logo
ಕನ್ನಡ ಸುದ್ದಿ  /  Nation And-world  /  Odisha Tragedy Karnataka Team Lead By Labor Minister Santhosh Lad To Visit Train Tragedy Spot To Rescue Kannadigas Kub

Odisha Tragedy:ಕನ್ನಡಿಗರ ರಕ್ಷಣೆ ಸಂತೋಷ್‌ ಲಾಡ್‌ಗೆ ಹೊಣೆ, ದುರಂತ ಸ್ಥಳಕ್ಕೆ ತೆರಳಲಿದೆ ಕರ್ನಾಟಕ ತಂಡ

HT Kannada Desk HT Kannada

Jun 03, 2023 02:00 PM IST

ಒಡಿಶಾ ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತೆರಳಿದ ಸಚಿವ ಸಂತೋಷ್‌ ಲಾಡ್‌ ತಂಡ.

    • ಹಲವರು ಯಶವಂತಪುರದಿಂದ ಹೊರಟಿದ್ದರೈಲುಕಿನ ಸಿಲುಕಿರುವ ಮಾಹಿತಿಯಿದ್ದು, ಅವರ ರಕ್ಷಣೆಗೆ ತಂಡವನ್ನು ರಚಿಸಿಕೊಂಡು ಮುನ್ನಡೆಯುವಂತೆ ಕಾರ್ಮಿಕ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕರ್ನಾಟಕದಲ್ಲಿರುವ ವಿಪತ್ತು ನಿರ್ವಹಣೆ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ.
ಒಡಿಶಾ ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತೆರಳಿದ ಸಚಿವ ಸಂತೋಷ್‌ ಲಾಡ್‌ ತಂಡ.
ಒಡಿಶಾ ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತೆರಳಿದ ಸಚಿವ ಸಂತೋಷ್‌ ಲಾಡ್‌ ತಂಡ.

ಬೆಂಗಳೂರು; ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಕರ್ನಾಟಕದರ ರಕ್ಷಣೆ ಹೊಣೆಯನ್ನು ಕಾರ್ಮಿಕ ಸಚಿವ ಸಂತೋಷ್‌ ಎಚ್‌ ಲಾಡ್‌ಗೆ ವಹಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ಘಟನೆಯಲ್ಲಿ ಯಾರಾದರೂ ಕನ್ನಡಿಗರು ಸಿಲುಕಿದ್ಧಾರೆಯೇ ಎನ್ನುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಕೆಲವರು ಯಶವಂತಪುರದಿಂದ ಹೊರಟಿದ್ದ ರೈಲುಕಿನ ಸಿಲುಕಿರುವ ಮಾಹಿತಿಯಿದ್ದು, ಅವರ ರಕ್ಷಣೆಗೆ ತಂಡವನ್ನು ರಚಿಸಿಕೊಂಡು ಮುನ್ನಡೆಯುವಂತೆ ಕಾರ್ಮಿಕ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕರ್ನಾಟಕದಲ್ಲಿರುವ ವಿಪತ್ತು ನಿರ್ವಹಣೆ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ. ಆಯುಕ್ತ ಮನೋಜ್‌ ರಾಜನ್‌ ಕೂಡ ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ. ಸಚಿವರ ನೇತೃತ್ವದ ತಂಡ ಘಟನಾ ನಡೆದ ಸ್ಥಳಕ್ಕೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.

ಚಿಕ್ಕಮಗಳೂರಿನಿಂದ ಹೊರಟಿದ್ದ ತಂಡವೊಂದು ರೈಲು ದುರಂತದ ರೈಲಿನಲ್ಲಿ ಸಿಲುಕಿ ಸುರಕ್ಷಿತವಾಗಿದೆ ಎನ್ನುವ ಮಾಹಿತಿ ಇದ್ದರೂ ಅದನ್ನು ಒಡಿಶಾಕ್ಕೆ ಹೊರಟಿರುವ ವಿಪತ್ತು ನಿರ್ವಹಣಾ ತಂಡದಲ್ಲಿರುವ ಆಯುಕ್ತ ಮನೋಜ್‌ ರಂಜನ್‌ ಖಚಿತಪಡಿಸಿದ್ದಾರೆ.

ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 260 ದಾಟಿದೆ.ಗಾಯಗೊಂಡವರ ಸಂಖ್ಯೆ 900ಕ್ಕೂ ಅಧಿಕ.

ಈಗಾಗಲೇ ರೈಲ್ವೆ ಸಚಿವರು ಸ್ಥಳಕ್ಕೆ ದೌಢಾಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ನೀಡುವ ಸಾಧ್ಯತೆಯಿದೆ. ಮಧ್ಯಾಹ್ನದ ನಂತರ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು