logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Asia University Rankings: ಕ್ಯುಎಸ್‌ ಏಷಿಯಾ ವಿಶ್ವವಿದ್ಯಾನಿಲಯ ರ‍್ಯಾಂಕಿಂಗ್​: ಚೀನಾ ಹಿಂದಿಕ್ಕಿದ ಭಾರತ, ಯಾವ ವಿವಿಗೆ ಎಷ್ಟನೇ ರ‍್ಯಾಂಕ್

Asia University Rankings: ಕ್ಯುಎಸ್‌ ಏಷಿಯಾ ವಿಶ್ವವಿದ್ಯಾನಿಲಯ ರ‍್ಯಾಂಕಿಂಗ್​: ಚೀನಾ ಹಿಂದಿಕ್ಕಿದ ಭಾರತ, ಯಾವ ವಿವಿಗೆ ಎಷ್ಟನೇ ರ‍್ಯಾಂಕ್

HT Kannada Desk HT Kannada

Nov 09, 2023 01:27 PM IST

google News

ಕ್ಯುಎಸ್‌ ಏಷಿಯಾ ರ‍್ಯಾಂಕಿಂಗ್‌ ನಲ್ಲಿ ಬೆಂಗಳೂರಿನ ಐಐಎಸ್‌ಸಿ ಕೂಡ ಸ್ಥಾನ ಪಡೆದಿದೆ.

    • QS Asia University Rankings ಕ್ಯುಎಸ್‌ ಏಷಿಯಾ ವಿಶ್ವವಿದ್ಯಾನಿಲಯಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಹಲವು ವಿಶ್ವ ವಿದ್ಯಾನಿಲಯ ಸ್ಥಾನ ಪಡೆದಿವೆ. 
ಕ್ಯುಎಸ್‌ ಏಷಿಯಾ ರ‍್ಯಾಂಕಿಂಗ್‌ ನಲ್ಲಿ ಬೆಂಗಳೂರಿನ ಐಐಎಸ್‌ಸಿ ಕೂಡ ಸ್ಥಾನ ಪಡೆದಿದೆ.
ಕ್ಯುಎಸ್‌ ಏಷಿಯಾ ರ‍್ಯಾಂಕಿಂಗ್‌ ನಲ್ಲಿ ಬೆಂಗಳೂರಿನ ಐಐಎಸ್‌ಸಿ ಕೂಡ ಸ್ಥಾನ ಪಡೆದಿದೆ.

ದೆಹಲಿ: ಕ್ಯುಎಸ್‌ ಏಷಿಯಾ 2024 ರ‍್ಯಾಂಕ್‌ ಪಟ್ಟಿ ಬಿಡುಗಡೆಯಾಗಿದೆ. ಚೀನಾ ದೇಶವನ್ನು ಹಿಂದಿಕ್ಕಿರುವ ಭಾರತದ ಹೆಚ್ಚು ವಿಶ್ವವಿದ್ಯಾನಿಲಯ, ಶೈಕ್ಷಣಿಕ ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಭಾರತದ ಒಟ್ಟು 148 ವಿಶ್ವವಿದ್ಯಾನಿಲಯಗಳು ಕ್ಯುಎಸ್‌ ಏಷಿಯಾ ರ‍್ಯಾಂಕ್‌ ಪಟ್ಟಿಯಲ್ಲಿದ್ದರೆ, ಚೀನಾದ 133 ಹಾಗೂ ಜಪಾನ್‌ 96 ವಿಶ್ವವಿದ್ಯಾನಿಲಯಗಳು ಪಟ್ಟಿಯಲ್ಲಿವೆ. ಹಿಂದಿನ ವರ್ಷಕ್ಕಿಂತ ಭಾರತದ 37 ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿರುವುದು ಈ ಬಾರಿಯ ವಿಶೇಷ. ಈ ಕಾರಣದಿಂದಲೇ ಭಾರತ ಚೀನಾವನ್ನು ಹಿಂದಿಕ್ಕಿದೆ. ಸಿಂಗಾಪುರ, ಹಾಂಕ್‌ ಕಾಂಗ್‌ನ ವಿಶ್ವವಿದ್ಯಾನಿಲಯಗಳೂ ಇದರಲ್ಲಿ ಸ್ಥಾನ ಪಡೆದಿವೆ. ಮ್ಯಾನ್ಮಾರ್‌, ಕಾಂಬೋಡಿಯಾ ಹಾಗೂ ನೇಪಾಳದ ವಿಶ್ವವಿದ್ಯಾನಿಲಯಗಳು ಮೊದಲ ಬಾರಿ ಈ ರ‍್ಯಾಂಕ್‌ ಪಟ್ಟಿಯಲ್ಲಿವೆ.

ಆದರೂ ಟಾಪ್‌ ಪಟ್ಟಿಯಲ್ಲಿ ಚೀನಾದ ಪೆಕಿಂಗ್‌ ವಿಶ್ವವಿದ್ಯಾನಿಲಯವೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಂಕ್‌ಕಾಂಗ್ ವಿಶ್ವವಿದ್ಯಾನಿಲಯ ನಂತರದ ಸ್ಥಾನದಲ್ಲಿದೆ. ಸಿಂಗಾಪೂರ್‌ ನ ನ್ಯಾಷನಲ್‌ ವಿಶ್ವವಿದ್ಯಾನಿಲಯಕ್ಕೆ ಮೂರನೇ ಸ್ಥಾನ ಲಭಿಸಿದೆ. ಚೀನಾದ ನಯಾಂಗ್‌ ತಾಂತ್ರಿಕ ವಿಶ್ವವಿದ್ಯಾನಿಲಯ, ಟ್ಸುಂಗುವಾ ವಿಶ್ವವಿದ್ಯಾನಿಲಯದ ನಂತರದ ಸ್ಥಾನ ಪಡೆದುಕೊಂಡಿವೆ.

ಭಾರತದ 148 ವಿಶ್ವವಿದ್ಯಾನಿಲಯ, ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಬಾಂಬೆ ಐಐಟಿಯೇ ಮೊದಲ ಸ್ಥಾನದಲ್ಲಿದೆ. ಆನಂತರದ ಸ್ಥಾನದಲ್ಲಿ ಬೆಂಗಳೂರಿನ ಐಐಎಸ್ಸಿ ಇದೆ. ದೆಹಲಿ ವಿಶ್ವವಿದ್ಯಾನಿಲಯ ಕೂಡ ಸ್ಥಾನ ಪಡೆದಿದೆ. ವಿಶೇಷವಾಗಿ ಮುಂಬೈ, ದೆಹಲಿ, ಮದ್ರಾಸ್‌, ಖರಗ್‌ ಪುರ್‌, ಕಾನ್ಪುರ ಐಐಟಿಗಳಿಗೆ ಸ್ಥಾನ ಲಭಿಸಿದೆ.

ಏಷಿಯಾ ರ‍್ಯಾಂಕಿಂಗ್​ನಲ್ಲಿ ಐಐಟಿ ದೆಹಲಿ( 46), ಬೆಂಗಳೂರು ಐಐಎಸ್‌ಸಿ( 52), ಮದ್ರಾಸ್‌ ಐಐಟಿ ( 53), ಐಐಟಿ ಖರಗ ಪುರ(61)ನೇ ರ‍್ಯಾಂಕ್‌ ಪಡೆದುಕೊಂಡಿವೆ. ಐಐಟಿ ಬಾಂಬೆ 67.2 ಅಂಕದೊಂದಿಗೆ ಗಮನ ಸೆಳೆಯುವ ಸಾಧನೆ ಮಾಡಿದೆ. ಇದರಲ್ಲಿ ಶೈಕ್ಷಣಿಕ ಶ್ರೇಷ್ಠತೆ, ಸಂಸ್ಥೆ ಶ್ರೇಷ್ಠತೆ ಉತ್ತಮ ಸ್ಥಾನದಲ್ಲಿವೆ. ಇಲ್ಲಿನ ಸಂಶೋಧನೆ ಗುಣಾತ್ಮಕ ಪಟ್ಟಿಯಲ್ಲಿ ಗಮನ ಸೆಳೆದಿದೆ. ಕ್ಯುಎಸ್‌ ವಿಶ್ವ ರ‍್ಯಾಂಕಿಂಗ್​ನಲ್ಲಿ ಬಾಂಬೆ ಐಐಟಿ 149ನೇ ಸ್ಥಾನ ಪಡೆದಿದೆ. ವಿಶ್ವ ರ‍್ಯಾಂಕಿಂಗ್​ನಲ್ಲಿ ಮ್ಯಾಶಚುಸೆಟ್ಸ್‌ ತಾಂತ್ರಿಕ ಸಂಸ್ಥೆ, ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯ, ಆಕ್ಸಫರ್ಡ್‌ ವಿಶ್ವವಿದ್ಯಾನಿಲಯ, ಹಾರ್ವರ್ಡ್‌ ವಿಶ್ವವಿದ್ಯಾನಿಲಯ ಹಾಗೂ ಸ್ಟಾನ್‌ ಫೋರ್ಡ್‌ ವಿಶ್ವವಿದ್ಯಾನಿಲಯ ಟಾಪ್‌ ಸ್ಥಾನ ಪಡೆದಿವೆ.

ಭಾರತದ ವಿಶ್ವವಿದ್ಯಾನಿಲಯಗಳಲ್ಲಿನ ಶೈಕ್ಷಣಿಕ ವಾತಾವರಣ, ಸಂಶೋಧನಾ ವಲಯದಲ್ಲಿ ಸುಧಾರಣೆ ಕಂಡಿರುವುದು, ಸಂಶೋಧನೆಯಿಂದ ಹೊರ ಬಂದ ಅಂಶಗಳು, ಅತ್ಯುತ್ತಮ ಸಿಬ್ಬಂದಿಯ ಕಾರ್ಯಕ್ಷಮತೆಯ ಸುಧಾರಣೆಯಿಂದಾಗಿ ಭಾರತ ಈ ಬಾರಿ ಏಷಿಯಾದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬ್ರಿಟಿಷ್‌ ಸಂಸ್ಥೆ ಕ್ವಾಕರೆಲ್ಲಿ ಸೈಮೆಂಡ್ಸ್‌( ಕ್ಯುಎಸ್‌ ) ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬೆನ್‌ ಸೌಟೆರ್‌ ಅವರ ಪ್ರಕಾರ, ಭಾರತದಲ್ಲಿನ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವಲಯದಲ್ಲಿನ ಉನ್ನತೀಕರಣ ಹಲವು ಕ್ಷೇತ್ರಗಳಲ್ಲಿ ಕಾಣುತ್ತಿದೆ. ಉನ್ನತ ಶಿಕ್ಷಣ ವಲಯದಲ್ಲಿ ಭಾರತದ ಬೆಳವಣಿಗೆ ನಿಜಕ್ಕೂ ಆಶಾದಾಯಕವಾಗಿದೆ. ಐಐಟಿಗಳ ಸ್ಥಾಪನೆ ಹಾಗೂ ಉನ್ನತೀಕರಣದಿಂದಾಗಿ ಸಂಶೋಧನಾ ವಲಯದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಇದರಿಂದಲೇ ಪಟ್ಟಿಯಲ್ಲಿ ಭಾರತದ ಸಂಸ್ಥೆಗಳು ಹೆಚ್ಚು ಕಾಣಿಸಿಕೊಂಡಿವೆ. ಇದು ಜಾಗತಿಕ ಮಟ್ಟದಲ್ಲೂ ಭಾರತ ಇನ್ನಷ್ಟು ಗುಣಾತ್ಮಕ ಸ್ಪರ್ಧೆ ನೀಡಲು ಸಹಕಾರಿಯಾಗಲಿದೆ ಎನ್ನುತ್ತಾರೆ.

ಭಾರತ ಎರಡು ರೀತಿಯ ಸವಾಲುಗಳನ್ನು ಉನ್ನತ ಶಿಕ್ಷಣ ವಲಯದಲ್ಲಿ ಎದುರಿಸುತ್ತದೆ. ಭಾರತದಲ್ಲಿನ ಅಗಾಧ ಸಂಖ್ಯೆಯ ಶಿಕ್ಷಣಾರ್ಥಿಗಳಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸುವ ಜತೆಗೆ ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಿದೆ. ಎರಡರ ನಡುವಿನ ಸಮತೋಲದ ಕಾಪಾಡಿಕೊಳ್ಳುವ ಸವಾಲನ್ನು ಇನ್ನಷ್ಟು ಸಶಕ್ತಗೊಳಿಸಿದರೆ ಭಾರತ ಮತ್ತಷ್ಟು ಸಾಧನೆ ಮಾಡಲಿದೆ ಎನ್ನುವುದು ಅವರ ವಿವರಣೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ