logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Roadshow In Delhi: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೂ ಮುನ್ನ ದೆಹಲಿಯಲ್ಲಿ ಪ್ರಧಾನಿ ಮೋದಿ ರೋಡ್‌ ಶೋ

PM Modi Roadshow in Delhi: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೂ ಮುನ್ನ ದೆಹಲಿಯಲ್ಲಿ ಪ್ರಧಾನಿ ಮೋದಿ ರೋಡ್‌ ಶೋ

HT Kannada Desk HT Kannada

Jan 16, 2023 05:32 PM IST

google News

ಪ್ರಧಾನಿ ಮೋದಿ ರೋಡ್‌ ಶೋ

    • ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ನಗರದ ಸರ್ದಾರ್ ಪಟೇಲ್ ಮಾರ್ಗ್ ಮತ್ತು ಸೆಂಟ್ರಲ್ ದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್ ನಡುವೆ, ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದರು. ಈ ಕುರಿತು ಇಲ್ಲಿದೆ ಮಾಹಿತಿ..
ಪ್ರಧಾನಿ ಮೋದಿ ರೋಡ್‌ ಶೋ
ಪ್ರಧಾನಿ ಮೋದಿ ರೋಡ್‌ ಶೋ (PTI)

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್‌ ಶೋ ನಡೆಸಿದ್ದಾರೆ.

ನಗರದ ಸರ್ದಾರ್ ಪಟೇಲ್ ಮಾರ್ಗ್ ಮತ್ತು ಸೆಂಟ್ರಲ್ ದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್ ನಡುವೆ, ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದರು. ಈ ವೇಳೆ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ದೆಹಲಿ ನಿವಾಸಿಗಳತ್ತ ಪ್ರಧಾನಿ ಮೋದಿ ಕೈಬೀಸಿದರು.

ಪ್ರಧಾನಿ ಮೋದಿ ಅವರ ರೋಡ್‌ ಶೋಗಾಗಿ ದೆಹಲಿ ಟ್ರಾಫಿಕ್‌ ಪೊಲೀಸರು, ವ್ಯಾಪಕವಾದ ಯೋಜನೆಗಳನ್ನು ರೂಪಿಸಿದ್ದರು. ಜಂತರ್ ಮಂತರ್ ರಸ್ತೆ, ಅಶೋಕ ರಸ್ತೆ ಮತ್ತು ಬಾಂಗ್ಲಾ ಸಾಹಿಬ್ ಲೇನ್ ಸೇರಿದಂತೆ ಎಂಟು ರಸ್ತೆಗಳನ್ನು, ರೋಡ್‌ ಶೋ ಕಾರಣಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಪಟೇಲ್ ಚೌಕ್‌ನಿಂದ ಸಂಸದ್ ಮಾರ್ಗ್ ಮತ್ತು ಜೈ ಸಿಂಗ್ ರಸ್ತೆ ಜಂಕ್ಷನ್‌ವರೆಗೆ, ಪ್ರಧಾನಿ ಮೋದಿ ಅವರ ರೋಡ್‌ ಶೋ ನಡೆಯಲಿದೆ. ರೋಡ್ ಶೋ ನಡೆಯುವ ಮಾರ್ಗದ ಸುತ್ತಲಿನ ಪ್ರದೇಶದಲ್ಲಿ ವಿಶೇಷ ಟ್ರಾಫಿಕ್ ವ್ಯವಸ್ಥೆ ಮಾಡಲಾಗುವುದು ಎಂದು ದೆಹಲಿ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದರು.

ಇನ್ನು ರೋಡ್‌ ಶೋ ಮುಗಿಸಿ ಎನ್‌ಡಿಎಂಸಿ ಕನ್ವೆಶ್ಷನ್‌ ಸೆಂಟರ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪ್ರಮುಖ ಗಣ್ಯರು ಸ್ವಾಗತಿಸಿದರು.

2023ರಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ, ಪಕ್ಷದ ಸಿದ್ಧತೆ ಕುರಿತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.

ಅಷ್ಟೇ ಅಲ್ಲದೇ, ಇದೇ ಕಾರ್ಯಕಾರಣಿ ಸಭೆಯಲ್ಲಿ, ಜೆ.ಪಿ. ನಡ್ಡಾ ಅವರ ಪಕ್ಷದ ರಾಷ್ಟ್ರಾಧ್ಯಕ್ಷ ಅವಧಿಯನ್ನು ವಿಸ್ತರಿಸುವ ಪ್ರಮುಖ ನಿರ್ಧಾರ ಕೂಡ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ವಾರ ಪ್ರಧಾನಿ ಮೋದಿ ಅವರು ಕರ್ನಾಟಕದ ಹುಬ್ಬಳ್ಳಿಯಲ್ಲಿ ಭರ್ಜರಿ ರೋಡ್‌ಶೋ ನಡೆಸಿದ್ದರು. ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿದ್ದ ಅವರು, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ರೋಡ್‌ ಶೋ ನಡೆಸಿದ್ದರು.

ಈ ವೇಳೆ ಬಾಲಕನೋರ್ವ ಭದ್ರತಾ ಕೋಟೆಯನ್ನು ಬೇಧಿಸಿ ಪ್ರಧಾನಿ ಮೋದಿ ಅವರಿಗೆ ಹೂವಿನ ಹಾರ ಹಾಕಲು ದೌಡಾಯಿಸಿದ್ದ. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಬಾಲಕನಿಂದ ಹಾರವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಅದನ್ನು ತಮ್ಮ ಕಾರಿನ ಮುಂಭಾಗದ ಮೇಲೆ ಇರಿಸಿದ್ದರು.

ಘಟನೆಯನ್ನು ಭದ್ರತಾ ಲೋಪ ಎಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದ್ದ ಹು-ಧಾ ಪೊಲೀಸರು, ಬಾಲಕ ಕೇವಲ ಪ್ರಧಾನಿ ಮೋದಿ ಅವರಿಗೆ ಹಾರ ಹಾಕಲು ಬಯಸಿದ್ದ ಎಂದು ಹೇಳಿದ್ದರು.

ಇಂದಿನ ಪ್ರಮುಖ ಸುದ್ದಿ

Rich Indians Wealth: ಭಾರತದ ಶೇ.1ರಷ್ಟು ಶ್ರೀಮಂತರ ಬಳಿ ದೇಶದ ಶೇ.40ರಷ್ಟು ಸಂಪತ್ತು: ಈ ಅಸಮಾನತೆ ತರಲಿದೆಯೇ ಆಪತ್ತು?

ಭಾರತದಲ್ಲಿನ ಶೇ.1ರಷ್ಟು ಶ್ರೀಮಂತರ ಬಳಿ ದೇಶದ ಶೇ.40ಕ್ಕೂ ಹೆಚ್ಚು ಸಂಪತ್ತು ಇದ್ದು, ಜನಸಂಖ್ಯೆಯ ಕೆಳಭಾಗದ ಅರ್ಧದಷ್ಟು ಜನರು ಕೇವಲ ಶೇ.3ರಷ್ಟು ಸಂಪತ್ತನ್ನು ಹಂಚಿಕೊಂಡಿದ್ದಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನ, ತನ್ನ ವಾರ್ಷಿಕ ಅಸಮಾನತೆಯ ವರದಿಯನ್ನು, ಆಕ್ಸ್‌ಫ್ಯಾಮ್ ಇಂಟರ್‌ನ್ಯಾಶನಲ್ ಬಿಡುಗಡೆ ಮಾಡಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ