logo
ಕನ್ನಡ ಸುದ್ದಿ  /  Nation And-world  /  Pakistan's Finance Ministry Has No Funds For Elections: Defence Minister Khawaja Asif

Pakistan elections: ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದಲ್ಲಿ ಹಣವಿಲ್ಲ, ರಕ್ಷಣಾ ಸಚಿವರ ಹೇಳಿಕೆ

HT Kannada Desk HT Kannada

Mar 25, 2023 08:05 AM IST

Pakistan elections: ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದಲ್ಲಿ ಹಣವಿಲ್ಲ

  • ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದಲ್ಲಿ ಹಣವಿಲ್ಲ ಎಂದು ಅಲ್ಲಿನ ರಕ್ಷಣಾ ಸಚಿವ ಆಸಿಫ್ ಹೇಳಿದ್ದಾರೆ

Pakistan elections: ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದಲ್ಲಿ ಹಣವಿಲ್ಲ
Pakistan elections: ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದಲ್ಲಿ ಹಣವಿಲ್ಲ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದಲ್ಲಿ ಹಣವಿಲ್ಲ ಎಂದು ಅಲ್ಲಿನ ರಕ್ಷಣಾ ಸಚಿವ ಆಸಿಫ್ ಹೇಳಿದ್ದಾರೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಮರಿಯುಮ್ ಔರಂಗಜೇಬ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿದೇಶಿ ಮಾಧ್ಯಮಗಳನ್ನು ಉದ್ದೇಶಿಸಿ ಆಸಿಫ್ ಈ ವಿಷಯ ಬಹಿರಂಗಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

Chicken or Egg: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ; ದಶಕಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ

Gold Rate Today: ವಾರಾಂತ್ಯದಲ್ಲಿ ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಗೋಲ್ಡ್‌ ರೇಟ್‌ ಎಷ್ಟಿದೆ ಗಮನಿಸಿ

Lok Sabha Election 2024: ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ಶೇ 61 ರಷ್ಟು ಮತದಾನ; ತ್ರಿಪುರಾಗೆ ಅಗ್ರ ಸ್ಥಾನ

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಹತ್ಯೆ ಯತ್ನ ಆರೋಪ ಸುಳ್ಳು ಎಂದು ಖವಾಜಾ ಆಸಿಫ್ ಹೇಳಿದ್ದಾರೆ. "ಅವರು ಮೊದಲು ಮಾಜಿ ಸೇನಾ ಮುಖ್ಯಸ್ಥ ಜನರಲ್ ನಿವೃತ್ತ ಕಮರ್ ಜಾವೈದ್ ಬಾಜ್ವಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಿದರು. ಈಗ ಅವರು ಅವರನ್ನು ದೂಷಿಸುತ್ತಿದ್ದಾರೆ. ಆರಂಭದಲ್ಲಿ ತನ್ನನ್ನು ಪದಚ್ಯುತಿ ಮಾಡಲು ಅಮೆರಿಕ ಕಾರಣವೆಂದಿದ್ದರು" ಎಂದು ರಕ್ಷಣಾ ಸಚಿವರು ಟೀಕಿಸಿದ್ದಾರೆ.

ಇಮ್ರಾನ್‌ ಖಾನ್‌ ಅಸಂವಿಧಾನಿಕವಾಗಿ ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸಿದ್ದರು. ಅವಿಶ್ವಾಸ ಮತದ ಮೂಲಕ ಸಾಂವಿಧಾನಿಕವಾಗಿ ತಮ್ಮ ಸ್ಥಾನದಿಂದ ಹೊರಹಾಕಲ್ಪಟ್ಟರು. ಈಗ ಅವರು ಕೋರ್ಟ್‌ ಮುಂದೆ ಹಾಜರಾಗಲು ಬಯಸುತ್ತಿಲ್ಲ ಎಂದರು.

ಪಿಟಿಐ ಅಧ್ಯಕ್ಷರು ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಿಎಂಎಲ್-ಎನ್ ನಾಯಕರನ್ನು ಜೈಲಿಗೆ ತಳ್ಳಿದ್ದರು ಎಂದು ಖವಾಜಾ ಆಸಿಫ್ ಆರೋಪಿಸಿದ್ದಾರೆ. ನಾನು ನನ್ನ ಮೂರು ವರ್ಷದ ಅಧಿಕಾರಾವಧಿಯಲ್ಲೂ ಜೈಲು ಪಾಲಾಗಿದ್ದೆ. ನಮ್ಮ ಪಕ್ಷದ ನಾಯಕರೂ ಸುಳ್ಳು ಪ್ರಕರಣಗಳಲ್ಲಿ ಕೋರ್ಟ್‌ ಮುಂದೆ ಹಾಜರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಮ್ರಾನ್‌ ಖಾನ್‌ ಅವರು ಪ್ರತಿದಿನ ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಆದರೆ, ಈ ಬಿಕ್ಕಟ್ಟನ್ನು ಬಗೆಹರಿಸಲು ಸರಕಾರ ಯತ್ನಿಸುತ್ತಿದೆ. ಪಾಕಿಸ್ತಾನವು ಶೀಘ್ರದಲ್ಲಿ ಈ ಬಿಕ್ಕಟ್ಟುಗಳಿಂದ ಹೊರಬರಲಿದೆ ಎಂದರು.

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಅಮೆರಿಕದ ಪಿತೂರಿಯ ಸುಳ್ಳು ನಿರೂಪಣೆಯನ್ನು ಮಾಡಿದರು. ಆದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ದೇಶವನ್ನು ಸಾಂವಿಧಾನಿಕ ಬಿಕ್ಕಟ್ಟಿನಿಂದ ರಕ್ಷಿಸಿತು ಎಂದು ಖವಾಜಾ ಆಸಿಫ್ ಹೇಳಿದ್ದಾರೆ.

ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆ ಅನುಭವಿಸುತ್ತಿದೆ. ಕಳೆದ ತಿಂಗಳು ಪಾಕಿಸ್ತಾನದಲ್ಲಿ ಪೆಟ್ರೋಲ್‌ ಕೊರತೆಯೂ ಉಂಟಾಗಿ ಸಾಕಷ್ಟು ಜನರು ತೊಂದರೆ ಅನುಭವಿಸಿದ್ದರು. ಕೆಲವೊಂದು ಪೆಟ್ರೋಲ್‌ ಪಂಪ್‌ಗಳಿಗೆ ಕಳೆದ ಒಂದು ತಿಂಗಳಿನಿಂದ ಇಂಧನ ಪೂರೈಕೆಯಾಗಿಲ್ಲ ಎಂದು ಪಾಕಿಸ್ತಾನದ ಸುದ್ದಿಪತ್ರಿಕೆ ಡಾನ್‌ ವರದಿ ಮಾಡಿತ್ತು.

ಅಲ್ಲಿನ ಇಂಧನ ಕೊರತೆಗೆ ಆರ್ಥಿಕ ಬಿಕ್ಕಟ್ಟೇ ಪ್ರಮುಖ ಕಾರಣ ಎನ್ನುವುದನ್ನು ಸರಕಾರ ಒಪ್ಪಿಕೊಳ್ಳುತ್ತಿಲ್ಲ. ಆದರೆ, ಆರ್ಥಿಕ ಬಿಕ್ಕಟ್ಟೇ ಇಂತಹ ಇಂಧನ ಅಭಾವ ಸೃಷ್ಟಿಸಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ. ಲಾಹೋರ್‌, ಗುಜ್ರಾನ್‌ ವಾಲ್‌, ಫೈಸಲಾಬಾದ್‌ನಂತಹ ದೊಡ್ಡ ಪಟ್ಟಣಗಳಲ್ಲಿಯೂ ಇಂಧನ ಕೊರತೆ ಹೆಚ್ಚಾಗಿದೆ. ಹಲವು ಬಂಕ್‌ಗಳಲ್ಲಿ ಇಂಧನ ಖಾಲಿಯಾಗಿವೆ. ಕೆಲವೇ ಕೆಲವು ಬಂಕ್‌ಗಳಲ್ಲಿ ಇಂಧನ ಪೂರೈಕೆಯಾಗುತ್ತಿದ್ದು, ಎಲ್ಲರಿಗೂ ಲಭಿಸುತ್ತಿಲ್ಲ ಎಂದು ವರದಿಗಳು ಹೇಳಿವೆ.

ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಹಲವು ಬಾರಿ ಸರಕಾರ ವಿಫಲ ಪ್ರಯತ್ನ ನಡೆಸಿದೆ. ಪೊಲೀಸರು ಮತ್ತು ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಹಲವು ಜನರು ಗಾಯಗೊಂಡಿದ್ದರು. ಪ್ರತಿಭಟನೆಯ ಕಿಡಿ ಪಾಕಿಸ್ತಾನದಾದ್ಯಂತ ಹಬ್ಬಿತ್ತು. ತನ್ನನ್ನು ಬಂಧಿಸುವುದು ಕೇವಲ ನಾಟಕವಾಗಿದೆ. ಅಪಹರಿಸಿ ಹತ್ಯೆ ಮಾಡುವ ಉದ್ದೇಶವನ್ನು ಇವರು ಹೊಂದಿದ್ದಾರೆ ಎಂದು ಸರಕಾರದ ವಿರುದ್ಧದ ಇಮ್ರಾನ್‌ ಖಾನ್‌ ದೂರಿದ್ದರು.

ಇಮ್ರಾನ್‌ ಖಾನ್‌ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸ್ವೀಕರಿಸಿದ ದುಬಾರಿ ಗ್ರಾಫ್ ಕೈಗಡಿಯಾರ ಒಳಗೊಂಡಂತೆ ಪಡೆದ ಗಿಫ್ಟ್‌ಗಳ ಕುರಿತಾದ ಪ್ರಕರಣ ಇದಾಗಿದೆ. ಈ ಉಡುಗೊರೆಗಳನ್ನು ರಾಜ್ಯ ಠೇವಣಿ (ತೋಷಖಾನಾ) ದಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪಿಟಿಐ ಮುಖ್ಯಸ್ಥರಾದ ಇಮ್ರಾನ್‌ ಖಾನ್‌ ಮೂರನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ನಂತರ ಈ ತಿಂಗಳ ಆರಂಭದಲ್ಲಿ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.

ತೋಷಖಾನಾ ಪ್ರಕರಣ ಎಂದು ಕರೆಯಲ್ಪಡುವ ಈ ಪ್ರಕರಣದಲ್ಲಿ, ವಿದೇಶಿ ಗಣ್ಯರು ಮತ್ತು ನಾಯಕರಿಂದ ಸರ್ಕಾರದ ಪರವಾಗಿ ಸ್ವೀಕರಿಸಿದ ಕಾಣಿಕೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಇಮ್ರಾನ್‌ ಖಾನ್‌ ವಿರುದ್ಧ ಕೇಳಿಬಂದಿತ್ತು.

    ಹಂಚಿಕೊಳ್ಳಲು ಲೇಖನಗಳು