logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  National Awards To Teachers 2022: ಸೆ. 5 ಶಿಕ್ಷಕರ ದಿನದಂದು 46 ಶಿಕ್ಷಕ-ಶಿಕ್ಷಕಿಯರಿಗೆ ರಾಷ್ಟ್ರಪತಿಯವರಿಂದ ರಾಷ್ಟ್ರೀಯ ಪ್ರಶಸ್ತಿ

National Awards To Teachers 2022: ಸೆ. 5 ಶಿಕ್ಷಕರ ದಿನದಂದು 46 ಶಿಕ್ಷಕ-ಶಿಕ್ಷಕಿಯರಿಗೆ ರಾಷ್ಟ್ರಪತಿಯವರಿಂದ ರಾಷ್ಟ್ರೀಯ ಪ್ರಶಸ್ತಿ

Praveen Chandra B HT Kannada

Aug 25, 2022 08:57 PM IST

google News

ರಾಷ್ಟ್ರಪತಿ ದ್ರೌಪದಿ ಮುರ್ಮು (HT FIle Photo)

    • ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆಯಂದು (Teachers Day 2022) ದೇಶದ ಸುಮಾರು 46 ಶಿಕ್ಷಕ-ಶಿಕ್ಷಕಿಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ " ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ -೨೦೨೨ (National Awards To Teachers 2022) ಪಡೆಯಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು (HT FIle Photo)
ರಾಷ್ಟ್ರಪತಿ ದ್ರೌಪದಿ ಮುರ್ಮು (HT FIle Photo) (HT_PRINT)

ನವದೆಹಲಿ: ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆಯಂದು (Teachers Day 2022) ದೇಶದ ಸುಮಾರು 46 ಶಿಕ್ಷಕ-ಶಿಕ್ಷಕಿಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ " ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ -೨೦೨೨ (National Awards To Teachers 2022) ಪಡೆಯಲಿದ್ದಾರೆ.

ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್‌, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಶಿಕ್ಷಕ-ಶಿಕ್ಷಕಿಯರು ಈ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ನವದೆಹಲಿಯ ವಿಗ್ಯಾನ್‌ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ದೂರದರ್ಶನ ಮತ್ತು ಶಿಕ್ಷಣ ಸಚಿವಾಲಯದ ಸ್ವಯಂ ಪ್ರಭ ಚಾನೆಲ್‌ಗಳಲ್ಲಿ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

ಪ್ರತಿವರ್ಷ ಸೆಪ್ಟೆಂಬರ್‌ ಐದರಂದು ಶಿಕ್ಷಣ ಸಚಿವಾಲಯವು ವಿಜ್ಯಾನ್‌ ಭವನ್‌ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ದೇಶದ ಅತ್ಯುತ್ತಮ ಶಿಕ್ಷಕ-ಶಿಕ್ಷಕಿಯರು ಈ ಪ್ರಶಸ್ತಿ ಪಡೆಯುತ್ತಾರೆ. ಪಾರದರ್ಶಕ ಮತ್ತು ಆನ್‌ಲೈನ್‌ ಮೂರು ಹಂತದ ಆಯ್ಕೆ ಪ್ರಕ್ರಿಯೆ ಮೂಲಕ ಅತ್ಯುತ್ತಮ ಶಿಕ್ಷಕ-ಶಿಕ್ಷಕಿಯರನ್ನು ಈ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗುತ್ತಾರೆ.

ದೇಶದ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಮತ್ತು ಮಕ್ಕಳ ಬದುಕಿನ ಸುಧಾರಣೆಗೆ ಗಣನೀಯ ಸೇವೆ ಸಲ್ಲಿಸಿದ ಶಿಕ್ಷಕರ ಬದ್ಧತೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಶಿಕ್ಷಕರ ದಿನಾಚರಣೆ ಯಾವಾಗ ಮತ್ತು ಏಕೆ?

ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು(Teachers Day ) ಸಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಇದು ಶಿಕ್ಷಕರಿಗೆ ಗೌರವ, ಅಭಿನಂದನೆ, ಶುಭಹಾರೈಕೆ ಹೇಳುವ ದಿನ. ಇದು ಶಿಕ್ಷಕ, ವಿದ್ವಾಂಸ ಮತ್ತು ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಅವರು ದೇಶದ ಮೊದಲ ಉಪ ರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯೂ ಹೌದು. ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನ ಎಂದು ದೇಶದ ಎಲ್ಲೆಡೆ ಆಚರಿಸಲಾಗುತ್ತದೆ. ಇದೇ ದಿನದಂದು ರಾಷ್ಟ್ರಪತಿಯವರ ಕೈಯಿಂದ ದೇಶದ 26 ಅತ್ಯುತ್ತಮ ಶಿಕ್ಷಕರು ರಾಷ್ಟ್ರೀಯ ಪ್ರಶಸ್ತಿ ಪಡೆಯಲಿದ್ದಾರೆ.

ಸರ್ವಪಲ್ಲಿ ರಾಧಾಕೃಷ್ಣನ್ ಬಗ್ಗೆ

ಇವರು ದೇಶದ ಎರಡನೇ ರಾಷ್ಟ್ರಪತಿ ಮತ್ತು ಮೊದಲ ಉಪರಾಷ್ಟ್ರಪತಿ. 1962 ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ರಾಷ್ಟ್ರಪತಿಯಾದರು. ಅವರ ಕೆಲ ವಿದ್ಯಾರ್ಥಿಗಳು ಹಾಗೂ ಗೆಳೆಯರು ಅವರನ್ನು ಭೇಟಿಯಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ಕೇಳಿದ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುವ ಬದಲು ಶಿಕ್ಷಕರ ದಿನ ಆಚರಿಸಿದರೆ ಹೆಚ್ಚು ಸಂತೋಷವಾಗುತ್ತದೆ ಎಂದಿದ್ದರು. ಬಳಿಕ ಸೆಪ್ಟೆಂಬರ್‌ 5ನ್ನು ಶಿಕ್ಷಕರ ದಿನಾಚರಣೆಯೆಂದು ಆಚರಿಸಲಾಗುತ್ತದೆ.

ಸರ್ವಪಲ್ಲಿ ರಾಧಾಕೃಷ್ಣನ್ ಸಪ್ಟೆಂಬರ್ 5, 1888 ರಂದು ತಮಿಳುನಾಡಿನ ತಿರುಮಾಣಿ ಹಳ್ಳಿಯ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದರು. ಅವರು ಬಾಲ್ಯದಲ್ಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಹಾಗೂ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿದ್ದರು. ರಾಧಾಕೃಷ್ಣನ್ 1975 ಏಪ್ರಿಲ್ 17 ರಂದು ಚೆನ್ನೈನಲ್ಲಿ ನಿಧನ ಹೊಂದಿದರು.

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳು ತಮ್ಮ ರಾಜ್ಯದ ಶಿಕ್ಷಕ-ಶಿಕ್ಷಕಿಯರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಪ್ರತಿವರ್ಷ ಅತ್ಯುತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ನೀಡುತ್ತದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ