logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಟ್ಟಿತೇ ಉಕ್ರೇನಿಗರ ಶಾಪ!, ಪುಟಿನ್‌ ಆಯಸ್ಸು ಇನ್ನು ಎರಡೇ ವರ್ಷವಂತೆ!

ತಟ್ಟಿತೇ ಉಕ್ರೇನಿಗರ ಶಾಪ!, ಪುಟಿನ್‌ ಆಯಸ್ಸು ಇನ್ನು ಎರಡೇ ವರ್ಷವಂತೆ!

HT Kannada Desk HT Kannada

Jun 28, 2022 01:31 PM IST

google News

ವ್ಲಾಡಿಮಿರ್ ಪುಟಿನ್ ಅವರು ಅನೇಕ "ಗಂಭೀರ" ಕಾಯಿಲೆಗಳಿಂದ ಬಳಲುತ್ತಿದ್ದಾರಂತೆ

    • ಉಕ್ರೇನಿಯನ್ ಗುಪ್ತಚರ ಸೇವೆಯ ಮುಖ್ಯಸ್ಥರ ಪ್ರಕಾರ, ವ್ಲಾಡಿಮಿರ್ ಪುಟಿನ್ ಅವರು ಅನೇಕ "ಗಂಭೀರ" ಕಾಯಿಲೆಗಳಿಂದ ಬಳಲುತ್ತಿರುವ ಕಾರಣ ಎರಡು ವರ್ಷಗಳಿಗಿಂತ ಕಡಿಮೆ ಸಮಯ ಮಾತ್ರ ಬದುಕುತ್ತಾರೆ
ವ್ಲಾಡಿಮಿರ್ ಪುಟಿನ್ ಅವರು ಅನೇಕ "ಗಂಭೀರ" ಕಾಯಿಲೆಗಳಿಂದ ಬಳಲುತ್ತಿದ್ದಾರಂತೆ
ವ್ಲಾಡಿಮಿರ್ ಪುಟಿನ್ ಅವರು ಅನೇಕ "ಗಂಭೀರ" ಕಾಯಿಲೆಗಳಿಂದ ಬಳಲುತ್ತಿದ್ದಾರಂತೆ (via REUTERS)

ಮಾಸ್ಕೋ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಉಕ್ರೇನ್‌ ಮೇಲೆ ಸಮರ ಸಾರಿ ಜಾಗತಿಕವಾಗಿ ಸುದ್ದಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಆರೋಗ್ಯದ ಕುರಿತು ಚಿತ್ರವಿಚಿತ್ರ ಸುದ್ದಿಗಳು ಹೊರಬೀಳುತ್ತಿರುವುದು ಮುಂದುವರದಿದೆ. ಈಗಿನ ವರದಿ ಪ್ರಕಾರ ವ್ಲಾದಿಮಿರ್‌ ಪುಟಿನ್‌ ಬದುಕುವುದು ಹೆಚ್ಚೆಂದರೆ ಇನ್ನೆರಡು ವರ್ಷವಂತೆ.

ಉಕ್ರೇನಿಯನ್ ಗುಪ್ತಚರ ಸೇವೆಯ ಮುಖ್ಯಸ್ಥರ ಪ್ರಕಾರ, ವ್ಲಾಡಿಮಿರ್ ಪುಟಿನ್ ಅವರು ಅನೇಕ "ಗಂಭೀರ" ಕಾಯಿಲೆಗಳಿಂದ ಬಳಲುತ್ತಿರುವ ಕಾರಣ ಎರಡು ವರ್ಷಗಳಿಗಿಂತ ಕಡಿಮೆ ಸಮಯ ಮಾತ್ರ ಬದುಕುತ್ತಾರೆ ಎಂದು ವಿವಿಧ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಕ್ರೆಮ್ಲಿನ್‌ಗೆ ನುಸುಳಿರುವ ಕೀವ್ ಗೂಢಚಾರರು "ಮಾನವ ಬುದ್ಧಿಮತ್ತೆ"ಗೆ ಸವಾಲು ಹಾಕಿ ಈ ಮಾಹಿತಿ ಕಲೆ ಹಾಕಿದ್ದಾರೆೆ ಎಂದು ಅವರು ಹೇಳಿದ್ದಾರೆ.

"ಪುಟಿನ್‌ಗೆ ದೀರ್ಘಾಯುಷ್ಯವಿಲ್ಲʼʼ ಎಂದು ಯುಎಸ್‌ಎ ಟುಡೇ ವರದಿಯಲ್ಲಿ ಮೇಜರ್‌ ಜನರಲ್‌ ಕೈರಿಲೊ ಬುಡನೋವ್ ಅಭಿಪ್ರಾಯಪಟ್ಟಿದ್ದಾರೆ. ಪುಟಿನ್‌ ಆರೋಗ್ಯ ಸ್ಥಿತಿ ಕುರಿತು ಈ ಹಿಂದೆಯೇ ಸಾಕಷ್ಟು ಊಹಾಪೋಹಗಳು ಇದ್ದವು. ಇದೀಗ ಉಕ್ರೇನ್‌ ಗುಪ್ತಚರರು ಈ ಕುರಿತು ಸಾಕಷ್ಟು ವಿವರ ಸಂಗ್ರಹಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಆರೋಗ್ಯ ತೊಂದರೆಗಳನ್ನು ಸಾಕಷ್ಟು ಜನರು ಗುರುತಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಕ್ಷಣಾ ಸಚಿವ ಸೆರ್ಗೇ ಶೋಯಿಗು ಜೊತೆ ಸಭೆ ನಡೆಸುವಾಗ ಟೇಬಲ್ ಅನ್ನು ಅಸಹಜ ರೀತಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅಂದರೆ, ಅವರಿಗೆ ದೃಢವಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಕ್ರೆಮ್ಲಿನ್‌ಲ್ಲಿ ಪ್ರಶಸ್ತಿಪ್ರದಾನ ಸಮಾರಂಭವೊಂದರಲ್ಲೂ ಪುಟಿನ್ ಅವರು ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದಂತೆ ಕಾಣಿಸುತ್ತಿರಲಿಲ್ಲ. ರಷ್ಯಾದ ಸಿನಿಮಾ ನಿರ್ದೇಶಕ ನಿಕಿತಾ ಮಿಖಾಲ್‌ಕೋವ್ ಅವರಿಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಭಾಷಣ ಆರಂಭಿಸುವಾಗ ಪುಟಿನ್ ತಲೆಸುತ್ತಿ ಬೀಳುವ ರೀತಿಯಲ್ಲಿ ವಾಲಾಡುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಪುಟಿನ್‌ ಅವರಿಗೆ Parkinson ಮತ್ತು schizophrenic symptoms ಇರುವುದಾಗಿ ವರದಿಗಳು ಹೇಳಿವೆ. ರಷ್ಯಾದ ಅಧ್ಯಕ್ಷರಿಗೆ ರಕ್ತ ಮತ್ತು ಉದರದ ಕ್ಯಾನ್ಸರ್ ಇದೆ ಎಂದೂ ವರದಿಗಳು ಹೇಳಿವೆ. ಇದರೊಂದಿಗೆ ಮಾನಸಿಕ ತೊಂದರೆಗಳಿಂದಲೂ ಪುಟಿನ್‌ ಬಳಲುತ್ತಿದ್ದಾರಂತೆ. ಡೆಮೆನ್ಷಿಯಾ, ಶಿಜೋಫ್ರೇನಿಯಾ ಮತ್ತು ಪ್ಯಾರಾನೋಯಿಯ ಇತ್ಯಾದಿ ತೊಂದರೆಗಳೂ ಇವರಿಗೆ ಇದೆ ಎಂದು ಹಲವು ವರದಿಗಳು ಹೇಳಿವೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಕ್ಯಾನ್ಸರ್ ಬಹಳ ವೇಗವಾಗಿ ಬೆಳೆಯುತ್ತಿದೆ. ಇವರು ಹೆಚ್ಚೆಂದರೆ ಮೂರು ವರ್ಷ ಬದುಕಬಹುದು ಎಂದು ಮೂರು ವಾರದ ಹಿಂದೆಯೂ ವರದಿಗಳು ಹೇಳಿದ್ದವು. ಈಗಿನ ವರದಿಗಳು ಪುಟಿನ್‌ ಆಯಸ್ಸು ಕೇವಲ ೨ ವರ್ಷವೆಂದಿವೆ. ಪುಟಿನ್ ಅವರು ತಮ್ಮ ದೃಷ್ಟಿ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಎಫ್‌ಎಸ್‌ಬಿ (ರಷ್ಯನ್ ಫೆಡರಲ್ ಸೆಕ್ಯುರಿಟಿ ಸರ್ವೀಸ್) ಅಧಿಕಾರಿಯೊಬ್ಬರೂ ಇತ್ತೇಚೆಗೆ ಹೇಳಿದ್ದರು.

ಪುಟಿನ್ ಎಲ್ಲೆ ಹೋದರು ತಮ್ಮ ಮಲ ಮೂತ್ರವನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದೂ ಇತ್ತೀಚೆಗೆ ವರದಿಗಳು ಹೇಳಿದ್ದವು. ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮಲ ಮೂತ್ರವನ್ನು ಯಾರಾದರೂ ಪರೀಕ್ಷಿಸಿದರೆ ಆರೋಗ್ಯದ ಮಾಹಿತಿ ಸಂಪೂರ್ಣ ಬಯಲಾಗಲಿದೆ. ಹೀಗಾಗಿ ಪುಟಿನ್ ಆರೋಗ್ಯದ ಕುರಿತು ಯಾವುದೇ ಸುಳಿವು ಹಾಗೂ ಕುರುಹು ಸಿಗಬಾರದು ಅನ್ನೋ ಕಾರಣಕ್ಕೆ ಮಲ ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಒಯ್ಯಲಾಗುತ್ತಿದೆ ಎಂದು ವರದಿಗಳು ಹೇಳಿದ್ದವು.

ಪುಟಿನ್‌ ಆರೋಗ್ಯದ ಕುರಿತು ನಾನಾ ಊಹಾಪೋಹಗಳು ಮುಂದುವರೆಯುತ್ತಿರುವ ನಡುವೆಯೂ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿದ್ದು, ಸಾಕಷ್ಟು ಜನರು ಜೀವಭಯದಲ್ಲೇ ದಿನದೂಡುತ್ತಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ