Ola Electric MoveOS 3: ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಮುಂದಿನ ವಾರದಿಂದ ಹೊಸ ಫೀಚರ್ಸ್, ಏರು ಹಾದಿಯಲ್ಲಿ ಜಾರದೆ ರೈಡ್ ಮಾಡಿ
Dec 15, 2022 01:07 PM IST
Ola Electric MoveOS 3: ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಮುಂದಿನ ವಾರದಿಂದ ಹೊಸ ಫೀಚರ್ಸ್, ಏರು ಹಾದಿಯಲ್ಲಿ ಜಾರದೆ ರೈಡ್ ಮಾಡಿ
- Ola Electric MoveOS 3 ಅಪ್‌ಡೇಟ್‌ನಿಂದ ಹಿಲ್ ಹೋಲ್ಡ್ ಕಂಟ್ರೋಲ್, ಹದಿನೈದು ನಿಮಿಷದಲ್ಲಿ 50 ಕಿಮಿ ಪ್ರಯಾಣಿಸಬಹುದಾ ಹೈಪರ್‌ಚಾರ್ಜಿಂಗ್, ಪ್ರಾಕ್ಸಿಮಿಟಿ ಅನ್‌ಲಾಕ್ ಇತ್ಯಾದಿ ಹಲವು ಫೀಚರ್‌ಗಳು ಓಲಾ ಸ್ಕೂಟರ್ ಸವಾರರಿಗೆ ದೊರಕಲಿದೆ.
Ola Electric MoveOS 3: ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮೊದಲ ಬಾರಿಗೆ ಘೋಷಿಸಿದ ಸಂದರ್ಭದಲ್ಲಿ ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್‌ಗಳಲ್ಲಿ MoveOS 3 ಫೀಚರ್ ಪರಿಚಯಿಸುವುದಾಗಿ ಹೇಳಲಾಗಿತ್ತು. ಆದರೆ, ಆ ಫೀಚರ್‌ಗಳನ್ನು ಪರಿಚಯಿಸಿರಲಿಲ್ಲ. ಆದರೆ, ಓಲಾ ಕಂಪನಿಯು ಈ ವಿಶೇಷ ಫೀಚರ್ ಅನ್ನು ಮುಂದಿನ ವಾರ ಪರಿಚಯಿಸಲು ಯೋಜಿಸಿದೆ.
ಏನಿದು ಹೊಸ ಫೀಚರ್?
ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್‌ಗಳು ಇರಲಿದೆ. ಹಿಲ್ ಹೋಲ್ಡ್ ಕಂಟ್ರೋಲ್ ಫೀಚರ್‌ನಿಂದ ಸ್ಕೂಟರ್ ಪ್ರಯಾಣ ಸುಲಭವಾಗಲಿದೆ. ಏರು ಹಾದಿಯಲ್ಲಿ ಹೋಗುವಾಗ ರಸ್ತೆಯಲ್ಲಿ ದೃಢವಾಗಿ ನಿಲ್ಲಲು ಈ ಫೀಚರ್ ನೆರವು ನೀಡುತ್ತದೆ. ಜತೆಗೆ, ಏರು ಹಾದಿ ಹತ್ತುವುದನ್ನು ಸುಲಭವಾಗಿಸುತ್ತದೆ. ಇಲ್ಲಿಯವರೆಗೆ, ತುಂಬಾ ಏರು ಹಾದಿಯಲ್ಲಿ ಹೋಗುವಾಗ ಜಗ್ಗಿದಂತಹ ಅಥವಾ ಅಸ್ಥಿರ ಫೀಲ್ ನೀಡುತ್ತಿತ್ತು. ಈ ಫೀಚರ್‌ನಿಂದಾಗಿ ಏರು ಹಾದಿಯಲ್ಲಿ ಹೋಗುವುದು ಸುಲಭವಾಗಲಿದೆ.
ಅಂದಹಾಗೆ, ಈ ಫೀಚರ್ ನೀವಾಗಿಯೇ ಅಳವಡಿಸಬೇಕಾಗಿಲ್ಲ. ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಈ ಫೀಚರ್ ಲಭಿಸಲಿದೆ. ಈ ಸಾಫ್ಟ್‌ವೇರ್ ಅಪ್‌ಗ್ರೇಡ್‌ನಲ್ಲಿ ಹೈಪರ್ ಚಾರ್ಜಿಂಗ್ ಅವಕಾಶವೂ ದೊರಕಲಿದೆ. ಅಂದರೆ, ಕೇವಲ ಹದಿನೈದು ನಿಮಿಷಗಳಲ್ಲಿ ಐವತ್ತು ಕಿ.ಮೀ.ಗೆ ಸಾಕಾಗುವಷ್ಟು ಸ್ಕೂಟರ್ ಚಾರ್ಜ್ ಆಗಲಿದೆ. ಇದರೊಂದಿಗೆ ಹೈಪರ್‌ಚಾರ್ಜರ್ ಸ್ಟೇಷನ್‌ಗಳ ಸಂಖ್ಯೆ ಹೆಚ್ಚಿಸಲು ಓಲಾ ಉದ್ದೇಶಿಸಿದೆ.
ಹೊಸ ಮೂವ್‌ಒಎಸ್ 3 ನಲ್ಲಿ ಪ್ರಾಕ್ಸಿಮಿಟಿ ಅನ್‌ಲಾಕ್ ಎಂಬ ಫೀಚರ್ ದೊರಕಲಿದೆ. ಎಸ್1 ಮತ್ತು ಎಸ್2 ಸ್ಕೂಟರ್‌ಗಳ ಚಾಲಕರು ಸ್ಕೂಟರ್ ಅನ್‌ಲಾಕ್ ಮಾಡಲು ಪಿನ್ ಬಳಸಬೇಕಾಗಿಲ್ಲ. ಅಥವಾ ಮೊಬೈಲ್ ಆಪ್ ಬಳಸಬೇಕಾಗಿಲ್ಲ. ಪ್ರಾಕ್ಸಿಮಿಟಿ ಅನ್‌ಲಾಕ್ ಆಯ್ಕೆಯಿಂದಾಗಿ ಬಳಕೆದಾರರ ಮೊಬೈಲ್ ಅನ್ನು ಸ್ಕೂಟರ್ ಸ್ವಯಂಚಾಲಿತವಾಗಿ ಗುರುತಿಸಿ ಸ್ಕೂಟರ್ ಅನ್ನು ಅನ್‌ಲಾಕ್ ಮಾಡುತ್ತದೆ. ಇಂತಹ ಫೀಚರ್ ಬೇಡವೆಂದಾದರೆ ಆಫ್ ಮಾಡುವ ಅವಕಾಶವೂ ಇರುತ್ತದೆ.
ಇದರೊಂದಿಗೆ, ಸ್ಕೂಟರ್‌ನ ಆಕ್ಸಿಲರೇಷನ್ ಸಾಮರ್ಥ್ಯವೂ ಹೆಚ್ಚಾಗಿದೆ ಎಂದು ಓಲಾ ತಿಳಿಸಿದೆ. ಅಂದರೆ, ಸ್ಪೋರ್ಟ್ಸ್ ಮೋಡ್ ಮತ್ತು ಹೈಪರ್ ಮೋಡ್‌ನಲ್ಲಿ ಹೆಚ್ಚಿನ ಆಕ್ಸಿಲರೇಷನ್ ದೊರಕಲಿದೆ. ಈ ಸ್ಕೂಟರ್‌ನಲ್ಲಿ ದಾಖಲೆಗಳು ಮತ್ತು ಕಾಲ್ ಅಲಾರ್ಟ್, ಸ್ವಯಂಚಾಲಿತ ರಿಪ್ಲೈ ಫೀಚರ್‌ಗಳೂ ಸೇರಿದೆ. ಪ್ರೊಫೈಲ್, ವಿಜೆಟ್, ಪಾರ್ಟಿ ಮೋಡ್ ಆಯ್ಕೆಗಳನ್ನು ಈಗಾಗಲೇ ಸೇರಿಸಿದೆ.
ಓಲಾದ ಕಡಿಮೆ ದರದ ಸ್ಕೂಟರ್
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಸ್1 ಸರಣಿಯಲ್ಲಿ ಮೂರನೇ ಆವೃತ್ತಿ ಹೊರತಂದಿದೆ. ಇದು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿಯೇ ಅತ್ಯಂತ ಕಡಿಮೆ ದರದ ಸ್ಕೂಟರ್ ಆಗಿರಲಿದೆ. ಇದು ಓಲಾ ಎಸ್‌೧ ಮತ್ತು ಓಲಾ ಎಸ್‌೧ ಪ್ರೊನಷ್ಟು ಪವರ್ ಹೊಂದಿಲ್ಲದೆ ಇದ್ದರೂ ಕೊಂಚ ಕಡಿಮೆ ದರದಲ್ಲಿ ವಿದ್ಯುತ್ ಸ್ಕೂಟರ್ ಬಯಸುವವರಿಗೆ ನೂತನ Ola S1 Air Electric ಸೂಕ್ತವಾಗಿರಲಿದೆ. ಕಡಿಮೆ ದರದ ಪೆಟ್ರೋಲ್ ಸ್ಕೂಟರ್‌ನ ದರದಲ್ಲಿಯೇ ನೂತನ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿರಲಿದೆ.
ದೇಶದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ ಸವಾಲುಗಳ ಕುರಿತು ಓಲಾ ಕಂಪನಿಯು ಅವಲೋಕನ ಮಾಡಿ ಅದಕ್ಕೆ ತಕ್ಕಂತೆ ಉತ್ಪನ್ನಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಬಹುತೇಕ ದ್ವಿಚಕ್ರವಾಹನ ಖರೀದಿದಾರರು ಕಡಿಮೆ ದರದ ಸ್ಕೂಟರ್‌ಗಳನ್ನು ಖರೀದಿಸಲು ಬಯಸುತ್ತಾರೆ. ಒಂದು ಲಕ್ಷ ರೂ.ಗಿಂತ ದರ ಹೆಚ್ಚಿದ್ದರೆ ಖರೀದಿಗೆ ಹಿಂದಡಿ ಇಡುತ್ತಾರೆ. ಇದೇ ಕಾರಣಕ್ಕೆ ಕಡಿಮೆ ದರದ ಸ್ಕೂಟರ್ ಪರಿಚಯಿಸುತ್ತಿದೆ.
Ola S1 Air Electric ದರ 85 ಸಾವಿರ ರೂ. ಇದೆ. ಎಲ್ಲಾದರೂ ಇಂದು ಬುಕ್ಕಿಂಗ್ ಮಾಡಿದರೆ 79,999 ರೂ. ಇರಲಿದೆ. ಇದು ದೀಪಾವಳಿ ಆಫರ್. ಈ ದರಕ್ಕೆ ಪ್ರಮುಖ ಬ್ರಾಂಡ್‌ನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಿಲ್ಲ. ಹೀಗಾಗಿ, ಈ ಕಡಿಮೆ ದರದ ಇ-ಸ್ಕೂಟರ್‌ಗೆ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ. ಈ ಕುರಿತು ಹೆಚ್ಚಿನ ವಿವರವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
https://kannada.hindustantimes.com/nation-and-world/ola-s1-air-electric-scooter-revealed-lesser-range-but-pocket-friendly-price-181666583365379.html