logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Video: ಭಾರತೀಯ ವಾದ್ಯ ಸಿತಾರ್ ನುಡಿಸಿದ ಸಿಂಗಾಪುರ ಡೆಪ್ಯುಟಿ ಪಿಎಂ: ಫಿದಾ ಆದ್ರು ನರೇಂದ್ರ ಮೋದಿ

Video: ಭಾರತೀಯ ವಾದ್ಯ ಸಿತಾರ್ ನುಡಿಸಿದ ಸಿಂಗಾಪುರ ಡೆಪ್ಯುಟಿ ಪಿಎಂ: ಫಿದಾ ಆದ್ರು ನರೇಂದ್ರ ಮೋದಿ

HT Kannada Desk HT Kannada

Nov 15, 2023 08:00 PM IST

google News

ಲಾರೆನ್ಸ್ ವಾಂಗ್ - ನರೇಂದ್ರ ಮೋದಿ

    • ಸಿತಾರ್​ ಕಲಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದ ಸಿಂಗಾಪುರ ಡೆಪ್ಯುಟಿ ಪಿಎಂ ಲಾರೆನ್ಸ್ ವಾಂಗ್ ಅವರು, "ಈ ಅನುಭವವನ್ನು ಆನಂದಿಸಿದೆ ಮತ್ತು ಶ್ರೀಮಂತ ಶಾಸ್ತ್ರೀಯ ಭಾರತೀಯ ಸಂಗೀತ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಇದಾಗಿದೆ" ಎಂದು ಬರೆದುಕೊಂಡಿದ್ದಾರೆ.
ಲಾರೆನ್ಸ್ ವಾಂಗ್ - ನರೇಂದ್ರ ಮೋದಿ
ಲಾರೆನ್ಸ್ ವಾಂಗ್ - ನರೇಂದ್ರ ಮೋದಿ

ಸಿಂಗಾಪುರದ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಭಾರತೀಯ ಸಂಗೀತ ವಾದ್ಯಗಳಲ್ಲಿ ಒಂದಾದ ಸಿತಾರ್ ಕಲಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಫಿದಾ ಆಗಿದ್ದಾರೆ.

ಕಾರ್ತಿಗಯನ್ ಎಂಬವರ ಬಳಿ ಸಿತಾರ್​ ಕಲಿಯುತ್ತಿರುವ ವಿಡಿಯೋವನ್ನು ಎಕ್ಸ್​ (ಟ್ವಿಟರ್​)ನಲ್ಲಿ ಹಂಚಿಕೊಂಡಿದ್ದ ಸಿಂಗಾಪುರ ಡೆಪ್ಯುಟಿ ಪಿಎಂ ಲಾರೆನ್ಸ್ ವಾಂಗ್ ಅವರು, "ಸಿತಾರ್‌ನ ಸುಂದರವಾದ ಟ್ಯೂನ್‌ಗಳ ಪರಿಚಯವನ್ನು ಪಡೆಯುತ್ತಿದ್ದೇನೆ. ಸ್ವಲ್ಪ ಸಮಯದಿಂದ ಇಲ್ಲಿ ಕಾರ್ತಿಗಯನ್ ಅವರು ಕಲಿಯುತ್ತಿದ್ದಾರೆ. ಸಿತಾರ್​​ನ ಮೂಲ ತಂತ್ರಗಳ ಬಗ್ಗೆ ತುಂಬಾ ತಾಳ್ಮೆಯಿಂದ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಅನುಭವವನ್ನು ಆನಂದಿಸಿದೆ ಮತ್ತು ಶ್ರೀಮಂತ ಶಾಸ್ತ್ರೀಯ ಭಾರತೀಯ ಸಂಗೀತ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಇದಾಗಿದೆ" ಎಂದು ಬರೆದುಕೊಂಡಿದ್ದಾರೆ.

ಲಾರೆನ್ಸ್ ವಾಂಗ್ ಅವರ ಪೋಸ್ಟ್​ ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, "ಸಿತಾರ್‌ ಬಗೆಗೆ ನಿಮ್ಮ ಉತ್ಸಾಹವು ಇನ್ನೂ ಬೆಳೆಯಲಿ ಮತ್ತು ಇತರರಿಗೆ ಸ್ಫೂರ್ತಿಯಾಗಲಿ. ಈ ಮಧುರ ಪ್ರಯತ್ನಕ್ಕೆ ಅಭಿನಂದನೆಗಳು. ಭಾರತದ ಸಂಗೀತ ಇತಿಹಾಸವು ವೈವಿಧ್ಯತೆಯ ಸ್ವರಮೇಳವಾಗಿದೆ, ಇದು ಸಹಸ್ರಾರು ವರ್ಷಗಳಿಂದ ವಿಕಸನಗೊಂಡ ಲಯಗಳ ಮೂಲಕ ಪ್ರತಿಧ್ವನಿಸುತ್ತದೆ" ಎಂದು ಟ್ವೀಟ್​ ಮಾಡಿದ್ದಾರೆ.

ನವೆಂಬರ್ 14 ರಂದು ಪಿಎಂ ಮೋದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದು, ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಿತಾರ್ ಕಲಿಯುವ ವಾಂಗ್ ಅವರ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. "ನಮ್ಮ ಕಿವಿಗಳಿಗೆ ಒಳ್ಳೆಯ ಟ್ರೀಟ್​" ಎಂದು ಒಬ್ಬರೆ ಹೇಳಿದರೆ, "ನೀವು ಚೆನ್ನಾಗಿ ಸಿತಾರ್​ ನುಡಿಸುತ್ತಿದ್ದೀರಿ, ಇಷ್ಟವಾಯಿತು" ಎಂದು ಮತ್ತೊಬ್ಬರು, "ಈ ಸಂಗೀತವು ತುಂಬಾ ಅದ್ಭುತವಾಗಿದೆ" ಎಂದು ಮಗದೊಬ್ಬರು ಕಾಮೆಂಟ್​ ಮಾಡಿದ್ದಾರೆ.

"ಸಿತಾರ್​, ಇದೊಂದು ಉತ್ತಮವಾದ ವಾದ್ಯ ಆದರೆ ಸ್ಪಷ್ಟ, ಸಂಕೀರ್ಣ ತಂತ್ರ, ತಂತಿಗಳು ಇತ್ಯಾದಿಗಳಿಂದ ಚೆನ್ನಾಗಿ ನುಡಿಸಲು ಸವಾಲಿನ ವಾದ್ಯ" ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ