Puri Jagannath Rath Yatra: ಪುರಿ ಜಗ್ನನಾಥ ರಥಯಾತ್ರೆ ಆರಂಭ; ದೇವರ ದರ್ಶನಕ್ಕಾಗಿ ಲಕ್ಷಾಂತರ ಮಂದಿ ಕಾತುರ
Jun 20, 2023 11:15 AM IST
ಪುರಿಯಲ್ಲಿ ಜಗನ್ನಾಥ ರಥಯಾತ್ರೆ ಆರಂಭವಾಗಿದೆ (ANI)
ಒಡಿಶಾದ ಪುರಿಯಲ್ಲಿ ಭಗವಾನ್ ಜಗನ್ನಾಥನ ರಥಯಾತ್ರೆ ಆರಂಭವಾಗಿದ್ದು, ರಥವನ್ನು ಎಳೆಯಲು ಸಾವಿರಾರು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.
ಪುರಿ (ಒಡಿಶಾ): ಪುರಿಯಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುವ ವಾರ್ಷಿಕ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ (Puri Jagannath Rath Yatra) ಇಂದು ( ಜೂನ್ 20, ಮಂಗಳವಾರ) ಆರಂಭವಾಗಿದೆ.
ರಥಯಾತ್ರೆಯು ಶ್ರೀಮಂದಿರದಿಂದ ಗುಂಡಿಚಾ ದೇವಸ್ಥಾನದವರೆಗೆ ಸಾಗಲಿದೆ. ಯಾತ್ರೆಗಾಗಿ ಮೂರು ಭವ್ಯವಾದ ರಥಗಳನ್ನು ಸಿಂಗಾರ ಮಾಡಲಾಗಿದ್ದು, ಸಿಂಘ ದ್ವಾರಕ್ಕೆ ತಂದು ಗುಂಡಿಚಾ ದೇವಸ್ಥಾನದ ಕಡೆಯಿಂದ ಪೂರ್ವಕ್ಕೆ ಮುಖಮಾಡಿ ನಿಲ್ಲಿಸಲಾಗಿದೆ. ಈ ಮಾರ್ಗದಿಂದ ರಥಗಳು ಸಾಗಲಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, ರಥವನ್ನು ಎಳೆಯಲು ಕಾಯುತ್ತಿದ್ದಾರೆ.
ಒಡಿಶಾ ಮಾತ್ರವಲ್ಲದೆ, ದೇಶದ ನಾನಾ ಭಾಗಗಳಿಂದ ರಥಯಾತ್ರೆಗೆ ಭಕ್ತರು ಆಗಮಿಸಿದ್ದು, ರಥದಲ್ಲಿ ಜಗನ್ನಾಥನನ್ನು ಕಣ್ತುಂಬಿಕೊಳ್ಳಲು ಉತ್ಸಾಹದಿಂದ ಕಾಯುತ್ತಿದ್ದಾರೆ. ರಥೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಗುಜರಾತ್‌ನ ಅಹಮಬಾದ್‌ನಲ್ಲಿ ಜಗನ್ನಾಥ ರಥಯಾತ್ರೆಯನ್ನು ಆಚರಿಸಲಾಗುತ್ತಿದೆ. ಈ ಉತ್ಸವವು ಪುರಿಯ ಜಗನ್ನಾಥ ರಥಯಾತ್ರೆಯ ನಂತರ ದೇಶದ ಎರಡನೇ ಅತಿದೊಡ್ಡ ರಥಯಾತ್ರೆ ಎನಿಸಿದೆ.
ಪುರಿ ಜಗನ್ನಾಥ ರಥೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಮೋದಿ ಶುಭಕೋರಿದ್ದಾರೆ. ಎಲ್ಲರಿಗೂ ರಥಯಾತ್ರೆಯ ಶುಭಾಶಯಗಳು. ನಾನು ಈ ಪವಿತ್ರ ಸಂದರ್ಭವನ್ನು ಆಚರಿಸುತ್ತಿರುವಾಗ, ಜಗನ್ನಾಥನ ದಿವ್ಯ ಪ್ರಯಾಣವು ನಮ್ಮ ಜೀವನವನ್ನು ಆರೋಗ್ಯ, ಸಂತೋಷ ಹಾಗೂ ಆಧ್ಯಾತ್ಮಿಕ ಪುಷ್ಟೀಕರಣದಿಂದ ತುಂಬಿಲಿ ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸಮಯದಲ್ಲಿ ರಥಯಾತ್ರೆಗೆ ಸರ್ಕಾರ ಅವಕಾಶ ನೀಡಿರಲಿಲ್ಲ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೋರ್ಟ್ ಕೋವಿಡ್ ಸಮಯದಲ್ಲಿ ರಥಯಾತ್ರೆಗೆ ಅವಕಾಶ ನಿರಾಕರಿಸಿತ್ತು.
ವಿಭಾಗ