logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /   Air Force Day: ಐಎಎಫ್‌ ಯೋಧರಿಗೆ ಹೊಸ ಸಮವಸ್ತ್ರ, ಮುಂದಿನ ವರ್ಷದಿಂದ ಮಹಿಳೆಯರಿಗೂ ಅಗ್ನಿವೀರ್‌ಗೆ ಸೇರಲು ಅವಕಾಶ

Air Force Day: ಐಎಎಫ್‌ ಯೋಧರಿಗೆ ಹೊಸ ಸಮವಸ್ತ್ರ, ಮುಂದಿನ ವರ್ಷದಿಂದ ಮಹಿಳೆಯರಿಗೂ ಅಗ್ನಿವೀರ್‌ಗೆ ಸೇರಲು ಅವಕಾಶ

HT Kannada Desk HT Kannada

Oct 08, 2022 01:00 PM IST

google News

ಐಎಎಫ್‌ ಯೋಧರಿಗೆ ಹೊಸ ಸಮವಸ್ತ್ರ, ಮಹಿಳೆಯರಿಗೂ ಅಗ್ನಿವೀರ್‌ಗೆ ಸೇರಲು ಅವಕಾಶ

    • ವಾಯುಪಡೆ ದಿನದಂದು ಐಎಎಫ್‌ ಯೋಧರಿಗೆ ಹೊಸ ಸಮವಸ್ತ್ರ ಬಿಡುಗಡೆ ಮಾಡಲಾಗಿದೆ. ಜತೆಗೆ, ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆಯನ್ನೂ ಸೇರ್ಪಡೆ, ಮಹಿಳಾ ಅಗ್ನಿವೀರ್‌ ಸೇರ್ಪಡೆ ಸೇರಿದಂತೆ ಹಲವು ಹೊಸ ಘೋಷಣೆಗಳನ್ನು ಮಾಡಲಾಗಿದೆ.
ಐಎಎಫ್‌ ಯೋಧರಿಗೆ ಹೊಸ ಸಮವಸ್ತ್ರ, ಮಹಿಳೆಯರಿಗೂ ಅಗ್ನಿವೀರ್‌ಗೆ ಸೇರಲು ಅವಕಾಶ
ಐಎಎಫ್‌ ಯೋಧರಿಗೆ ಹೊಸ ಸಮವಸ್ತ್ರ, ಮಹಿಳೆಯರಿಗೂ ಅಗ್ನಿವೀರ್‌ಗೆ ಸೇರಲು ಅವಕಾಶ

ಚಂಡೀಗಢ: ಇಲ್ಲಿನ ಸುಖ್ನಾ ಲೇಕ್‌ ಕಾಂಪ್ಲೆಕ್ಸ್‌ನ ಫ್ಲೈ ಫಾಸ್ಟ್‌ನಲ್ಲಿ ಭಾರತೀಯ ವಾಯುಪಡೆ ದಿನಾಚರಣೆ ವೈಭವವಿಂದ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಹೊಸ ಯೋಜನೆಗಳನ್ನೂ ಘೋಷಿಸಲಾಗಿದೆ. ವಾಯುಪಡೆ ದಿನದಂದು ಐಎಎಫ್‌ ಯೋಧರಿಗೆ ಹೊಸ ಸಮವಸ್ತ್ರ ಬಿಡುಗಡೆ ಮಾಡಲಾಗಿದೆ. ಜತೆಗೆ, ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆಯನ್ನೂ ಸೇರ್ಪಡೆ, ಮಹಿಳಾ ಅಗ್ನಿವೀರ್‌ ಸೇರ್ಪಡೆ ಸೇರಿದಂತೆ ಹಲವು ಹೊಸ ಘೋಷಣೆಗಳನ್ನು ಮಾಡಲಾಗಿದೆ.

ವಾಯುಪಡೆ ದಿನದಂದ ಐವರು ಐಎಎಫ್‌ ಅಧಿಕಾರಿಗಳು ಹೊಸ ಯೂನಿಫಾರ್ಮ್‌ ಧರಿಸಿ ಪಥಸಂಚಲನ ನಡೆಸಿದ್ದಾರೆ. ನೂತನ ಟಿ ಶರ್ಟ್‌ ವಿನ್ಯಾಸ ಆಕರ್ಷಕವಾಗಿದ್ದು, ನೌಕಾಪಡೆಗೆ ಹೊಸ ಗತ್ತು ತಂದಿದೆ. ಯುದ್ಧ ಭೂಮಿಯ ಅವಶ್ಯಕತೆಗೆ ತಕ್ಕಂತೆ ನೂತನ ಸಮವಸ್ತ್ರವನ್ನು ವಿನ್ಯಾಸ ಮಾಡಲಾಗಿದೆ. ಕಠಿಣ ಮಿಷನ್‌ಗಳಲ್ಲಿ ಶತ್ರುಪಡೆಗೆ ತಿಳಿಯದಂತೆ ದಾಳಿ ನಡೆಸುವ ಸಂದರ್ಭದಲ್ಲಿ ಇಂತಹ ಮುಂದುವರೆದ ವಿನ್ಯಾಸದ ಸಮವಸ್ತ್ರಗಳಿಂದ ಹೆಚ್ಚಿನ ಅನುಕೂಲವಾಗಲಿದೆ.

ಇದೇ ಸಮಯದಲ್ಲಿ ವಾಯುಪಡೆಗೆ ವೆಪನ್‌ ಸಿಸ್ಟಮ್‌ ಶಾಖೆಯನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ವಾಯುಪಡೆಗೆ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುವ ಈ ವಿಭಾಗವು ಸಾಕಷ್ಟು ಉದ್ಯೋಗಾವಕಾಶವನ್ನೂ ಸೃಷ್ಟಿಸಲಿದೆ. ಈ ಶಾಖೆ ಆರಂಭದಿಂದ ಸರಕಾರಕ್ಕೆ 3,400 ಕೋಟಿ ರೂ. ಉಳಿತಾಯವಾಗಲಿದೆ.

ಮುಂದಿನ ವರ್ಷದಿಂದ ಮಹಿಳೆಯರೂ ಅಗ್ನಿವೀರ್‌ಗೆ ಸೇರಲು ಅವಕಾಶ ನೀಡುವುದಾಗಿ ಪ್ರಕಟಿಸಲಾಯಿತು. ಅಗ್ನಿಪಥ್ ಯೋಜನೆಯ ಮೂಲಕ ಭಾರತೀಯ ವಾಯುಪಡೆಗೆ ವಾಯು ಯೋಧರನ್ನು ಸೇರ್ಪಡೆಗೊಳಿಸುವುದು ನಮ್ಮ ಮುಂದಿರುವ ಒಂದು ಸವಾಲಾಗಿದೆ ಎಂದು ಹೇಳಿದರು. ಮುಖ್ಯವಾಗಿ, ಇದು ಭಾರತದ ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಆ ಸೇವೆಯನ್ನು ರಾಷ್ಟ್ರದ ಸೇವೆಗೆ ಬಳಸಿಕೊಳ್ಳಲು ನಮಗೆ ಒಂದು ಅವಕಾಶವಾಗಿದೆ ಎಂದು ಐಎಎಫ್ ಮುಖ್ಯಸ್ಥ ವಿಆರ್ ಚೌಧರಿ ಹೇಳಿದ್ದಾರೆ.

ಐಎಎಫ್‌ ಆರಂಭವಾಗಿ ಇಂದಿಗೆ 90 ವರ್ಷಗಳಾಗಿವೆ. ಇಂದು ದ್ರೌಪದಿ ಮುರ್ಮು ಉಪಸ್ಥಿತಿಯಲ್ಲಿ ಚಂಡೀಗಢದಲ್ಲಿ ವಾಯುಪಡೆ ದಿನದ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ವಾಯುಪಡೆಯ ಸಾಹಸಿಗಳು ಆಕಾಶದಲ್ಲಿ ಉಕ್ಕಿನ ಹಕ್ಕಿಗಳ ಜತೆ ಸಾಹಸ ಪ್ರದರ್ಶಿಸಲಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್‌ 8ರಂದು ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ವಾಯುದಳದ ಅಭೂತಪೂರ್ವ ಸಾಧನೆಯ ಸಂಕೇತವಾಗಿ ಈ ದಿನವನ್ನುಸಂಭ್ರಮದಿಂದ ಆಚರಿಸಲಾಗುತ್ತಿದೆ.ಈ ಬಾರಿ 90ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.

1932ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯು ಬ್ರಿಟಿಷ್‌ ಅಧಿಪತ್ಯ ಇರುವಾಗಲೇ ಸೇನೆಗೆ ಸೇರ್ಪಡೆಯಾಯಿತು. ಮೊದಲಿಗೆ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ರಾಯಲ್‌ ಪದ ತೆಗೆದು ಹಾಕಲಾಯಿತು. ವಾಯುಸೇನೆಯ ನಂಬರ್‌ ಒನ್‌ ಸ್ಕ್ವಾಡ್ರನ್‌ 1933ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದಿದ್ದು ಕೇವಲ ಐದು ಪೈಲಟ್‌ಗಳು. ಕೇವಲ ನಾಲ್ಕು ವಿಮಾನಗಳನ್ನು ಹೊಂದಿದ್ದ ವಾಯುಪಡೆ ಈಗ 2 ಸಾವಿರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿದೆ. ವಾಯುಪಡೆಯಲ್ಲಿ 1,70 ಸಾವಿರಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. 1,400 ಕ್ಕೂ ಹೆಚ್ಚು ವಿಮಾನಗಳಿವೆ. ಭಾರತದ ರಾಷ್ಟ್ರಪತಿಗಳು ವಾಯುಪಡೆಯ ದಂಡನಾಯಕರಾಗಿರುತ್ತಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ