Constitution Day of India: ನವೆಂಬರ್ 26 ಭಾರತದ ಸಂವಿಧಾನ ದಿನ, ಸಂವಿಧಾನದ ಇತಿಹಾಸ, ರಚನೆ ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ
Nov 25, 2022 10:11 PM IST
Constitution Day of India: ನವೆಂಬರ್ 26 ಭಾರತದ ಸಂವಿಧಾನ ದಿನ, ಸಂವಿಧಾನದ ಇತಿಹಾಸ
- ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಏನಿದು ಭಾರತದ ಸಂವಿಧಾನ, ಅದು ರಚನೆಯಾಗಿದ್ದು ಯಾವಾಗ, ಅದರ ಮಹತ್ವವೇನು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ದೇಶದಲ್ಲಿ ಕಳೆದ ವರ್ಷದಿಂದ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತದ ಸಂವಿಧಾನದ ಕುರಿತು ನೆನಪಿಸಿಕೊಳ್ಳಲು ಇದು ಸಕಾಲ. ಭಾರತದ ಪ್ರಜೆಗಳಾಗಿ ಸಂವಿಧಾನದ ಮೂಲತತ್ತ್ವಗಳು, ಇತಿಹಾಸ ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯ.
ಭಾರತದ ಸಂವಿಧಾನದ ಇತಿಹಾಸ
ಭಾರತ ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಹೊಂದಿದರೂ ಆಡಳಿತ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಪಡೆಯಲು ಕೆಲ ಕಾಲ ಕಾಯ ಬೇಕಾಯಿತು. 1946 ರಲ್ಲಿ ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬಂದಾಗ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಗೆ ದೊರೆಯಿತು. ಅದರಂತೆ ಪ್ರಾದೇಶಿಕ ವಿಧಾನಸಭೆಗಳಿಗೆ ಚುನಾವಣೆ ನಡೆದು 389 ಸದಸ್ಯರು ಚುನಾಯಿತರಾದರು. ಇದರಲ್ಲಿ ರಾಜ-ಮಹಾರಾಜರ ಆಳ್ವಿಕೆಯ 93 ಸದಸ್ಯರೂ ಸೇರಿದ್ದರು. ಇದರ ಮೊದಲ ಸಭೆ 1946 ರ ಡಿ. 9 ರಂದು ಹೊಸದಿಲ್ಲಿಯಲ್ಲಿ ನಡೆಯಿತು. ಆದರೆ ಮುಸ್ಲಿಂ ಲೀಗ್ ಸದಸ್ಯರು ಇದರಲ್ಲಿ ಭಾಗವಹಿಸಲಿಲ್ಲ. ಈ ಸಭೆಗೆ ರಾಜೇಂದ್ರ ಪ್ರಸಾದರು ಸಂವಿಧಾನ ಸಭೆಯ ಅಧ್ಯಕ್ಷ ರಾಗಿದ್ದರು. ಡಾ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ರಾಗಿ ಭಾರತಕ್ಕೆ ಉತ್ತಮ ಸಂವಿಧಾನ ದೊರಕಿಸಿಕೊಟ್ಟರು
ಸಂವಿಧಾನ ರಚನೆಯಾಗಿದ್ದು ಯಾವಾಗ ?
ಭಾರತದ ಸಂವಿಧಾನವನ್ನು 1949 ಜನವರಿ 26ರಂದು ಸ್ವೀಕರಿಸಲಾಯಿತು. 1950ರ ಜನವರಿ 26ರಂದು ಅಸ್ತಿತ್ವಕ್ಕೆ ಬಂತು. ಭಾರತದ ಸಂವಿಧಾನವು 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 98 ತಿದ್ದುಪಡಿಗಳನ್ನು ಹೊಂದಿದೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು. ಇದರ ಕರಡನ್ನು 1949ರ ನವೆಂಬರ್‌ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು. ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು. ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಅದಕ್ಕೆ ಕೇವಲ 94 ತಿದ್ದುಪಡಿಗಳನ್ನು ತರಲಾಗಿದೆ.
ಭಾರತದ ಸಂವಿಧಾನದ ಬಗ್ಗೆ
ಭಾರತದ ಸಂವಿಧಾನವನ್ನು ಟೈಪ್ ಮಾಡಿರುವುದಿಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ. ಭಾರತದ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ. ಭಾರತದ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ. ಪಂಚ ವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ , ರಾಜ್ಯ ನಿರ್ದೇಶನ ತತ್ತ್ವಗಳನ್ನು ಐರ್ಲೆಂಡ್ ಸಂವಿಧಾನದಿಂದ, ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‌ನಿಂದ ಎರವಲು ಪಡೆಯಲಾಗಿದೆ. ಇದು ವಿರ್ಶವದ ಯಾವುದೇ ಸ್ವತಂತ್ರ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ. ಈ ಸಂವಿಧಾನದ ಪ್ರಕಾರ ಭಾರತವನ್ನು ಗಣರಾಜ್ಯವೆಂದು ಘೋಷಿಸಲಾಯಿತು.
ಮೂಲತತ್ತ್ವಗಳು
ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ. ಕಾನೂನಿಗೆ ಎಲ್ಲರೂ ಸಮಾನರು ಹಾಗು ಯಾವುದೇ ಲಿಂಗ, ಧರ್ಮ, ಜನಾಂಗ, ಹುಟ್ಟಿದ ಸ್ಥಳ ಇವುಗಳ ಆಧಾರದಿಂದ ಯಾರಿಗೂ ನೌಕರಿಯಲ್ಲಿ ಸಮಾನತೆಯ ಅವಕಾಶದಿಂದ ವಂಚಿತರನ್ನಾಗಿಸುವ ಅಧಿಕಾರವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನೆ, ಒಗ್ಗೂಡುವುದು, ಸಂಚಾರ, ವಾಸ, ಹಾಗೂ ಯಾವುದೇ ಉದ್ಯೋಗವನ್ನು ಹೊಂದುವ ಸ್ವಾತಂತ್ರ್ಯವಿದೆ. ಆದರೆ ಇವುಗಳಲ್ಲಿ ಕೆಲವು ಬಗೆಯ ನಿರ್ಬಂಧಗಳಿವೆ. - ವಿದೇಶಗಳೊಂದಿಗೆ ಸ್ನೇಹ ಸಂಬಂಧ ಹೊಂದುವುದು, ರಾಷ್ಟ್ರದ ಭದ್ರತೆ,ಸರ್ಕಾರದ ನಿಯಮಗಳು ಮತ್ತು ನೈತಿಕತೆ ಇತ್ಯಾದಿಗಳು ಮೇಲ್ವಿಚಾರಣೆಗೆ ಒಳಪಟ್ಟಿರುತ್ತವೆ. ಶೋಷಣೆಯ ವಿರುದ್ಧ ಹಕ್ಕು ಎಂದರೆ, ಅನಧಿಕೃತವಾಗಿ ಅಧಿಕ ಸೇವೆ ಪಡೆಯುವುದು, ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವುದು ಇತ್ಯಾದಿಗಳ ವಿರುದ್ದ ರಕ್ಷಣೆ ಇದೆ.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು - ಅಂದರೆ ಯಾವುದೇ ವ್ಯಕ್ತಿ ತನಗಿಷ್ಟವಾದ ಯಾವುದೇ ಧರ್ಮವನ್ನು ಅನುಸರಿಸಬಹುದು ಹಾಗೂ ಧರ್ಮ ಪ್ರಚಾರ ಮಾಡಬಹುದು.
ಶೈಕ್ಷ ಣಿಕ ಮತ್ತು ಸಾಂಸ್ಕೃತಿಕ ಹಕ್ಕು - ಇದರಿಂದ ಯಾವುದೇ ಸಂಸ್ಕೃತಿಯನ್ನು, ಭಾಷೆಯನ್ನು ಉಪಯೋಗಿಸಲು ಅಥವಾ ಕಲಿಸುವ ಶಿಕ್ಷ ಣ ನೀಡಲು ಅಲ್ಪಸಂಖ್ಯಾತರ ಶಿಕ್ಷ ಣ ಸಂಸ್ಥೆ ಸ್ಥಾಪಿಸಲು ಹಕ್ಕನ್ನು ನೀಡಲಾಗಿದೆ.
ಸಂವಿಧಾನದ ಪ್ರಕಾರ ಈ ಹಕ್ಕುಗಳನ್ನು ನಿರಾಕರಿಸಿದರೆ ಅದಕ್ಕೆ ಪರಿಹಾರ ಪಡೆಯುವ ಹಕ್ಕು ಇದೆ.
ಭಾರತದ ಸಂವಿಧಾನ: ಕರ್ತವ್ಯಗಳು
- ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಭಾರತೀಯರಾದವರು ಗೌರವಿಸಬೇಕಾದ್ದು ಅದ್ಯ ಕರ್ತವ್ಯವಾಗಿದೆ.
- ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಮ್ಮಿಕೊಂಡ ಆದರ್ಶ, ಧ್ಯೇಯಗಳನ್ನು ಮರೆಯದೆ ಗೌರವಿಸಬೇಕು.
- ಭಾರತದ ಸಾರ್ವಬೌಮತ್ವ - ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವುದು ಹಾಗೂ ಅದರ ರಕ್ಷ ಣೆಗಾಗಿ ಸಿದ್ದರಾಗಿರುವುದು.
- ಅವಶ್ಯಕತೆ ಬಂದರೆ ರಾಷ್ಟ್ರ ರಕ್ಷ ಣೆಗೆ ಹಾಗೂ ಸೇವೆಗೆ ಸಿದ್ದರಾಗಿ ಸೇವೆಸಲ್ಲಿಸುವುದು.
- ಭಾರತೀಯರೆಲ್ಲರೂ ಸಮಾನರೆಂಬ ಭ್ರಾತೃತ್ವ ಭಾವವನ್ನು ಬೆಳೆಸುವುದು ಹಾಗೂ ಸ್ತ್ರೀಯರಿಗೆ ಅಗೌರವವಾಗುವಂತಹ ಪದ್ಧತಿಗಳನ್ನು ಆಚರಣೆಗೆ ತಾರದಿರುವುದು.
- ರಾಷ್ಟ್ರದಲ್ಲಿರುವ ವಿಭಿನ್ನ ಸಂಸ್ಕೃತಿಗಳನ್ನು ರಕ್ಷಿಸುವುದು.
- ಪರಿಸರ ರಕ್ಷ ಣೆ ಮತ್ತು ವನ್ಯಜೀವಿ ಹಾಗೂ ಮೂಕಜೀವಿಗಳ ಬಗ್ಗೆ ಸಹಾನುಭೂತಿ ತೋರುವುದು ರಕ್ಷ ಣೆ ಮಾಡುವುದು ಮತ್ತು ಆ ಕಾರ್ಯದಲ್ಲಿ ಸಹಕರಿಸುವುದು.
- ವೈಜ್ಞಾನಿಕ ದೃಷ್ಟಿ, ಮಾನವೀಯತೆ, ಸುಧಾರಣೆಗಳ ಬಗ್ಗೆ ಆಸಕ್ತಿ ಹೊಂದುವುದು.
- ಹಿಂಸಾಪ್ರವೃತ್ತಿ ದೂರಮಾಡಿ ರಾಷ್ಟ್ರದ ಆಸ್ತಿ ಸಂರಕ್ಷಿಸುವುದು.
- ವ್ಯಕ್ತಿಗತ ಮತ್ತು ಸಾಂಘಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು.