ಜಿಯೋಸಿನಿಮಾ ಕ್ಲೋಸ್ ಮಾಡ್ತಾರಂತೆ ಮುಕೇಶ್ ಅಂಬಾನಿ; ಬಿಗ್‌ಬಾಸ್ ಶೋ, ಐಪಿಎಲ್ ಮ್ಯಾಚ್ ಎಲ್ಲಿ ನೋಡ್ತಿರಿ?
Oct 19, 2024 03:32 PM IST
ಜಿಯೋಸಿನಿಮಾವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಜತೆ ವಿಲೀನ ಮಾಡುವ ಸೂಚನೆಯಿದೆ.
- Jiocinema disney hotstar merger: ಜಿಯೋಸಿನಿಮಾವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಜತೆ ವಿಲೀನಗೊಳಿಸಲು ಮುಕೇಶ್ ಅಂಬಾನಿ ನಾಯಕತ್ವದ ರಿಲಯೆನ್ಸ್ ಯೋಜಿಸುತ್ತಿದೆಯಂತೆ. ಹೀಗಾದ್ರೆ, ಐಪಿಎಲ್ 2025 ಮತ್ತು ಜನಪ್ರಿಯ ಬಿಗ್‌ಬಾಸ್ ಶೋಗಳನ್ನು ಒಟಿಟಿ ವೀಕ್ಷಕರು ಎಲ್ಲಿ ನೋಡಬಹುದು?
ಸ್ಟಾರ್ ಇಂಡಿಯಾ ಮತ್ತು ವಯಾಕಾಮ್ 18 ವಿಲೀನದ ಬಳಿಕ ಜಿಯೋಸಿನಿಮಾ ಒಟಿಟಿ ಕುರಿತು ರಿಲಯೆನ್ಸ್ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಜಿಯೋ ಸಿನಿಮಾವನ್ನು ಕ್ಲೋಸ್ ಮಾಡಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅನ್ನು ತನ್ನ ಪ್ರಾಥಮಿಕ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮಾಡಲಿದೆ. ಜಿಯೋಸಿನಿಮಾವನ್ನು ಡಿಸ್ನಿ ಪ್ಲಸ್ ಜತೆ ವಿಲೀನಗೊಳಿಸಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಹೆಸರು ಮುಂದುವರೆಸಲಿದೆ ಎಂದು ಮೂಲಗಳು ತಿಳಿಸಿವೆ. ಒಂದೇ ಕಂಪನಿಯ ಎರಡು ಒಟಿಟಿಗಳ ಬದಲು, ಒಂದೇ ಒಟಿಟಿ ಮೂಲಕ ಪಾರಮ್ಯ ಮೆರೆಯುವ ಯೋಜನೆಯಲ್ಲಿ ರಿಲಯೆನ್ಸ್ ಇದೆ.
ರಿಲಯೆನ್ಸ್ ಕಂಪನಿಯ ಮತ್ತು ಡಿಸ್ನಿ ಇಂಡಿಯಾವು 2024ರ ಫೆಬ್ರವರಿ ತಿಂಗಳಲ್ಲಿ 8.5 ಕೋಟಿ ಶತಕೋಟಿ ಡಾಲರ್‌ನ ವಿಲೀನ ಒಪ್ಪಂದಕ್ಕೆ ಸಹಿಹಾಕಿದ್ದವು. ಜಿಯೋ ಸಿನಿಮಾ ಇದ್ದಾಗಲೇ ರಿಲಯೆನ್ಸ್ ಕಂಪನಿಯು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸ್ವಾಧೀನಡಿಸಿಕೊಂಡದ್ದೇಕೆ ಎಂಬ ಪ್ರಶ್ನೆ ಸಹಜ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಅದ್ಭುತವಾದ ತಂತ್ರಜ್ಞಾನ ಮೂಲಸೌಕರ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ರಿಲಯೆನ್ಸ್ ಕಂಪನಿಯು ಜಿಯೋ ಸಿನಿಮಾ ಬದಲು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಿದೆ ಎನ್ನಲಾಗಿದೆ.
ಬಿಗ್‌ಬಾಸ್ ಶೋ, ಐಪಿಎಲ್ ಮ್ಯಾಚ್ ಎಲ್ಲಿ ನೋಡೋದು?
ಕಂಪನಿಯು ಜಿಯೋಸಿನಿಮಾವನ್ನು ಕ್ಲೋಸ್ ಮಾಡಿದ್ರೆ ಐಪಿಎಲ್ 2024 ಅನ್ನು ಎಲ್ಲಿ ನೋಡುವುದು? ಬಿಗ್‌ಬಾಸ್ ಕನ್ನಡ, ಬಿಗ್‌ಬಾಸ್ ಹಿಂದಿ ಸೇರಿದಂತೆ ವಿವಿಧ ಬಿಗ್‌ಬಾಸ್ ಕಾರ್ಯಕ್ರಮಗಳನ್ನು ಎಲ್ಲಿ ನೋಡುವುದು ಎಂಬ ಪ್ರಶ್ನೆ ಉಂಟಾಗುವುದು ಸಹಜ. ಈಗಾಗಲೇ ಹೇಳಿದಂತೆ ಇದು ವಿಲೀನ ಪ್ರಕ್ರಿಯೆ. ಜಿಯೋ ಸಿನಿಮಾ ಎಂಬ ಹೆಸರು ಹೋದರೂ ಜಿಯೋ ಸಿನಿಮಾದ ಕಂಟೆಂಟ್‌ಗಳು, ಪಾಲುದಾರಿಕೆಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಹೋಗಲಿದೆ. ಐಪಿಎಲ್ ಸ್ಟ್ರೀಮಿಂಗ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕಾನೂನು ಪ್ರಕ್ರಿಯೆಗಳನ್ನು ಕಂಪನಿ ಮಾಡಬಹುದು. ಇದೇ ರೀತಿ ಬಿಗ್‌ಬಾಸ್ ಕಾರ್ಯಕ್ರಮವನ್ನು ಡಿಸ್ನಿಪ್ಲಸ್‌ಗೆ ಮೂವ್ ಮಾಡುವುದು ಕಂಪನಿಗೆ ಕಷ್ಟವಾಗದು. ಎಲ್ಲಾದರೂ ಬಿಗ್‌ಬಾಸ್ ಮುಗಿಯುವ ಮೊದಲೇ ಜಿಯೋ ಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಲೀನವಾದರೆ ಬಿಗ್‌ಬಾಸ್ ಶೋಗಳು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ಗೆ ಮೂವ್ ಆಗಲಿದೆ.
ಡಿಸ್ನಿ ಮತ್ತು ರಿಲಯೆನ್ಸ್ ಒಪ್ಪಂದಕ್ಕೆ ಸ್ಪರ್ಧಾತ್ಮಕ ಆಯೋಗವು ಅನುಮೋದನೆಯ ನಂತರದ ಬೆಳವಣಿಗೆ ಈ 70 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಒಪ್ಪಂದವನ್ನು ನಿಯಮಗಳ ಪ್ರಕಾರ ಒಪ್ಪಿದೆ. ಆರಂಭದಲ್ಲಿ ಕ್ರಿಕೆಟ್ ಪ್ರಸಾರದ ಹಕ್ಕು ಮತ್ತು ಒಟಿಟಿ ಸ್ಟ್ರೀಮಿಂಗ್ ಸೇವೆಗಳ ನಡುವೆ ಉಂಟಾಗುವ ಸ್ಪರ್ಧೆ ಕುರಿತು ಆರಂಭದಲ್ಲಿ ಸ್ಪರ್ಧಾತ್ಮಕ ಆಯೋಗವು ಕಳವಳ ವ್ಯಕ್ತಪಡಿಸಿತ್ತು. ಕ್ರಿಕೆಟ್ ಪಂದ್ಯಗಳ ಜಾಹೀರಾತುಗಳ ಅಸಮಂಜಸ ದರ ಹೆಚ್ಚಿಸುವುದನ್ನು ತಪ್ಪಿಸಲು ರಿಲಯೆನ್ಸ್ ಬದ್ಧತೆ ಪ್ರದರ್ಶಿಸಿದ್ದು, ರಿಯಾಯಿತಿಗಳನ್ನು ನೀಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಭಾರತದಲ್ಲಿ ಲೈವ್ ಕ್ರಿಕೆಟ್ ಪ್ರಸಾರಗಳು ವಿಶೇಷವಾಗಿ ಲಾಭದಾಯಕವಾಗಿದೆ. ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಕರ ಚಂದಾದಾರಿಕೆ ಮತ್ತು ಜಾಹೀರಾತು ಎರಡರಿಂದಲೂ ಹಣ ಗಳಿಸುವ ಅವಕಾಶ ದೊರಕುತ್ತದೆ. ಇವೆರಡು ಸಂಯೋಜಿತ ಕಂಪನಿಗು ಭಾರತದ ಒಟಿಟಿ ಸ್ಟ್ರೀಮಿಂಗ್ ಮತ್ತು ಟಿವಿ ಜಾಹೀರಾತು ಮಾರುಕಟ್ಟೆಯಲ್ಲಿ ಶೇಕಡ 40ರಷ್ಟು ಪಾಲನ್ನು ನಿಯಂತರಿಸುತ್ತಿದೆ ಎಂದು ಜೆಫರೀಸ್ ಗ್ರೂಪ್‌ನ ಅಂದಾಜು ತಿಳಿಸಿದೆ.