logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  New Zealand Earthquake: ನ್ಯೂಜಿಲ್ಯಾಂಡ್‌ನಲ್ಲಿ ಭೂಕಂಪ, 6.1 ತೀವ್ರತೆಯ ಭೂಕಂಪಕ್ಕೆ ನಡುಗಿದ ವೆಲ್ಲಿಂಗ್ಟನ್‌

New Zealand Earthquake: ನ್ಯೂಜಿಲ್ಯಾಂಡ್‌ನಲ್ಲಿ ಭೂಕಂಪ, 6.1 ತೀವ್ರತೆಯ ಭೂಕಂಪಕ್ಕೆ ನಡುಗಿದ ವೆಲ್ಲಿಂಗ್ಟನ್‌

Praveen Chandra B HT Kannada

Feb 15, 2023 02:07 PM IST

New Zealand Earthquake: ನ್ಯೂಜಿಲ್ಯಾಂಡ್‌ನಲ್ಲಿ ಭೂಕಂಪ, 6.1 ತೀವ್ರತೆಯ ಭೂಕಂಪಕ್ಕೆ ನಡುಗಿದ ವೆಲ್ಲಿಂಗ್ಟನ್‌

    • New Zealand Earthquake: ಟರ್ಕಿ ಮತ್ತು ಸಿರಿಯಾ ದೇಶಗಳು ಭೂಕಂಪದ ತೊಂದರೆಯಿಂದ ಪರಿತಪಿಸುತ್ತಿರುವ ಸಂದರ್ಭದಲ್ಲಿಯೇ ನ್ಯೂಜಿಲ್ಯಾಂಡ್‌ ದೇಶದಲ್ಲಿಯೂ ಇಂದು ಪ್ರಬಲ ಭೂಕಂಪ ಸಂಭವಿಸಿದೆ. ನ್ಯೂಜಿಲ್ಯಾಂಡ್‌ನ ಕರಾವಳಿ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ 6.1 ತೀವ್ರತೆ ದಾಖಲಾಗಿದೆ
New Zealand Earthquake: ನ್ಯೂಜಿಲ್ಯಾಂಡ್‌ನಲ್ಲಿ ಭೂಕಂಪ,  6.1 ತೀವ್ರತೆಯ ಭೂಕಂಪಕ್ಕೆ ನಡುಗಿದ ವೆಲ್ಲಿಂಗ್ಟನ್‌
New Zealand Earthquake: ನ್ಯೂಜಿಲ್ಯಾಂಡ್‌ನಲ್ಲಿ ಭೂಕಂಪ, 6.1 ತೀವ್ರತೆಯ ಭೂಕಂಪಕ್ಕೆ ನಡುಗಿದ ವೆಲ್ಲಿಂಗ್ಟನ್‌

ನ್ಯೂಜಿಲ್ಯಾಂಡ್‌: ಟರ್ಕಿ ಮತ್ತು ಸಿರಿಯಾ ದೇಶಗಳು ಭೂಕಂಪದ ತೊಂದರೆಯಿಂದ ಪರಿತಪಿಸುತ್ತಿರುವ ಸಂದರ್ಭದಲ್ಲಿಯೇ ನ್ಯೂಜಿಲ್ಯಾಂಡ್‌ ದೇಶದಲ್ಲಿಯೂ ಇಂದು ಪ್ರಬಲ ಭೂಕಂಪ ಸಂಭವಿಸಿದೆ. ನ್ಯೂಜಿಲ್ಯಾಂಡ್‌ನ ಕರಾವಳಿ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ 6.1 ತೀವ್ರತೆ ದಾಖಲಾಗಿದೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್‌ ಲೋವರ್‌ ಹಟ್‌ ವಾಯುವ್ಯದ 78 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಮಿಯ ಅಂದಾಜು 48 ಕಿಮೀ (30 ಮೈಲು) ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ಯುರೋಪಿಯನ್- ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್‌ಸಿ) ಮಾಹಿತಿ ನೀಡಿದೆ.

ಸದ್ಯ ಬಂದಿರುವ ಮಾಹಿತಿ ಪ್ರಕಾರ ಯಾವುದೇ ಜೀವ ಹಾನಿ ವರದಿಯಾಗಿಲ್ಲ. ಪರಾಪರೌಮು ಪಟ್ಟಣದಿಂದ 50 ಕಿ.ಮೀ. ದೂರದಲ್ಲಿ ಭೂಕಂಪನದ ಬಿಂದು ದಾಖಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ವೆಲ್ಲಿಂಗ್ಟನ್‌ನಲ್ಲಿ ಭೂಕಂಪನ ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಮೊನ್ನೆ ಉತ್ತರ ನ್ಯೂಜಿನ್ಯಾಂಡ್‌ ಬಳಿ ಸಮುದ್ರದ ಆಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿತ್ತು. ಇದರಿಂದ ಸುನಾಮಿ ಉಂಟಾಗಬಹುದು ಎಂದು ಅಮೆರಿಕದ ಜಿಯಾಲಜಿಕಲ್‌ ಏಜೆನ್ಸಿ ಎಚ್ಚರಿಸಿತ್ತು. ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದ ಸಮುದ್ರದಲ್ಲಿ ಹತ್ತು ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿತ್ತು. ಅದು 7.7 ತೀವ್ರತೆಯ ಭೂಕಂಪನವಾಗಿತ್ತು. ಇದರಿಂದ ಸುನಾಮಿ ಆತಂಕ ಉಂಟಾಗಿತ್ತು.

ನ್ಯೂಜಿಲ್ಯಾಂಡ್‌ನಲ್ಲಿ ಸಮುದ್ರದಲ್ಲಿ ಉಂಟಾದ ಭೂಕಂಪನದಿಂದ ಆ ಸಮಯದಲ್ಲಿ ಆಸ್ಟ್ರೇಲಿಯಾದ ದ್ವೀಪಗಳು ಮತ್ತು ಪ್ರಾಂತ್ಯಗಳಿಗೆ ಸುನಾಮಿ ಭೀತಿ ಎದುರಾಗಿತ್ತು. ಅಮೆರಿಕದ ಸಮೋವಾ ಮತ್ತು ವನವಾಟು, ಫಿಜಿ, ನ್ಯೂಜಿಲ್ಯಾಂಡ್‌ಗಳಲ್ಲಿ ಸುನಾಮಿ ಸಂಭವಿಸಬಹುದು ಎಂದು ಅಮೆರಿಕದ ಸುನಾಮಿ ನಿಗಾ ಸಂಸ್ಥೆ ಎಚ್ಚರಿಕೆ ನೀಡಿತ್ತು.

ನ್ಯೂಜಿಲ್ಯಾಂಡ್‌ ಪ್ರಾಕೃತಿಕ ವಿಕೋಪದ ಭೀತಿಯಲ್ಲಿ ಸದಾ ಇರುತ್ತದೆ. ಅದರ ಒಂದೆಡೆಇ ಅಗ್ನಿ ಪರ್ವತಗಳು ಬೆಂಕಿ ಉಗುಳುತ್ತಿರುತ್ತಿವೆ. ಸಮುದ್ರದ ತೀರದಲ್ಲಿ ಭೂಕಂಪ, ಸುನಾಮಿ ಭೀತಿ ಇದೆ. 40,000 ಕಿಮೀ ಅಗ್ನಿಪರ್ವತಗಳು ಮತ್ತು ಪೆಸಿಫಿಕ್ ಸಾಗರದ ತೀರಗಳು ಅದನ್ನು ಸುತ್ತುವರೆದಿದೆ.

ಟರ್ಕಿ-ಸಿರಿಯಾದಲ್ಲಿ ಮರಣ ಮೃಂದಂಗ

ಕಳೆದ ವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಸರಣಿ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 39,000ಕ್ಕೆ ಏರಿಕೆಯಾಗಿದೆ. 100 ವರ್ಷಗಳ ಹಿಂದೆ (1923) ಟರ್ಕಿ ದೇಶ ಸ್ಥಾಪನೆಯಾದ ಬಳಿಕ ದೇಶ ಕಂಡ ಅತ್ಯಂತ ಮಾರಣಾಂತಿಕ ''ಶತಮಾನದ ದುರಂತ'' ಇದಾಗಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಭೂಕಂಪದಿಂದಾಗಿ 1,05,505 ಜನರು ಗಾಯಗೊಂಡಿದ್ದು, ಟರ್ಕಿಯಲ್ಲಿ 13,000ಕ್ಕೂ ಹೆಚ್ಚು ಜನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1939 ರಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ ಭೂಕಂಪದಲ್ಲಿ ಸುಮಾರು 33,000 ಜನರು ಬಲಿಯಾಗಿದ್ದರು. ಇದೀಗ ಇದ್ದಕ್ಕಿಂತ ಕೆಟ್ಟ ಪರಿಸ್ಥಿತಿ ಬಂದೊದಗಿದೆ.

ವಿಪತ್ತು ಏಜೆನ್ಸಿ ಎಎಫ್​ಎಡಿಯ ಪ್ರಧಾನ ಕಛೇರಿಯಲ್ಲಿ ನಡೆದ ಐದು ಗಂಟೆಗಳ ಕ್ಯಾಬಿನೆಟ್ ಸಭೆಯ ನಂತರ ಅಂಕಾರಾದಲ್ಲಿ ಮಾತನಾಡಿದ ಎರ್ಡೊಗನ್, 2,11,000 ನಿವಾಸಗಳನ್ನು ಒಳಗೊಂಡಿರುವ 47,000 ಕಟ್ಟಡಗಳು ನಾಶವಾಗಿವೆ ಅಥವಾ ನೆಲಸಮಗೊಳಿಸುವ ಅಗತ್ಯವಿರುವಷ್ಟು ಹಾನಿಗೊಳಗಾಗಿವೆ ಎಂದು ಹೇಳಿದರು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

 

 

 

 

 

 

    ಹಂಚಿಕೊಳ್ಳಲು ಲೇಖನಗಳು