North east elections: ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಚುನಾವಣೆ 2023; ಎಕ್ಸಿಟ್ ಪೋಲ್ ಫಲಿತಾಂಶ ಯಾವ ದಿನ ಎಷ್ಟು ಗಂಟೆಗೆ?
Feb 27, 2023 05:52 PM IST
ಮೇಘಾಲಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಿ ಭೋಯ್ ಜಿಲ್ಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸರತಿ ಸಾಲಿನಲ್ಲಿ ಕಾಯುತ್ತಿರುವ ಮತದಾರರು ತಮ್ಮ ಗುರುತಿನ ಚೀಟಿಗಳನ್ನು ಪ್ರದರ್ಶಿಸಿದ ಸಂದರ್ಭ.
North east elections: ಮತದಾರರು ಕ್ರಮವಾಗಿ ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ರಾಜಧಾನಿಗಳಾದ ಶಿಲ್ಲಾಂಗ್ ಮತ್ತು ಕೊಹಿಮಾದಲ್ಲಿ ಮತದಾನ ಕೇಂದ್ರಗಳ ಹೊರಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡುಬಂದಿತ್ತು. ಈ ಎರಡು ರಾಜ್ಯಗಳು ಮತ್ತು ತ್ರಿಪುರಾದ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ. ಎಕ್ಸಿಟ್ ಪೋಲ್ ಫಲಿತಾಂಶ ಇಂದು ಸಂಜೆ 7ಕ್ಕೆ ಪ್ರಕಟವಾಗಲಿದೆ.
ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಸೋಮವಾರ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಿತು. ಮತದಾನಕ್ಕೂ ಮುನ್ನ ಕೆಲವು ಕ್ಷೇತ್ರಗಳಲ್ಲಿ ಅಣಕು ಮತದಾನ ನಡೆಯಿತು.
ಮತದಾರರು ಕ್ರಮವಾಗಿ ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ರಾಜಧಾನಿಗಳಾದ ಶಿಲ್ಲಾಂಗ್ ಮತ್ತು ಕೊಹಿಮಾದಲ್ಲಿ ಮತದಾನ ಕೇಂದ್ರಗಳ ಹೊರಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡುಬಂದಿತ್ತು. ಈ ಎರಡು ರಾಜ್ಯಗಳು ಮತ್ತು ತ್ರಿಪುರಾದ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ.
ಮೂರನೇ ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ 60 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 16 ರಂದು ಚುನಾವಣೆ ನಡೆದಿತ್ತು. ಚುನಾವಣಾ ಆಯೋಗದ ಪ್ರಕಾರ, ಮಾರ್ಚ್ 4 ರ ಮೊದಲು ಚುನಾವಣಾ ಫಲಿತಾಂಶಗಳು ಬರಬೇಕು.
ತಲಾ 59 ಸ್ಥಾನಗಳಿಗೆ ಮತದಾನ ನಡೆಯುತ್ತಿರುವ ಈಶಾನ್ಯ ರಾಜ್ಯಗಳಲ್ಲಿ ಒಟ್ಟು 352 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡೂ ವಿಧಾನಸಭೆಗಳ ಬಲವು ತಲಾ 60 ಸ್ಥಾನಗಳು. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅವಿರೋಧವಾಗಿ ಘೋಷಿಸಲಾಗಿದ್ದು, ಅಭ್ಯರ್ಥಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೇಘಾಲಯದ ಒಂದು ಕ್ಷೇತ್ರದಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ.
ನಾಗಾಲ್ಯಾಂಡ್‌ನಲ್ಲಿ, 60 ವಿಧಾನಸಭಾ ಸ್ಥಾನಗಳಲ್ಲಿ 59 ರಲ್ಲಿ 183 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು 1,300,000 ಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಝುನ್ಹೆಬೊಟೊ ಜಿಲ್ಲೆಯ ಅಕುಲುಟೊ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಮತ್ತು ಹಾಲಿ ಶಾಸಕ ಕಝೆಟೊ ಕಿನಿಮಿ ಅವಿರೋಧವಾಗಿ ಗೆದ್ದಿದ್ದಾರೆ.
ಮೇಘಾಲಯದಲ್ಲೂ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಸೋಹಿಯಾಂಗ್ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಸಾವನ್ನಪ್ಪಿದ್ದರಿಂದ ಮತದಾನವನ್ನು ಮುಂದೂಡಲಾಗಿದೆ.
ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರೆ, ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿರುವ ಸರ್ಕಾರವನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿವೆ.
ತ್ರಿಪುರಾದಲ್ಲಿ, ಫೆಬ್ರವರಿ 16 ರಿಂದ ಎರಡು ದಿನಗಳ ಅವಧಿಯಲ್ಲಿ 18 ಹಿಂಸಾಚಾರದ ಘಟನೆಗಳಲ್ಲಿ ಕನಿಷ್ಠ 21 ಜನರನ್ನು ಬಂಧಿಸಲಾಗಿದೆ. ತ್ರಿಪುರಾದಲ್ಲಿ ಈ ಬಾರಿ 89.95 ರಷ್ಟು ಮತದಾನವಾಗಿದೆ.
ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ನಲ್ಲಿ ಎಕ್ಸಿಟ್ ಪೋಲ್:
ಮೇಘಾಲಯದಲ್ಲಿ ಚುನಾವಣಾ ಆಯೋಗವು ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಸೋಮವಾರ ಸಂಜೆ 7 ಗಂಟೆಯವರೆಗೆ ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸಿತ್ತು. ಅಲ್ಲದೆ, ಶನಿವಾರ ಸಂಜೆ 4 ಗಂಟೆಯಿಂದ ಯಾವುದೇ ಪ್ರಚಾರಕ್ಕೆ ಅವಕಾಶವಿಲ್ಲ ಎಂದು ಇಸಿಐ ಘೋಷಿಸಿತ್ತು.
ತ್ರಿಪುರಾ ಮುಖ್ಯ ಚುನಾವಣಾಧಿಕಾರಿ ಕಿರಣ್ ಗಿಟ್ಟೆ ಅವರು ಅಭಿಪ್ರಾಯ ಮತ್ತು ಎಕ್ಸಿಟ್ ಪೋಲ್ ವರದಿಗಳನ್ನು ಫೆಬ್ರವರಿ 27 ರಂದು ಸಂಜೆ 7 ಗಂಟೆಯವರೆಗೆ ನಿಷೇಧಿಸಲಾಗಿದೆ ಎಂದು ಹೇಳಿದರು. ಅಗರ್ತಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿಟ್ಟೆ, ಫೆಬ್ರವರಿ 15 ಮತ್ತು 16 ರಂದು ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ಮಾತ್ರ ಮುದ್ರಣ ಮಾಧ್ಯಮಗಳು ಪ್ರಕಟಿಸಬಹುದು ಎಂದು ಹೇಳಿದ್ದರು.
ಎಕ್ಸಿಟ್ ಪೋಲ್ ಫಲಿತಾಂಶವನ್ನು ಎಲ್ಲಿ ಗಮನಿಸಬೇಕು?
ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿ ವಿವಿಧ ಸಂಸ್ಥೆಗಳು ನಡೆಸಿದ ಪ್ರಮುಖ ಎಕ್ಸಿಟ್ ಪೋಲ್ ಫಲಿತಾಂಶಗಳು ಇಂದು ಸಂಜೆ 7 ಗಂಟೆಯ ನಂತರ ಪ್ರಕಟವಾಗಲಿದೆ. P-MARQ, ETG, BARC, MATRIZE, Jan Ki Baat, Axis My India, Today's Chanakya, TV9, C-Voter ತಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಸಂಜೆ 7 ಗಂಟೆಯ ನಂತರ ಪ್ರಕಟಿಸುವ ನಿರೀಕ್ಷೆಯಿದೆ.