PM Modi: ಈಗ ಈಶಾನ್ಯ ದೆಹಲಿಯಿಂದ ಅಥವಾ ಹೃದಯದಿಂದ ದೂರದಲ್ಲಿಲ್ಲ: ತ್ರಿಪುರಾ, ನಾಗಾಲ್ಯಾಂಡ್ ಗೆಲುವಿನ ಬಳಿಕ ಪ್ರಧಾನಿ ಹೇಳಿಕೆ
Mar 02, 2023 11:19 PM IST
ದೆಹಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (ಫೋಟೋ-ANI)
ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ದೋಸ್ತಿಗೆ ಸ್ಪಷ್ಟ ಬಹುಮತ ಸಿಕ್ಕಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನತೆಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಧನ್ಯವಾದ ಸಲ್ಲಿಸಿದ್ದು, ಅಭಿವೃದ್ಧಿಯ ಮಂತ್ರ ಜಪಿಸಿದ್ದಾರೆ.
ನವದೆಹಲಿ: ಈಶಾನ್ಯದ ಮೂರು ರಾಜ್ಯಗಳ ಚುನಾವಣೆಯ ಪೈಕಿ ಬಿಜೆಪಿ ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ ದ್ವಿಗ್ವಿಜಯ ಸಾಧಿಸಿದೆ. ಈ ಮೂಲಕ ಅಲ್ಲಿನ ಜನರು ಕೇಸರಿ ಪಕ್ಷದ ಕೈ ಹಿಡಿದಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಎರಡು ರಾಜ್ಯಗಳ ಗೆಲುವನ್ನು ಸಂಭ್ರಮಿಸಿದರು.
ಬಿಜೆಪಿ ಕಚೇರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರತ್ತ ಕೈಬೀಸಿ ತಮ್ಮ ಸಂಸತವನ್ನು ಹಂಚಿಕೊಂಡರು. ಈ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಕೂಡ ಇದ್ದರು.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈಗ ಈಶಾನ್ಯ ದೆಹಲಿಯಿಂದ ಅಥವಾ ಹೃದಯದಿಂದ ದೂರದಲ್ಲಿಲ್ಲ ಎಂದು ಹೇಳಿದ್ದಾರೆ. ಇಂದು ನಾನು ಟಿವಿ ನೋಡಿದಾಗಲೆಲ್ಲಾ ಈಶಾನ್ಯ ಚುನಾವಣಾ ಫಲಿತಾಂಶಗಳನ್ನು ನೋಡುತ್ತಿದೆ. ಇದು ಹೃದಯಗಳ ನಡುವಿನ ಕಡಿಮೆ ಅಂತರದ ಪರಿಣಾಮವಲ್ಲ. ಆದರೆ ಹೊಸ ಸಿದ್ಧಾಂತದ ಪ್ರತಿಬಿಂಬವಾಗಿದೆ. ಈಗ ಈಶಾನ್ಯ ದೆಹಲಿಯಿಂದ ಅಥವಾ ಹೃದಯದಿಂದ ದೂರದಲ್ಲಿಲ್ಲ ಎಂದ ಹೇಳಿದರು.
ನಾಗಾಲ್ಯಾಂಡ್ ವಿಧಾನಸಭೆ ಪ್ರವೇಶಿದ ಮೊದಲ ಮಹಿಳೆಗೂ ಪ್ರಧಾನಿ ಅಭಿನಂದನೆ
ಈಶಾನ್ಯದ ಮಹಿಳೆಯರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಮೊದಲ ಬಾರಿಗೆ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈಶಾನ್ಯದಲ್ಲಿ ನಲ್ಲಿ ನೀರು, ವಿದ್ಯುತ್, ಅನಿಲ ಸಂಪರ್ಕಗಳು ಮತ್ತು ಮನೆಗಳನ್ನು ಒದಗಿಸುವುದು ಹಿಂದಿನ ಸರ್ಕಾರದ ಕೆಲಸದ ಪಟ್ಟಿಯಲ್ಲಿ ಇರಲಿಲ್ಲ. ಹಿಂದಿನ ಸರ್ಕಾರಗಳು ತೊಂದರೆಗಳಿಂದ ತಪ್ಪಿಸಿಕೊಂಡರು. ಆದರೆ ಇಲ್ಲಿನ ಜನರನ್ನು ಸಂಕಷ್ಟಕ್ಕೆ ದೂಡಿದರು. ಇದು ನಮ್ಮನ್ನು ಬಡತನದ ವಿರುದ್ಧ ಹೋರಾಡುವಂತೆ ಮಾಡಿವೆ ಎಂದರು.
ಅಮಿತ್ ಶಾ ಅವರು ಮಾತನಾಡಿರು, ಮತ್ತೊಮ್ಮೆ ಬಿಜೆಪಿಯಲ್ಲಿ ಮತ್ತೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ತ್ರಿಪುರಾ ಜನತೆಗೆ ಧನ್ಯವಾದ ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ನೀಡಿದ ಅಭಿವೃದ್ಧಿ ಪರ ರಾಜಕಾರಣದ ಗೆಲುವು ಇದಾಗಿದೆ. ಒಟ್ಟಾಗಿ ನಾವು ಮುಂದುವರಿಯುತ್ತೇವೆ. ಸಮೃದ್ಧ ತ್ರಿಪುರಾವನ್ನು ನಿರ್ಮಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಪಿಎಂ ಮೋದಿಯ ನೇತೃತ್ವದ ಎನ್‌ಡಿಎಯನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ಶಾಂತಿ ಮತ್ತು ಪ್ರಗತಿಯನ್ನು ಆರಿಸಿದ್ದಕ್ಕಾಗಿ ನನ್ನ ಹೃದಯಾಂತರಾಳದಿಂದ ನಾಗಾಲ್ಯಾಂಡ್‌ನ ಜನರಿಗೆ ಧನ್ಯವಾದಗಳು. ಪಿಎಂ ಮೋದಿ ಮತ್ತು ಸಿಎಂ ನೀಫಿಯು ರಿಯೊ ಜೋಡಿ ರಾಜ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ಮುಂದುವರೆಸುತ್ತದೆ. ಇದರ ಜೊತೆಗೆ ಜನರ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ.
ಮೇಘಾಲಯದ ಜನತೆಗೂ ಧನ್ಯವಾದ ಹೇಳಿರುವ ಅಮಿತ್ ಶಾ, ಬಿಜೆಪಿಗೆ ನೀಡಿದ ಬೆಂಬಲ ಮತ್ತು ಆಶೀರ್ವಾದಕ್ಕಾಗಿ ಮೇಘಾಲಯದ ಜನರಿಗೆ ಧನ್ಯವಾದ. ರಾಜ್ಯದಲ್ಲಿ ಬಿಜೆಪಿಯ ಹೆಜ್ಜೆ ಗುರುತುಗಳನ್ನು ವಿಸ್ತರಿಸಲು ಬಿಜೆಪಿ ಮೇಘಾಲಯ ಘಟಕವು ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತೇನೆ. ಪ್ರಧಾನಿ ಮೋದಿಯ ನೇತೃತ್ವದಲ್ಲಿ ಬಿಜೆಪಿ ಜನರಿಗೆ ಸೇವೆ ಸಲ್ಲಿಸಲು ಮತ್ತು ಉಜ್ವಲ ಭವಿಷ್ಯವನ್ನು ಸೃಷ್ಟಿಸುವಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ ಎಂದಿದ್ದಾರೆ.