logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  One World Tb Summit: ವಿಶ್ವ ಕ್ಷಯ ದಿನದ ಅಂಗವಾಗಿ ಇಂದು "ಒಂದು ವಿಶ್ವ ಟಿಬಿ ಶೃಂಗ"ದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

One World TB Summit: ವಿಶ್ವ ಕ್ಷಯ ದಿನದ ಅಂಗವಾಗಿ ಇಂದು "ಒಂದು ವಿಶ್ವ ಟಿಬಿ ಶೃಂಗ"ದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

HT Kannada Desk HT Kannada

Mar 24, 2023 08:04 AM IST

google News

ಪ್ರಧಾನಿ ನರೇಂದ್ರ ಮೋದಿ (ANI)

  • ಇಂದು ಪ್ರಧಾನಿ ನರೇಂದ್ರ ಮೋದಿಯವರು ಒಂದು ವಿಶ್ವ ಟಿಬಿ ಶೃಂಗದಲ್ಲಿ ಟಿಬಿ-ಮುಕ್ತ್ ಪಂಚಾಯತ್ ಉಪಕ್ರಮ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (ANI)
ಪ್ರಧಾನಿ ನರೇಂದ್ರ ಮೋದಿ (ANI) (HT_PRINT)

ನವದೆಹಲಿ: ಇಂದು ವಿಶ್ವ ಕ್ಷಯ ದಿನ. ಇಂದು ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಗೆ ಭೇಟಿ ನೀಡುತ್ತಿದ್ದು, ಅಲ್ಲಿ ರುದ್ರಕಾಶ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ವಿಶ್ವ ಕ್ಷಯ ರೋಗ ದಿನದ ನಿಮಿತ್ತ One World TB Summit ಉದ್ದೇಶಿಸಿ ಮಾತನಾಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಮತ್ತು ಸ್ಟಾಪ್ ಟಿಬಿ ಜತೆಯಾಗಿ ಈ ಶೃಂಗಸಭೆಯನ್ನು ಆಯೋಜಿಸಿವೆ.

ಸ್ಟಾಪ್‌ ಟಿಬಿ (Stop TB)ಯನ್ನು 2001ರಲ್ಲಿ ಸ್ಥಾಪಿಸಲಾಗಿದೆ. ಇದು ವಿಶ್ವಸಂಸ್ಥೆಯ ಜತೆ ಪಾಲುದಾರಿಕೆ ಮಾಡಿರುವ ಸಂಸ್ಥೆಯಾಗಿದೆ. ಕ್ಷಯರೋಗ ಪೀಡಿತ ಜನರು, ಸಮುದಾಯಗಳು ಮತ್ತು ದೇಶಗಳ ಧ್ವನಿಯಾಗಿ ಸ್ಟಾಪ್‌ ಟಿಬಿ ಕಾರ್ಯನಿರ್ವಹಿಸುತ್ತಿದೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಒಂದು ವಿಶ್ವ ಟಿಬಿ ಶೃಂಗದಲ್ಲಿ ಟಿಬಿ-ಮುಕ್ತ್ ಪಂಚಾಯತ್ ಉಪಕ್ರಮ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಟಿಬಿ ಪ್ರಿವೆಂಟಿವ್‌ ಟ್ರೀಟ್‌ಮೆಂಟ್‌ (ಟಿಪಿಟಿ)ಯನ್ನು ದೇಶಾದ್ಯಂತ ಲಾಂಚ್‌ ಮಾಡಲಿದ್ದಾರೆ. ಇದರೊಂದಿಗೆ ವಾರ್ಷಿಕ ಟಿಬಿ ವರದಿ-2023 ಅನ್ನು ಬಿಡುಗಡೆ ಮಾಡಲಿದ್ದಾರೆ.

ಕ್ಷಯರೋಗ ನಿರ್ಮೂಲನೆಗೆ ಶ್ರಮಿಸಿದ ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಪ್ರಧಾನಿ ಮೋದಿಯವರು ಇಂದು ಪ್ರಶಸ್ತಿ ವಿತರಿಸಲಿದ್ದಾರೆ. ಪ್ರಧಾನಿಯವರು 2025ಕ್ಕೆ ಟಿಬಿ ಸಂಬಂಧಿತ ಎಸ್‌ಡಿಜಿ ಗುರಿ ನಿಗದಿಪಡಿಸಿದ್ದಾರೆ.

ದೇಶವು ತನ್ನ ಟಿಬಿ ನಿರ್ಮೂಲನ ಉದ್ದೇಶಗಳನ್ನು ಪೂರೈಸಲು ಇದರ ಗುರಿಗಳ ಕುರಿತು ಮತ್ತಷ್ಟು ಚರ್ಚಿಸಲು ಒಂದು ವಿಶ್ವ ಟಿಬಿ ಶೃಂಗಸಭೆಯು ಮತ್ತಷ್ಟು ಅವಕಾಶ ನೀಡಲಿದೆ ಎಂದು ಒನ್‌ ವರ್ಲ್ಡ್‌ ಟಿಬಿ ಸಮ್ಮಿಟ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಟಿಬಿ ನಿರ್ಮೂಲನ ಕಾರ್ಯಕ್ರಮಗಳ ಕಲಿಕೆಗಳನ್ನು ಪ್ರದರ್ಶಿಸಲು ಈ ಶೃಂಗವು ಒಂದು ಅವಕಾಶವಾಗಿದೆ. ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾನಿಲಯ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು 1780 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಏನಿದು ಕ್ಷಯರೋಗ?

ಕ್ಷಯ ರೋಗ ಅಥವಾ ಟ್ಯುಬರ್ ಕ್ಯುಲೋಸಿಸ್ ಎಂದು ಕರೆಸಿಕೊಳ್ಳುವ ಈ ರೋಗವು ಹಿಂದೊಮ್ಮೆ ಮಾರಕ ರೋಗ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿತ್ತು. ಮೈಕೊ ಬ್ಯಾಕ್ಟಿರೀಯಾ ಟ್ಯುಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟಿರೀಯಾದಿಂದ ಕ್ಷಯರೋಗ ಉಂಟಾಗುತ್ತದೆ. ಈ ಬ್ಯಾಕ್ಟಿರೀಯಾಗಳು ದೇಹದೊಳಗೆ ಸೇರಿಕೊಂಡು ಶ್ವಾಸಕೋಶಗಳಿಗೆ ಹಾನಿ ಮಾಡುತ್ತವೆ.

ಕ್ಷಯ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುತತದೆ. ರೋಗಿ ಕೆಮ್ಮಿದಾಗ ಕಫದಲ್ಲಿರುವ ರೋಗಾಣುಗಳೊಂದಿಗೆ ಇದು ಇನ್ನೊಬ್ಬರಿಗೆ ಹರಡುತ್ತದೆ. ಕ್ಷಯರೋಗವು ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ ಈ ರೋಗವು ದೇಹದ ಇತರ ಅಂಗಗಳನ್ನು ಹಾನಿಗೊಳಿಸುತ್ತದೆ. ಇದನ್ನು ಎಕ್ಸ್ಟ್ರಾಪಲ್ಮನರಿ ಟ್ಯೂಬರ್‌ಕ್ಯುಲೋಸಿಸ್ ಎಂದು ಕರೆಯಲಾಗುತ್ತದೆ. ಕ್ಷಯರೋಗದ ರೋಗಲಕ್ಷಣಗಳೇನು? ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳಲು ಈ ಲಿಂಕ್‌ಗೆ ಭೇಟಿ ನೀಡಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ