logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cwg 2022: ಕಾಮನ್‌ವೆಲ್ತ್‌ನಲ್ಲಿ ಬಂಗಾರ ಗೆದ್ದ ಖಡಕ್‌ ಕುಸ್ತಿಪಟು ರವಿ ದಹಿಯಾ

CWG 2022: ಕಾಮನ್‌ವೆಲ್ತ್‌ನಲ್ಲಿ ಬಂಗಾರ ಗೆದ್ದ ಖಡಕ್‌ ಕುಸ್ತಿಪಟು ರವಿ ದಹಿಯಾ

Praveen Chandra B HT Kannada

Aug 06, 2022 10:53 PM IST

google News

CWG 2022: ಕಾಮನ್‌ವೆಲ್ತ್‌ನಲ್ಲಿ ಬಂಗಾರ ಗೆದ್ದ ಖಡಕ್‌ ಕುಸ್ತಿಪಟು ರವಿ ದಹಿಯಾ REUTERS/Jason Cairnduff

    • ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG 2022) ಭಾರತದ ಪದಕ ಬೇಟೆ ಮುಂದುವರೆದಿದೆ. ಭಾರತದ ಖಡಕ್‌ ಕುಸ್ತಿಪಟು ಎಂದೇ ಖ್ಯಾತರಾದ ದವಿ ದಹಿಯಾ ಅವರು ಕಾಮನ್‌ವೆಲ್ತ್‌ ಗೇಮ್ಸ್‌-2022ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.
CWG 2022: ಕಾಮನ್‌ವೆಲ್ತ್‌ನಲ್ಲಿ ಬಂಗಾರ ಗೆದ್ದ ಖಡಕ್‌ ಕುಸ್ತಿಪಟು ರವಿ ದಹಿಯಾ REUTERS/Jason Cairnduff
CWG 2022: ಕಾಮನ್‌ವೆಲ್ತ್‌ನಲ್ಲಿ ಬಂಗಾರ ಗೆದ್ದ ಖಡಕ್‌ ಕುಸ್ತಿಪಟು ರವಿ ದಹಿಯಾ REUTERS/Jason Cairnduff (REUTERS)

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG 2022) ಭಾರತದ ಪದಕ ಬೇಟೆ ಮುಂದುವರೆದಿದೆ. ಭಾರತದ ಖಡಕ್‌ ಕುಸ್ತಿಪಟು ಎಂದೇ ಖ್ಯಾತರಾದ ದವಿ ದಹಿಯಾ ಅವರು ಕಾಮನ್‌ವೆಲ್ತ್‌ ಗೇಮ್ಸ್‌-2022ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಶನಿವಾರ ನಡೆದ ಪಂದ್ಯದಲ್ಲಿ ರವಿ ದಹಿಯಾ(Ravi Kumar Dahiya) ಅವರು ನೈಜೀರಿಯಾದ ಕುಸ್ತಿಪಟುವನ್ನು ತಾಂತ್ರಿಕ ದಕ್ಷತೆ ಆಧಾರದಲ್ಲಿ ಗೆದ್ದು ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ. ಎದುರಾಳಿಯ ದೌರ್ಬಲ್ಯಗಳನ್ನು ಅವಲೋಕಿಸಿಕೊಂಡು ಎಚ್ಚರಿಕೆಯ ಹೊಡೆತಗಳನ್ನು ನೀಡಿದ ರವಿ ಕುಮಾರ್‌ ದಹಿಯಾ ಅವರು ಪ್ರಬಲವಾಗಿ ತನ್ನ ಪ್ರತಿಸ್ಪರ್ಧಿಯೊಂದಿಗೆ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ರೆಫರಿಯಿಂದ ದಹಿಯಾ ಅವರಿಗೆ ಎಚ್ಚರಿಕೆಯ ಸೂಚನೆಗಳೂ ದೊರಕಿದವು.

ಬಳಿಕ ಇನ್ನಷ್ಟು ಎಚ್ಚರಿಕೆಯಿಂದ ಆಡಿ ಇವರು ಎದುರಾಳಿಯ ಪಾದವನ್ನು ಹಿಡಿದು ನೆಲಕ್ಕುರುಳಿಸಿ ಖಡಕ್‌ ನಡೆ ಪ್ರದರ್ಶಿಸಿದರು. ಆ ಸಂದರ್ಭದಲ್ಲಿ ಇವರು 8-0 ಅಂಕ ಪಡೆದರು. ಭಾರತಕ್ಕೆ ಈ ಬಾರಿ ಕುಸ್ತಿಯಲ್ಲಿ ಅತ್ಯಧಿಕ ಪದಕಗಳ ಸುರಿಮಳೆಯಾಗುತ್ತಿದ್ದು, ದೇಶದ ಕುಸ್ತಿಪಟುಗಳು ಭರವಸೆ ಹುಟ್ಟಿಸುತ್ತಿದ್ದಾರೆ.

ಕಳೆದ ವರ್ಷ ಇದೇ ತಿಂಗಳು ಕೂಡ ದಹಿಯಾ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ಪುರುಷರ 57 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇವರು 2019ರ ವಿಶ್ವ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. 2020ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. 2021ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. 2018ರ ಅಂಡರ್ 23 ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹೀಗಾಗಿ ಇವರು ದೇಶದ ಹೆಮ್ಮೆಯ ಖಡಕ್‌ ಕುಸ್ತಿಪಟು ಎನ್ನಬಹುದು.

ಭಾರತದ ಪಾಲಿಗೆ ಇಂದಿನ ಪ್ರಮುಖ ಫಲಿತಾಂಶಗಳು

ಅಥ್ಲೆಟಿಕ್ಸ್‌ನಲ್ಲಿ ಭಾರತ ಮಹಿಳೆಯರ 4x100 ಮೀಟರ್‌ ರಿಲೇ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಬಾಕ್ಸಿಂಗ್: ಮಹಿಳೆಯರ 48 ಕೆಜಿ ವಿಭಾಗದಲ್ಲಿ ನಿತು ಘಂಘಾಸ್ ಫೈನಲ್ ತಲುಪಿದ್ದಾರೆ. ಪುರುಷರ 51 ಕೆಜಿ ವಿಭಾಗದಲ್ಲಿ ಅಮಿತ್ ಪಂಗಲ್ ಫೈನಲ್ ಪ್ರವೇಶೀದ್ದಾರೆ. ನಿಖತ್ ಜರೀನ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ

ಕ್ರಿಕೆಟ್: ಇಂದು ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ವನಿತೆಯರು ಇಂಗ್ಲೆಂಡ್ ತಂಡವನ್ನು ನಾಲ್ಕು ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಭಾರತದ ಮಹಿಳಾ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲಿದ್ದಾರೆ. ಫೈನಲ್‌ನಲ್ಲಿ ಭಾರತ ಸೋತರೂ ಕನಿಷ್ಠ ಬೆಳ್ಳಿ ಖಚಿತ

ಬ್ಯಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ ವಿ ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಟೇಬಲ್ ಟೆನಿಸ್: ಶರತ್ ಕಮಲ್ ಮತ್ತು ಜಿ ಸತ್ಯನ್ ಜೋಡಿ ಪುರುಷರ ಡಬಲ್ಸ್‌ನ ಫೈನಲ್‌ಗೆ ಟಂಟ್ರಿ ಕೊಟ್ಟಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ