ವಿವೇಕವುಳ್ಳವರಿಗೆ ಮಾತ್ರ ಪುಟಿನ್ ಆರೋಗ್ಯವಾಗಿದ್ದಾರೆ ಎಂಬ ಸತ್ಯಾಂಶ ಗೊತ್ತು...ರಷ್ಯಾ ವಿದೇಶಾಂಗ ಸಚಿವ
May 31, 2022 09:56 AM IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
- ಪುಟಿನ್ಗೆ ಬ್ಲಡ್ ಕ್ಯಾನ್ಸರ್ ಇದ್ದು ಇನ್ನು ಅವರು ಬದುಕುಳಿಯುವುದು ಮೂರು ವರ್ಷಗಳು ಮಾತ್ರ ಎಂದು ಇತ್ತೀಚೆಗೆ ರಷ್ಯಾ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್, ಬುದ್ಧಿವಂತರಿಗೆ ಮಾತ್ರ ಪುಟಿನ್ ಆರೋಗ್ಯವಾಗಿದ್ದಾರೆ ಎಂಬ ಸತ್ಯಾಂಶ ಗೊತ್ತು ಎಂದಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್, ಪುಟಿನ್ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ. ಅವರು ಪ್ರತಿ ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ನೀವು ಅವರನ್ನು ಮಾಧ್ಯಮಗಳಲ್ಲಿ ಕೂಡಾ ನೋಡಬಹುದು, ಅವರ ಭಾಷಣಗಳನ್ನು ಆಲಿಸಬಹುದು, ಓದಬಹುದು. ಇದೆಲ್ಲವನ್ನೂ ನೋಡಿದ ನಂತರ ಪುಟಿನ್ ಅವರಿಗೆ ಯಾವುದೇ ಅನಾರೋಗ್ಯದ ಲಕ್ಷಣಗಳು ಇಲ್ಲ ಎಂಬುದನ್ನು ವಿವೇಕ ಇರುವ ಜನರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಸಚಿವ ಸೆರ್ಗೆ ಲಾವ್ರೋವ್ ಹೇಳಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರಿಗೆ ಬ್ಲಡ್ ಕ್ಯಾನ್ಸರ್ ಇದ್ದು ಇನ್ನು ಅವರು ಬದುಕುಳಿಯುವುದು ಮೂರು ವರ್ಷಗಳು ಮಾತ್ರ, ಪುಟಿನ್ ತಮ್ಮ ಕಣ್ಣುಗಳ ದೃಷ್ಟಿಯನ್ನು ಕೂಡಾ ಕಳೆದುಕೊಳ್ಳುತ್ತಿದ್ದಾರೆ ಎಂದು ಇತ್ತೀಚೆಗೆ ರಷ್ಯಾ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್, ಬುದ್ಧಿವಂತರಿಗೆ ಮಾತ್ರ ಪುಟಿನ್ ಆರೋಗ್ಯವಾಗಿದ್ದಾರೆ ಎಂಬ ಸತ್ಯಾಂಶ ಗೊತ್ತು ಎಂದಿದ್ದಾರೆ.
ಪುಟಿನ್ ಆರೋಗ್ಯ ದಿನೇ ದಿನೆ ಕ್ಷೀಣಿಸುತ್ತಿದೆ ಅವರು ಹೆಚ್ಚೆಂದರೆ ಇನ್ನು ಮೂರು ವರ್ಷಗಳ ಕಾಲ ಮಾತ್ರ ಬದುಕಿರುತ್ತಾರೆ. ಸಧ್ಯದ ಸಮಸ್ಯೆಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತ ಪುಟಿನ್ ಅವರು ಅಸ್ವಸ್ಥರಾಗಿ ಕಂಡು ಬಂದಿರುವ ಕೆಲವೊಂದು ವಿಡಿಯೋಗಳು ಕೂಡಾ ವೈರಲ್ ಆಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ಬೆಲಾರೆಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರನ್ನು ಭೇಟಿ ಮಾಡಿದ್ದ ಪುಟಿನ್, ಲುಕಾಶೆಂಕೋ ಅವರನ್ನು ಹಗ್ ಮಾಡುವ ಸಮಯದಲ್ಲಿ ಎದೆ ಮೇಲೆ ಕೈಯಿಟ್ಟುಕೊಳ್ಳುವುದಲ್ಲದೆ, ಅವರಿಗೆ ಹಸ್ತಲಾಘವ ನೀಡುವ ವೇಳೆ ಕೈ ನಡುಗುತ್ತಿದ್ದನ್ನು ಅನೇಕರು ಗಮನಿಸಿದ್ದಾರೆ. ಜೊತೆಗೆ ಮೇ 9 ರಂದು ರಷ್ಯಾ ವಿಕ್ಟರಿ ಡೇ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟಿನ್, ತಮ್ಮ ಕಾಲುಗಳ ಮೇಲೆ ಬ್ಲಾಂಕೆಟ್ ಹೊದ್ದುಕೊಂಡಿದ್ದು ಕೂಡಾ ಕಂಡುಬಂದಿತ್ತು.ಬಹುತೇಕ ಮಾಧ್ಯಮಗಳು ಕೂಡಾ, ಪುಟಿನ್ ಬಹುಶ: ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ವರದಿ ಮಾಡಿದ್ದವು.
ಉಕ್ರೇನ್ ಗುಪ್ತಚರ ಮಿಲಿಟರಿ ಗುಪ್ತಚರ ಪ್ರಮುಖ ಅಧಿಕಾರಿ ಜನರಲ್ ಕೈರಿಲೋ ಬುಡಾನೊವ್, ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪುಟಿನ್ ಗಂಭೀರವಾದ ಕಾಯಿಲೆಗೆ ತುತ್ತಾಗಿದ್ದಾರೆ. ಅವರು ಕ್ಯಾನ್ಸರ್ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸಂದರ್ಶನದಲ್ಲಿ ತಿಳಿಸಿದ್ದರು. ಪುಟಿನ್ ತಮ್ಮ ದೃಷ್ಟಿ ಕಳೆದುಕೊಳ್ಳುತ್ತಿದ್ದು, ಜನರಿಗೆ ತಮ್ಮ ದುರ್ಬಲತೆಯ ಬಗ್ಗೆ ತಿಳಿಯಬಾರದು ಎಂಬ ಕಾರಣಕ್ಕೆ ಕನ್ನಡಕ ಧರಿಸುವುದನ್ನೂ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮೇ 12 ಹಾಗೂ 13 ರಂದು ಅವರು ಕ್ಯಾನ್ಸರ್ ವಿರುದ್ಧದ ಶಸ್ತ್ರಚಿಕಿತ್ಸೆಗೆ ಕೂಡಾ ಒಳಗಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಪುಟಿನ್ ಅವರ ಹತ್ಯೆಗೆ ಕೂಡಾ ಸಂಚು ಮಾಡಲಾಗುತ್ತಿದೆ ಎನ್ನಲಾಗಿದ್ದು, ಸುಮಾರು 2 ತಿಂಗಳ ಹಿಂದೆ ಕೌಕಾಸ್ನಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಕೈರಿಲೋ ಬುದಾನೊವ್ ಹೇಳಿದ್ದಾರೆ.
ವಿಭಾಗ