logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rolls Royce's Pmla Case: ಭಾರತೀಯ ಘಟಕದ 8.7 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

Rolls Royce's PMLA case: ಭಾರತೀಯ ಘಟಕದ 8.7 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

HT Kannada Desk HT Kannada

Nov 12, 2022 07:08 AM IST

google News

ಜಾರಿ ನಿರ್ದೇಶನಾಲಯ

  • Rolls Royce's PMLA case: ಲಂಡನ್ ಮೂಲದ ರೋಲ್ಸ್ ರಾಯ್ಸ್ ಸಾರ್ವಜನಿಕ ವಲಯದ ಸಂಸ್ಥೆಗಳಾದ ಎಚ್‌ಎಎಲ್, ಒಎನ್‌ಜಿಸಿ ಮತ್ತು ಗೇಲ್‌ನಿಂದ ಗುತ್ತಿಗೆ ಪಡೆಯಲು ಏಜೆಂಟ್‌ಗೆ ಸುಮಾರು 80 ಕೋಟಿ ರೂಪಾಯಿ ಕಮಿಷನ್‌ ರೀತಿಯಲ್ಲಿ ಪಾವತಿಸಿದೆ ಎಂದು ಇಡಿ ತಿಳಿಸಿದೆ.

ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ (HT_PRINT)

ನವದೆಹಲಿ: ಲಂಡನ್ ಮೂಲದ ರೋಲ್ಸ್ ರಾಯ್ಸ್ ಒಳಗೊಂಡಿರುವ ಭ್ರಷ್ಟಾಚಾರದ ಪ್ರಕರಣದಲ್ಲಿ 8.7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮನಿ ಲಾಂಡರಿಂಗ್ ವಿರೋಧಿ ಕಾನೂನಿನ ಅಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು ನವೆಂಬರ್ 11 ರಂದು ಹೇಳಿದೆ.

ಇದರ ನಂತರ, ಮುಂಬೈ ಮೂಲದ ಟರ್ಬೋಟೆಕ್ ಎನರ್ಜಿ ಸರ್ವಿಸಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ (ಟರ್ಬೋಟೆಕ್) ಮತ್ತು ಅಶೋಕ್ ಪಟ್ನಿ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ.

ಲಂಡನ್ ಮೂಲದ ರೋಲ್ಸ್ ರಾಯ್ಸ್ ಸಾರ್ವಜನಿಕ ವಲಯದ ಸಂಸ್ಥೆಗಳಾದ ಎಚ್‌ಎಎಲ್, ಒಎನ್‌ಜಿಸಿ ಮತ್ತು ಗೇಲ್‌ನಿಂದ ಗುತ್ತಿಗೆ ಪಡೆಯಲು ಏಜೆಂಟ್‌ಗೆ ಸುಮಾರು 80 ಕೋಟಿ ರೂಪಾಯಿ ಕಮಿಷನ್‌ ಮಾದರಿಯಲ್ಲಿ ಪಾವತಿಸಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

"ONGC, HAL ಮತ್ತು GAIL ಮುಂದೆ ಇರಿಸಲಾದ ವಿವಿಧ ಖರೀದಿ ಆದೇಶಗಳಿಗೆ ಸಂಬಂಧಿಸಿದಂತೆ ಸಮಗ್ರತೆಯ ಒಪ್ಪಂದವನ್ನು ಉಲ್ಲಂಘಿಸಿ ಅಶೋಕ್ ಪಾಟ್ನಿ ಮತ್ತು ಅವರ ಸಂಬಂಧಿತ ಸಂಸ್ಥೆಗಳಿಗೆ ಕಮಿಷನ್ ಪಾವತಿ ಮಾಡಿರುವುದಾಗಿ ರೋಲ್ಸ್ ರಾಯ್ಸ್ ಒಪ್ಪಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದೆ" ಎಂದು ಇಡಿ ಉಲ್ಲೇಖಿಸಿದೆ ಎಂದು ಪಿಟಿಐ ಉಲ್ಲೇಖಿಸಿದೆ. .

"ಈ ಪ್ರಕರಣದಲ್ಲಿ ಅಶೋಕ್ ಪಟ್ನಿಗೆ ಪಾವತಿಸಿದ ಕಮಿಷನ್ ಅಥವಾ ಶುಲ್ಕ ಅಪರಾಧದ ಆದಾಯ ಎಂದು ಪರಿಗಣಿಸಲಾಗಿದೆ. ಇದರ ಮೌಲ್ಯಕ್ಕೆ ವಿರುದ್ಧವಾಗಿ ಓಎನ್‌ಜಿಸಿ, ಎಚ್‌ಎಎಲ್ ಮತ್ತು ಗೇಲ್‌ಗೆ 80 ಕೋಟಿ ರೂಪಾಯಿ ಪರಿಹಾರದ ಮೊತ್ತ ಎಂಬಂತೆ ಪಾವತಿಸಿರುವುದನ್ನು ಇದು ದೃಢಪಡಿಸಿದೆ" ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ.

ಆದರೆ, ಇತರ ಖರೀದಿ ಆದೇಶಗಳಲ್ಲಿ ರೋಲ್ಸ್ ರಾಯ್ಸ್ ಕಮಿಷನ್ ಪಾವತಿ ಮಾಡಿದೆಯೇ ಅಥವಾ ಒಪ್ಪಂದಗಳ ನಿಯಮ ಉಲ್ಲಂಘಿಸಿ ಈ ಪಾವತಿ ಮಾಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ವಿವರಿಸಿದೆ.

ವಿವರಗಳ ಪ್ರಕಾರ, ಮನಿ ಲಾಂಡರಿಂಗ್ ಪ್ರಕರಣವು 2019 ರ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್‌ನಿಂದ ಹುಟ್ಟಿಕೊಂಡಿದೆ ಮತ್ತು ಆಪಾದಿತ ಘಟನೆಯು 2000 ಮತ್ತು 2013 ರ ನಡುವಿನ ವರ್ಷಗಳಿಗೆ ಸಂಬಂಧಿಸಿದೆ.

ರೋಲ್ಸ್ ರಾಯ್ಸ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮತ್ತು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ನೊಂದಿಗೆ ಬಿಡಿ ಭಾಗಗಳು ಮತ್ತು ಸೇವೆಗಳ ಪೂರೈಕೆಗಾಗಿ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ED ಸೇರಿಸಲಾಗಿದೆ.

"ರೋಲ್ಸ್ ರಾಯ್ಸ್, ಸಿಂಗಾಪುರದ ಆಶ್ಮೋರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಶೋಕ್ ಪಟ್ನಿ ಅವರನ್ನು ಮಾರಾಟ, ಲಾಜಿಸ್ಟಿಕ್ ಬೆಂಬಲ, ಸ್ಥಳೀಯ ವ್ಯಾಪಾರ ಪರಿಣತಿ ಮತ್ತು ಖರೀದಿ ಆದೇಶಗಳ ನಿಯಮಗಳು ಮತ್ತು ಷರತ್ತುಗಳನ್ನು (ಪಿಒಗಳು) ಮತ್ತು ಎಚ್‌ಎಎಲ್‌/ಗೇಲ್‌/ಒಎನ್‌ಜಿಸಿ ಜತೆಗಿನ ಸಮಗ್ರತೆಯ ಒಪ್ಪಂದದ ಉಲ್ಲಂಘನೆಗಾಗಿ ಭಾರತದಲ್ಲಿ ವಾಣಿಜ್ಯ ಸಲಹೆಗಾರರನ್ನಾಗಿ ನೇಮಿಸಿದೆ" ಎಂಬ ಅಂಶವನ್ನು ED ವಿವರಿಸಿದೆ.

"ಬಿಡಿ ಭಾಗಗಳು ಮತ್ತು ಸೇವೆಗಳ ಪೂರೈಕೆಯ ಸಂದರ್ಭದಲ್ಲಿ, ರೋಲ್ಸ್ ರಾಯ್ಸ್ ಖರೀದಿ ಆದೇಶಗಳ ಮೌಲ್ಯದ ಶೇಕಡ 10-11.3 ರ ದರದಲ್ಲಿ ಅಶೋಕ್ ಪಟ್ನಿಗೆ ಕಮಿಷನ್ ಪಾವತಿಸಿದೆ, ಇದನ್ನು ಒಪ್ಪಂದವನ್ನು ಕಾರ್ಯಗತಗೊಳಿಸುವ ಮೊದಲು ಘೋಷಿಸಲಾಗಿಲ್ಲ" ಎಂದು ಫೆಡರಲ್ ಏಜೆನ್ಸಿ ಹೇಳಿದೆ.

ತನಿಖೆಯಲ್ಲಿ, ಪಟ್ನಿ ಕುಟುಂಬದ ಒಡೆತನದ ಟರ್ಬೋಟೆಕ್ ಅನ್ನು 2008 ರಲ್ಲಿ ಭಾರತದಲ್ಲಿ ರೋಲ್ಸ್ ರಾಯ್ಸ್‌ಗೆ ಮಾರಾಟ ಪ್ರತಿನಿಧಿ ಮತ್ತು ವಾಣಿಜ್ಯ ಸಲಹೆಗಾರರಾಗಿ ನೇಮಕ ಮಾಡಲಾಗಿದ್ದು, "ಶಮ್" ಒಪ್ಪಂದಗಳ ರೂಪದಲ್ಲಿ ಕಮಿಷನ್ ಪಾವತಿಗಳನ್ನು ಮಾಡಲಾಗಿತ್ತು ಎಂದು ತಿಳಿದುಬಂದಿದೆ.

"ರೋಲ್ಸ್ ರಾಯ್ಸ್ ಅಶೋಕ್ ಪಟ್ನಿ ಮತ್ತು ಅವರ ಸಂಬಂಧಿತ ಕಂಪನಿಗಳಿಗೆ ಪಾವತಿಸಿದ ಪಾವತಿಯ ಒಂದು ಭಾಗವನ್ನು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿರುವ HAL, ONGC ಮತ್ತು GAIL ನ ಅಪರಿಚಿತ ಅಧಿಕಾರಿಗಳಿಗೆ ಕಿಕ್‌ಬ್ಯಾಕ್ ಆಗಿ ಪಾವತಿಸಿರುವ ಶಂಕೆ ಇದೆ ಎಂದು ತನಿಖಾ ಏಜೆನ್ಸಿ ವಿವರಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ