logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nia Chargesheet: ಇಸ್ಲಾಮಿಕ್‌ ಆಡಳಿತ ಸ್ಥಾಪನೆಗಾಗಿ ಪಿತೂರಿ ನಡೆಸಿದ್ದ ಆರೋಪದಡಿ 68 ಪಿಎಫ್‌ಐ ನಾಯಕರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

NIA Chargesheet: ಇಸ್ಲಾಮಿಕ್‌ ಆಡಳಿತ ಸ್ಥಾಪನೆಗಾಗಿ ಪಿತೂರಿ ನಡೆಸಿದ್ದ ಆರೋಪದಡಿ 68 ಪಿಎಫ್‌ಐ ನಾಯಕರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

HT Kannada Desk HT Kannada

Mar 17, 2023 07:56 PM IST

google News

NIA Chargesheet: ಇಸ್ಲಾಮಿಕ್‌ ಆಡಳಿತ ಸ್ಥಾಪನೆಗಾಗಿ ಪಿತೂರಿ ನಡೆಸಿದ್ದ ಆರೋಪದಡಿ 68 ಪಿಎಫ್‌ಐ ನಾಯಕರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

    • ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಒಟ್ಟು 68 ನಾಯಕರು, ಕಾರ್ಯಕರ್ತರು ಮತ್ತು ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.
NIA Chargesheet: ಇಸ್ಲಾಮಿಕ್‌ ಆಡಳಿತ ಸ್ಥಾಪನೆಗಾಗಿ ಪಿತೂರಿ ನಡೆಸಿದ್ದ ಆರೋಪದಡಿ 68 ಪಿಎಫ್‌ಐ ನಾಯಕರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
NIA Chargesheet: ಇಸ್ಲಾಮಿಕ್‌ ಆಡಳಿತ ಸ್ಥಾಪನೆಗಾಗಿ ಪಿತೂರಿ ನಡೆಸಿದ್ದ ಆರೋಪದಡಿ 68 ಪಿಎಫ್‌ಐ ನಾಯಕರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ (HT_PRINT)

ನವದೆಹಲಿ: ಕೇರಳ ಮತ್ತು ತಮಿಳುನಾಡಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಒಟ್ಟು 68 ನಾಯಕರು, ಕಾರ್ಯಕರ್ತರು ಮತ್ತು ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.

ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಮತ್ತು 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಈ ಮೂಲಕ ಈ ತಿಂಗಳು ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಎನ್‌ಐಎ ಸಲ್ಲಿಸಿದ ಒಟ್ಟು ಚಾರ್ಜ್‌ಶೀಟ್‌ಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಇಂತಹ ಮೊದಲ ಆರೋಪಪಟ್ಟಿಯನ್ನು ಮಾರ್ಚ್ 13 ರಂದು ಜೈಪುರದಲ್ಲಿ ಮತ್ತು ಎರಡನೆಯದನ್ನು ಮಾರ್ಚ್ 16 ರಂದು ಹೈದರಾಬಾದ್‌ನಲ್ಲಿ ಸಲ್ಲಿಸಲಾಗಿತ್ತು.

ಪ್ರಸ್ತುತ ನಿಷೇಧಿಸಲಾದ ಪಿಎಫ್‌ಐಯು ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಸಕ್ರಿಯವಾಗಿದೆ. ಅಲ್ಲಿ ಪಿಎಫ್‌ಐ ನಾಯಕರು ಕ್ರಿಮಿನಲ್‌ ಪಿತೂರಿಗಳ ಭಾಗವಾಗಿದ್ದರು. ಮುಸ್ಲಿಂ ಯುವಕರನ್ನು ಪಿಎಫ್‌ಐಗೆ ಸೆಳೆದು ಅವರಿಗೆ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗುತ್ತಿತ್ತು. 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಅಂತಿಮ ಉದ್ದೇಶದೊಂದಿಗೆ ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಡೆಸಲು ಹಣವನ್ನು ಸಂಗ್ರಹಿಸುವುದು ಇವರ ಪ್ರಮುಖ ಗುರಿಯಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಕೇರಳದ ಪಿಎಫ್‌ಐ ಸಂಘಟನೆಗಳ ವಿರುದ್ಧ ಎನ್‌ಐಎ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಕರಣಗಳನ್ನು ದಾಖಲಿಸಿದೆ. ಆ ಆರೋಪ ಪಟ್ಟಿಯಲ್ಲಿಯೂ ಧರ್ಮಾಂಧತೆ, 2047ರ ವೇಳೆಗೆ ಇಸ್ಲಾಮಿಕ್‌ ಆಡಳಿತ ಸ್ಥಾಪಿಸುವ ಗುರಿಗಾಗಿ ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನುಇವರು ನಡೆಸುತ್ತಿರುವುದನ್ನು ಉಲ್ಲೇಖಿಸಲಾಗಿದೆ.

ಇಂದು ಕರ್ನಾಟಕದಲ್ಲಿ ರಾಷ್ಟ್ರ ಧ್ವಜ ಸುಡುವುದು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದಡಿ ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್ ಶೀಟ್ ಸಲ್ಲಿಸಿದೆ.

ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್ (23) ಮತ್ತು ಸೈಯದ್ ಯಾಸಿನ್ (22) ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ಮಾಡುವುದನ್ನು ತಡೆಯುವ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿಶೇಷ ನ್ಯಾಯಾಲಯ ಆರೋಪಪಟ್ಟಿ ಸಲ್ಲಿಸಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಇತ್ತೀಚೆಗೆ ಪ್ರಕಟವಾಗಿರುವ ಗ್ಲೋಬಲ್‌ ಟೆರರಿಸಂ ಇಂಡೆಕ್ಸ್‌ನ 10ನೇ ಆವೃತ್ತಿ ಪ್ರಕಾರ ಅತಿ ಹೆಚ್ಚು ಉಗ್ರ ಕೃತ್ಯಕ್ಕೆ ಒಳಗಾಗಿರುವ ಟಾಪ್‌ 25 ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ದಾವೂದ್ ಇಬ್ರಾಹಿಂ ಮತ್ತು ಆತನ ಡಿ-ಕಂಪನಿಯು ಈಗಲೂ ಮುಂಬೈನಲ್ಲಿ ಡ್ರಗ್ಸ್, ಶಸ್ತ್ರಾಸ್ತ್ರಗಳು, ಖೋಟಾನೋಟು ಇತ್ಯಾದಿಗಳನ್ನು ಒಳಗೊಂಡಂತೆ ಹಲವಾರು ಕ್ರಿಮಿನಲ್ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ. ಕ್ರಿಮಿನಲ್ ಸಂಘಟನೆಯು ಅಲ್-ಖೈದಾ ಸೇರಿ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ ಎಂದು ಜಾಗತಿಕ ಭಯೋತ್ಪಾದನಾ ಸೂಚ್ಯಂಕದ 10 ನೇ ಆವೃತ್ತಿ ತಿಳಿಸಿದೆ. ಈ ಕುರಿತ ವರದಿ ಓದಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ