logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pfi In Patna: ಆಕ್ಟಿವ್‌ Pfi ಎಂದರೇನು? ಘಜ್ವಾ ಏ ಹಿಂದ್‌ ಮತ್ತು ಕಾಶ್ಮೀರ, ಪಾಕ್‌ ನಂಟೇನು?

PFI in Patna: ಆಕ್ಟಿವ್‌ PFI ಎಂದರೇನು? ಘಜ್ವಾ ಏ ಹಿಂದ್‌ ಮತ್ತು ಕಾಶ್ಮೀರ, ಪಾಕ್‌ ನಂಟೇನು?

HT Kannada Desk HT Kannada

Jul 15, 2022 08:28 PM IST

ಪಟನಾದಲ್ಲಿ ಪೊಲೀಸ್‌ ವಶದಲ್ಲಿರುವ ಪಿಎಫ್‌ಐ ಸದಸ್ಯ

    • ಬಿಹಾರದ ಪಟನಾದ ಫುಲ್ವಾರಿ ಷರೀಫ್‌ ಪ್ರದೇಶದಲ್ಲಿ ಬಂಧಿತರಾದ ಪಿಎಫ್‌ಐ ಸದಸ್ಯರು ಆಘಾತಕಾರಿ, ಕಳವಳಕಾರಿ ವಿಷಯಗಳನ್ನು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ರಾಜ್ಯದ ರಾಜಧಾನಿಯಲ್ಲಿ ಅವರು ಕಾಶ್ಮೀರ ಮತ್ತು ಜಿಹಾದ್‌ಗೆ ಸಂಬಂಧಿಸಿ ಬಹುದೊಡ್ಡ ಪಿತೂರಿಯನ್ನೇ ಯೋಜಿಸುತ್ತಿದ್ದರು ಎಂಬ ಅಂಶ ಬಹಿರಂಗವಾಗಿದೆ. ಇಷ್ಟಕ್ಕೂ ಆಕ್ಟಿವ್‌ ಪಿಎಫ್‌ಐ ಎಂದರೇನು? ಇತರೆ ವಿವರ ಇಲ್ಲಿದೆ.
ಪಟನಾದಲ್ಲಿ ಪೊಲೀಸ್‌ ವಶದಲ್ಲಿರುವ ಪಿಎಫ್‌ಐ ಸದಸ್ಯ
ಪಟನಾದಲ್ಲಿ ಪೊಲೀಸ್‌ ವಶದಲ್ಲಿರುವ ಪಿಎಫ್‌ಐ ಸದಸ್ಯ (ANI)

ಪಟನಾ: ಬಿಹಾರದ ರಾಜಧಾನಿ ಪಟನಾದಲ್ಲಿ ಬಹಳ ಇಕ್ಕಟ್ಟಾದ ಪ್ರದೇಶ ಫುಲ್ವಾರಿ ಷರೀಫ್‌. ಇಲ್ಲಿ ಪಿಎಫ್‌ಐ ಕಚೇರಿ ಇದ್ದು, ಅದರ ಸದಸ್ಯರು ದೇಶ ವಿದ್ರೋಹಿ ಕೃತ್ಯಕ್ಕೆ ಪಿತೂರಿ ನಡೆಸಿದ್ದರು. ಖಚಿತ ಮಾಹಿತಿಯೊಂದಿಗೆ ಬಿಹಾರ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಆರೋಪಿಗಳು ಹಲವು ಆಘಾತಕಾರಿ ವಿಷಯಗಳನ್ನು ಒಂದೊಂದಾಗಿ ಬಹಿರಂಗಪಡಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಪಟನಾದಲ್ಲಿರುವ ಆಕ್ಟಿವ್‌ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಮತ್ತು ಗಜ್ವಾ ಏ ಹಿಂದ್‌ ಹಾಗೂ ಕಾಶ್ಮೀರಕ್ಕೂ ನಂಟು ಇದೆ. ಈ ಪ್ರಕರಣ ಸಂಬಂಧ ಗುರುವಾರ ರಾತ್ರಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಮಾರ್ಗುವಾ ಅಹ್ಮದ್‌ ದಾನಿಶ್‌ ಅಲಿಯಾಸ್‌ ತಾಹಿರ್‌ ಎಂದು ಗುರುತಿಸಲಾಗಿದೆ. ಆತ 2006ರಿಂದ 2020ರ ತನಕ ದುಬೈನ್ಲಲಿದ್ದ.

ಪಾಕಿಸ್ತಾನದ ನಂಬರ್‌ನಲ್ಲಿ ವಾಟ್ಸ್‌ಆಪ್‌ ಗ್ರೂಪ್‌

ಬಂಧಿತ ಆರೋಪಿಯ ಫೋನ್ ಸಂಖ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿತ್ತು. ಅದರಲ್ಲಿ ಆತ ದೇಶ ವಿರೋಧಿ ಮಾಹಿತಿಗಳನ್ನು ಶೇರ್‌ ಮಾಡುತ್ತಿದ್ದ. ಘಜ್ವಾ-ಏ-ಹಿಂದ್ ಹೆಸರಿನ ವಾಟ್ಸಾಪ್ ಗ್ರೂಪ್‌ಗಳ ಜತೆಗೆ ನಂಟು ಹೊಂದಿದ್ದ. ಅದರಲ್ಲಿ ಬಹುತೇಕ ಸಂವಹನಗಳು ದೇಶ ವಿರೋಧಿ ಚಟುವಟಿಕೆಗಳು, ಸಂಗತಿಗಳು ಎಂದು ಪಟನಾ ಎಸ್‌ಎಸ್‌ಪಿ ಎಂ.ಎಸ್.ಧಿಲ್ಲೋನ್ ಹೇಳಿದ್ದಾರೆ.

ಬಂಧಿತ ಆರೋಪಿಗಳ ಫೋನ್‌ನಲ್ಲಿ ಪಾಕಿಸ್ತಾನದ ನಂಬರ್‌ನಿಂದ ರಚಿಸಲಾದ ಎರಡು ವಾಟ್ಸಾಪ್ ಗುಂಪುಗಳಿದ್ದವು. ಗಲ್ಫ್ ದೇಶಗಳಿಂದಲೂ ಅನೇಕರು ಇದರಲ್ಲಿ ಸದಸ್ಯರಾಗಿದ್ದಾರೆ. ಬಾಂಗ್ಲಾದೇಶದ ಒಬ್ಬ ವ್ಯಕ್ತಿಯಿಂದ ಜನವರಿಯಲ್ಲಿ ಒಂದು ಗ್ರೂಪ್‌ ಮಾಡಿದ್ದ. ಬಂಧಿತ ಆರೋಪಿಯನ್ನು ಈ ಎರಡೂ ಗುಂಪುಗಳಿಗೆ ಅಡ್ಮಿನ್ ಆಗಿದ್ದ.

ಮುಂದಿನ ವರ್ಷವೇ ನೇರ ಜಿಹಾದ್‌!?

ವಾಟ್ಸ್‌ಆಪ್‌ನಲ್ಲಿರುವ ಈ ಎರಡೂ ಗ್ರೂಪ್‌ಗಳಲ್ಲಿ ದೇಶ ವಿರೋಧಿ ಮಾಹಿತಿಗಳು ಶೇರ್‌ ಆಗುತ್ತಿದ್ದವು. ಭಯೋತ್ಪಾದನೆ ಬೆಂಬಲಿಸುವ ಪೋಸ್ಟ್‌ಗಳು ಮತ್ತು ಪ್ರಚೋದನಕಾರಿ ಸಂದೇಶಗಳು ರವಾನೆಯಾಗುತ್ತಿದ್ದವು. ಕಾಶ್ಮೀರದ ಯುವಕರೇ ಈ ಸಂದೇಶಗಳ ಟಾರ್ಗೆಟ್‌ ಆಗಿದ್ದರು. ಅವರನ್ನು ಪ್ರಚೋದಿಸಿ 2023ರಲ್ಲಿ ನೇರ ಜಿಹಾದ್‌ಗೆ ಕರೆ ನೀಡುವುದಕ್ಕೆ ಸಜ್ಜಾಗಿದ್ದರು. ಅದಕ್ಕೆ ಬೇಕಾದ ಸಿದ್ಧತೆಯನ್ನು PFI ನ ಈ ಕಚೇರಿ ಮೂಲಕ ಮಾಡಲಾಗುತ್ತಿತ್ತು. ಇದೊಂದು ದೊಡ್ಡ ಷಡ್ಯಂತ್ರವಾಗಿತ್ತು ಎಂದು ಧಿಲ್ಲೋನ್‌ ವಿವರಿಸಿದರು.

PFI ಯ 10% ಸೂತ್ರ ಯಾವುದು?

ದಾಳಿ ವೇಳೆ ಪೊಲೀಸರಿಗೆ ಸಿಕ್ಕ ಎಂಟುಪುಟಗಳ ಖಾಸಗಿ ದಾಖಲೆ ಪ್ರಕಾರ, 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ಆಡಳಿತದತ್ತ ಕೊಂಡೊಯ್ಯುವ ಯೋಜನೆ ಉಲ್ಲೇಖವಾಗಿದೆ. ಇದಕ್ಕಾಗಿ ಸಖತ್ ಪ್ಲಾನಿಂಗ್ ಕೂಡ ಮಾಡಿರುವುದು ಅದರಲ್ಲಿ ದಾಖಲಾಗಿದೆ. ವಶಪಡಿಸಿಕೊಂಡ ದಾಖಲೆಗಳ ಪುಟ ಸಂಖ್ಯೆ 3 ರಲ್ಲಿ 10% ಸೂತ್ರವನ್ನು ಉಲ್ಲೇಖಿಸಲಾಗಿದೆ. ಭಾರತದಲ್ಲಿರುವ ಮುಸ್ಲಿಂ ಜನಸಂಖ್ಯೆಯ ಶೇ.10 ರಷ್ಟು ಜನ ಸೇರಿದರೂ ಪಿಎಫ್ಐ 'ಹೇಡಿ ಬಹುಸಂಖ್ಯಾತ' ಸಮುದಾಯವನ್ನು ಮಂಡಿಯೂರುವಂತೆ ಮಾಡಬಹುದು. ಅಲ್ಲದೆ, ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸ ಬಹುದು ಎಂಬ ವಿಶ್ವಾಸವನ್ನು ಪಿಎಫ್ಐ ಅದರಲ್ಲಿ ವ್ಯಕ್ತಪಡಿಸಿದೆ.

ವಿದೇಶಿ ನೆರವಿಗೆ ಪ್ರಯತ್ನ

ದಾಖಲೆಗಳ ಪುಟ ಸಂಖ್ಯೆ 7ರಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯ ವಿಚಾರಗಳು ಉಲ್ಲೇಖವಾಗಿದೆ. ಸರ್ಕಾರದ ಜತೆಗಿನ ಮುಖಾಮುಖಿಯ ಸಮಯದಲ್ಲಿ, "ನಮ್ಮ ತರಬೇತಿ ಪಡೆದ ಸಿಬ್ಬಂದಿಯನ್ನು ಅವಲಂಬಿಸಿರುವುದರ ಜತೆಗೆ, ನಮಗೆ ಸ್ನೇಹಪರ ಇಸ್ಲಾಮಿಕ್ ದೇಶಗಳಿಂದ ಸಹಾಯ ಬೇಕಾಗುತ್ತದೆ ಎಂಬ ಅಂಶವಿದೆ. PFI ಸಂಘಟನೆಯು ಇಸ್ಲಾಂ ಧರ್ಮದ ಧ್ವಜಧಾರಿಯಾದ ಟರ್ಕಿಯೊಂದಿಗೆ ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಸ್ನೇಹ ಸಂಬಂಧವನ್ನು ಸ್ಥಾಪಿಸಿದೆ. ಇದು ಇತರ ಕೆಲವು ಇಸ್ಲಾಮಿಕ್ ದೇಶಗಳೊಂದಿಗೆ ಈ ಸಂಬಂಧವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

    ಹಂಚಿಕೊಳ್ಳಲು ಲೇಖನಗಳು