logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Rule For Irctc Ticket Booking: ರೈಲ್ವೆಟಿಕೆಟ್ ಬುಕ್ಕಿಂಗ್ ಹೊಸ ನಿಯಮ, 2 ಸಣ್ಣ ಕೆಲಸ ಮಾಡದೇ ಇದ್ದರೆ ಟಿಕೆಟ್‌ ಬುಕ್‌ ಮಾಡಲಾಗದು ನೋಡಿ

New Rule for IRCTC Ticket Booking: ರೈಲ್ವೆಟಿಕೆಟ್ ಬುಕ್ಕಿಂಗ್ ಹೊಸ ನಿಯಮ, 2 ಸಣ್ಣ ಕೆಲಸ ಮಾಡದೇ ಇದ್ದರೆ ಟಿಕೆಟ್‌ ಬುಕ್‌ ಮಾಡಲಾಗದು ನೋಡಿ

Nov 11, 2022 06:55 AM IST

New Rule for IRCTC Ticket Booking: ದೂರ ಪ್ರಯಾಣಕ್ಕೆ ಅನೇಕರು ರೈಲನ್ನೇ ಆಯ್ಕೆ ಮಾಡುತ್ತಾರೆ. ಕಡಿಮೆ ವೆಚ್ಚದ ಸುರಕ್ಷಿತ ಪ್ರಯಾಣ ಎಂಬುದೇ ಇದಕ್ಕೆ ಕಾರಣ. ನೀವು ಪದೇಪದೆ ರೈಲು ಪ್ರಯಾಣಿಸುವವರಾಗಿದ್ದರೆ, ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿನ ಈ ಬದಲಾವಣೆಯನ್ನು ನೀವು ತಿಳಿದಿರಲೇಬೇಕು.

  • New Rule for IRCTC Ticket Booking: ದೂರ ಪ್ರಯಾಣಕ್ಕೆ ಅನೇಕರು ರೈಲನ್ನೇ ಆಯ್ಕೆ ಮಾಡುತ್ತಾರೆ. ಕಡಿಮೆ ವೆಚ್ಚದ ಸುರಕ್ಷಿತ ಪ್ರಯಾಣ ಎಂಬುದೇ ಇದಕ್ಕೆ ಕಾರಣ. ನೀವು ಪದೇಪದೆ ರೈಲು ಪ್ರಯಾಣಿಸುವವರಾಗಿದ್ದರೆ, ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿನ ಈ ಬದಲಾವಣೆಯನ್ನು ನೀವು ತಿಳಿದಿರಲೇಬೇಕು.
ಕರೋನಾ ಸಾಂಕ್ರಾಮಿಕದ ನಂತರ ರೈಲ್ವೆ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪರಿಷ್ಕರಣೆಗಳಾಗಿವೆ. IRCTC ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡುವ ಮೊದಲು ನಿಮ್ಮ ಖಾತೆಯನ್ನು ನೀವು ಪರಿಶೀಲಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಬಳಕೆದಾರರು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸಬೇಕಾಗುತ್ತದೆ. ಇದು ಇಲ್ಲದೆ ನೀವು ಟಿಕೆಟ್ ಕಾಯ್ದಿರಿಸಲು ಸಾಧ್ಯವಿಲ್ಲ.
(1 / 4)

ಕರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ IRCTC ಖಾತೆಗಳಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡದ ಅನೇಕ ಬಳಕೆದಾರರು ಇದ್ದಾರೆ. ಅಂತಹವರಿಗೆ ಮಾತ್ರ ಈ ಹೊಸ ಪರಿಶೀಲನಾ ನಿಯಮವನ್ನು ಇಲ್ಲಿ ನೆನಪಿಸುವ ಮಾಹಿತಿಯಾಗಿ ನೀಡಲಾಗಿದೆ. ನೀವು ದೀರ್ಘಕಾಲದವರೆಗೆ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಖರೀದಿಸದಿದ್ದರೆ, ದಯವಿಟ್ಟು ಮೊದಲು ನಿಮ್ಮ ಖಾತೆಯನ್ನು ಪರಿಶೀಲಿಸಿ.
(2 / 4)

IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಪರಿಶೀಲನೆ ವಿಂಡೋದ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಇಲ್ಲಿ ನಮೂದಿಸಿ. ಎರಡೂ ವಿವರಗಳನ್ನು ನಮೂದಿಸಿದ ನಂತರ, 'ಪರಿಶೀಲಿಸು'(ವೆರಿಫೈ) ಬಟನ್ ಕ್ಲಿಕ್ ಮಾಡಿ.
(3 / 4)

'ಪರಿಶೀಲಿಸು' (ವೆರಿಫೈ) ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್‌ನಲ್ಲಿ OTP ಬರುತ್ತದೆ, ಅದರೊಂದಿಗೆ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ. ಅದೇ ರೀತಿ, ಇಮೇಲ್ ಐಡಿಯಲ್ಲಿ ಬರುವ ಕೋಡ್‌ನೊಂದಿಗೆ ಮೇಲ್ ಐಡಿಯನ್ನು ಪರಿಶೀಲಿಸಿ. ಈಗ ನೀವು ನಿಮ್ಮ ಖಾತೆಯಿಂದ ಯಾವುದೇ ರೈಲು ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ ಮಾಡಬಹುದು.
(4 / 4)

    ಹಂಚಿಕೊಳ್ಳಲು ಲೇಖನಗಳು