logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Post-budget Webinars: ಇಂದಿನಿಂದ ಪೋಸ್ಟ್‌ ಬಜೆಟ್‌ ವೆಬಿನಾರ್;‌ ಹಸಿರು ಬೆಳವಣಿಗೆ ವೆಬಿನಾರ್‌ಗೆ ಚಾಲನೆ ನೀಡಿದ್ರು ಪ್ರಧಾನಿ ಮೋದಿ

Post-budget webinars: ಇಂದಿನಿಂದ ಪೋಸ್ಟ್‌ ಬಜೆಟ್‌ ವೆಬಿನಾರ್;‌ ಹಸಿರು ಬೆಳವಣಿಗೆ ವೆಬಿನಾರ್‌ಗೆ ಚಾಲನೆ ನೀಡಿದ್ರು ಪ್ರಧಾನಿ ಮೋದಿ

HT Kannada Desk HT Kannada

Feb 23, 2023 12:40 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ

  • Post-budget webinars: ವೆಬಿನಾರ್‌ನ ವೇಳಾಪಟ್ಟಿ ಪ್ರಕಾರ ಇಂದು 'ಹಸಿರು ಬೆಳವಣಿಗೆ' ಯೊಂದಿಗೆ ವೆಬಿನಾರ್‌ನ ಮೊದಲು ಕಂತು ಪ್ರಾರಂಭವಾಗಿದೆ. ನಂತರ 'ಕೃಷಿ ಮತ್ತು ಸಹಕಾರಿಗಳು, 'ಯುವಶಕ್ತಿ ಕೌಶಲ್ಯ ಮತ್ತು ಶಿಕ್ಷಣವನ್ನು ಬಳಸಿಕೊಳ್ಳುವುದು' ಸೇರಿ ವಿವಿಧ ವಿಷಯಗಳೊಂದಿಗೆ ಮಾ.11 ರವರೆಗೆ ಮುಂದುವರಿಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ (HT)

ಕೇಂದ್ರ ಸರ್ಕಾರದ ಈ ಸಲದ ಬಜೆಟ್‌ಗೆ ಸಂಬಂಧಿಸಿದ 12 ಪೋಸ್ಟ್‌ ಬಜೆಟ್‌ ವೆಬಿನಾರ್‌ಗಳ ಆಯೋಜನೆ ಆಗಿದೆ. ಈ ವೆಬಿನಾರ್‌ಗಳ ಉದ್ಘಾಟನೆ ಇಂದು ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯಾದ್ರೂ ಗ್ರಾಹಕರಿಗೆ ಸಂತಸ ನೀಡದ ಚಿನ್ನದ ಬೆಲೆ; ಇಂದು ಕೂಡ ಬೆಳ್ಳಿ ದರ ಹೆಚ್ಚಳ

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

ಈ ವರ್ಷದ ಯೂನಿಯನ್ ಬಜೆಟ್‌ನಲ್ಲಿ ವಿವರಿಸಿದಂತೆ ‘ಸಪ್ತಋಷಿ’ ಆದ್ಯತೆಗಳ ಮೇಲೆ ನಿರ್ಮಿಸಲು ಆಯೋಜಿಸಲಾದ ವೆಬ್‌ನಾರ್‌ಗಳು ಮಾರ್ಚ್ 11 ರವರೆಗೆ ಮುಂದುವರಿಯುತ್ತದೆ ಎಂದು ಹಣಕಾಸು ಸಚಿವಾಲಯ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಡ ಪತ್ರ ಮಂಡನೆ ದಿನಾಂಕವನ್ನು ಫೆ.1ಕ್ಕೆ ನಿಗದಿ ಮಾಡಿರುವ ಕಾರಣ ಹಲವು ರೀತಿಯಲ್ಲಿ ಅನುಕೂಲವಿದೆ. ಇದರಿಂದಾಗಿ ಮುಂಗಾರು ಪ್ರಾರಂಭಕ್ಕೆ ಮೊದಲೇ ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಅನುದಾನ ಬಳಕೆಗೆ ಯೋಜನೆ ರೂಪಿಸಲು ಸಮಯ ಸಿಗುತ್ತದೆ. ಬಳಕೆಯೂ ಸುಗಮವಾಗುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ಸಾಮೂಹಿಕ ಪಾತ್ರವನ್ನು ಸೂಚಿಸುವ ‘ಜನ್ ಭಾಗೀಧಾರಿ’ (ಜನರ ಭಾಗವಹಿಸುವಿಕೆ) ಕಲ್ಪನೆಯೊಂದಿಗೆ 2021 ರಲ್ಲಿ ಸರಣಿಯನ್ನು ಪ್ರಾರಂಭಿಸಲಾಯಿತು.

ಜನ್ ಭಾಗೀಧಾರಿಯ ಉತ್ಸಾಹದಲ್ಲಿ, ಎಲ್ಲ ಕಾರ್ಯಕ್ರಮಗಳಲ್ಲಿ ದೊಡ್ಡ ಪ್ರಮಾಣದ ಸಾರ್ವಜನಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ನಾಗರಿಕರು ನಮ್ಮ ರಾಷ್ಟ್ರ ನಾಯಕರ ಶ್ರೇಷ್ಠ ಆದರ್ಶನಗಳನ್ನು ಮುಂದುವರಿಸುವುದಕ್ಕೆ ಅಗತ್ಯ ಸ್ಪೂರ್ತಿಯನ್ನು ಪಡೆಯಬಹುದು ಎಂದು ಗೃಹ ಸಚಿವಾಲಯ ಹೇಳಿದೆ.

ಇಂದು ಹಸಿರು ಬೆಳವಣಿಗೆ ಕುರಿತ ವೆಬಿನಾರ್‌

ವೆಬಿನಾರ್‌ನ ವೇಳಾಪಟ್ಟಿ ಪ್ರಕಾರ ಇಂದು (ಫೆಬ್ರವರಿ 23) 'ಹಸಿರು ಬೆಳವಣಿಗೆ' ಯೊಂದಿಗೆ ವೆಬಿನಾರ್‌ನ ಮೊದಲು ಕಂತು ಪ್ರಾರಂಭವಾಗುತ್ತದೆ. ನಂತರ 'ಕೃಷಿ ಮತ್ತು ಸಹಕಾರಿಗಳು, 'ಯುವಶಕ್ತಿ ಕೌಶಲ್ಯ ಮತ್ತು ಶಿಕ್ಷಣವನ್ನು ಬಳಸಿಕೊಳ್ಳುವುದು' ಮತ್ತು ಇತರವುಗಳು ಮಾರ್ಚ್ 11 ರವರೆಗೆ ಮುಂದುವರಿದು ಅಜೆಂಡಾವು 'ಪಿಎಂ ವಿಶ್ವಕರ್ಮ ಕೌಶಲ್ ಸಮ್ಮಾನ್ (ಪಿಎಂ ವಿಕಾಸ್) ನೊಂದಿಗೆ ಕೊನೆಗೊಳ್ಳುತ್ತದೆ.

ರಕ್ಷಣಾ ಉತ್ಪಾದನಾ ವಿಭಾಗದ ಯೂಟ್ಯೂಬ್ ಚಾನೆಲ್‌ನಲ್ಲಿ ವೆಬ್‌ನಾರ್ ಅನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ರ ಆರ್ಥಿಕ ವರ್ಷಕ್ಕೆ ‘ಸಪ್ತಿಋಷಿ’ ಆದ್ಯತೆಗಳನ್ನು ವಿವರಿಸಿದರು. ಆಧುನಿಕ ರಾಷ್ಟ್ರವಾಗಿ ಶತಮಾನೋತ್ಸವದತ್ತ 25 ವರ್ಷಗಳ ಪ್ರಯಾಣದ ಮೂಲಕ ದೇಶವನ್ನು ಅಮೃತ ಕಾಲದ ಮೂಲಕ ಮಾರ್ಗದರ್ಶನ ಮಾಡಲು ಸಪ್ತಋಷಿಗಳನ್ನು (ಏಳು ಆದ್ಯತೆಗಳು) ಪಟ್ಟಿ ಮಾಡಿದರು.

ಈ ಪ್ಯಾಕೇಜ್ ಹಣಕಾಸಿನ ನೆರವು, ಕೌಶಲ್ಯ ತರಬೇತಿ, ಡಿಜಿಟಲ್, ಹಸಿರು ತಂತ್ರಗಳು, ಬ್ರ್ಯಾಂಡ್ ಪ್ರಚಾರ, ಡಿಜಿಟಲ್ ಪಾವತಿ, ಸಾಮಾಜಿಕ ಭದ್ರತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.

ಬಜೆಟ್‌ನಲ್ಲಿ ಸಚಿವರು ಉಲ್ಲೇಖಿಸಿದ ಏಳು ಆದ್ಯತೆಗಳೆಂದರೆ, ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯನ್ನು ತಲುಪುವುದು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯವನ್ನು ಅನಾವರಣಗೊಳಿಸುವುದು, ಹಸಿರು ಬೆಳವಣಿಗೆ, ಯುವ ಶಕ್ತಿ ಮತ್ತು ಹಣಕಾಸು ವಲಯಗಳಾಗಿವೆ.

ವೀಡಿಯೊ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು, 2023 ರ ಬಜೆಟ್ ಅನ್ನು ಶ್ಲಾಘಿಸಿದರು ಮತ್ತು “ಅಮೃತ್ ಕಾಲ್‌ನ ಮೊದಲ ಬಜೆಟ್ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನರು ಮತ್ತು ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಸಮಾಜದ ಕನಸುಗಳನ್ನು ಈಡೇರಿಸುತ್ತದೆ ಎಂದು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು