ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ಈ ಚುನಾವಣೇಲಿ ಕಾಂಗ್ರೆಸ್ ಒಂಟಿಯಾಗಿ ಏನೂ ಮಾಡಲಾಗದು; ಪ್ರತಿಪಕ್ಷಗಳು ಕೈ ಜೋಡಿಸಬೇಕೆಂದ ಕೆ.ಸಿ.ವೇಣುಗೋಪಾಲ್
Lok Sabha polls 2024: ಬಿಜೆಪಿ ವಿರೋಧಿ ಮತಗಳು ಹರಿದು ಹಂಚಿಹೋಗಬಾರದು. ಅದನ್ನು ತಡೆಯುವುದೇ ಪ್ರತಿಪಕ್ಷಗಳ ಒಗ್ಗಟ್ಟಿಗೆ ಬುನಾದಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ ಹೇಳಿದರು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ಶಿವಸೇನಾ ವೆಬ್‌ಸೈಟ್ ಡಿಲೀಟ್, ಟ್ವಿಟರ್ ಖಾತೆ ಹೆಸರು ಬದಲು
Uddhav Thackeray vs Shinde: ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಡುವೆ ಹೊಸ ಹಗ್ಗಜಗ್ಗಾಟ ಪ್ರಾರಂಭವಾಗಿದೆ. ಭಾರತೀಯ ಚುನಾವಣಾ ಆಯೋಗವು ಶಿಂಧೆ ಬಣವನ್ನು ನೈಜ ಶಿವಸೇನಾ ಎಂದು ಅಂಗೀಕರಿಸಿ ಅದಕ್ಕೆ ಹೆಸರು, ಬಿಲ್ಲು ಮತ್ತು ಬಾಣದ ಚಿಹ್ನೆ ಬಳಸುವ ಅಧಿಕಾರ ನೀಡಿತ್ತು. ಇದು ಉದ್ಧವ್ ಬಣವನ್ನು ಕಂಗೆಡಿಸಿದೆ. ಶಿವಸೇನಾ ವೆಬ್‌ಸೈಟ್ ಡಿಲೀಟ್ ಮಾಡಿದ ಉದ್ಧವ್ ಬಣ, ಟ್ವಿಟರ್ ಹ್ಯಾಂಡಲ್‌ನಲ್ಲಿ ಹೆಸರು ಬದಲಾಯಿಸಿದೆ. ವಿವರ ವರದಿಗೆ ಇಲ್ಲಿ ಕ್ಲಿಕ್ ಮಾಡಿ